ಓದು ಮುಗಿಸಿದ ಮೀನಾಕ್ಷಿ ನೌಕರಿ ಸೇರಿ 7-8 ತಿಂಗಳಷ್ಟೇ ಆಗಿತ್ತು. ಅಕ್ಕಪಕ್ಕದವರು ಹಾಗೂ ಸಂಬಂಧಿಕರು ಆಕೆಯ ನೆಮ್ಮದಿಯನ್ನೇ  ಕಸಿದುಕೊಂಡು ಬಿಟ್ಟಿದ್ದರು. ಮನೆ ಆಸುಪಾಸು ಅಥವಾ ಸಂಬಂಧಿಕರ ಯಾವುದೇ ಮದುವೆ ಸಮಾರಂಭ, ನಾಮಕರಣ, ಪಾರ್ಟಿಗಳಿಗೆ ಹೋದರೆ ಸಾಕು ಅವಳು ಹತ್ತು ಹಲವು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತಿತ್ತು.

``ಮೀನಾಕ್ಷಿ, ನಿನ್ನ ಡಿಗ್ರಿ ಮುಗೀತಾ, ಈಗೆಲ್ಲಿ ಜಾಬ್‌ ಮಾಡ್ತಿದೀಯಾ? ಎಷ್ಟು ಪ್ಯಾಕೇಜ್‌ ಸಿಕ್ಕಿದೆ? ಮತ್ತೇನು ಸಮಾಚಾರ.....'' ಈ ಮುಂದಿನ ಪ್ರಶ್ನೆ ಕೇಳಿ ಅವಳು ಬಹಳ ಗಾಬರಿಗೊಳಗಾಗುತ್ತಿದ್ದಳು. ಏಕೆಂದರೆ ಮುಂದೇನು ಪ್ರಶ್ನೆ ಬರಬಹುದೆಂದು ಅವಳಿಗೆ ಗೊತ್ತಾಗುತ್ತಿತ್ತು.

``ಮದುವೆ ಯಾವಾಗ ಮಾಡಿಕೊಳ್ತೀಯಾ? ಯಾರಾದ್ರೂ ಹುಡುಗ ಮನಸ್ಸಿನಲ್ಲಿದ್ದಾನೆಯೇ? ಹಾಗೇನಾದ್ರೂ ಇದ್ರೆ  ನಮಗೆ ಹೇಳು.''

ಆ ಮಾತುಗಳನ್ನು ಕೇಳಿದಾಗ ಅವಳಿಗೆ ರೋಸಿ ಹೋಗುತ್ತಿತ್ತು. ಆ ಕಾರಣದಿಂದಾಗಿ ಅವಳು ಕ್ರಮೇಣ ಅಂತಹ  ಸಮಾರಂಭಗಳಿಂದ ದೂರ ಉಳಿಯಲಾರಂಭಿಸಿದಳು.

``ಮದುವೆ, ರಿಸೆಪ್ಶನ್‌, ನಾಮಕರಣ ಸಮಾರಂಭಗಳಿಗೆ ಬಂದಿದ್ದೀರಾ. ಆ ಬಗ್ಗೆ ಏನಾದರೂ ಮಾತನಾಡಿ, ಹೊಟ್ಟೆ ತುಂಬಾ ತಿನ್ಕೊಂಡು ಹೋಗಿ. ಅದನ್ನು ಬಿಟ್ಟು ನನ್ನ ಕಲ್ಯಾಣದ ಬಗ್ಗೆ ಏಕೆ ಮಾತಾಡ್ತಿದೀರಾ?'' ಎಂದು ಅವಳು ಪ್ರತಿಯಾಗಿ ಹೇಳುತ್ತಿದ್ದಳು. ಅವಳ ಅಮ್ಮನ ಸ್ಥಿತಿ ಕೂಡ ಅದೇ ಆಗಿತ್ತು. ಅವಳ ಫ್ಲ್ಯಾಟ್‌ನಲ್ಲಿ ಮಹಿಳಾ ಮಂಡಳಿ ಒಗ್ಗೂಡಿದಾಗ ಎಲ್ಲರ ಪ್ರಶ್ನೆ ಒಂದೇ ಆಗಿರುತ್ತಿತ್ತು. ಅವರೆಲ್ಲ ಮ್ಯಾರೇಜ್‌ ಬ್ಯೂರೊ ತೆರೆದವರಂತೆ ಮಾತನಾಡುತ್ತಿದ್ದರು.

``ನನ್ನ ಮಗ ಮೀನಾಕ್ಷಿಗಿಂತ 3 ವರ್ಷ ಚಿಕ್ಕವನು. ಅಂದರೆ ಅವಳಿಗೀಗ ಅಷ್ಟು ವರ್ಷನಾ?'' ಒಬ್ಬಳು ಹೇಳುತ್ತಿದ್ದಳು.

``ಅವಳ ವಯಸ್ಸಿನಲ್ಲಿ ನನಗೆ ಎರಡು ಮಕ್ಕಳು ಆಗಿದ್ದವು,'' ಇನ್ನೊಬ್ಬಳು ಹೆಮ್ಮೆಯಿಂದ ಹೇಳಿಕೊಂಡಳು.

``ಅವಳು ಯಾರನ್ನಾದರೂ ಪ್ರೀತಿಸುತ್ತಿರಬಹುದಾ? ಅವನು ಯಾವ ಜಾತಿ/ಧರ್ಮದವನಿದ್ದಾನೋ? ಈಗಿನ ಹುಡುಗಿಯರು ಸಾಮಾನ್ಯರಲ್ಲ. ಅವರು ಮೊದಲೇ ಯಾರನ್ನಾದರೂ ಪಟಾಯಿಸಿಕೊಂಡು ಬಿಡ್ತಾರೆ,'' ಮೂರನೆಯವಳು ಕೂಡ ಧ್ವನಿಗೂಡಿಸಿದಳು.

``ಹಾಗಾದರೆ ನಿನಗೆ ವರದಕ್ಷಿಣೆ ಕೊಡಬೇಕಾದ ಅಗತ್ಯ ಇರೋಲ್ಲ ಬಿಡು,'' ಎರಡು ಮಕ್ಕಳ ತಾಯಿ ಅನಿತಾ ಸ್ವಲ್ಪ ಅತೃಪ್ತಿಯ ಸ್ವರದಲ್ಲಿ ಹೇಳಿದಳು. ಅವಳು ಹೇಳಿದ ರೀತಿ ಹೇಗಿತ್ತಿದೆಂದರೆ, ತನ್ನ ಮಗನನ್ನೇ ಅವಳು ಪ್ರೀತಿಸುತ್ತಿದ್ದಾಳೊ ಎಂಬಂತ್ತಿತ್ತು.

``ಮೀನಾಕ್ಷಿ ನೌಕರಿ ಮಾಡ್ತಾ ಮಾಡ್ತಾ ದೊಡ್ಡ ದೊಡ್ಡ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಾಳೆ. ಅವಳಿಗೆ ಕೆಎಎಸ್‌ ಐಎಎಸ್‌ ಅಧಿಕಾರಿ ಆಗಬೇಕೆಂಬ ಆಸೆ,'' ಅವಳ ಅಮ್ಮ ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿದಳು.

``ಮೊದಲು ಅವಳ ಮದುವೆ ಮಾಡಿಬಿಡು. ಆಮೇಲೆ ಕೂಡ ಪರೀಕ್ಷೆ ಬರೆಯಬಹುದು,'' ಎಂದು ಒಬ್ಬಳು ಹೇಳಿದಳು. ``ಸಮಯಕ್ಕೆ ಸರಿಯಾಗಿ ಮದುವೆ ಆಗಬೇಕು, ಇಲ್ಲದಿದ್ದರೆ ನೀನು ಹುಡುಕುತ್ತಲೇ ಇರಬೇಕಾಗುತ್ತದೆ,'' ಇನ್ನೊಬ್ಬಳು ಹೆದರಿಸುವ ಧ್ವನಿಯಲ್ಲಿ ಹೇಳಿದಳು.

``ನನಗೇನಾದರೂ ಮಗಳಿದ್ದಿದ್ರೆ ಈ ವಯಸ್ಸಿನಲ್ಲಿ ಮದುವೆ ಮಾಡಿ ಮುಗಿಸಿರುತ್ತಿದ್ದೆ. ನನ್ನ ಮಗನ ಮದುವೆಯನ್ನೇ ನಾನು 25ಕ್ಕೆ ಮುಗಿಸಿಬಿಡ್ತೀನಿ. ಈಗಿನ ಕಾಲದ ಹುಡುಗಿಯರನ್ನು ನಂಬೋಕೆ ಆಗುವುದಿಲ್ಲ. ಯಾರು ಯಾರನ್ನು ಯಾವಾಗ ತಮ್ಮ ಬಲೆಗೆ ಬೀಳಿಸಿಕೊಳ್ತಾರೊ ಹೇಳೋಕೆ ಆಗುವುದಿಲ್ಲ,'' ಇಬ್ಬರು ಪುತ್ರರ ತಾಯಿ ಶಶಿರೇಖಾ ತನ್ನ ಹೇಳಿಕೆ ಮಂಡಿಸಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ