ಹೆಣ್ಣುಮಕ್ಕಳಿಗೆ ಚಿಕ್ಕಂದಿನಿಂದಲೂ ಅತ್ತೆ ಮನೆಯ ವಾಸದ ಬಗ್ಗೆ ಭಯ ಹುಟ್ಟುವಂತೆ ಮಾತನಾಡಲಾಗುತ್ತಿರುತ್ತದೆ. ``ನೀನು ಹೀಗೇ ಆಡುತ್ತಿರು, ಅತ್ತೆ ಮನೆಗೆ ಹೋದಾಗ ನಿನಗೆ ಅರ್ಥ ಆಗುತ್ತದೆ. ಅತ್ತೆಯಿಂದ ಹೇಳಿಸಿಕೊಂಡ ಮೇಲೆ ನಿನಗೆ ಬುದ್ಧಿ ಬರುತ್ತದೆ!''

ಇಂತಹ ಹಲವಾರು ಮಾತುಗಳನ್ನು ಕೇಳಿ ಯುವತಿಯರ ಮನಸ್ಸಿನಲ್ಲಿ ಅತ್ತೆ ಮನೆಯ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹುಟ್ಟಿಕೊಂಡಿರುತ್ತದೆ. ವಿವಾಹವಾಗಿ ಅತ್ತೆ ಮನೆಗೆ ಕಾಲಿಡುವ ಸಮಯದಲ್ಲಿ ಅವರು ಮನಸ್ಸಿನಲ್ಲಿ ನೂರಾರು ಅನುಮಾನಗಳನ್ನು ತುಂಬಿ ತಂದಿರುತ್ತಾರೆ. ಆದರೆ ಅವರ ಆಲೋಚನೆಗೆ ವಿರುದ್ಧವಾಗಿ ಸುಧಾರಿತ ಮನಸ್ಸಿನ ಅತ್ತೆಯು ತುಂಬು ಮನಸ್ಸಿನಿಂದ  ಸೊಸೆಯನ್ನು ಸ್ವಾಗತಿಸುತ್ತಾರೆ. ಹೀಗಾಗಿ ಸೊಸೆಗೆ ಅತ್ತೆ ಬಗ್ಗೆ ಪ್ರೀತಿ, ಗೌರವ ಹುಟ್ಟುತ್ತದೆ ಮತ್ತು ಕ್ರಮೇಣ ಅವಳ ಮನಸ್ಸಿನಲ್ಲಿ ಹುದುಗಿದ್ದ ಆಸೆಗಳು ಜಾಗೃತವಾಗತೊಡಗುತ್ತವೆ.

ಅತ್ತೆಯ ಸಹಕಾರ ಹಸ್ತದಿಂದ ಅವಳು ತನ್ನ ಉದ್ಯೋಗ ಮತ್ತು ಹಾಬಿಯ ಬಗೆಗಿನ ಆಸಕ್ತಿಯನ್ನು ಪೂರೈಸಿಕೊಳ್ಳಲು ಶಕ್ತಳಾಗುತ್ತಾಳೆ. ಹೀಗಾಗಿ ಅವರ ಸಂಬಂಧ ಸಾಂಪ್ರದಾಯಿಕ ಅತ್ತೆಸೊಸೆ ರೂಪದಿಂದ ಮುಂದಡಿಯಿಟ್ಟು ಸ್ನೇಹಮಯ ಸಂಬಂಧವಾಗಿ ರೂಪುಗೊಳ್ಳುತ್ತದೆ. ಮನೆಯ ಯಾವುದೇ ಸಮಸ್ಯೆಯನ್ನು ಇಬ್ಬರೂ ಸೇರಿ ಪರಿಹರಿಸುತ್ತಾರೆ ಮತ್ತು ಮನೆಯ ಇತರ ಸದಸ್ಯರಿಗೆ ಅದರ ಸುಳಿ ಸಿಗುವುದಿಲ್ಲ.

ಅತ್ತೆ ಸೊಸೆಯರ ಅಪೂರ್ವ ಜೋಡಿಗಳು

ಬನ್ನಿ, ಹಾಲು, ನೀರು ಬೆರೆತಂತೆ ಪರಸ್ಪರ ಹೊಂದಿಕೊಂಡಿರುವ ಅತ್ತೆ ಸೊಸೆಯರ ಜೋಡಿಯನ್ನು ನಿಮಗೆ ಪರಿಚಯ ಮಾಡಿಸಿಕೊಡುತ್ತೇವೆ. ಮಾನಸಾ ಒಬ್ಬ ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿದ್ದು, ಇಂದಿರಾನಗರದಲ್ಲಿ ವಾಸಿಸುತ್ತಿದ್ದಾಳೆ. ಈ ಸಂಬಂಧದ ವಿಷಯವಾಗಿ ಹೀಗೆ ಹೇಳುತ್ತಾಳೆ, ``ನಾನು ಹೊರಗೆ ಕೆಲಸ ಮಾಡಲು ನನ್ನ ಅತ್ತೆಯಿಂದ ಸಂಪೂರ್ಣ ಸಹಕಾರ ಸಿಗುತ್ತಿದೆ. ನನ್ನ ಸಹೋದ್ಯೋಗಿಗಳು ಲಂಚ್‌ ಟೈಮಿನಲ್ಲಿ ತಮ್ಮ ತಮ್ಮ ಅತ್ತೆಯರ ಬಗ್ಗೆ ಟೀಕೆ ಮಾಡುತ್ತಿರುತ್ತಾರೆ. ಆದರೆ ನಾನು ಅತ್ತೆಯ ಸಂರಕ್ಷಣೆಯಲ್ಲಿರುವ ನನ್ನ ಮಕ್ಕಳ ಬಗ್ಗೆ ನಿಶ್ಚಿಂತಳಾಗಿರುತ್ತೇನೆ. ಇಷ್ಟೇ ಅಲ್ಲ, ನನ್ನ ಅತ್ತೆ ನನ್ನ ಡ್ರೆಸ್‌ ಬಗ್ಗೆ ಯಾವುದೇ ನಿರ್ಬಂಧ ಮಾಡುವುದಿಲ್ಲ. ನನಗಿಷ್ಟವಾದಂತೆ ಡ್ರೆಸ್‌ ಮಾಡಿಕೊಳ್ಳಲು ನನಗೆ ಸ್ವಾತಂತ್ರ್ಯವಿದೆ.''

ಅವಳ ಅತ್ತೆ ಮೀನಾಕ್ಷಿ ಹೇಳುತ್ತಾರೆ, ``ನನ್ನ ಮಗಳು ಮದುವೆಯಾಗಿ ಬೇರೆ ಊರಿನಲ್ಲಿದ್ದಾಳೆ. ಆದರೆ ಇಲ್ಲಿ ಈ ಮಗಳು ನನ್ನ ಜೊತೆಗಿದ್ದಾಳೆ. ಇವಳು ನನ್ನ ಊಟ ತಿಂಡಿ, ಹಣ್ಣು ಔಷಧ ಎಲ್ಲಗಳನ್ನೂ ನೋಡಿಕೊಳ್ಳುತ್ತಾಳೆ. ಮನೆಗೆ ಬರುವ ನಮ್ಮ ನೆಂಟರು, ಸ್ನೇಹಿತರಿಗೂ ಚೆನ್ನಾಗಿ ಸತ್ಕಾರ ಮಾಡುತ್ತಾಳೆ. ಹೀಗಿರುವಾಗ ನನಗೆ ಅವಳನ್ನು ದೂರು ಪ್ರಮೇಯವೇ ಇರುವುದಿಲ್ಲ.''

ಇತರ ಉದಾಹರಣೆಗಳು

ಗಾಂಧಿನಗರದಲ್ಲಿ ವಾಸಿಸುವ ಎಂಬಿಎ ಗ್ರಾಜುಯೇಟ್‌ ಶ್ವೇತಾ ಹೇಳುತ್ತಾಳೆ, ``ನನಗೆ ಬಿಸ್‌ನೆಸ್‌ ಮಾಡಬೇಕೆಂಬ ಆಸೆಯಿತ್ತು. ಆದರೆ ನನ್ನ ತವರಿನಲ್ಲಿ ಅದಕ್ಕೆ ಆಸ್ಪದವಿರಲಿಲ್ಲ. ಅತ್ತೆಮನೆಯಲ್ಲಿ ಈಗ ನನ್ನ ಅತ್ತೆಯ ಒತ್ತಾಸೆಯಿಂದ ನಾನು ಸ್ವಂತ ಆರ್ಟಿಫಿಶಿಯಲ್ ಜ್ಯೂವೆಲರಿಯ ತಯಾರಿಕೆಯನ್ನು ಮನೆಯಿಂದಲೇ ಮಾಡಲು ಸಮರ್ಥಳಾಗಿದ್ದೇನೆ. ನನ್ನ ಚಿಕ್ಕ ಮಗುವನ್ನು  ಅತ್ತೆಯೇ ಸುಧಾರಿಸುವುದರಿಂದ ಇದು ಸಾಧ್ಯವಾಗಿದೆ.

``ಅತ್ತೆ ಎಂದೂ ತಾಯಿಯಾಗಲಾರಳು ಎಂದು ಜನರು ಹೇಳುತ್ತಾರೆ. ಆದರೆ ಅದು ನಿಜವಲ್ಲ. ಸಂಬಂಧಕ್ಕೆ ಬೆಲೆ ಕೊಟ್ಟರೆ, ಅತ್ತೆ ಸೊಸೆಯರು ತಾಯಿ ಮಗಳಾಗಬಲ್ಲರು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ