ತನುಜಾಳ ಮದುವೆಯಾಗಿ 6 ತಿಂಗಳಾಗಿತ್ತು ಅವಳು ತವರಿಗೆ ಬಂದಾಗ ಅವಳ ಸಮವಯಸ್ಸಿನ ಅತ್ತಿಗೆ ಅವಳನ್ನು ರೇಗಿಸುತ್ತಾ, ``ಹೇಗಿದೆ ಅನುಭವ?'' ಎಂದು ಕೇಳಿದಳು. ಅತ್ತಿಗೆಯ ಮಾತುಗಳನ್ನು ಕೇಳಿ ತನುಜಾ ಬೇಸರದಿಂದಲೇ ಹೇಳಿದಳು, ``ನನಗಂತೂ ಖಂಡಿತಾ ಒಳ್ಳೆಯದೆನಿಸಿಲ್ಲ ಬೋರ್ ಹೊಡೆಸುತ್ತೆ.''
ನಾದಿನಿಯ ಮಾತು ಕೇಳಿ ಅತ್ತಿಗೆಗೆ ಆಘಾತವೇ ಆಯಿತು. ಅವಳ ಜೊತೆಗೆ ವಿವರವಾಗಿ ಚರ್ಚಿಸಿದಾಗ ಆಕೆ ಈವರೆಗೆ ಉತ್ತುಂಗ ಸುಖದ ಅನುಭವ ಪಡೆದೇ ಇಲ್ಲ ಎನ್ನುವುದು ಖಾತ್ರಿಯಾಯಿತು. ಲೈಂಗಿಕ ಚಟುವಟಿಕೆ ಆಕೆಗೆ ಒಂದು ರೀತಿಯಲ್ಲಿ ದೈನಂದಿನ ನೀರಸ ಕ್ರಿಯೆ ಎಂಬಂತೆ ಭಾಸವಾಗುತ್ತಿತ್ತು. ಗಂಡನಿಗೆ ಸಾಥ್ ಕೊಡುವುದು ಹಿತಕರ ಅಥವಾ ಅಹಿತಕರ ಎನ್ನುವ ವ್ಯತ್ಯಾಸವೇ ಆಕೆಗೆ ಗೊತ್ತಾಗುತ್ತಿರಲಿಲ್ಲ. ರೇಖಾ ತನ್ನ ಸಂಬಂಧಿಕರಾದ ಡಾ. ಮೀನಾಕ್ಷಿ ಅವರ ಬಳಿ ಕರೆದುಕೊಂಡು ಹೋದಳು. ಅವರಿಬ್ಬರನ್ನು ಮಾತಿಗೆ ಬಿಟ್ಟು ರೇಖಾ ಹೊರಗೆ ಬಂದಳು.
ಡಾ. ಮೀನಾಕ್ಷಿಯವರು ತನುಜಾಳಿಗೆ ಮಾತು ಮಾತಿನಲ್ಲಿಯೇ ಉತ್ತುಂಗತೆಯ ಬಗ್ಗೆ ಹೇಳಿದಾಗ, ತನುಜಾ ಹಿಂಜರಿಕೆಯಿಂದಲೇ ಸಂದೇಹಗಳಿಗೆ ಉತ್ತರವನ್ನು ಕೇಳಿ ತಿಳಿದುಕೊಂಡಳು.
ಮುಂದಿನ ಬಾರಿ ತವರಿಗೆ ಬಂದಾಗ ತನುಜಾಳ ಮುಖದಲ್ಲಿ ನಗು ಅರಳಿತ್ತು. ಅವಳ ಖುಷಿ ಕಂಡು ಅತ್ತಿಗೆ ಕಣ್ಣೋಟದಲ್ಲಿಯೇ ತುಂಟತನದ ಪ್ರಶ್ನೆ ಮಾಡಿದಳು. ಆಗ ತನುಜಾ ನಾಚಿ ನೀರಾದಳು. ಅವಳ ಆ ಭಾವಭಂಗಿಯೇ ಆಕೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಂತೃಪ್ತಿಯಿಂದಿದ್ದಾಳೆ ಎಂಬುದನ್ನು ಖಚಿತಪಡಿಸಿತು. ಸೆಕ್ಸ್ ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ ಕೆಲವು ಮಹಿಳೆಯರು ಗಾಢ ಸಂಬಂಧಕ್ಕೆ ಒಳ್ಳೆಯ ಸೆಕ್ಸ್ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಸಂಗಾತಿಯ ಜೊತೆಗೆ ಇರಲು ಅದು ಅತ್ಯವಶ್ಯ ಎಂದು ನಂಬಿದ್ದಾರೆ.
25 ವರ್ಷದ ಕವಿತಾ, ``ನನ್ನ ಸಂಗಾತಿ ಬಹುಬೇಗ ಉತ್ತೇಜಿತನಾಗುತ್ತಾನೆ. ಆದರೆ ನಾನು ಮೂಡ್‌ನಲ್ಲಿ ಬರಲು ಸಾಕಷ್ಟು ಸಮಯ ತಗಲುತ್ತದೆ. ಹೀಗಾಗಿ ನಾನು ಸಂಗಾತಿಗಾಗಿ ಸಹಕರಿಸುತ್ತಿದ್ದೆ. ಆದರೆ ಪ್ರತಿಬಾರಿ ನನಗೆ ಸಿಗುವುದು ನಿರಾಶೆಯೇ,'' ಎಂದು ಹೇಳುತ್ತಾಳೆ.
ಫೋರ್‌ಪ್ಲೇಯ ಮಹತ್ವದ ಬಗ್ಗೆ ಮನೋವೈಜ್ಞಾನಿಕ ಸಲಹೆಗಾರ್ತಿ ಅರುಣಾ ಹೀಗೆ ಹೇಳುತ್ತಾರೆ, ಶೇ.90 ರಷ್ಟು ಪುರುಷರು ಸಮಾಗಮದ ಸಂದರ್ಭದಲ್ಲಿ ಉತ್ತುಂಗತೆಯ ಅನುಭೂತಿ ಹೊಂದುತ್ತಾರೆ. ಆದರೆ ಶೇ.30ರಷ್ಟು ಮಹಿಳೆಯರು ತಮ್ಮ ಜೀವನದಲ್ಲಿ ಎಂದೂ ಉತ್ತುಂಗತೆಯ ಅನುಭೂತಿ ಮಾಡಿಕೊಳ್ಳುವುದಿಲ್ಲ. ಮಹಿಳೆಗೆ ಸಮಾಗಮ ಚಟುವಟಿಕೆಯಲ್ಲಿ ಮಾನಸಿಕವಾಗಿ ತೊಡಗಲು 15-30 ನಿಮಿಷಗಳ ಸಮಯ ಬೇಕಾಗುತ್ತದೆ.
ಫುಟ್ ಸ್ಪಾ, ಬಾಡಿ ಮಸಾಜ್‌ನಿಂದ ಯೌವನ, ಸೌಂದರ್ಯ ಹೆಚ್ಚುತ್ತದೆ. ಆದರೆ ಅದನ್ನು ದಿನ ಮಾಡಲು ಸಾಧ್ಯವಿಲ್ಲವಲ್ಲ.
`ದಿ ಆರ್ಗ್ಯಾಸಮ್ ಆ್ಯನ್ಸರ್ ಗೈಡ್'ನ ಮನೋತಜ್ಞ ಕ್ಯಾರ್ ನಿಕ್ಲೋಮ ಎಲಿಸನ್ ನಡೆಸಿದ ಒಂದು ಅಧ್ಯಯನದಲ್ಲಿ 23-90 ವರ್ಷ ವಯೋಮಾನದ 2,632 ಜನರನ್ನು ಸಂಪರ್ಕಿಸಿದ್ದರು. ಇದರಲ್ಲಿ ಶೇ.39ರಷ್ಟು ಮಹಿಳೆಯರು ತಮ್ಮ ಖುಷಿಗಾಗಿ ಅದರ ಆನಂದವನ್ನು ಅನುಭವಿಸಿದ್ದರು. ತಜ್ಞರು ಇದರ ಶ್ರೇಯಸ್ಸನ್ನು ಆಕ್ಸಿಟೋಸಿನ್ ಹಾರ್ಮೋನಿಗೆ ನೀಡುತ್ತಾರೆ. ಮನೋತಜ್ಞ ಹಾಗೂ ಸೆಕ್ಸಾಲಜಿಸ್ಟ್ ಡಾ. ಶ್ಯಾಮಪ್ರಸಾದ್ ಹೀಗೆ ಹೇಳುತ್ತಾರೆ, ಮಹಿಳೆಯೊಬ್ಬಳು ಉತ್ತೇಜಿತಳಾದರೆ ಆಕೆಯ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಸ್ರಾವವಾಗುತ್ತದೆ. ಆಕ್ಸಿಟೋಸಿನ್ ಕೇವಲ ಒತ್ತಡವನ್ನಷ್ಟೇ ಕಡಿಮೆಗೊಳಿಸುವುದಿಲ್ಲ, ಉತ್ಸಾಹ ಹಾಗೂ ನಿರಾಳತೆಯ ಭಾವನೆಯನ್ನೂ ಹುಟ್ಟುಹಾಕುತ್ತದೆ. ಅದು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.