ಸಣ್ಣ ಕುಟುಂಬಗಳ ಬೆಳವಣಿಗೆ ಮತ್ತು ಉದ್ಯೋಗಸ್ಥ ತಂದೆತಾಯಿಯರ ಕಾರಣದಿಂದಾಗಿ ಮಕ್ಕಳ ಬಾಲ್ಯ ನಾಲ್ಕು ಗೋಡೆಗಳ ಮಧ್ಯೆ ಕಳೆಯುವಂತಾಗಿದೆ. ಅವರು ಮೈದಾನ ಅಥವಾ ಪಾರ್ಕ್‌ನಲ್ಲಿ ಆಡುವ ಬದಲು ವೀಡಿಯೋ ಗೇಮ್ ನಲ್ಲಿ ಮಗ್ನರಾಗಿರುತ್ತಾರೆ. ಅವರ ಸ್ನೇಹಿತರೆಂದರೆ ಸಮವಯಸ್ಕ ಮಕ್ಕಳಲ್ಲ, ಟಿ.ವಿ, ಕಂಪ್ಯೂಟರ್‌, ಮೊಬೈಲ್‌ಗಳಾಗಿವೆ.

ಇದರಿಂದಾಗಿ ಮಕ್ಕಳ ಮಾನಸಿಕ ಸ್ಥಿತಿ ಮತ್ತು ವ್ಯವಹಾರದ ಮೇಲೆ ಹೆಚ್ಚಿನ ಪ್ರಭಾವ ಉಂಟಾಗಿದೆ. ಅವರು ಸಾಮಾಜಿಕ ರೀತಿ ನೀತಿಗಳನ್ನು ಕಲಿಯಲು ಅಸಮರ್ಥರಾಗಿದ್ದಾರೆ ಮತ್ತು ಅವರ ವ್ಯಕ್ತಿತ್ವ ವಿಕಸನ ಹಿಂದೆ ಬಿದ್ದಿದೆ.

ಸೋಶಿಯಲ್ ಸ್ಕಿಲ್‌ನ ಅಗತ್ಯ : ಸೂಕ್ತವಾದ ಭಾವನಾತ್ಮಾಕ ವಿಕಾಸದ ಬಗ್ಗೆ ಮನಶ್ಶಾಸ್ತ್ರಜ್ಞ ಡಾ. ಸಂದೀಪ್‌ ಹೀಗೆ ಹೇಳುತ್ತಾರೆ, ``ಮನುಷ್ಯ ಒಬ್ಬ ಸಾಮಾಜಿಕ ಜೀವಿ. ಅವನು ಸಮಾಜದಿಂದ ಪ್ರತ್ಯೇಕವಾಗಿ ಬಾಳಲಾರ. ಉತ್ತಮ ಮತ್ತು ಸಫಲ ಜೀವನಕ್ಕಾಗಿ ಮಕ್ಕಳು ಇತರರೊಂದಿಗೆ ಬೆರೆಯಲು ಹಿಂದೆಗೆಯಬಾರದು. ಸೋಶಿಯಲ್ ಸ್ಕಿಲ್‌ ವಿಕಾಸವಾಗಿರದ ಮಕ್ಕಳು ಬೆಳೆದ ನಂತರ ಆರೋಗ್ಯಕರ ಸಂಬಂಧ ರೂಪಿಸಿಕೊಳ್ಳಲು ಅಸಮರ್ಥರಾಗುತ್ತಾರೆ.

``ಸೋಶಿಯ್‌ ಸ್ಕಿಲ್ ಮಕ್ಕಳಲ್ಲಿ ಹೊಂದಾಣಿಕೆಯ ಭಾವನೆಯನ್ನು ವಿಕಸಿತಗೊಳಿಸುತ್ತದೆ ಮತ್ತು ಸ್ವಾರ್ಥ ಮಗ್ನರಾಗುವುದನ್ನು ತಪ್ಪಿಸುತ್ತದೆ. ಅವರ ಮನಸ್ಸಿನಲ್ಲಿ ಒಂಟಿತನದ ಭಾವನೆಯನ್ನು ಕಡಿಮೆ ಮಾಡುತ್ತದೆ.''

ಮಕ್ಕಳ ಆಕ್ರಮಣಕಾರಿ ವ್ಯವಹಾರವನ್ನು ಕುರಿತು ಡಾ. ಸಂದೀಪ್‌ ಹೀಗೆ ಹೇಳುತ್ತಾರೆ, ``ಮಕ್ಕಳಲ್ಲಿ ಆಕ್ರಮಣಕಾರಿ ವ್ಯವಹಾರ ಸಾಮಾನ್ಯವಾಗುತ್ತಾ ಬಂದಿದೆ. ಕುಟುಂಬದಲ್ಲಿನ ಸಮಸ್ಯೆ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಒತ್ತಡ, ಟಿ.ವಿಯಲ್ಲಿ ಹಿಂಸಾತ್ಮಕ ಕಾರ್ಯಕ್ರಮ ವೀಕ್ಷಣೆ, ಆಕ್ರಮಣಕಾರಿ ನಡತೆಯು ಕಂಡುಬರುತ್ತದೆ. ಅವರು ಜಗಳಗಂಟ ಸ್ವಭಾವದರಾಗಿರುತ್ತಾರೆ. ಬೇರೆ ಮಕ್ಕಳೊಂದಿಗೆ ಅವಾಚ್ಯ ಶಬ್ದಗಳನ್ನಾಡುತ್ತಾ ಹೊಡೆದಾಟಕ್ಕೆ ನಿಲ್ಲುತ್ತಾರೆ, ಕಿರಿಚಾಡುತ್ತಾರೆ. ಕೋಪ ಹೆಚ್ಚಾದಾಗ ಹಿಂಸಾಚಾರಿಗಳೂ ಆಗುತ್ತಾರೆ.''

ಮಕ್ಕಳಿಗೆ ಬಾಲ್ಯದಲ್ಲಿ ಸಾಮಾಜಿಕ ನೀತಿಯನ್ನು ಕಲಿಸಿದರೆ ಅವರಲ್ಲಿ ಇಂತಹ ಪ್ರವೃತ್ತಿ ಬೆಳೆಯಲಾರದು. ಇದು ಒಂದು ದಿನದ  ಪಾಠವಲ್ಲ. ಅವರನ್ನು ಬೆಳೆಸುವ ರೀತಿಯ ಬಗ್ಗೆ ಗಮನವಹಿಸಬೇಕು.

ಬಾಲ್ಯ : ಚಿಕ್ಕ ಕುಟುಂಬಗಳಲ್ಲಿ ವಾಸಿಸುವ 5 ವರ್ಷ ವಯಸ್ಸಿನ ಮಕ್ಕಳು ಸಾಮಾನ್ಯವಾಗಿ ತಂದೆ ತಾಯಿ ಅಥವಾ ಅಜ್ಜ ಅಜ್ಜಿಯರಿಗೇ ಅಂಟಿಕೊಂಡಿರುತ್ತಾರೆ. ಈ ವಯಸ್ಸಿನಲ್ಲಿಯೇ ಅವರಿಗೆ ಸಾಮಾಜಿಕವಾಗಿ ಆ್ಯಕ್ಟಿವ್ ಆಗಿರುವುದನ್ನು ಕಲಿಸಿಕೊಡಬೇಕು.

ಮಕ್ಕಳೊಂದಿಗೆ ಮಾತನಾಡಿ : ಸೈಕಾಲಜಿಸ್ಟ್ ಡಾ. ರೂಬಿ ಹೇಳುತ್ತಾರೆ, ``ಮಗುವನ್ನು ಚಿಕ್ಕಂದಿನಿಂದ ಅವರ ಹೆಸರಿನಿಂದಲೇ ಸಂಬೋಧಿಸಿ. ಹತ್ತಿರವಿರುವ ಎಲ್ಲ ವಸ್ತುಗಳ ಬಗ್ಗೆ ತಿಳಿಸಿಕೊಡಿ. ಮಗು ಆಡು ಆಟದ ಸಾಮಾನಿನ ಹೆಸರು, ಬಣ್ಣ ಇತ್ಯಾದಿ ವಿಷಯಗಳನ್ನು ಪ್ರಶ್ನಿಸಿ, ಹೊಸ ರೀತಿಯ ಆಟಗಳನ್ನು ಕಲಿಸಿಕೊಡಿ. ಇದರಿಂದ ಮಗು ಒಂಟಿಯಾಗಿ ಆಡುವುದನ್ನು ಬಿಟ್ಟು ಇತರರೊಂದಿಗೆ ಸೇರಲು ಸಹಾಯವಾಗುತ್ತದೆ.''

ಬಂಧುಮಿತ್ರರೊಂದಿಗೆ ಭೇಟಿ : ಪ್ರತಿ ಭಾನುವಾರ ಮಗುವನ್ನು ಯಾರಾದರೂ ನೆಂಟರು ಅಥವಾ ನೆರೆಯವರೊಂದಿಗೆ ಭೇಟಿ ಮಾಡಿಸಲು ಪ್ರಯತ್ನಿಸಿ. ಪಾರ್ಟಿ ಅಥವಾ ಸಮಾರಂಭಗಳಲ್ಲಿ ಮಗು ಅಪರಿಚಿತ ಜನರನ್ನು ನೋಡಿದಾಗ ಹೆದರುತ್ತದೆ. ಆಗಾಗ ಬಂಧುಮಿತ್ರರು ಮತ್ತು ಅವರ ಮಕ್ಕಳೊಡನೆ ಸೇರುತ್ತಿದ್ದರೆ, ಮಗು ಬೆಳೆಯುತ್ತಿದ್ದಂತೆ ಆ ಸಂಬಂಧಗಳಲ್ಲಿ ಚೆನ್ನಾಗಿ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ