`ಇಷ್ಟು ತಡ ರಾತ್ರಿ ಯಾರೊಂದಿಗೆ ಮಾತನಾಡುತ್ತಿದ್ದೆ?' `ನನ್ನ ಕಾಲ್ ಯಾಕೆ ರಿಸೀವ್ ಮಾಡಲಿಲ್ಲ?' `ಅವನು ನಿನ್ನನ್ನು ನೋಡಿ ಏಕೆ ನಕ್ಕ?' `ನನ್ನ ಬೆನ್ನ ಹಿಂದೆ ನಿನ್ನದೇನಾದರೂ ಮಸಲತ್ತು ನಡೀತಿದೆಯಾ?' ಇಂತಹ ಪ್ರಶ್ನೆಗಳನ್ನು ನೀವು ನಿಮ್ಮ ಪತಿಯಿಂದ ದಿನ ಎದುರಿಸಬೇಕಾಗಿ ಬರುತ್ತಿದೆಯೇ? ನಿಮ್ಮ ಉತ್ತರ `ಹೌದು' ಎಂದಾದಲ್ಲಿ ನಿಮ್ಮ ಸಂಗಾತಿ ಸಂದೇಹದ ಸ್ವಭಾವದವನಾಗಿದ್ದಾನೆ ಎಂದರ್ಥ.

ನೀವು ಈ ಎಲ್ಲ ಪ್ರಶ್ನೆಗಳಿಂದ ದಣಿದು ಹೋಗಿದ್ದರೆ ಈ ಸಂಬಂಧವನ್ನು ನಿಭಾಯಿಸಲು ಕಷ್ಟವಾಗುತ್ತದೆ. ನೀವು ನಿಮ್ಮ ಬಾಯ್‌ ಫ್ರೆಂಡ್‌ನನ್ನು ಅಥವಾ ಗರ್ಲ್ ಫ್ರೆಂಡ್ ಳನ್ನು ಎಷ್ಟು ಪ್ರೀತಿಸುತ್ತಿದ್ದೀರಿ ಹಾಗೂ ಈ ಸಂದೇಹದ ಆಧಾರದ ಮೇಲೆ ಅವರನ್ನು ತೊರೆಯಲು ಆಗದಿದ್ದರೆ ಇಂತಹ ಸಂದೇಹಿ ಸಂಗಾತಿಯನ್ನು ನಿಭಾಯಿಸಲು ಈ ಕೆಳಕಂಡ ಟಿಪ್ಸ್ ಮೇಲೊಮ್ಮೆ ಕಣ್ಣು ಹರಿಸಿ.

ಯಾವುದೇ ಒಂದು ಸಂಬಂಧದಲ್ಲಿ ಅತ್ಯಂತ ಕೆಟ್ಟ ಸಂಗತಿಯೆಂದರೆ ಸಂದೇಹ ಪಡುವುದಾಗಿರುತ್ತದೆ. ಅದರಿಂದ ಅಸುರಕ್ಷತೆ, ಮೋಸ, ದುಃಖ, ವಿಶ್ವಾಸಘಾತ ಇವೆಲ್ಲ ಆಗಬಹುದು. ಸಂಬಂಧದ ಆರಂಭದಲ್ಲಿ ಪರಸ್ಪರರನ್ನು ಅರಿತುಕೊಳ್ಳಲು ಹೆಚ್ಚು ಪ್ರಯತ್ನ ಪಡಲಾಗುತ್ತದೆ. ಒಂದು ಸಲ ನಿಮ್ಮಿಬ್ಬರ ನಡುವೆ ಅನುಬಂಧ ಉಂಟಾದರೆ, ನೀವು ಜೀವನಕ್ಕೆ ಸಂಬಂಧಪಟ್ಟ ಮಹತ್ವದ ಸಂಗತಿಗಳ ಬಗ್ಗೆ ಗಮನಹರಿಸಲು ಶುರು ಮಾಡುತ್ತೀರಿ. ಇದರರ್ಥ ಸಂಗಾತಿಗೆ ಆಸಕ್ತಿ ಕಡಿಮೆ ಆಗಿದೆ ಎಂದಲ್ಲ. ಇದರರ್ಥ ಆತ ನಿಮ್ಮ ಜೀವನದ ಒಂದು ಭಾಗ ಹಾಗೂ ನೀವು ಆತನೊಂದಿಗೆ ಬೇರೆ ಕೆಲವು ಸಂಗತಿಗಳ ಬಗ್ಗೆ, ಕೆಲಸಗಳ ಬಗ್ಗೆ ಗಮನ ಕೇಂದ್ರೀಕರಿಸಬಹುದು.

ಒಮ್ಮೊಮ್ಮೆ ಈ ಬದಲಾವಣೆಯನ್ನು ಸಂಗಾತಿ ಸಹಜವಾಗಿ ಸ್ವೀಕರಿಸುವುದಿಲ್ಲ. ಆತ ಚಿತ್ರವಿಚಿತ್ರ ಪ್ರಶ್ನೆಗಳನ್ನು ಕೇಳಲಾರಂಭಿಸುತ್ತಾನೆ. ಇದರಿಂದ ನಿಮ್ಮ ಪ್ರಾಮಾಣಿಕತೆಯ ಬಗ್ಗೆಯೇ ಪ್ರಶ್ನೆ ಏಳುತ್ತದೆ. ಆತನ ಮಾತುಗಳನ್ನು ಗಮನವಿಟ್ಟು ಆಲಿಸಿ. ಆತನ ಹೃದಯದಲ್ಲಿ ನಿಮ್ಮ ಬಗ್ಗೆ ಏನು ಭಾವನೆಗಳಿವೆ ಎಂಬುದನ್ನು ಕಂಡುಕೊಳ್ಳಿ. ಎಷ್ಟೋ ಸಲ ಗೊತ್ತಿದ್ದೊ ಗೊತ್ತಿಲ್ಲದೆಯೋ ನಿಮ್ಮ ಯಾವುದೋ ಅಭ್ಯಾಸದಂತೆ ಅವನ ಮನಸ್ಸಿನಲ್ಲಿ ಸಂದೇಹಗಳು ಎದ್ದಿರಬಹುದು. ಅದನ್ನು ತಿಳಿದುಕೊಳ್ಳಿ.

ಸಂಬಂಧ ಆರಂಭವಾದ 3-4 ತಿಂಗಳುಗಳಲ್ಲಿ ಹುಡುಗರು ತಮ್ಮ ಗರ್ಲ್ ಫ್ರೆಂಡ್ ಬಗ್ಗೆ ಸಾಕಷ್ಟು ಗಮನಕೊಡುತ್ತಾರೆ. ಆ ಬಳಿಕ ಅವನು ಅದೇ ಅಪೇಕ್ಷೆ ಇಟ್ಟುಕೊಳ್ಳುತ್ತಾನೆ. ಆದರೆ ಅದು ಅಷ್ಟರಮಟ್ಟಿಗೆ ಸಾಧ್ಯವಾಗುವುದಿಲ್ಲ. ಅದರಲ್ಲಿ ಗರ್ಲ್ ಫ್ರೆಂಡ್ ಳದು ತಪ್ಪೇನಿರುವುದಿಲ್ಲ. ಆರಂಭದ ಗಮನ ಆ ಬಳಿಕ ಅಷ್ಟಿಷ್ಟು ಕೊರತೆಯಾಗುತ್ತಿದೆ ಅನಿಸಬಹುದು.

ಸಂಗಾತಿ ಜೊತೆಗೆ `ಕ್ವಾಲಿಟಿ ಟೈಮ್' ಕೊಡಿ. ಅಂದರೆ ಇದರರ್ಥ ಅದೊಂದು ದುಬಾರಿ ಡೇಟಿಂಗ್‌ ಆಗಿರುತ್ತದೆ ಎಂದಲ್ಲ. ಜೊತೆಯಲ್ಲಿ ಕುಳಿತುಕೊಳ್ಳುವುದು, ಪರಸ್ಪರರ ಆಸಕ್ತಿಯ ಯಾವುದಾದರೂ ಆನ್‌ಲೈನ್‌ ಶೋ ನೋಡುವುದು, ಪರಸ್ಪರರ ಮಾತುಗಳನ್ನು ತನ್ಮಯದಿಂದ ಆಲಿಸುವುದು ಕೂಡ ಆಗಿರಬಹುದು.

ನಿಮ್ಮ ಗ್ರೂಪ್‌ನಲ್ಲಿ ಅವನನ್ನು ಸೇರಿಸಿಕೊಳ್ಳಿ. ಅವನ ವರ್ತನೆ ಗಮನಿಸಿ. ಅವನು ಇತರರೊಂದಿಗೆ ಬೆರೆಯುತ್ತಾನಾ ಅಥವಾ ಪ್ರತ್ಯೇಕವಾಗಿ ಇರಲು ಇಚ್ಛಿಸುತ್ತಾನಾ ಎನ್ನುವುದನ್ನು ಕಂಡುಕೊಳ್ಳಿ. ಇದು ನನ್ನ ಜೀವನ ಹಾಗೂ ಸೋಶಿಯಲ್ ಸರ್ಕಲ್ ಪಾರ್ಟ್‌ ಎನ್ನುವುದನ್ನು ಅವನಿಗೆ ಮನವರಿಕೆ ಮಾಡಿಕೊಡಿ. ನೀವು ಆತನನ್ನು ನಿಮ್ಮ ಸ್ನೇಹ ಬಳಗದೊಂದಿಗೆ ಪರಿಚಯಿಸಿ. ಅವರು ನನ್ನ ಫ್ರೆಂಡ್ಸ್ ನನಗೆ ತುಂಬಾ ಮಹತ್ವಪೂರ್ಣ ಎಂದು ತಿಳಿಸಿ, ಆಗ ವ್ಯಕ್ತಿ ಸಂದೇಹ ಪಡುವುದು ಕಡಿಮೆ ಮಾಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ