ರಾಹುಲ್‌ಗೆ ಬ್ಯಾಸ್ಕೆಟ್‌ ಬಾಲ್ ಆಡಲು ಇಷ್ಟ. ಆದರೆ ಏನೇ ಮಾಡಿದರೂ ಚೆಂಡನ್ನು ಬ್ಯಾಸ್ಕೆಟ್‌ಗೆ ಹಾಕಲು ಅಸಮರ್ಥನಾದಾಗ ಆಟದಲ್ಲಿ ಆಸಕ್ತಿ ಕಳೆದುಕೊಂಡು ಸುಮ್ಮನೆ ಕುಳಿತ. ಅವನ ಸಪ್ಪೆ ಮುಖ ನೋಡಿ ಅವನ ತಾಯಿ ಬಳಿಗೆ ಬಂದು ಸಮಾಧಾನಪಡಿಸಿ, ``ಪ್ರಯತ್ನ ಪಡುತ್ತಲೇ ಇರು. ಖಂಡಿತ ಸಫಲನಾಗುವೆ, ಮೊದಲು ನಿನ್ನ ಹೆಸರನ್ನು ಬರೆಯುವುದಕ್ಕೂ ನಿನಗೆ ಬರುತ್ತಿರಲಿಲ್ಲ. ದಿನ ಬರೆದು ಅಭ್ಯಾಸ ಮಾಡಿದ್ದರಿಂದ ಈಗ ಎಷ್ಟೆಲ್ಲಾ ಬರೆಯಬಲ್ಲೆ,'' ಎಂದು ಹೇಳಿದರು.

ಈ ರೀತಿಯ ಪ್ರೋತ್ಸಾಹದಿಂದ ಮಕ್ಕಳ ಆತ್ಮವಿಶ್ವಾಸ ಹೆಚ್ಚಲು ಸಹಾಯವಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಸುತ್ತಲ ವಾತಾವರಣದ ಬಗೆಗಿನ ಭಾವನೆಗಳು ವಿಕಸಿತಗೊಳ್ಳುತ್ತವೆ. ಮಗು ನೋಡು, ಕೇಳು, ಯೋಚಿಸು ಮತ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸುವ ಅಂಶಗಳು ಅದರ ಪ್ರಕೃತಿಯನ್ನು ರೂಪಿಸುತ್ತವೆ. ಮಗುವಿಗೆ ಭಯ, ಚಿಂತೆ, ಒತ್ತಡದ ಭಾವನೆಗಳು ಬರತೊಡಗಿದರೆ, ಅದು ಕೋಪ ಮತ್ತು ಹಠ ಪ್ರದರ್ಶಿಸುತ್ತದೆ. ಅದರ ಆತ್ಮವಿಶ್ವಾಸ ಕುಂಠಿತವಾಗುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಕೆಲವು ಮಕ್ಕಳು ಬಾಲ್ಯದಲ್ಲಿಯೇ ಚಿಂತೆ ಮತ್ತು ಒತ್ತಡಕ್ಕೆ ಗುರಿಯಾಗುತ್ತಾರೆ. ಬಾಲ್ಯದಲ್ಲಿನ ನಕಾರಾತ್ಮಕ ಅನುಭವದಿಂದ ಅದರ ಇಡೀ ಜೀವನದಲ್ಲಿ ನಕಾರಾತ್ಮಕ ಪ್ರಭಾವವಿರುವುದು ಕಂಡು ಬರುತ್ತದೆ.

ಮಕ್ಕಳು ಚಿಂತೆ ಮತ್ತು ಒತ್ತಡಕ್ಕೆ ಗುರಿಯಾಗಲು ಅನೇಕ ಕಾರಣಗಳಿರುತ್ತವೆ. ಮಗು ತನ್ನ ಶಾಲೆಯ ಪಾಠವನ್ನು ಅರ್ಥ ಮಾಡಿಕೊಳ್ಳಲು ಅಥವಾ ಮಾಡಿ ಮುಗಿಸಲು ಅಸಮರ್ಥವಾದಾಗ ಅವನಲ್ಲಿ ಒತ್ತಡ ಹುಟ್ಟಿಕೊಳ್ಳುತ್ತದೆ. ಈ ದಿಸೆಯಲ್ಲಿ ತನ್ನನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸಿ ಅಸಫಲನಾಗುತ್ತಾನೆ. ತನ್ನ ಜೊತೆಗಾರರು ಇದನ್ನು ಸುಲಭವಾಗಿ ಮಾಡುತ್ತಾರೆನಿಸಿದಾಗ ಅವನು ತನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ.

ಮಕ್ಕಳು ಲಜ್ಜಿತರಾಗಿ ಅಥವಾ ಮೌನಿಗಳಾಗಿರುವುದನ್ನು ಗಮನಿಸುವುದರ ಮೂಲಕ ಅವರಲ್ಲಿ ಆತ್ಮವಿಶ್ವಾಸ ಕುಂಠಿತವಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ತಂದೆತಾಯಿಯರು ಈ ಚಿಹ್ನೆಗಳನ್ನು ಗುರುತಿಸಿ ಮಕ್ಕಳು ಸಮಸ್ಯೆಯನ್ನು ಎದುರಿಸಲು ಸಹಾಯ ಮಾಡಬೇಕು ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ತಂದೆತಾಯಿಯರ ಮತ್ತೊಂದು ಜವಾಬ್ದಾರಿ ಎಂದರೆ ಮನೆಯಲ್ಲಿ ಸ್ನೇಹಮಯ ವಾತಾವರಣವಿದ್ದು, ಮಕ್ಕಳು ಸುರಕ್ಷತೆಯ ಅನುಭವ ಹೊಂದುವಂತಿರಬೇಕು ಮತ್ತು ಅವರು ಗದರಿಕೆಯ ಭಯವಿಲ್ಲದೆ ತಮ್ಮ ಮಾತನ್ನು ಧೈರ್ಯವಾಗಿ ಹೇಳಲು ಅವಕಾಶ ದೊರೆಯಬೇಕು.

ಸಂಭಾಷಣೆ ಸದಾ ಇರಲಿ : ಮಕ್ಕಳಿಗೆ ತಮ್ಮ ಕುಟುಂಬದ ಸದಸ್ಯರೊಡನೆ ಹೊಂದಾಣಿಕೆ ಇರಬೇಕು. ಸಂಭಾಷಣೆಯ ಮೂಲಕ ಬಾಲ್ಯದಿಂದಲೇ ಅವರ ಸಾಮಾಜಿಕ ಕೌಶಲ್ಯ ವಿಕಸಿತಗೊಳ್ಳುತ್ತದೆ. ಆದ್ದರಿಂದ ಸಹಜ, ಸ್ನೇಹಪೂರ್ಣ ವಾತಾವರಣದೊಂದಿಗೆ ಮಕ್ಕಳ ಜೊತೆ ಮಾತುಕತೆ ನಡೆಸುತ್ತಿರಿ. ಇದರಿಂದ ಅವರಿಗೆ ಮುಕ್ತವಾಗಿ ಮಾತನಾಡಲು ಆತ್ಮವಿಶ್ವಾಸ ಹೆಚ್ಚುವುದು.

ತಮಗೆ ಇಷ್ಟವಾದುದನ್ನು ಆಯ್ಕೆ ಮಾಡಲಿ : ಮಕ್ಕಳು ತಮಗೆ ಇಷ್ಟವಾದುದನ್ನು ಆರಿಸಿಕೊಳ್ಳಲು ಸಹಾಯ ಮಾಡುವುದರಲ್ಲಿ ಪೋಷಕರ ಪಾತ್ರ ಮುಖ್ಯವಾಗಿರುತ್ತದೆ. ತಮ್ಮ ಇಷ್ಟವನ್ನು ತಾವೇ ಆಯ್ಕೆ ಮಾಡುವುದು ಆತ್ಮವಿಶ್ವಾಸ ವಿಕಸನಕ್ಕೆ ಒಳ್ಳೆಯ ಉಪಾಯ. ಇದು ತೀರ್ಮಾನ ತೆಗೆದುಕೊಳ್ಳಲು ಮತ್ತು ತಮ್ಮ ಆಯ್ಕೆಯ ಬಗ್ಗೆ ಅರ್ಥ ಮಾಡಿಕೊಳ್ಳಲು ಅನುವು ನೀಡುತ್ತದೆ ಹಾಗೂ ಇದರಿಂದ ಅವರಿಗೆ ಸಂತೋಷ ಸಿಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ