ಮನೆಯ ಮುಂದಿನ ಎಂಟು ಹಸಿರು ಮರಗಳು ನಿಮಗೆ ಸ್ವಾಗತಗೀತೆ ಹಾಡುತ್ತವೆ. ಆ ಪುಟ್ಟ ತೋಟವನ್ನು ದಾಟಿ ಮುಂದೆ ಸಾಗಿದರೆ ಪಡಸಾಲೆ. ಪಡಸಾಲೆಯ ತುಂಬಾ ಹೊಳೆಯುವ ಹಿತ್ತಾಳೆಯ ಕಲಾಕೃತಿಗಳು. ಪಡಸಾಲೆಯ ಮಧ್ಯದಲ್ಲಿ ಕುಸುರಿ ಕೆತ್ತನೆಯ ಪೀಠದ ಸುತ್ತ ಪಸರಿಸಿಕೊಂಡ ಘಂಟೆಗಳ ಮೇಲಿನ ಅಗಲವಾದ ಪಾತ್ರೆಯಲ್ಲಿ ಕುಳಿತ ಗಣೇಶನ ವಿಗ್ರಹ. ಪಕ್ಕದ್ಲಲ್ಲೇ ಮೈದುಂಬಿಕೊಂಡು ನಿಂತ ಕಾಮಧೇನುವಿನ ಕೆಚ್ಚಲಿನಲ್ಲಿ ಅಮೃತವನ್ನು ಸವಿಯುತ್ತಿರುವ ಎಳೆಗರು. ಆ ನೋಟವನ್ನು ಕಣ್ತುಂಬಿಸಿಕೊಳ್ಳುತ್ತಿರುವ ಹಸುಗಳು, ಸ್ವಲ್ಪ ಮುಂದೆ ಸಾಗಿದರೆ ಹಂಸತೂಲಿಕಾತಲ್ಪದಲ್ಲಿ ಮಲಗಿದ ಶೇಷಶಯನ. ಪಕ್ಕದಲ್ಲೇ ನಾಟ್ಯಮೂರ್ತಿ ನಟರಾಜ. ಆದಿಶೇಷನ ಮೇಲೆ ನಾಟ್ಯವಾಡುವ ಗಣೇಶ. ಮತ್ತೊಂದೆಡೆ ಕಣ್ಣು ಹಾಯಿಸಿದರೆ ಹಿತ್ತಾಳೆಯ ಪೀಠದ ಮೇಲಿನ ಕುಶಲ ಕೆತ್ತನೆಯ ಪಾಂಚಜನ್ಯ. ಮುಂದೆ ಛತ್ರಿಯ ಕೆಳಗೆ ಸಾಗುತ್ತಿರುವ ಗಣಪ. ಕಾಲು ನೀಡಿಕೊಂಡು ಆರಾಮವಾಗಿ ಒರಗಿ ಕುಳಿತ ಗಣಪತಿ. ಕಿಂದರಿ ಜೋಗಿಯಂತೆ ತುತ್ತೂರಿಯನ್ನು ಊದುತ್ತಾ ಇಲಿಗಳ ಹಿಂಡನ್ನು ತನ್ನ ಹಿಂದೆ ಕರೆದುಕೊಂಡು ಸಾಗುವ ಮೂಷಿಕವಾಹನ. ಆದಿಶೇಷನ ಮೇಲೆ ನರ್ತಿಸುವ ಗಜಮುಖ. ಹಂಸದಾಕಾರದ ದೀಪಗಳು. ವಿಭಿನ್ನ ಗಣಪನ ವಿಗ್ರಹಗಳು. ಈ ರೀತಿ ಹಿತ್ತಾಳೆಯ ವಿಗ್ರಹಗಳ ಆಗರವೇ ಲತಾ ವೆಂಕಟ್‌ ಅವರ ಮನೆಯಲ್ಲಿದೆ.

ಇವುಗಳೇ ಅಲ್ಲದೆ ವಿಭಿನ್ನ ರೀತಿಯ ಪಿಂಗಾಣಿಯ ಕಲಾಕೃತಿಗಳು. ಈಜಿಪ್ಟಿನ ಸೈನಿಕರ ವಿಭಿನ್ನ ರೂಪಗಳನ್ನು ಚಿತ್ರಿಸಿರುವ ಗಾಜಿನ ಕಲಾಕೃತಿಗಳು. ಅತ್ಯಂತ ಕಷ್ಟಕರ ಮತ್ತು ಹೆಚ್ಚು ವೆಚ್ಚದ ತಂಜಾವೂರಿನ ಪೇಂಟಿಂಗ್‌ಗಳು, ವಿದೇಶಕ್ಕೆ ಹೋದಾಗ ತಂದ ಅಲ್ಲಿನ ನೆನಪಿನ ವಸ್ತುಗಳು ಮನೆಯ ತುಂಬಾ ಆವರಿಸಿವೆ.  ಇವೆಲ್ಲಾ ಇವರ ಕಲಾಸಕ್ತಿಯನ್ನು ಪ್ರತಿಬಿಂಬಿಸಿದರೆ ಸಂಪ್ರದಾಯಬದ್ಧವಾಗಿ ದಸರಾ ಹಬ್ಬದಲ್ಲಿ ಮಾಡುವ ವಿಭಿನ್ನ ಅಲಂಕಾರ ಮತ್ತು ಗೊಂಬೆ ಜೋಡಿಸುವುದರಲ್ಲಿ ಇವರ ಜಾಣ್ಮೆಯನ್ನು ಕಾಣಬಹುದು. ಇದಲ್ಲದೆ ನಿಬ್‌ ಪೇಂಟಿಂಗ್‌, ಟೆರಾಕೋಟಾದ ಆಭರಣಗಳು ಇವರ ಕೈ ಚಳಕದಿಂದ ಸುಂದರವಾಗಿ ಮೂಡಿಬಂದಿವೆ. ಇವರ ಮನೆಯನ್ನು ಒಂದು ಸುಂದರ ಕಲಾ ಮೇಳವೆನ್ನಬಹುದು.

ceramoc--3

ಬರಿಯ ಕಲೆಯಲ್ಲಿನ ಆಸಕ್ತಿಯೊಂದೇ ಅಲ್ಲ, ತಮ್ಮನ್ನು ತಾವು ಅನೇಕ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಕಲ ಚೇತನರ ಸಂಸ್ಥೆ ಸಮರ್ಥನಮ್ ನಲ್ಲಿ ಆ ವಿಶೇಷ ಮಕ್ಕಳ ಜೊತೆ ಇದ್ದು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಕಾರ್ಯದಲ್ಲಿ ಇವರ ಪ್ರಯತ್ನ ನಿಜಕ್ಕೂ ಮೆಚ್ಚುವಂಥಾದ್ದು. ಕಸದ ನಿರ್ವಹಣೆ, ಒಣ ಮತ್ತು ಹಸಿ ತ್ಯಾಜ್ಯಗಳ ವಿಂಗಡಣೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ, ಕಾರ್ಯಗಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಲೇ ಇರುತ್ತಾರೆ. ಸರ್ಕಾರಿ ಶಾಲೆಯ ಮಕ್ಕಳಿಗೆ ತಮ್ಮ ಬಿಡುವಿನ ಸಮಯದಲ್ಲಿ ಹೋಗಿ ಪಾಠ ಹೇಳಿ ಕೊಡುತ್ತಾರೆ.

``ನಾವು ಬಹಳ ಬಡತನದ ಹಿನ್ನೆಲೆಯಿಂದ ಬೆಳೆದು ಬಂದವರು. ನಮ್ಮ ತಂದೆಯ ಕಷ್ಟದ ಕಾಲದಲ್ಲಿ ನಮ್ಮ ತಾಯಿ ಮಕ್ಕಳಿಗೆ ಪಾಠ ಹೇಳಿ ಅವರಿಗೆ ನೆರವಾದರು. ಮನೆಯಲ್ಲೇ ಸ್ಪಾಂಜಿನ ಗೊಂಬೆಗಳು, ವೈರಿನ ಬುಟ್ಟಿಗಳು, ಖಾಲಿ ಬಾಟಲುಗಳಿಂದ ಮಂಟಪ, ಪ್ಲಾಸ್ಟಿಕ್‌ ಕೊಳಗಳಿಂದ ಗೊಂಬೆಗಳು, ಪರದೆ, ಈ ರೀತಿ ಮನೆಯಲ್ಲೇ ಸಾಕಷ್ಟು ಕಲಾಕೃತಿಗಳನ್ನು ಮಾಡುತ್ತಿದ್ದರು. ತಾಯಿ ಪದವೀಧರೆ, ಆದರೆ ತಂದೆ ಯಾವುದೇ ಪದವಿಯನ್ನು ಹೊಂದಿರಲಿಲ್ಲ. ತಾಯಿಯ ಸಹಕಾರ ಮತ್ತು ಪ್ರೋತ್ಸಾಹದಿಂದ ತಮ್ಮ ಮಧ್ಯಮ ವಯಸ್ಸಿನಲ್ಲಿ ತಂದೆ ಪದವಿಯನ್ನು ಪಡೆದರು,'' ಎಂದು ತಮ್ಮ ಬಾಲ್ಯವನ್ನು ನೆನೆಸಿಕೊಳ್ಳುತ್ತಾರೆ. ಪ್ರತಿಯೊಬ್ಬ ಪುರುಷನ ವಿಜಯದ ಹಿಂದೆ ಹೆಣ್ಣಿನ ಪಾತ್ರವಿದೆ ಎನ್ನುವುದನ್ನು ನಿರೂಪಿಸಿದ ಮಹಿಳೆ ನಮ್ಮಮ್ಮ, ಎಂದು ಬಹಳ ಹೆಮ್ಮೆಯಿಂದ ಹೇಳುತ್ತಾರೆ ಲತಾ. ಅದೇ ಗುಣ ಮಗಳಲ್ಲಿಯೂ ಮೂಡಿ ಬಂದಿದೆ. ಸ್ವಾಭಿಮಾನಿ, ಇತರರ ಕಷ್ಟಗಳಿಗೆ ಸ್ಪಂದಿಸುವ ಮತ್ತು ಸಾಧ್ಯವಾದಷ್ಟು ಸಹಕಾರ ನೀಡುವ ಗುಣ. ಸಾಧ್ಯವಾದಷ್ಟು ಯಾರಿಗೂ ನೋವು ಕೊಡಬಾರದು ಮತ್ತು ದಿನಕ್ಕೆ ಒಬ್ಬರ ಮುಖದಲ್ಲಾದರೂ ನಗೆಯನ್ನು ಮೂಡಿಸಬೇಕೆನ್ನುವುದು ಇವರ ಆಸೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ