ನಾನು 21 ವರ್ಷದವಳು. ಕನ್ನಡಕ ಹಾಕುತ್ತೇನೆ. ಕಣ್ಣಿನ ದೃಷ್ಟಿ ಸಾಕಷ್ಟು ದುರ್ಬಲವಾಗಿದ್ದರಿಂದ ಕನ್ನಡಕದ ಗಾಜು ದಪ್ಪವಾಗಿ, ನೋಡಲು ಕೆಟ್ಟದಾಗಿ, ಕಾಣಿಸುತ್ತದೆ. ನಂಬರ್ಕಳೆಯಲು ಏನಾದರೂ ಉಪಾಯ ಇದೆಯೇ?

ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತ ಇದೆ. ಆದರೆ ನೀವು ಕೆಲವು ವ್ಯಾಯಾಮ ಮಾಡಬೇಕು. ಕಣ್ಣುಗಳ ಆರೋಗ್ಯದ ಬಗ್ಗೆ ಸದಾ ಗಮನವಿಡಬೇಕು. ದಿನ ಕಣ್ಣುಗಳ ವ್ಯಾಯಾಮ ಮಾಡಿ. ಊಟದಲ್ಲಿ ವಿಟಮಿನ್‌ `ಎ' ಹೆಚ್ಚಾಗಿ ತೆಗೆದುಕೊಳ್ಳಿ. ದಪ್ಪ ಲೆನ್ಸಿನ ಕನ್ನಡಕ ಹಾಕಬಾರದೆಂದರೆ ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಳ್ಳಿ.

 

ನಾನು ಓದಿ ಬರೆದು ಮಾಡುವ ಸಮಯದಲ್ಲಿ ಕನ್ನಡಕವನ್ನು ಕಡ್ಡಾಯವಾಗಿ ಬಳಸುತ್ತೇನೆ. ಹೀಗೆ ಕನ್ನಡಕದ ಕಾರಣ, ನನ್ನ ಮೂಗಿನ ಮೇಲೆ ಆಳವಾದ ಗುರುತು ಉಳಿದುಕೊಂಡಿದೆ. ಅದರ ಕಾರಣದಿಂದ ಕನ್ನಡಕ ತೆಗೆದಾಗ ನನ್ನ ಮುಖ ಕೆಟ್ಟದಾಗಿ ಕಾಣುತ್ತದೆ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.

ನಿಮ್ಮ ಕನ್ನಡಕದ ಫ್ರೇಮ್ ಬಹಳ ಬಿಗಿಯಾಗಿ ಕೂತಿರುವುದರಿಂದ ನಿಮಗೆ ಹೀಗಾಗುತ್ತದೆ. ಯಾವುದಾದರೂ ಉತ್ತಮ ಕನ್ನಡಕದ ಅಂಗಡಿಯಲ್ಲಿ ಫ್ರೇಮ್ ನ್ನು ಸರಿಪಡಿಸಿಕೊಳ್ಳಿ ಹಾಗೂ ಸಡಿಲವಾದ, ಸಪೂರಾದ ಪ್ಲಾಸ್ಟಿಕ್‌ ಫ್ರೇಮ್ ಗಳನ್ನೇ ಬಳಸಿ. ಕನ್ನಡಕ ಧರಿಸುವ ಮೊದಲು, ಮೂಗಿನ ಮೇಲೆ ಗುರುತು ಉಂಟಾಗಿರುವ ಸ್ಥಳದಲ್ಲಿ ಯಾವುದೇ ಕೋಲ್ಡ್ ಕ್ರೀಮ್ ಸವರಿಕೊಳ್ಳಿ. ಆಗಲೂ ನಿಮಗೆ ವ್ಯತ್ಯಾಸ ಕಾಣಲಿಲ್ಲವೆಂದರೆ, ಕಾಂಟ್ಯಾಕ್ಟ್ ಲೆನ್ಸ್ ಬಳಸುವುದೇ ಲೇಸು. ಆಗ ಕನ್ನಡಕದ ಗೊಡವೆ, ಅದರ ಗುರುತಿನ ತೊಂದರೆ ಇರುವುದಿಲ್ಲ. ಮತ್ತೆ ಗುರುತಿನ ಜಾಗದಲ್ಲಿ ರಾತ್ರಿ ಮಲಗುವ ಮುನ್ನ ಪ್ರತಿನಿತ್ಯ ಕೋಲ್ಡ್ ಕ್ರೀಮ್ ನಿಂದ ಮಸಾಜ್‌ ಮಾಡಿ.

 

ನನ್ನದು ಗೋದಿ ಮೈಬಣ್ಣ, ಸಪೂರ ಶರೀರ. ನಾನು ಹೇಗೆ ಮೇಕಪ್ಮಾಡಿಕೊಂಡರೆ ಅಂದವಾಗಿ ಕಾಣುವೆ? ಯಾವ ಬಣ್ಣದ ವಸ್ತ್ರಗಳನ್ನು ತೊಟ್ಟರೆ ನನ್ನ ವ್ಯಕ್ತಿತ್ವ ನಾಲ್ಕು ಜನರಲ್ಲಿ ಎದ್ದು ಕಾಣುತ್ತದೆ?

ಗೋದಿ ಮೈ ಬಣ್ಣ ಹೊಂದಿರುವ ನೀವು ವಿಧ ವಿಧವಾದ ಫೇಸ್‌ ಪೌಡರ್‌ಅಥವಾ ಫೌಂಡೇಶನ್‌ ಕ್ರೀಮ್ ಗಳಿಂದ ಬಿಳಿಯ ಮೈಕಾಂತಿ ಪಡೆಯಲು ಪ್ರಯತ್ನಿಸಬೇಡಿ. ನಿಮ್ಮ ಮೈ ಬಣ್ಣದ ಮೇಲೆ ಸಹಜವಾಗಿ ಹರಡಿಕೊಳ್ಳುವಂಥ ಶೇಡ್‌ ಅಂದರೆ, ದಟ್ಟವಾದ ಶೇಡ್‌ ಫೌಂಡೇಶನ್‌ ಬಳಸಿ. ಬಹಳ ಡಬ್ಬಾಗಿ ಕಾಣುವಂಥ ಬಣ್ಣಗಳ ಮೇಕಪ್‌ ಅಥವಾ ವಸ್ತ್ರಗಳನ್ನು ತೊಡಬೇಡಿ. ಉದಾಹರಣೆಗೆ ಕಡು ಕೆಂಪು, ನೀಲಿ, ಹಳದಿ, ಗುಲಾಬಿ ಇತ್ಯಾದಿ. ಸೌಮ್ಯವಾದ ಬಣ್ಣಗಳನ್ನು ನಿಮ್ಮ ಮುಖದ ಸನಿಹ ಹಿಡಿದು ಕನ್ನಡಿಯಲ್ಲಿ ಪರೀಕ್ಷಿಸಿಕೊಳ್ಳಿ. ಯಾವ ಬಣ್ಣ ಅತ್ಯಧಿಕವಾಗಿ ಹೊಂದುತ್ತದೋ ಅಂತಹಗಳನ್ನು ಮಾತ್ರ ಆರಿಸಿ. ಬದಲಾಯಿಸುತ್ತ ಉಪಯೋಗಿಸಿ. ಕಣ್ಣುಗಳಿಗೆ ಕಾಡಿಗೆ ಅಥವಾ ದಟ್ಟವಾದ ಬಣ್ಣಗಳ ಪ್ರಸಾದನವನ್ನು ಕಡಿಮೆಗೊಳಿಸಿ, ನಿಮ್ಮ ಮೇಕಪ್‌ ದೂರದಿಂದ ಫಳಫಳ ಹೊಳೆಯದಿರಲಿ.

 

ನಾನು 14 ವರ್ಷದ ಹುಡುಗಿ. ಶಾಲೆಯಿಂದ ಮನೆಗೆ ವಾಪಸ್ಸು ಬರುವಾಗ ಬಿಸಿಲಿನ ಕಾರಣ ಮುಖದ ಮೇಲೆಲ್ಲ ಸಣ್ಣ ಸಣ್ಣ ಗುಳ್ಳೆಗಳು ಆಗಿರುತ್ತವೆ. ದಯವಿಟ್ಟು ಸಮಸ್ಯೆಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಏನಾದರೂ ಸರಳ ಉಪಾಯವಿದ್ದರೆ ತಿಳಿಸುವಿರಾ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ