ಹೆರಿಗೆಯಾಗಿ ಕೇವಲ ಒಂದೂವರೆ ತಿಂಗಳು ಮಾತ್ರ ಆಗಿತ್ತು. ಜಮುನಾ ಆಫೀಸಿಗೆ ಹೋಗತೊಡಗಿದಳು. ಮುಂದಿನ 6 ತಿಂಗಳ ಕಾಲ ಅವಳ ಅನುಪಸ್ಥಿತಿಯಲ್ಲಿ ಮಗುವಿನ ಜವಾಬ್ದಾರಿಯನ್ನು ಅವಳ ಅತ್ತೆ ಅಥವಾ ಅಮ್ಮ ನೋಡಿಕೊಳ್ಳತೊಡಗಿದರು. ಆದರೆ ಮಗುವಿಗೆ ವರ್ಷ ತುಂಬುತ್ತಲೇ ಅವರಿಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಹಿಂದೇಟು ಹಾಕತೊಡಗಿದರು.

ಈಗ ಮಗುವನ್ನು ಕ್ರೀಚ್‌ಗೆ ಸೇರಿಸುವುದರ ಹೊರತು ಬೇರೆ ದಾರಿಯೇ ಇರಲಿಲ್ಲ. ಅವಳಿಗೆ ನೌಕರಿ ಬಿಡುವ ಇಚ್ಛೆ ಇರಲಿಲ್ಲ. ಮಗುವನ್ನು ಕ್ರೀಚ್‌ನಲ್ಲಿ ಬಿಟ್ಟ ಅವಳು ಸಂತೋಷವಾಗಿರಲಿಲ್ಲ. ಆಫೀಸಿನ ಕೆಲಸದ ಸಮಯದಲ್ಲಿ ಹಲವು ಬಾರಿ ಅವಳಿಗೆ ಮಗುವಿನ ನೆನಪು ಕಾಡುತ್ತಿತ್ತು. ಮನೆಯಲ್ಲಿದ್ದಾಗ ಅವಳಿಗೆ ಆಫೀಸ್‌ನಲ್ಲಿ ತನ್ನ ಪರ್ಫಾರ್ಮೆನ್ಸ್ ಕಡಿಮೆ ಆಗುತ್ತಿರುವ ಬಗ್ಗೆ ಆತಂಕ ಕಾಡುತ್ತಿರುತ್ತದೆ.

ಎರಡೂ ಜವಾಬ್ದಾರಿಗಳ ನಡುವೆ ಜಮುನಾ ಜರ್ಝರಿತಳಾಗತೊಡಗಿದಳು. ಸಿಡಿಮಿಡಿತನ ಹಾಗೂ ಗಾಬರಿಯಿಂದಾಗಿ ಅವಳು ಕೆಲಸದಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಿದ್ದಳು. ಮನೆಯವರ ಟೀಕೆಟಿಪ್ಪಣಿ, ಬಾಸ್‌ನ ಗದರಿಕೆ ಕ್ರಮೇಣ ಜಮುನಾಳನ್ನು `ಡಬಲ್ ಬರ್ಡನ್‌ ಸಿಂಡ್ರೋಮ್'ನಂತಹ ಮಾನಸಿಕ ರೋಗದತ್ತ ನೂಕತೊಡಗಿತು. ಕೊನೆಗೊಮ್ಮೆ ಎಂತಹ ಪರಿಸ್ಥಿತಿ ಬಂತೆಂದರೆ ಅವಳಿಗೆ ತನ್ನ ಮಗು ಹಾಗೂ ಬಾಸ್‌ ಅಪರಾಧಿಗಳೆಂಬಂತೆ ಭಾವಿಸಿ ಕೆಲಸಕ್ಕೆ ರಾಜೀನಾಮೆ ನೀಡಿದಳು.

ಸಮೀಕ್ಷೆ ಏನು ಹೇಳುತ್ತದೆ?

ಜಮುನಾಳಂತಹ ಸಾವಿರಾರು ಮಹಿಳೆಯರು ಒಳ್ಳೆಯ ಹುದ್ದೆಯಲ್ಲಿದ್ದಾರೆ. ಕೈತುಂಬ ಸಂಬಳ ತೆಗೆದುಕೊಳ್ಳುತ್ತಿದ್ದರೂ ಹೆರಿಗೆಯ ಬಳಿಕ ಮಗು ಹಾಗೂ ಆಫೀಸಿನ  ಜವಾಬ್ದಾರಿ ನಿರ್ವಹಿಸುತ್ತ `ಡಬಲ್ ಬರ್ಡನ್‌ ಸಿಂಡ್ರೋಮ್'ಗೆ ತುತ್ತಾಗುತ್ತಿದ್ದಾರೆ. ಇಲ್ಲಿ ಕೆರಿಯರ್‌ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಮನೆ ಹಾಗೂ ಮಗುವಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಿದ್ದಾರೆ.

ಕೆಲ್ಲಿ ಗ್ಲೋಬಲ್ ವರ್ಕ್‌ಪೇರ್ಸ್‌ ಇನ್‌ಸ್ಟೇಜ್‌ ಸರ್ವೆ ಪ್ರಕಾರ, ಮದುವೆಯ ಬಳಿಕ ಶೇ.40ರಷ್ಟು ಮಹಿಳೆಯರು ನೌಕರಿಗೆ ವಿದಾಯ ಹೇಳುತ್ತಾರೆ. ಶೇ.60ರಷ್ಟು ಮಹಿಳೆಯರು ತಾಯಿಯಾದ ಬಳಿಕ ಮಕ್ಕಳ ಪಾಲನೆ, ಪೋಷಣೆಗೆ ಹೆಚ್ಚು ಮಹತ್ವ ಕೊಡುತ್ತಾರೆ ಮತ್ತು ಉದ್ಯೋಗ ತೊರೆಯುತ್ತಾರೆ. ಇದರ ಹೊರತಾಗಿ ಶೇ.20ರಷ್ಟು ಮಹಿಳೆಯರು ಮನೆ ಹಾಗೂ ನೌಕರಿ ಎರಡೂ ಜವಾಬ್ದಾರಿಗಳನ್ನು  ನಿಭಾಯಿಸುತ್ತಾರೆ. ಅವರು ಒಮ್ಮಿಂದೊಮ್ಮಲೇ ಜವಾಬ್ದಾರಿಗಳ ಒತ್ತಡಕ್ಕೆ ಸಿಲುಕಿ ಡಬಲ್ ಬರ್ಡನ್‌ ಸಿಂಡ್ರೋಮ್ ಗೆ ತುತ್ತಾಗುತ್ತಾರೆ.

ಈ ಕುರಿತಂತೆ ಏಷ್ಯನ್‌ ಇನ್ಸ್ ಟಿಟ್ಯೂಟ್‌ ಆಫ್‌ ಮೆಡಿಕಲ್ ಸೈನ್ಸ್ ನ ಮನೋತಜ್ಞೆ ಡಾ. ಮೀನಾಕ್ಷಿ ಹೀಗೆ ಹೇಳುತ್ತಾರೆ, ``ಭಾರತೀಯ ಸಮಾಜದಲ್ಲಷ್ಟೇ ಹೀಗೆ. ಇಲ್ಲಿ ಮಹಿಳಾ ಸಬಲೀಕರಣದ ಕುರಿತಂತೆ ದೊಡ್ಡ ದೊಡ್ಡ ಮಾತುಗಳನ್ನು ಆಡಲಾಗುತ್ತದೆ. ಒಂದು ವೇಳೆ ಮಹಿಳೆ ಸಬಲಳಾಗುವ ಬಗ್ಗೆ ಪ್ರಯತ್ನ ಮಾಡಿದರೆ ಸಮಾಜದ ಬಂಧನಗಳು ಅವಳನ್ನು ತಮ್ಮ ಮುಷ್ಟಿಯಲ್ಲಿ ಸಿಲುಕಿಸುತ್ತವೆ.''

ಇನ್ನೋರ್ವ ಮನೋತಜ್ಞೆ ಡಾ. ಚಂದನಾ ಹೇಳುತ್ತಾರೆ, ``ಈ ಸಿಂಡ್ರೋಮ್ ಮಹಿಳೆ ಹಾಗೂ ಪುರುಷ ಇಬ್ಬರಿಗೂ ಉಂಟಾಗುತ್ತದೆ. ಆದರೆ ಭಾರತದಲ್ಲಿ ಮಹಿಳೆಯರೇ ಇದರ ಕಪಿಮುಷ್ಟಿಗೆ ಸಿಲುಕುತ್ತಾರೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಸಂಸ್ಕೃತಿಯಾಗಿದೆ. ಮಹಿಳೆ ಉದ್ಯೋಗಸ್ಥ ಜೀವನದಲ್ಲಿ ಎಷ್ಟೇ ಪ್ರಗತಿ ಸಾಧಿಸಿದ್ದರೂ, ಮನೆಯ ಪ್ರಮುಖ ಜವಾಬ್ದಾರಿಗಳನ್ನು ಅವಳೇ ನಿಭಾಯಿಸಬೇಕಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ