ಶಾಪಿಂಗ್‌ ಮಾಡುತ್ತಾ ಮಾಡುತ್ತಾ ನನಗೆ ಬಹಳ ಆಯಾಸವಾಗಿತ್ತು. ಅಮೆರಿಕಾದಲ್ಲಿ ನೆಲೆಸಿದ್ದ ನನ್ನ ಅಣ್ಣನ ಮಗಳು ಮೀರಾ, “ಅತ್ತೆ, ಬನ್ನಿ ನಿಮ್ಮ ಆಯಾಸ ದೂರ ಮಾಡ್ತೀನಿ. ಜಾಸ್ಮಿನ್‌ ಟೀ ಕುಡಿಯೋಣ. ಜಾಸ್ಮಿನ್‌ ಇಲ್ಲದಿದ್ರೆ ಕೆಮೋಮೈಲ್ ಹೂಗಳ ಟೀ ಕುಡಿಯೋಣ,” ಎಂದು ಎಳೆದುಕೊಂಡು ಹೋದಳು.

ಅವಳು ನನ್ನನ್ನು ಒಂದು ಚೈನೀಸ್‌ ರೆಸ್ಟೋರೆಂಟ್‌ಗೆ ಕರೆದೊಯ್ದಳು. ಚಿಕ್ಕದಾದ ಹಾಗೂ ಸುಂದರವಾಗಿದ್ದ ರೆಸ್ಟೋರೆಂಟ್‌ನಲ್ಲಿ ವೇಟ್ರೆಸ್‌ ಮುಗುಳ್ನಗುತ್ತಾ ಟೀ ಕೆಟಲ್, ಸಣ್ಣ ಸಣ್ಣ ಟೀ ಕಪ್ಸ್ ಮತ್ತು ಸ್ನ್ಯಾಕ್ಸ್ ಪ್ಲೇಟ್‌ನಲ್ಲಿ ಹಿಡಿದು ಬಂದಳು. ನಂತರ ಕಪ್‌ನಲ್ಲಿ ಟೀ ಬಗ್ಗಿಸಿ, “ಎಂಜಾಯ್‌ ಇಟ್‌,” ಎಂದಳು.

jasmine

ಟೀನ ಸುಗಂಧದಿಂದ ಮನಸ್ಸಿಗೆ ಖುಷಿಯಾಗಿತ್ತು. ಗುಟುಕು ಗುಟುಕಾಗಿ ಕುಡಿದಾಗ ಅದರ ತಾಜಾತನದ ಅರಿವಾಯಿತು. ನನ್ನ ಮುಖದ ಭಾವನೆಗಳನ್ನು ಅರ್ಥ ಮಾಡಿಕೊಂಡು ಮೀರಾ ಹೇಳಿದಳು, “ಅತ್ತೆ, ಸ್ಪೆಷಲ್ ಆಗಿದೆ ಅಲ್ವಾ ಈ ಜಾಸ್ಮಿನ್‌ ಟೀ?”

ನಾನು ನಗುತ್ತಾ, “ಮಲ್ಲಿಗೆ ಹೂ ಅಥವಾ ಮಲ್ಲಿಗೆ ಮೊಗ್ಗನ್ನು ಕಟ್ಟಿ ತಲೆಗೆ ಮುಡ್ಕೊಬೇಕಲ್ವಾ?” ಎಂದೆ.

zayka

ವೇಟ್ರೆಸ್‌ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಳು. ನನ್ನ ಜಿಜ್ಞಾಸೆ ತಿಳಿದು ನನಗೆ ಜಾಸ್ಮಿನ್‌ ಮತ್ತು ಕೆಮೋಮೈಲ್‌ ಹೂಗಳಿಂದ ಮನೆಯಲ್ಲಿ ಟೀ ಮಾಡುವ ವಿಧಾನ ಹೇಳತೊಡಗಿಳು. ಮೇಡಂ, ಬಯಸಿದರೆ ಮನೆಯಲ್ಲೇ ತಾಜಾ ಮಲ್ಲಿಗೆ ಹೂಗಳ ಟೀಯನ್ನು ನೀವು ತಯಾರಿಸಬಹುದು ಎಂದಳು. “ಅದು ಹೇಗೆ?” ಎಂದು ನಾನು ಕೇಳಿದಾಗ ಬೆಳಗ್ಗೆ ತೋಟದಲ್ಲಿ ಅರಳಿರುವ ಹಾಗೂ ಅರ್ಧ ಅರಳಿರುವ ಜಾಸ್ಮಿನ್‌ ಮೊಗ್ಗುಗಳನ್ನು ತೆಗೆದುಕೊಳ್ಳಿ. ಬೆಳಗ್ಗೆ ಅವುಗಳಲ್ಲಿ ಬಹಳ ಸುವಾಸನೆ ಇರುತ್ತದೆ. ಅವನ್ನು ತೊಳೆಯಿರಿ. ಏನಾದರೂ ಪೆಸ್ಟಿಸೈಡ್‌ ಅಥವಾ ಕೀಟನಾಶಕ ಉಪಯೋಗಿಸಿದ್ದರೆ ಅದು ನಿಷ್ಕ್ರಿಯವಾಗುತ್ತದೆ. ಈ ಸ್ವಚ್ಛವಾದ ಮೊಗ್ಗುಗಳನ್ನು ಪೇಪರ್‌ ಟವೆಲ್‌ ಅಥವಾ ಸ್ವಚ್ಛವಾದ ಒಣಗಿದ ಟವೆಲ್‌ ಮೇಲೆ ಹರಡಿ. ಅವುಗಳಲ್ಲಿನ ನೀರು ಹೋದ ಮೇಲೆ ಓವನ್‌ನಲ್ಲಿ ಕನಿಷ್ಠ ತಾಪಮಾನದಲ್ಲಿ ಒಣಗಲು ಬಿಡಿ. ಅವು ಚೆನ್ನಾಗಿ ಒಣಗಿದ ನಂತರ ಕೈಗಳಿಂದ ಉಜ್ಜಿ. ತಣ್ಣಗಾದ ನಂತರ ಒಂದು ಏರ್‌ಟೈಟ್‌ ಕಂಟೇನರ್‌ನಲ್ಲಿ ಹಾಕಿಡಿ.

ವ್ಯಂಜನಗಳಲ್ಲಿ ಉಪಯೋಗ

ಟೀ ಕುಡಿಯಲು ಮನಸ್ಸಾದರೆ ಗ್ರೀನ್‌ ಟೀಯೊಂದಿಗೆ ಇದನ್ನು ಸ್ವಾದಕ್ಕಾಗಿ ಕೊಂಚ ಸೇರಿಸಿ ಹಗುರವಾಗಿ ಕುದಿಸಿ. ರುಚಿಗೆ ತಕ್ಕಷ್ಟು ಜೇನುತುಪ್ಪ ಸೇರಿಸಿ ಬಿಸಿಬಿಸಿಯಾಗಿ ಕುಡಿಯಿರಿ. ಅದರಿಂದ ಆಯಾಸ, ನೆಗಡಿ, ಶೀತ ಸರಿಹೋಗುತ್ತದೆ.

ಸುಗಂಧಿತ ಹೂಗಳನ್ನು ಡೈನಿಂಗ್‌ ಟೇಬಲ್ ಅಥವಾ ಡಿಶ್‌ನ ಅಲಂಕಾರಕ್ಕೆ ಮಾತ್ರ ಎಂದು ಯೋಚಿಸುತ್ತಿದ್ದೀರಿ. ಆದರೆ ಊಟದ ಜೊತೆಗೂ ತೆಗೆದುಕೊಳ್ಳುವುದೇ? ಹೌದು. ವಿಶ್ವದೆಲ್ಲೆಡೆ ದೊಡ್ಡ ದೊಡ್ಡ ಫುಡ್‌ ಎಕ್ಸ್ ಪರ್ಟ್‌ಗಳ ಮೂಲಕ 40ಕ್ಕೂ ಹೆಚ್ಚಿನ ಹೂಗಳು ವಿಭಿನ್ನ ರೀತಿಯ ವ್ಯಂಜನಗಳಲ್ಲಿ ಉಪಯೋಗವಾಗುತ್ತಿವೆ.

ಗ್ರೀಕ್‌ನ ಅಥೆನ್ಸ್ ನಲ್ಲಿ ಗ್ರೀಕ್‌ಫುಡ್‌ ಬಗ್ಗೆ ಮಾತಾಡುವುದಾದರೆ ಸೂಪ್‌ಗೆ ಬಣ್ಣ ಕೊಡಲು ಅಲ್ಲಿ ಕಾರ್ನ್‌ ಪಾಪಿ ಹೂಗಳ ದಳಗಳನ್ನು ಹೆಚ್ಚು ಉಪಯೋಗಿಸುತ್ತಾರೆ. ಅಲ್ಲಿ ಸಲಾಡ್‌ಗೆ ಸಣ್ಣ ಸಣ್ಣ ದಳಗಳನ್ನು ಉಪಯೋಗಿಸುತ್ತಾರೆ.

onion

ಹೆಚ್ಚು ಚಾಲನೆಯಲ್ಲಿದೆ

ಇಟ್ಯಾಲಿಯನ್‌ ಫುಡ್‌ನಲ್ಲಿ ವೈಟ್‌ ಸಾಸ್‌ ಪಾಸ್ತಾ ಮತ್ತು ಮೀಟ್‌ ಬಾಲ್ಸ್ ಇತ್ಯಾದಿ ಎಲ್ಲರಿಗೂ ಇಷ್ಟ. ಈ ಆಹಾರದಲ್ಲಿ ಕುಂಬಳಕಾಯಿಯ ಸ್ಕ್ವಾಷ್‌ನ ಹಳದಿ ಹೂಗಳು ಅಲಂಕಾರದ ಜೊತೆಗೆ ತಿನ್ನಲೂ ಉಪಯೋಗವಾಗುತ್ತದೆ. ಫೆಸ್ಟಿವಲ್ ಸಮಯದಲ್ಲಿ  ಸ್ಕ್ವಾಷ್‌ನ ಹೂಗಳಿರುವ ಪೇಸ್ಟ್ರಿ, ಕುಕೀಸ್‌, ಬಿಸ್ಕೆಟ್‌ ಇತ್ಯಾದಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಸಿಗುತ್ತವೆ.

ಅಮೆರಿಕನ್‌ ಅಥವಾ ಸೌತ್‌ ಅಮೆರಿಕನ್‌ ಊಟದಲ್ಲಿ ಬಿಳಿಯ ಬಣ್ಣದ ಡೇಸಿ ಹೂಗಳ ದಳಗಳು ಸಲಾಡ್‌ನಲ್ಲಿ ಮತ್ತು ಮೊಗ್ಗಿನ ಸೂಪ್‌, ಸ್ಯಾಂಡ್‌ವಿಚ್‌ ಮತ್ತು ಉಪ್ಪಿನಕಾಯಿಯಲ್ಲಿ ಉಪಯೋಗಿಸಲಾಗುತ್ತದೆ.

ಒಳ್ಳೆಯ ವ್ಯಂಜನಗಳೊಂದಿಗೆ ತಾಜಾ ಸುಗುಂಧಿತ ಫ್ಲೇವರ್ಡ್‌, ಪೇಯ ಪದಾರ್ಥಕ್ಕೆ ಹೂಗಳ ಉಪಯೋಗವಾಗುತ್ತದೆ. ಮೆಕ್ಸಿಕನ್‌ ಫುಡ್‌ನಲ್ಲೂ ಹೆಚ್ಚಾಗಿ ಹೂಗಳನ್ನು ಉಪಯೋಗಿಸುತ್ತಾರೆ. ಅದಲ್ಲದೆ, ಲ್ಯಾವೆಂಡರ್‌ ಹೂಗಳು, ಗ್ಲಾಡಿಯೋಲಸ್‌ನ ದಳಗಳು ಮತ್ತು ನಷ್ಟಾಶಯಂನ (ವೀನಸ್‌)  ಕಿತ್ತಳೆ ಬಣ್ಣದ ಹೂಗಳಿಂದ ಅಲಂಕರಿಸಿದ ಸಲಾಡ್‌ ಅಂತೂ ವಿಶ್ವದೆಲ್ಲೆಡೆ ಕಾಂಟಿನೆಂಟಲ್ ಡಿಶ್‌ ಎಂದು ಪ್ರಸಿದ್ಧವಾಗಿದೆ.

Flower_Cardamom

ಭಾರತದ ಭೋಜನದಲ್ಲಿ ಸ್ವಾದ ಮತ್ತು ಬಣ್ಣ ಹೆಚ್ಚಿಸಲು ಹೂವುಗಳ ಉಪಯೋಗ ಬಹಳ ಹಿಂದಿನಿಂದ ನಡೆದು ಬಂದಿದೆ. ಸುಗಂಧದ ರಾಜ ಕೇಸರಿ, ಗುಲಾಬಿ ಜಲ ಮತ್ತು ಗುಲಾಬಿ ಹೂವುಗಳು ಇತ್ಯಾದಿ ಯಾವಾಗಲೂ ಭಾರತೀಯ ವ್ಯಂಜನಗಳಲ್ಲಿ ಹೈಲೈಟ್‌ ಆಗಿದೆ. ನುಗ್ಗೇಕಾಯಿಯ ಮೊಗ್ಗು, ಬಾಳೆ ಎಲೆಯ ಮೇಲೆ ಬಡಿಸಿದ ದಕ್ಷಿಣ ಭಾರತದ ಉಪ್ಪಿಟ್ಟು, ಇಡ್ಲಿ ಇಂದಿಗೂ ಜನರಿಗೆ ಬಹಳ ಇಷ್ಟವಾಗಿವೆ.

ಇವಲ್ಲದೆ ಗುಣಗಳಿಂದ ತುಂಬಿದ ಸಾಸುವೆ ಹೂವುಗಳು ಆರೋಗ್ಯಕ್ಕೆ ಬಹಳ ಉತ್ತಮವಲ್ಲದೆ, ಸಿನಿಮಾ ಪ್ರಪಂಚದಲ್ಲೂ ಮೊದಲ ಆಯ್ಕೆಯಾಗಿದೆ.

ಒಳ್ಳೆಯ ಮೃಷ್ಟಾನ್ನ ಭೋಜನ ತಯಾರಿಸುವುದಿದ್ದರೆ ಹೂವುಗಳು ಸುಗಂಧದೊಂದಿಗೆ ಸ್ವಾದವನ್ನೂ ಹೆಚ್ಚಿಸುತ್ತವೆ. ಹೀಗಿರುವಾಗ ಯಾವ ಹೂವುಗಳು ತಿನ್ನಲು ಒಳ್ಳೆಯದು ಮತ್ತು ಯಾವ ಹೂವುಗಳು ಅಲಂಕರಿಸಲು ಒಳ್ಳೆಯದು ಎಂದು ತಿಳಿದುಕೊಳ್ಳಬೇಕು.

ಹರ್ಬ್‌ ಫ್ಲವರ್ : ಸ್ವಾದ ಮತ್ತು ಗಂಧಕ್ಕಾಗಿ ವಿಶೇಷ ಸ್ಥಾನ ಪಡೆದಿರುವ ಹರ್ಬ್‌ ಹೂವುಗಳ ಸಲಾಡ್‌ ಮತ್ತು ಸೂಪ್‌ಗಾಗಿ ಸಾಕಷ್ಟು ಗುಣಕಾರಿ ಮತ್ತು ಪೌಷ್ಟಿಕತೆಯುಳ್ಳ ಮತ್ತು ತಾಜಾತನಕ್ಕೆ ಇಷ್ಟಪಡಲಾಗುತ್ತದೆ. ಫ್ಲವರಿಂಗ್‌ ಆನಿಯನ್‌ ಅಥವಾ ಈರುಳ್ಳಿಯ ಹೂವುಗಳು ಎಂದು ತಿಳಿದಿರುವ ಬೆಳ್ಳುಳ್ಳಿ, ಈರುಳ್ಳಿ ಮತ್ತು ಲೀಕ್‌ (ಈರುಳ್ಳಿಯ ಜಾತಿಯ)ನ ಎಲ್ಲಾ ಭಾಗಗಳು ಅಂದರೆ ಎಲೆಗಳು, ಬೀಜ, ಹೂವುಗಳು ತಿನ್ನಲು ಯೋಗ್ಯವಾಗಿವೆ.

ಮೆಂತ್ಯ : ಶುಗರ್‌ ಕಂಟ್ರೋಲ್‌ಗೆ ಉತ್ತಮವೆಂದು ತಿಳಿದಿರುವ ಮೆಂತ್ಯದ ಹಳದಿ ಹೂವುಗಳು ಸ್ವಾದಕ್ಕೆ ಹಾಗೂ ಅಲಂಕಾರಕ್ಕೆ ಚೆನ್ನಾಗಿರುತ್ತದೆ.

ಸಾಸುವೆ : ಸಾಸುವೆಯ ಹಳದಿ ಹೂಗಳಂತೂ ಇಂದಿಗೂ ತಿನ್ನಲು ಯೋಗ್ಯ ಹೂವುಗಳಲ್ಲಿ ವಿಶೇಷ ಸ್ಥಾನ ಪಡೆದಿದೆ.

ಬೇಸಿಲ್ : ತುಳಸಿಯಂತಹ ವಾಸನೆ ಹಾಗೂ ಸ್ವಾದಕ್ಕಾಗಿ ಬೇಸಿಲ್ ನ ಎಲೆಗಳು ಮತ್ತು ಚಿಕ್ಕ ಚಿಕ್ಕ ಮುತ್ತುಗಳಂತಹ ಬಣ್ಣಕ್ಕಾಗಿ ಈ ಹೂವುಗಳು ಉಪಯೋಗವಾಗುತ್ತವೆ.

ಸಣ್ಣ ಏಲಕ್ಕಿ : ಉಸಿರಿಗೆ ಸುವಾಸನೆ ಕೊಡುವ, ಅಜೀರ್ಣ ದೂರ ಮಾಡುವ ಸಣ್ಣ ಏಲಕ್ಕಿ ಹೂಗಳನ್ನೂ ತಿನ್ನಬಹುದು.

ಬೋರೆಜ್‌ : ಶರಬತ್‌, ತಣ್ಣನೆಯ ಸೂಪ್‌, ಚಟ್ನಿ ಅಥವಾ ಲೆಮನೇಡ್‌ಗೆ ಸೇರಿಸಲು ಸೌತೆಕಾಯಿಯ ಸ್ವಾದವಿರುವ ನೀಲಿ ಕಾಂತಿಯಿರುವ ಬೋರೆಜ್‌ನ ಹೂವು ಕೂಡ ಶೆಫ್ಸ್ ಹಾಗೂ ಪಾಕಕಲೆಯಲ್ಲಿ ಅಭಿರುಚಿ ಇರುವ ಮಹಿಳೆಯರಲ್ಲಿ ಮೆಚ್ಚುಗೆ ಹೊಂದಿದೆ.

ಕೊತ್ತಂಬರಿಸೊಪ್ಪು : ಹರ್ಬ್‌ ಹೂವುಗಳಲ್ಲಿ ಕೊ.ಸೊಪ್ಪಿನ ಎಲೆಗಳು, ಅದರ ಬಿಳಿ ಹೂವುಗಳು ಮತ್ತು ಒಣಗಿದ ಬೀಜಗಳು ಎಲ್ಲ ತಿನ್ನಲು ಯೋಗ್ಯವಾಗಿವೆ.

ಮಲ್ಲಿಗೆ : ಪರಿಸರಕ್ಕೆ ಸುವಾಸನೆ ನೀಡುವ ಮಲ್ಲಿಗೆ ಹೂವುಗಳ ಟೀ ಭಾರತೀಯ ವ್ಯಂಜನಗಳನ್ನು ಸೇವಿಸಿದ ನಂತರ ಕುಡಿಯಲು ಚೆನ್ನಾಗಿರುತ್ತದೆ. ಅದನ್ನು ಕೊಡುವುದು ಡೆಲಿಕೆಸಿ ಎಂದು ಹೇಳಲಾಗುತ್ತದೆ.

ಪುದೀನಾ ಮತ್ತು ಓಮ : ಪುದೀನಾದ ಸ್ವಾದ, ಗುಣಗಳು ಮತ್ತು ಔಷಧಿಗಳಲ್ಲಿ ಅದರ ಉಪಯೋಗ ಎಲ್ಲರಿಗೂ ತಿಳಿದಿದೆ. ಅದರೊಂದಿಗೆ ಸೇರಿಕೊಳ್ಳುವ ಗುಣ ಇರುವ ಓಮ (ಅಜವಾನ)ದ ಹೂವುಗಳು ಮತ್ತು ಎಲೆಗಳನ್ನು ಕಾಂಟಿನೆಂಟಲ್, ಇಟಾಲಿಯನ್‌, ಗ್ರೀಕ್‌ ಮತ್ತು ಥಾಯ್‌ ಫುಡ್‌ ಇತ್ಯಾದಿಗಳಲ್ಲಿ ಉಪಯೋಗಿಸಿ ನೋಡಿ. ಆಹಾ …. ಆಹಾ…. ಎಂದು ತಲೆದೂಗುವಿರಿ.

ಥೈವ್‌ : ತೋಟಗಳಲ್ಲಿ ಮತ್ತು ಕುಂಡಗಳಲ್ಲಿ ಸುಲಭವಾಗಿ ಬೆಳೆಯಬಹುದಾದ ಗಿಡ. ವಿಶೇಷ ಸುವಾಸನೆಗೆ ಸಸ್ಯಾಹಾರಿ, ಮಾಂಸಾಹಾರಿ ಅಡುಗೆಗಳು ಮತ್ತು ಸೂಪ್‌ನಲ್ಲಿ ಉಪಯೋಗಿಸಬಹುದು. ಇದರ ಎಲೆಗಳು ಸ್ವಾದಕ್ಕಾಗಿ ಮತ್ತು ಹೂಗಳು ಸುಗಂಧಕ್ಕಾಗಿ ಉಪಯೋಗವಾಗಿವೆ.

ತರಕಾರಿಗಳ ಹೂಗಳು : ತರಕಾರಿಗಳಲ್ಲಿ ಮೊದಲು ಗಡ್ಡೆಕೋಸು ಬರುತ್ತದೆ. ಅಂದರೆ ತರಕಾರಿ ಹಾಗೂ ಹೂವು ಎರಡೂ ತಿನ್ನಲು ಉಪಯೋಗವಾಗುತ್ತವೆ. ಇದರ ತಂಗಿ ಹಸಿರು ಬಣ್ಣದ ಬ್ರೋಕ್ಲಿ. ಗುಣಗಳಿಂದ ಕೂಡಿದ್ದು ವಿದೇಶಿ ವ್ಯಂಜನಗಳಲ್ಲಿ ಬಹಳ ಉಪಯೋಗಿಸುವ ತರಕಾರಿಯಾಗಿದೆ. ಸಿಹಿ ಕುಂಬಳಕಾಯಿ, ಹೀರೇಕಾಯಿ ಮತ್ತು ಬೂದುಕುಂಬಳದ ಹಳದಿ ಹೂಗಳು ಯಾವುದಾದರೊಂದು ರೂಪದಲ್ಲಿ ಉಪಯೋಗವಾಗುತ್ತವೆ. ಬಟಾಣಿಯ ಬಿಳಿ ಹೂಗಳನ್ನೂ ಆಹಾರದಲ್ಲಿ ಉಪಯೋಗಿಸುತ್ತಾರೆ. ಆದರೆ ಟೊಮೇಟೊ, ಆಲೂಗಡ್ಡೆ, ಬದನೆ ಹಾಗೂ ಮೆಣಸಿನಕಾಯಿಯ ಹೂಗಳು ತಿನ್ನಲು ಯೋಗ್ಯವಲ್ಲ.

ಭಾರತೀಯ ವ್ಯಂಜನಗಳಲ್ಲಿ ನುಗ್ಗೇಕಾಯಿಯ ಹೂಗಳು ಮತ್ತು (ಕೆಂಪು ಮಂದಾರ) ಕಂಚುವಾಳದ ಅರ್ಧ ಅರಳಿದ ಹೂಗಳು, ಮೊಗ್ಗುಗಳನ್ನು ಬೇಯಿಸಿ ಬೆಂದ ಆಲೂಗಡ್ಡೆ ಮತ್ತು ಮೊಸರಿಗೆ ಸೇರಿಸಿ ಮಾಡಲಾಗುತ್ತದೆ. ಊಟಕ್ಕಾಗಿ ಬಾಳೆ ಎಲೆ, ಹಣ್ಣು ಹಾಗೂ ಬಾಳೆಕಾಯಿಯನ್ನು ತಿನ್ನಬಹುದು.

ಹಣ್ಣುಗಳ ಹೂವುಗಳೂ ತಿನ್ನಲು ಯೋಗ್ಯವಾಗಿದೆ. ಕೇಳಲು ವಿಚಿತ್ರ ಅನ್ನಿಸಿದರೂ ವಾಸ್ತವಾಗಿದೆ. ಸೇಬು ಎಲ್ಲರಿಗೂ ಇಷ್ಟವಾದ ಹಣ್ಣು. ಅದರ ಹೂವುಗಳೂ ಮಂದ ಸುವಾಸನೆಯಿಂದಾಗಿ ಸ್ವೀಟ್‌ ಡಿಶ್‌ ತಯಾರಿಕೆಗೆ ಪೂರಕಾಗಿವೆ.

ಕಹಿಯಾದ ಹೂವುಗಳಲ್ಲಿ ನಿಂಬೆ ಹೂಗಳ ಉಲ್ಲೇಖ ಅಗತ್ಯವಾಗಿದೆ. ಅವನ್ನು ಕೇಕ್‌, ಪೇಸ್ಟ್ರಿ ಇತ್ಯಾದಿಗಳಲ್ಲಿ ಉಪಯೋಗಿಸುತ್ತಾರೆ. ಹಾಗೆಯೇ ಕಿತ್ತಳೆ, ದ್ರಾಕ್ಷಿಯ ಹೂವು, ಹಣ್ಣು  ಎರಡನ್ನೂ ಆಹಾರದಲ್ಲಿ ಯಾವುದಾದರೊಂದು ರೂಪದಲ್ಲಿ ಉಪಯೋಗಿಸುತ್ತಾರೆ.

ಗ್ಲಾಡಿಯೋಲಸ್‌ ಮತ್ತು ಗುಲಾಬಿ ಹೂಗಳ ದಳಗಳನ್ನು ಆಹಾರದಲ್ಲಿ ಮತ್ತು ಅಲಂಕಾರಕ್ಕೆ ಉಪಯೋಗಿಸಲಾಗುತ್ತದೆ.

– ಎಸ್‌. ಅನುಪಮಾ 

ಅಗತ್ಯ ವಿಷಯಗಳು ಸ್ವಾದ ಮತ್ತು ಸುವಾಸನೆ ಹೆಚ್ಚಿಸುವ ಹೂವುಗಳನ್ನು ಉಪಯೋಗಿಸುವಾಗ, ಕೆಲವು ವಿಷಯಗಳ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಿ.

– ಅಡುಗೆಯನ್ನು ಸರಿಯಾದ ರೀತಿಯಲ್ಲಿ ಬಡಿಸಿದರೆ ಸ್ವಾದ ಹೆಚ್ಚುತ್ತದೆ. ಅದಕ್ಕಾಗಿ ಯಾವುದಾದರೂ ಹೂವು ಉಪಯೋಗಿಸುವ ಮೊದಲು ಅದರ ದಳಗಳನ್ನು ಕೊಂಚ ತಿಂದು ನೋಡಿ. ಕಹಿಯಾಗಿದ್ದರೆ ಬಿಟ್ಟುಬಿಡಿ.

– ಅಲಂಕಾರಕ್ಕಾಗಿ ಇಟ್ಟ ಹೂವಿನ ಪ್ಲೇಟುಗಳ ಸೌಂದರ್ಯ ಹೆಚ್ಚಿಸಿ. ಜೊತೆಗೆ ಡಿಶ್‌, ಬೌಲ್ ಮತ್ತು ಬಡಿಸಿದ ಊಟದ ಜೊತೆಗೆ ಅಗತ್ಯವಾಗಿ ಹೊಂದಿಸಿ.

– ಸಲಾಡ್‌ ಮೇಲೆ ತಿನ್ನಬಹುದಾದ ಹೂವುಗಳ ದಳಗಳನ್ನು ಹರಡಿ.

– ಮೊಸರು ವಡೆಯನ್ನು ಬಡಿಸುತ್ತಿದ್ದರೆ ಮಸಾಲೆಗಳಿಂದ ಅಲಂಕರಿಸಿದ ನಂತರ ಮಧ್ಯೆ ಮಧ್ಯೆ  ಮೆಂತ್ಯ ಅಥವಾ ಸಾಸುವೆಯ ತಾಜಾ ಹೂಗಳನ್ನು ಇಡಿ. ಡಿಶ್‌ ಸುಂದರವಾಗಿಯೂ, ಸುಗಂಧಿತವಾಗಿಯೂ ಇರುತ್ತದೆ.

– ಹುರಿದ ಜೀರಿಗೆ ಹಾಗೂ ಮೆಂತ್ಯಸೊಪ್ಪಿನ ಹೂವುಗಳ ಸುವಾಸನೆ ಪರಸ್ಪರ ಪೂರಕ. ಆದ್ದರಂದ ಇವೆರಡನ್ನೂ ಒಟ್ಟಿಗೆ ಬಳಸಿಕೊಳ್ಳಿ.

– ಸುಗಂಧಿತ ಪೇಯಗಳಿಗೆ ಸದಾ ತಾಜಾ ಹೂವುಗಳನ್ನೇ ಬಳಸಬೇಕು.

– ಕೆಲವರಿಗೆ ಕೆಲವೊಂದು ಸುಗಂಧ ಅಲರ್ಜಿ ಎನಿಸುತ್ತದೆ. ಹೀಗಾಗಿ ನಿಮ್ಮ ಮನೆಗೆ ಅತಿಥಿಗಳು ಬಂದಾಗ ಅವರಿಗೆ ವಿಹಿತ ಎನಿಸುಂಥ ಸುಗಂಧ ಸೂಸುವ ಹೂವುಗಳನ್ನು ಯಾವ ವಿಧದಲ್ಲೂ ಬಳಸಬೇಡಿ.

– ಯಾವುದೇ ಹೂವನ್ನು ಬಳಸುವ ಮೊದಲು, ಅಗತ್ಯ ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರಬೇಕು. ಇದಕ್ಕಾಗಿ ಹಿರಿಯರ ಮಾರ್ಗದರ್ಶನ ಪಡೆಯಿರಿ.

– ಮಾರುಕಟ್ಟೆಯ ಹೂವುಗಳಲ್ಲಿ ಕೀಟನಾಶಕಗಳ ಅಂಶ ಇದ್ದೇ ಇರುತ್ತದೆ. ಹೀಗಾಗಿ ಎಡಿಬಲ್ ಫ್ಲವರ್‌ ಬಳಸುವಾಗ ಅದು ಮನೆಯ ತೋಟದ್ದು ಅಥವಾ ಆರ್ಗ್ಯಾನಿಕ್‌ ಸ್ಟೋರ್‌ನದ್ದಾಗಿರಲಿ, ಆಗ ಅದು ಅಡುಗೆಗೆ ಯೋಗ್ಯ.

– ಅಡುಗೆಗೆ ಸದಾ ತಾಜಾ ಹೂವುಗಳನ್ನೇ ಬಳಸಿ. ತುಸು ಮಾಸಿದ, ಒಣಗಿದ ಹೂಗಳನ್ನು ಬಳಸಲೇಬೇಡಿ.

– ತೊಳೆದ ತಾಜಾ ಹೂವುಗಳನ್ನು ಒದ್ದೆ ಪೇಪರ್‌ ಟವೆಲ್ ಅಥವಾ ಮಖಮಲ್ ಬಟ್ಟೆಯಲ್ಲಿ ಸುತ್ತಿ ಫ್ರಿಜ್‌ನಲ್ಲಿಡಿ. ಪಾರ್ಟಿ ಇರುವಾಗ ಹಿಂದಿನ ದಿನ ಹೀಗೆ ಮಾಡಿ, ನಂತರ ಪಾರ್ಟಿಗೆ ಬಳಸಿರಿ.

– ಹೀಗೆ ಹೂವುಗಳನ್ನು ಸತತ ಬಳಸುತ್ತಾ, ಹೊಸ ಹೊಸ ಪ್ರಯೋಗ ನಡೆಸುತ್ತಿರಿ. ನಿಧಾನವಾಗಿ ನಿಮಗೆ ಅವುಗಳ ಬಣ್ಣ, ರುಚಿಯ ಪರಿಚಯ ಹೆಚ್ಚುತ್ತದೆ.

– ವಸಂತ ಋತುವಿನಲ್ಲಿ ಹೆಚ್ಚು ಹೂಗಳಿರುತ್ತವೆ. ಆಗ ಇಂಥ ಪ್ರಯೋಗ ಹೆಚ್ಚು ಮಾಡಿ.

– ಮಳೆಗಾಲದಲ್ಲಿ ಒದ್ದೆ ಹೂಗಳನ್ನು ನೇರ ಬಳಸಬೇಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ