ಚೆನ್ನೈನ ಒಂದು ಶಾಲೆಯು ಆದೇಶ ಹೊರಡಿಸಿದ ವಿಷಯದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕು. ಶಾಲೆಗೆ ಅಡ್ಮಿಷನ್‌ ಪಡೆಯುವ ವಿದ್ಯಾರ್ಥಿ ಸಾಮಾಜಿಕ ಜಾಲತಾಣ ಅಂದರೆ ಸೋಶಿಯಲ್ ನೆಟ್‌ವರ್ಕ್‌ನಲ್ಲಿ ಯಾವುದೇ ಅಕೌಂಟ್‌ ಹೊಂದಿರದಿದ್ದರೆ ಮಾತ್ರ ಅವನಿಗೆ/ಅವಳಿಗೆ ಅಡ್ಮಿಷನ್‌ ಕೊಡಲಾಗುವುದು ಎಂಬುದೇ ಆ ಆದೇಶವಾಗಿತ್ತು.  ಸ್ಕೂಲಿನ ಅಡ್ಮಿಷನ್‌ ಫಾರ್ಮ್ ತುಂಬುವಾಗ ಈ ಬಗ್ಗೆ ಮಾಹಿತಿ ಕೊಡಬೇಕಾಗುತ್ತದೆ. ಆ ಶಾಲೆಯು ಮಕ್ಕಳಿಗೆ ಸೋಶಿಯಲ್ ನೆಟ್‌ವರ್ಕ್‌ನಲ್ಲಿ ಪ್ರೊಫೈಲ್ ಹೊಂದದೇ ಇರುವ ಎಚ್ಚರಿಕೆ ನೀಡಿದೆ. ಶಾಲೆಯ ಅವಧಿಯಲ್ಲಿ ಮಕ್ಕಳು ಯಾವುದೇ ಅಕೌಂಟ್‌ ಹೊಂದಲು ಕೂಡ ಅದು ನಿಷೇಧ ಹೇರಿದೆ.

ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌, ಇನ್ಸ್ಟಾಗ್ರಾವ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್‌ ಹೊಂದಲು ಮಕ್ಕಳಲ್ಲಿ ಸ್ಪರ್ಧೆಯೇ ಏರ್ಪಟ್ಟಿದೆ. ಈ ಸಾಮಾಜಿಕ ಜಾಲತಾಣಗಳಲ್ಲಿ 78 ವರ್ಷಗಳ ಮಕ್ಕಳ ಪ್ರೊಫೈಲ್‌ ಕೂಡ ಕಂಡು ಬಂದಿರುವುದು ಅಚ್ಚರಿಯ ಸಂಗತಿಯೇ ಸರಿ.

ಮಕ್ಕಳಲ್ಲಿ ಒತ್ತಡದ ಕಾರಣ

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ವ್ಯವಸ್ತತೆ ಗಮನಿಸಿದರೆ, ಅವರು ಇದನ್ನು ಬಿಟ್ಟು ಇರಲಾರರು ಎಂಬುದು ಸ್ಪಷ್ಟವಾಗುತ್ತದೆ. ಮುಂಜಾನೆ ಏಳುತ್ತಿದ್ದಂತೆ ಹಾಗೂ ರಾತ್ರಿ ಮಲಗುವ ಮುನ್ನ ಅವರು ಹಲವು ವೆಬ್ ಸೈಟ್‌ಗಳಿಗೆ ಭೇಟಿ ಕೊಡುತ್ತಾರೆ. ಗಂಟೆಗಟ್ಟಲೆ ಆನ್‌ಲೈನ್‌ನಲ್ಲಿ ಇರುವುದರಿಂದ ಅವರಿಗೆ ತಮ್ಮ ಹವ್ಯಾಸಗಳನ್ನು ಪೂರೈಸಿಕೊಳ್ಳಲು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಲು ಸಮಯವೇ ದೊರೆಯುವುದಿಲ್ಲ.

ಅವರು ಒತ್ತಡಗ್ರಸ್ತರಾಗಲು ಇದು ಕೂಡ ಒಂದು ಮುಖ್ಯ ಕಾರಣ. ಇದರ ಹೊರತಾಗಿ ತಿಳಿದುಬಂದ ಮತ್ತೊಂದು ವಿಚಾರವೆಂದರೆ, ಯಾವ ಮಕ್ಕಳು ಮುಖಾಮುಖಿ ಮಾತನಾಡಲು ಹೆದರುತ್ತಾರೊ, ಅವರು ಆನ್‌ಲೈನ್‌ನಲ್ಲಿ ಸ್ನೇಹಿತರು ಹಾಗೂ ಇತರರೊಂದಿಗೆ ಮಾತನಾಡಲು ಹಿಂದೇಟು ಹಾಕುವುದಿಲ್ಲ.

ಇದರ ಹೊರತಾಗಿ ಸೋಶಿಯಲ್ ಮೀಡಿಯಾ ಮಕ್ಕಳ ಆತ್ಮಗೌರವದ ಮೇಲೂ ನಕಾರಾತ್ಮಕ ಪ್ರಭಾವ ಬೀರುತ್ತದೆ. ಫೇಸ್‌ಬುಕ್‌ ಅಥವಾ ವಾಟ್ಸಪ್‌ನಲ್ಲಿ ಕಳಿಸಿದ ಪಿಕ್ಚರ್‌ ಮೆಸೇಜ್‌ ಅಥವಾ ಸ್ಟೇಟಸ್‌ನ್ನು ಕಂಡು ಅದನ್ನು ತಮ್ಮೊಂದಿಗೆ ಹೋಲಿಕೆ ಮಾಡಿ ನೋಡುತ್ತಾರೆ. ತಮ್ಮ ಸಾಧನೆ ಅವರ ಮುಂದೆ ಕಳಪೆ ಎಂದು ಕಂಡುಕೊಂಡು ಅಸಮಾಧಾನಗೊಳ್ಳುತ್ತಾರೆ.

ದುರ್ಬಲಗೊಳ್ಳುವ ಆತ್ಮವಿಶ್ವಾಸ

ಒಂದು ಉದಾಹರಣೆ ಗಮನಿಸಿ. ಅಮಿತ್‌ ಒಂದು ವಿಶಿಷ್ಟ ಸ್ಥಳಕ್ಕೆ ರಜೆಯಲ್ಲಿ ಹೋಗಬೇಕೆಂದು ನಿರ್ಧರಿಸಿದ್ದ. ಆದರೆ ಕಾರಣಾಂತರಗಳಿಂದ ಅವನಿಗೆ ಆ ಜಾಗಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ಕೆಲವೇ ದಿನಗಳ ಬಳಿಕ ಅವನ ಗೆಳೆಯ ಅದೇ ಜಾಗಕ್ಕೆ ಹೋಗಿ ಪೇಟೋ ತೆಗೆಸಿಕೊಂಡು ಬಂದು ವಾಟ್ಸಪ್‌ ಮತ್ತು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ. ಆ ಹುಡುಗ ಅಪ್‌ಲೋಡ್‌ ಮಾಡಿದ ಚಿತ್ರಗಳನ್ನು ನೋಡಿ ಅಮಿತ್‌ಗೆ ನಿರಾಶೆಯಾಯಿತು. ಮಕ್ಕಳು ತಮ್ಮ ಟೈವೈ್‌ನ್‌ನಲ್ಲಿ ಹಾಕುವ ಫೋಟೋಗಳಿಗೆ ಲೈಕ್ಸ್ ಹಾಗೂ ಕಮೆಂಟ್ಸ್ ಕಡಿಮೆ ದೊರತೆರೆ ಅವರಿಗೆ ಕಸಿವಿಸಿಯಾಗತೊಡಗುತ್ತದೆ, ಆತ್ಮವಿಶ್ವಾಸ ಕುಗ್ಗುತ್ತದೆ. ಅವರು ಈ ಲೈಕ್ಸ್ ಹಾಗೂ ಕಮೆಂಟ್ಸ್ ಗಳನ್ನು ತಮ್ಮ ವ್ಯಕ್ತಿತ್ವದೊಂದಿಗೆ ಹೋಲಿಸಿ ನೋಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವುದರಿಂದ ಅವರು  ತಮ್ಮ ವಾಸ್ತವ ಜೀವನದಿಂದ ದೂರ ಉಳಿದುಬಿಡುತ್ತಾರೆ. ತಮ್ಮ ಇಷ್ಟಕ್ಕೆ ವಿರುದ್ಧವಾಗಿ ಏನಾದರೂ ನಡೆದರೆ ಅವರಿಗೆ ಬಹಳ ದುಃಖವಾಗುತ್ತದೆ. ಅವರು ಮಾನಸಿಕವಾಗಿ ಡಿಸ್ಟರ್ಬ್‌ ಆಗಿಬಿಡುತ್ತಾರೆ. ಒಂದು ಸಮೀಕ್ಷೆಯಿಂದ ತಿಳಿದುಬಂದ ಸಂಗತಿಯೆಂದರೆ, 12 ರಿಂದ 15ರ ವಯೋಮಿತಿಯ 3 ರಲ್ಲಿ 1 ಮಗು ವಾರದಲ್ಲಿ ಕನಿಷ್ಠ 1 ದಿನವಾದರೂ ನಿದ್ರೆಯ ಕೊರತೆಯಿಂದ ಬಳಲುತ್ತದೆ. ನಿದ್ರೆಯ ಕೊರತೆಗೆ ಮುಖ್ಯ ಕಾರಣ ಈ ಸಾಮಾಜಿಕ ಜಾಲತಾಣಗಳು ಎಂದು ಸ್ಪಷ್ಟವಾಗಿ ಹೇಳಬಹುದು. ಕಾರ್ಡಿಫ್‌ ವಿಶ್ವವಿದ್ಯಾಲಯದ ತಂಡಿಂದು ಪ್ರತಿ 5 ಜನರಲ್ಲಿ 1 ಮಗು ರಾತ್ರಿ ಹೊತ್ತು ಸಾಕಷ್ಟು ಸಮಯ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತದೆ. ಈ ಕಾರಣದಿಂದಾಗಿ ಅದಕ್ಕೆ ಶಾಲಾ ಅವಧಿಯಲ್ಲಿ ಸಾಕಷ್ಟು ದಣಿ ಅನಿಸುತ್ತದೆ.

ಅಂದಹಾಗೆ, ಇದಕ್ಕಿರುವ ಏಕೈಕ ಪರಿಹಾರವೆಂದರೆ, ಮಕ್ಕಳನ್ನು ಪರಿಪೂರ್ಣವಾಗಿ ಸೋಶಿಯಲ್ ನೆಟ್‌ವರ್ಕಿಂಗ್‌ನಿಂದ ದೂರ ಇಡುವುದಾಗಿದೆ. ಆದರೆ ಪೋಷಕರಾಗಿರುವ ಕಾರಣದಿಂದ ಅವರು ಸಾಮಾಜಿಕ ಜಾಲತಾಣಗಳನ್ನು ಬಳಸುವ ಅವಧಿಯನ್ನು ಸೀಮಿತಗೊಳಿಸುವುದು ಹಾಗೂ ಅವರ ಚಟುವಟಿಕೆಗಳ ಮೇಲೆ ಕಣ್ಣಿಡುವುದಾಗಿದೆ.

ತಜ್ಞರೊಬ್ಬರ ಪ್ರಕಾರ, ಸೋಶಿಯಲ್ ಮೀಡಿಯಾ ಮಕ್ಕಳ ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವದ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮ ಬೀರುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಈ ಕುರಿತಂತೆ ಅಷ್ಟಿಷ್ಟು ತಿಳಿವಳಿಕೆ ನೀಡಬೇಕು. ಲೈಕ್ಸ್ ಹಾಗೂ ಕಮೆಂಟ್ಸ್ ಗಳಿಂದ ಜೀವನದಲ್ಲಿ ಭಾರಿ ಬದಲಾವಣೆಗಳೇನೂ ಆಗುವುದಿಲ್ಲ. ಜೀವನದಲ್ಲಿ ಮಾಡಿದ ಪರಿಶ್ರಮವೇ ನಮ್ಮನ್ನು ಮೇಲಕ್ಕೆ ಕೊಂಡೊಯ್ಯುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಿ.

ಮಕ್ಕಳಿಗೆ ಅವರ ವಯಕ್ತಿಕ ಫೋಟೋಗಳನ್ನು ಅಪ್‌ಲೋಡ್‌ ಮಾಡಬೇಡಿ ಎಂದೇ ಹೇಳಿ. ಸಾಮಾನ್ಯವಾಗಿ ಮಕ್ಕಳು ತಪ್ಪು ಮಾಹಿತಿ ಕೊಟ್ಟು ತಮ್ಮ ಅಕೌಂಟ್‌ ತೆರೆಯುತ್ತಾರೆ. ನಿಮ್ಮ ಮಗು ತಪ್ಪು ಮಾಹಿತಿ ನೀಡಿ ಅಕೌಂಟ್‌ ತೆರೆಯದಂತೆ ನೋಡಿಕೊಳ್ಳಿ. ಅವರಿಗೆ ಸೋಶಿಯಲ್ ಸೈಟ್ಸ್ ಗಳ ವಾಸ್ತವತೆಯ ಬಗ್ಗೆ ತಿಳಿಹೇಳಿ. ಅ ಜನರ ಜೊತೆ ಬೆರೆಯುವ ಒಂದು ಮಾಧ್ಯಮ ಅಷ್ಟೇ, ಅದನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಡಿ. ಹೆಚ್ಚೆಚ್ಚು ಜನರ ಜೊತೆ ಸಂಪರ್ಕ ಬೆಳೆಸಿಕೊಳ್ಳಲು ಅದನ್ನು ಖಂಡಿತವಾಗಿ ಬಳಸಿಕೊಳ್ಳಬೇಡಿ ಎಂದು ತಿಳಿ ಹೇಳುವ ಅಗತ್ಯವಿದೆ. ನಿಮ್ಮ ಮಗುವಿನ ಜೊತೆ ಸ್ನೇಹ ಬೆಳೆಸಿ. ಅವರ ಫ್ರೆಂಡ್ಸ್ ಲಿಸ್ಟ್ ನಲ್ಲಿ ನಿಮ್ಮನ್ನು ಸೇರಿಸಿಕೊಳ್ಳಿ. ಅವರಿಗೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಅಪ್‌ಡೇಟ್‌ ಮಾಡ್ತಾ ಇರಿ.

– ಲಲಿತಾ ಗೋಪಾಲ್

और कहानियां पढ़ने के लिए क्लिक करें...