ಕಟ್ಟಡ ಮನೆ ಆಗಬೇಕಾದರೆ ಅದು ಗೃಹಾಲಂಕಾರದಿಂದ ಮಾತ್ರ ಸಾಧ್ಯ. ಅಂಥ ಮನೆಗೆ ಅದ್ಭುತ ಕಳೆ ಬರಬೇಕೆಂದರೆ ಬಣ್ಣಬಣ್ಣದ ಸ್ಟೈಲಿಶ್‌ ಪರದೆಗಳು ಬೇಕೇಬೇಕು. ಇದರ ಪ್ರತಿ ಥೀಮಿನಿಂದ ಮನೆಯ ವಾತಾವರಣ ಮಿಂಚಿನಂತಾಗಿ ಲವಲವಿಕೆ ಹೆಚ್ಚುತ್ತದೆ. ಹೀಗಾಗಿ ನೀವು ಸಹ ಇಂದೇ ನಿಮ್ಮ ಮನೆಯ ಲುಕ್ಸ್ ಗಾಗಿ ಪರದೆಗಳನ್ನು ಬದಲಾಯಿಸಿ.

ಪರದೆಗಳ ಕ್ರಿಯೇಟಿವ್ ಐಡಿಯಾಸ್

ಗ್ರೋಮೇಟ್‌ ಕರ್ಟನ್ಸ್ : ಈ ತರಹದ ಪರದೆಗಳು ನೋಡಲು ಅತಿ ಸರಳ ಎನಿಸಿದರೂ, ಕೋಣೆಯ ಕಾಂತಿ ಹೆಚ್ಚಿಸುತ್ತವೆ. ಇದರ ವೈಶಿಷ್ಟ್ಯ ಎಂದರೆ, ಇದರಲ್ಲಿ ಎಲ್ಲಾ ತರಹದ ಫ್ಯಾಬ್ರಿಕ್ಸ್ ಬಳಸಬಹುದು. ನೀವು ಇದರ ಗೆಟಪ್‌ ಹೆಚ್ಚಿಸಲು ಹೆಡರ್‌ನಲ್ಲಿ ಸಿಲ್ವರ್‌ ರಿಂಗ್ಸ್ ಬಳಸಿಕೊಳ್ಳಿ.

ಶೀರ್‌  ಕರ್ಟನ್ಸ್ : ಈ ಪರದೆಗಳನ್ನು ಒಮ್ಮೆ  ನೋಡಿದವುರು, ಕೊಳ್ಳದೆ ಬಿಡುವುದಿಲ್ಲ. ಇವಂತೂ ಬಹು ಬಗೆಯ ಬಣ್ಣಗಳು, ಡಿಸೈನ್ಸ್, ಪ್ಯಾಟರ್ನ್ಸ್ ಗಳಲ್ಲಿ ಲಭ್ಯ. ಇವು ಪಾರದರ್ಶಕವಾಗಿದ್ದು, ಕೋಣೊಯೊಳಗೆ ಕುಳಿತೇ ನೀವು ಹೊರಗಿನ ಚಟುವಟಿಕೆಗಳ ಮೇಲೆ ಒಂದು ಕಣ್ಣಿಡಬಹುದು. ಇಂಥ ಕರ್ಟನ್ಸ್ ಹೆಚ್ಚಿಗೆ ಡ್ರಾಯಿಂಗ್‌ ರೂಮಿಗೆ ಒಪ್ಪುತ್ತವೆ.

ರಾಡ್‌ ಪಾಕೆಟ್‌ ಕರ್ಟನ್ಸ್ : ರಾಡ್‌ ಪಾಕೆಟ್‌ ಕರ್ಟನ್ಸ್ ಹೇಗೆ ಡಿಸೈನ್‌ಗೊಳಿಸಲಾಗಿರುತ್ತದೆ ಎಂದರೆ, ಕರ್ಟನ್‌ ಪ್ಯಾನೆಲ್‌ನ ಮೂಲಕ ರಾಡ್‌ ಬರುತ್ತದೆ. ಇದರಿಂದ ಪರದೆಯ ಇಡೀ ಡಿಸೈನ್‌ ಸ್ಪಷ್ಟ ಕಂಗೊಳಿಸುತ್ತದೆ. ಇವು ವಿಶೇಷವಾಗಿ ಲೈಟ್‌ವೆಯ್ಟ್ ಫ್ಯಾಬ್ರಿಕ್‌ನಾಗಿರುತ್ತವೆ.

ಟ್ಯಾಬ್‌ ಟಾಪ್‌ ಕರ್ಟನ್ಸ್ : ಲೂಪ್ಸ್ ಫ್ಯಾಬ್ರಿಕ್ಸ್ ನಿಂದ ತಯಾರಾಗಿರುವ ಕಾರಣ ಇವನ್ನು ಹಿಂಬದಿಯಿಂದ ಹೊಲಿಯಲಾಗುತ್ತದೆ ಅಥವಾ ಫ್ರಂಟ್‌ನಿಂದ ಬಟನ್‌ ಇತ್ಯಾದಿ ಕೊಟ್ಟು ಸ್ಟೈಲ್‌ಗೊಳಿಸಲಾಗುತ್ತದೆ. ನಂತರ ರಾಡ್‌ನಿಂದ ಕನೆಕ್ಟ್ ಮಾಡಲಾಗುತ್ತದೆ. ಈ ತರಹದ ಪರದೆ ಸಾಮಾನ್ಯವಾಗಿ ಕಿಟಕಿಗಳಿಗೆ ಹೆಚ್ಚು ಒಪ್ಪುತ್ತವೆ.

ಪ್ಲೀಟೆಡ್‌ ಕರ್ಟನ್ಸ್ : ಈ ತರಹದ ಕರ್ಟನ್ಸ್ ಔಟ್‌ ಆಫ್‌ ಫ್ಯಾಷನ್‌ ಆಗುವುದಿಲ್ಲ. ಇವು ಹೆಚ್ಚು ಫಾರ್ಮಲ್ ಲುಕ್ಸ್ ನೀಡುತ್ತವೆ. ಇದರಲ್ಲಿ ಹೆಡರ್‌ ಟೇಪ್‌ ನೆರವಿನಿಂದ ಪ್ಲೀಟ್ಸ್ ಮಾಡಿಕೊಂಡು, ಅವನ್ನು ಹಿಂಬದಿಯಿಂದ ಹೊಲಿಯುತ್ತಾರೆ ಹಾಗೂ ಟೇಪ್‌ನಲ್ಲಿ ಹ್ಯಾಂಗಿಂಗ್‌ ಹುಕ್ಸ್ ಹಾಕುತ್ತಾರೆ, ಇವು ಉತ್ತಮ ಲುಕ್ಸ್ ನೀಡುತ್ತವೆ.

ವಿಂಡೋ ಸ್ಕಾರ್ಫ್‌ : ನೀವು ಕಿಟಕಿಗಳಿಗೆ ಕೇವಲ ಡೆಕೋರೇಶನ್‌ ಉದ್ದೇಶದಿಂದ ಕರ್ಟನ್ಸ್ ಹಾಕಬಯಸಿದರೆ, ಆಗ ವಿಂಡೋ ಸ್ಕಾರ್ಫ್‌ ಬೆಸ್ಟ್. ಇದರಿಂದ ಕೋಣೆಗೆ ಬಲು ಸಾಫ್ಟ್ ಟಚ್‌ ಸಿಗುತ್ತದೆ. ಇದು ಲೈಟ್‌ ಸ್ಟಫ್‌ ಆಗಿರುವುದರಿಂದ ಒಗೆಯಲಿಕ್ಕೂ ಸುಲಭ.

ಕೇಫ್‌ ಕರ್ಟನ್ಸ್ : ಸಾಮಾನ್ಯವಾಗಿ 2 ಭಾಗಗಳಲ್ಲಿ ಹರಡಿರುವ ಕಿಟಕಿಗಳಿಗೆ ಈ ತರಹದ ಪರದೆಗಳನ್ನು ಅಳವಡಿಸುತ್ತಾರೆ. ನಿಮ್ಮ ಕಿಟಕಿಯ ಎತ್ತರದ ಮೇಲೆ ಇವುಗಳ ಉದ್ದಳತೆ ನಿಂತಿದೆ. ಇದನ್ನು ನೀವು ಹೇಳಿ ಮಾಡಿಸಬಹುದು ಅಥವಾ ರೆಡಿಮೇಡ್‌ ಸಹ ಲಭ್ಯ. ಸಾಮಾನ್ಯವಾಗಿ ಇವನ್ನು ಕಿಚನ್‌, ಬಾತ್‌ರೂಂ ಇತ್ಯಾದಿ ಕಡೆ ಹಾಕುತ್ತಾರೆ. ಏಕೆಂದರೆ ಇದು ಪ್ರೈವೆಸಿ ಮೇಂಟೇನ್‌ ಮಾಡುವುದರ ಜೊತೆ ಜೊತೆಯಲ್ಲೇ ವಿಂಡೋದ ಮೇಲ್ಭಾಗದ ಲೈಟ್‌ನ್ನು ಬ್ಲಾಕ್‌ ಆಗಲು ಬಿಡುವುದಿಲ್ಲ.

ಪೇವ್ ಮೆಟ್ಸ್ : ನೀವು ಮ್ಯಾಚಿಂಗ್‌ ಕರ್ಟನ್ಸ್ ಕೊಂಡಿದ್ದರೆ, ನಿಮ್ಮ ಪೆವ್ ಮೆಟ್ಸ್ ಸಹ ಆಕರ್ಷಕ ಆಗಿರಬೇಕು ಎಂಬುದನ್ನು ಗಮನಿಸಿ. ಆಗಲೇ ಪರದೆಗೆ ಗ್ರೇಸ್‌ ಬರುತ್ತದೆ. ಇದು ಪರದೆಗಳಿಗೆ ಹ್ಯಾಂಗ್‌ ಮಾಡಿಸುವ ಅಚ್ಚುಗಳಾಗಿದ್ದು, ನಿಮ್ಮ ಅಭಿರುಚಿಗೆ ತಕ್ಕಂತೆ ಬಳಸಿಕೊಳ್ಳಿ.

ಕರ್ಟನ್ಸ್ ಕೊಳ್ಳುವಾಗ ಎಚ್ಚರ

ಸರಿಯಾದ ಫ್ಯಾಬ್ರಿಕ್‌ ಆರಿಸಿ : ನಿಮಗೆ ಮಾರ್ಕೆಟ್‌ನಲ್ಲಿ ಸಿಲ್ಕ್ ಫ್ಯಾಬ್ರಿಕ್‌ನಿಂದ ರೂಪುಗೊಂಡ ಸುಂದರ, ಮನೋಹರ ಕರ್ಟನ್ಸ್ ದೊರೆಯುತ್ತವೆ. ಆದರೆ ಇವನ್ನು ಹ್ಯಾಂಡಲ್ ಮಾಡುವುದೇ ಕಷ್ಟ. ಏಕೆಂದರೆ ಪ್ರತಿ ಸಲ ಇವನ್ನು ಡ್ರೈಕ್ಲೀನ್‌ ಮಾಡಿಸಬೇಕು. ಹೀಗಾಗಿ ಈಝಿ ಹ್ಯಾಂಡ್ಲಿಂಗ್‌ಗಾಗಿ ನೀವು ಕಾಟನ್‌, ಪಾಲಿಯೆಸ್ಟರ್‌, ಸಿಂಥೆಟಿಕ್‌ ಫ್ಯಾಬ್ರಿಕ್ಸ್ ಪರದೆ ಬಳಸಿಕೊಳ್ಳಿ. ಅಗ್ಗ ಆಗಿರುವುದರ ಜೊತೆ, ನೀವು ಸುಲಭವಾಗಿ ಇವನ್ನು ಒಗೆಯಬಹುದು.

ಕಲರ್‌ ಪ್ಯಾಟರ್ನ್‌ ಕೋಣೆಗೆ ಪೂರಕವಿರಲಿ : ನಿಮ್ಮ ಕೋಣೆಗೆ ಸರಿಹೊಂದುವ ಕಲರ್‌ ಪ್ಯಾಟರ್ನ್‌ ಆರಿಸಿ. ಗೋಡೆಗಳಿಗೆ ಡಾರ್ಕ್‌ ಕಲರ್‌ ಬಳಸಿದ್ದರೆ, ಪರದೆ ಲೈಟ್‌ ಆಗಿರಲಿ. ಮಿಕ್ಸ್ ಮ್ಯಾಚ್‌ ಸಹ ಓ.ಕೆ. ಪೇಸ್ಟಲ್ ಶೇಡ್‌ ಬಳಸಿದರೆ ಕೋಣೆ ಸಾಕಷ್ಟು ದೊಡ್ಡದಾಗಿ ಕಾಣುತ್ತದೆ. ಗೋಡೆಗಳ ಮೇಲೆ ಡಿಸೈನಿಂಗ್‌ ಮಾಡಿಸಿದ್ದರೆ ಕರ್ಟನ್‌ ಪ್ಯಾಟರ್ನ್‌ ಪ್ಲೇನ್‌ ಆಗಿರಲಿ. ಬದಲಿಗೆ ಗೋಡೆಗಳು ಪ್ಲೇನ್‌ ಆಗಿದ್ದರೆ, ಪ್ರಿಂಟೆಡ್‌ ಕರ್ಟನ್ಸ್ ಬಳಸಿರಿ.

ಈಝಿ ಟು ಹ್ಯಾಂಡಲ್ : ಕೇವಲ ಬ್ಯೂಟಿ ಒಂದನ್ನೇ ಗಮನಿಸಿದರೆ ಟ್ರಾನ್ಸ್ ಪರೆಂಟ್‌ ಕರ್ಟನ್ಸ್ ಖರೀದಿಸಿ. ಇಲ್ಲವೇ ಸಿಂಗಲ್, ಡಬ್ಬಲ್ ಶೇಡ್‌ನ ಪರದೆಗಳು ಸಹ ಚೆನ್ನಾಗಿರುತ್ತವೆ. ಏಕೆಂದರೆ ಇವು ಬಳಸಲು ಸುಲಭ, ಬೇಗ ಹಾಳಾಗುವುದೂ ಇಲ್ಲ.

–  ಪಾರ್ವತಿ ಭಟ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ