ಗಂಡಹೆಂಡತಿಯ ಮಧುರ ಸಂಬಂಧ ಕೇವಲ ದಾಂಪತ್ಯಕ್ಕಷ್ಟೇ ಅಗತ್ಯವಿಲ್ಲ, ಕುಟುಂಬದ ಹಿತಕ್ಕೂ ಅಗತ್ಯ. ಮಕ್ಕಳು ಮಾತು ಕಲಿಯುವುದು, ನಯವಿನಯ ರೂಢಿಸಿಕೊಳ್ಳುವುದು, ಸಮತೋಲನ ವ್ಯವಹಾರ, ಹೊಂದಾಣಿಕೆ ಇವನ್ನೆಲ್ಲ ಕಲಿತುಕೊಳ್ಳುವುದು ಮನೆ ಎಂಬ ಶಾಲೆಯಿಂದಲೇ. ಯಾವ ದಂಪತಿಗಳ ವೈವಾಹಿಕ ಜೀವನ ಖುಷಿಯಿಂದ ಕೂಡಿರುತ್ತದೋ, ಆ ಕುಟುಂಬದಲ್ಲಿ ಮಕ್ಕಳು ಒಳ್ಳೆಯ ಗುಣಗಳನ್ನು ರೂಢಿಸಿಕೊಳ್ಳುತ್ತಾರೆ. ನೀವು ನಿಮ್ಮ ಪರಂಪರೆಯನ್ನು ಮಕ್ಕಳಿಗೆ ಉಡುಗೊರೆಯಾಗಿ ಕೊಟ್ಟಿದ್ದೀರಾ? ನೀವೊಬ್ಬ ಗೃಹಿಣಿಯೇ? ಮುದ್ದು ಮಕ್ಕಳ ತಾಯಿ ಕೂಡ ಹೌದೆ? ಹಾಗಾದರೆ ನೀವು ಮಕ್ಕಳಿಗೆ ನೆಮ್ಮದಿಯ ಭವಿಷ್ಯ ಕಲ್ಪಿಸಬೇಕೆಂದು ಇಚ್ಛಿಸುತ್ತೀರಿ ಅಲ್ಲವೇ? ಇದರ ಸರಿಯಾದ ವಿಧಾನ ಯಾವುದು ಎಂದು ನಿಮಗೇನಾದರೂ ಗೊತ್ತೆ? ಮಕ್ಕಳ ಜೀವನ ಸುಖವಾಗಿರಬೇಕು ಎಂದರೆ ತಂದೆ ತಾಯಿಯ ಪರಸ್ಪರ ಸಂಬಂಧ ಅನ್ಯೋನ್ಯವಾಗಿರಬೇಕು.

ಗಂಡಹೆಂಡತಿ ನಡುವೆ ಎಷ್ಟು ಹೆಚ್ಚು ಪ್ರೀತಿ ಮತ್ತು ಗೌರವ ಇರುತ್ತದೋ, ನಿಮ್ಮ ವೈವಾಹಿಕ ಜೀವನ ಕೂಡ ಅಷ್ಟೇ ಸುಖಮಯವಾಗಿ ಕಳೆಯುತ್ತದೆ. ಅಂದಹಾಗೆ ಮಕ್ಕಳು ಎಲ್ಲವನ್ನೂ ಕಲಿಯುವುದು ನಿಮ್ಮಿಂದಲೇ ಅಲ್ಲವೇ? ದಾಂಪತ್ಯದಲ್ಲಿ ಮಾಧುರ್ಯ ಬೆರೆಸಲು ಇಲ್ಲಿವೆ ಕೆಲವು ಸುಲಭ ವಿಧಾನಗಳು......

ಮದುವೆಗೆ ಕೊಡಿ ಪ್ರಾಮುಖ್ಯತೆ

ದಾಂಪತ್ಯ ಜೀವನಕ್ಕೆ ಪ್ರಾಶಸ್ತ್ಯ ಕೊಡಬೇಕೆನ್ನುವುದು ಸದಾ ನಿಮ್ಮ ಗಮನದಲ್ಲಿರಬೇಕು. ಈ ನಿಟ್ಟಿನಲ್ಲಿ ಸಣ್ಣ ತಪ್ಪಾದರೂ ನಿಮ್ಮ ಪ್ರಯತ್ನ ವಿಫಲವಾಗುತ್ತದೆ. ಚಿಕ್ಕಪುಟ್ಟ ಸಮಸ್ಯೆಗಳಿದ್ದಾಗ ಪರಸ್ಪರರ ಪರ ವಹಿಸಿ, ಪ್ರೀತಿ ತೋರಿಸಿ. ಗಂಡ ಆಫೀಸ್‌ಗೆ ಹೊರಟು ನಿಂತಾಗ ಅವನು ಹೋಗುವ ತನಕ ಬೇರೆ ಕೆಲಸಗಳಲ್ಲಿ ಮಗ್ನರಾಗಬೇಡಿ. ಗಂಡ ಕೂಡ ಆಗಾಗ ಸಂದರ್ಭ ಇರಲಿ, ಬಿಡಲಿ ಹೆಂಡತಿಗೆ ಯಾವುದಾದರೊಂದು ಉಡುಗೊರೆ ಕೊಡಬೇಕು. ಇದರಿಂದ ಮಕ್ಕಳಿಗೆ ಗಂಡಹೆಂಡತಿ ಇರುವುದೇ ಪರಸ್ಪರರಿಗಾಗಿ ಎಂಬ ಸಂದೇಶ ಸಿಗುತ್ತದೆ.

ಖಾಸಗಿ ಕ್ಷಣಗಳಿಗೂ ಅವಕಾಶ

ಮಕ್ಕಳು ಹುಟ್ಟಿದ ಬಳಿಕ ಖಾಸಗಿ ಬದುಕು ಮುಗಿದೇ ಹೋಯಿತೆಂದು ಭಾವಿಸಬಾರದು. ಗಂಡ ಆಫೀಸ್‌ನಿಂದ ಮನೆಗೆ ಬಂದ ಬಳಿಕ ಮಕ್ಕಳ ಜೊತೆಗೆ ಸಮಯ ಕಳೆದ ಬಳಿಕ 10-15 ನಿಮಿಷ ನಿಮ್ಮಿಬ್ಬರಿಗಾಗಿಯೂ ಕಾಯ್ದಿರಿಸಿಕೊಳ್ಳಿ. ಮಕ್ಕಳಿಗೂ ಕೂಡ ಸ್ಪಷ್ಟವಾಗಿ ಇದು ಅಮ್ಮ ಅಪ್ಪನಿಗಾಗಿ ಮೀಸಲಾದ ಸಮಯ ಎನ್ನುವುದನ್ನು ಸ್ಪಷ್ಟಪಡಿಸಿ. ಆ ಸಮಯದಲ್ಲಿ ನಿಮ್ಮಿಬ್ಬರಿಗೆ ಸಂಬಂಧಪಟ್ಟ ವಿಷಯಗಳನ್ನಷ್ಟೇ ಮಾತನಾಡಿ. ಮಕ್ಕಳಿಗೂ ಕೂಡ ನಿಮ್ಮದೇ ಆದ ನಿಗದಿತ ಸಮಯದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಆಗಾಗ ಹೊರಗೆ ಹೋಗಿ

ಗಂಡ ಹೆಂಡತಿ ಜೊತೆ ಜೊತೆಗೆ ಸಮಯ ಕಳೆಯುವುದು ವೈವಾಹಿಕ ಜೀವನಕ್ಕೆ ಹೊಸ ಸ್ಛೂರ್ತಿ ತಂದುಕೊಡುತ್ತದೆ. ಮಕ್ಕಳು ಬಂದ ಬಳಿಕ, ಜವಾಬ್ದಾರಿಗಳಡಿ ನಲುಗಿ ಖಾಸಗಿ ಕ್ಷಣಗಳನ್ನು ಮರೆಯಬೇಡಿ. ಮಕ್ಕಳ ಜವಾಬ್ದಾರಿಯನ್ನು ಆಗಾಗ ಬೇರೆಯವರಿಗೆ ವಹಿಸಿ ಹೊರಗೆ ಹೋಗಿ ಬನ್ನಿ.

ನಿಮಗೆ ಖರ್ಚಿನ ಹೊರೆ ಎನಿಸಿದರೆ ಹಾಗೆಯೇ ಸುಮ್ಮನೇ ಒಂದು ಕಡೆ ಹೋಗಿ ನಿಮಗೆ ಇಷ್ಟವಾದದ್ದನ್ನು ತಿಂದು ಬನ್ನಿ. ಬುಕ್‌ಸ್ಟೋರ್‌ಗೆ ಹೋಗಿ ನಿಮಗೆ ಇಷ್ಟವಾದ ಪುಸ್ತಕವನ್ನು ಆಯ್ಕೆ ಮಾಡಿಕೊಳ್ಳಿ. ತಿಂಗಳಿಗೆ ಅಥವಾ ಎರಡು ತಿಂಗಳಿಗೆ ಒಮ್ಮೆಯಾದರೂ ಒಂದು ಸಲ ಎಲ್ಲಿಯಾದರೂ ದೂರ ಒಂದು ರಾತ್ರಿ ಕಳೆದುಬನ್ನಿ. ಇದು ದಂಪತಿಗಳ ವೈವಾಹಿಕ ಜೀವನಕ್ಕೆ ಹೊಸ ವ್ಯಾಖ್ಯೆ  ನೀಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ