ಹೆಚ್ಚು ವರ್ಷಗಳ ಕಾಲ ಜೊತೆ ಜೊತೆಗೆ ಇದ್ದಾಗ ಒಮ್ಮೊಮ್ಮೆ ನಾವು ಇರೋದು ಸೋಲ್‌ಮೇಟ್ ಜೊತೆಗೆ ಅಲ್ಲ, ಫ್ಲ್ಯಾಟ್‌ಮೇಟ್ ಜೊತೆಗೆ ಎನಿಸಾರಂಭಿಸುತ್ತದೆ. ಅಂತಹ ಸಂದರ್ಭದಲ್ಲಿ ನಮ್ಮ ಜೀವನದಲ್ಲಿ ಪ್ರೀತಿ ಮತ್ತೆ ಚಿಗುರಲು ಕೆಲವೊಂದು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಕೆಲವರು ತಮ್ಮ ಪ್ರೀತಿಯ ಜೀವನದಲ್ಲಿ ಬಂದ ಬೇಸರವನ್ನು ವಯಸ್ಸಿನ ಕಾರಣದಿಂದಾಗಿ ಎಂದು ಹೇಳಿಕೊಳ್ಳುತ್ತಾರೆ. ಮತ್ತೆ ಕೆಲವರು ತಮ್ಮ ಬೇಸರ ನೀಗಿಸಿಕೊಳ್ಳಲು ಬೇರೆ ಕಡೆಗೆ ಆಕರ್ಷಿತರಾಗುತ್ತಾರೆ. ಇಂತಹ ಸ್ಥಿತಿ ಬರಲು ಅವಕಾಶ ಕೊಡಲೇಬೇಡಿ. ರಿಲೇಶನ್ ಥೆರಪಿಸ್ಟ್ ಅನಿತಾ ಹೀಗೆ ಹೇಳುತ್ತಾರೆ, ``ಪರ್ಫೆಕ್ಟ್ ರಿಲೇಶನ್‌ಶಿಪ್‌ನ ಯೋಚನೆಯೇ ಒಂದು ಭ್ರಮೆ. ಎಲ್ಲರಲ್ಲೂ ಒಳ್ಳೆಯ, ಕೆಟ್ಟ ಭಾವನೆಗಳು ಇದ್ದೇ ಇರುತ್ತವೆ. ಪ್ರೀತಿಯೊಂದೇ ಆ ಸಂಬಂಧವನ್ನು ಜೀವಂತವಾಗಿಡಲು ನೆರವಾಗುತ್ತದೆ. ಅದರ ಜೊತೆಗೆ ಕೆಲವು ದುರಭ್ಯಾಸಗಳನ್ನು ನಿರ್ಲಕ್ಷಿಸಬಹುದು.''
ನಿಮ್ಮ ಸಂಬಂಧಗಳನ್ನು ಸುಧಾರಿಸಲು ವಿಶೇಷಜ್ಞರು ಕೆಲವೊಂದು ಹೋಂವರ್ಕ್ ಮಾಡಿಕೊಳ್ಳಲು ಸಲಹೆ ನೀಡುತ್ತಾರೆ.
ಅಪ್ಪುಗೆಯಿಂದ ಆತ್ಮವಿಶ್ವಾಸ
ರಿಲೇಶನ್‌ಶಿಪ್ ಕೋಚ್ ಸಿಂಧು ಹೀಗೆ ಹೇಳುತ್ತಾರೆ, ``ಅಪ್ಪುಗೆಯಿಂದ ವಿಶ್ವಾಸ ವೃದ್ಧಿಸುತ್ತದೆ ಹಾಗೂ ಹ್ಯಾಪಿನೆಸ್ ಹಾರ್ಮೋನ್ ಆ್ಯಕ್ಸಿಟೋಸಿನ್ ಹಾಗೂ ಸೆರಾಟೋನಿನ್‌ನ ಪ್ರಮಾಣ ಹೆಚ್ಚುತ್ತದೆ. ಇದರಿಂದ ನಿರಾಶೆ ಕಡಿಮೆಯಾಗಿ ಹೊಂದಾಣಿಕೆ ಹೆಚ್ಚುತ್ತದೆ. ನಿಮ್ಮ ಸಂಗಾತಿಗೆ ಯಾವುದು ಒಳ್ಳೆಯದೆನಿಸುತ್ತದೆ? ಒಂದೆರಡು ಕ್ಷಣ ಅಪ್ಪುಗೆಯಲ್ಲಿರುವುದೊ ಅಥವಾ ಸ್ವಲ್ಪ ಹೆಚ್ಚು ಹೊತ್ತು ಇರಬೇಕಿನಿಸುತ್ತೋ? ಸಂಶೋಧನೆಗಳು ಹೇಳುವುದೇನೆಂದರೆ, ಬಹಿರ್ಮುಖಿ ಪ್ರವೃತ್ತಿಯವರು ದಿನಕ್ಕೆ 8 ಸಲ ಅಪ್ಪುಗೆಯ ಬಂಧನದಲ್ಲಿರಬೇಕೆಂದು ಅಪೇಕ್ಷಿಸುತ್ತಾರೆ.''
ಮನೋತಜ್ಞೆ ಡಾ. ಅಂಜಲಿ ಹೀಗೆ ಹೇಳುತ್ತಾರೆ, ``ಸಂಶೋಧನೆಗಳ ಪ್ರಕಾರ, ಪ್ರಿಯ ವ್ಯಕ್ತಿಯ ಉಪಸ್ಥಿತಿಯಲ್ಲಿ ಯಾವುದೇ ಒಂದು ಕೆಲಸ ಮಾಡುವ ಸಾಮರ್ಥ್ಯ ಹೆಚ್ಚುತ್ತದೆ. ಯಾವ ಸಂಗಾತಿಗಳು ಜೊತೆಜೊತೆಗೆ ವ್ಯಾಯಾಮ ಚಟುವಟಿಕೆ ಅನುಸರಿಸುತ್ತಾರೊ ಅವರ ನಡುವಿನ ಅನುಬಂಧ ಹೆಚ್ಚುತ್ತದೆ. ಒಂದು ಜೋಡಿ ನನ್ನ ಮುಂದೆ ಹೀಗೆ ಹೇಳಿದ್ದರು. ಅವರಿಬ್ಬರು ಜೊತೆಜೊತೆಗೆ ಡ್ಯಾನ್ಸ್ ಕ್ಲಾಸ್ ಸೇರಿಕೊಂಡಿದ್ದರು. ಆ ಬಳಿಕ ಅವರಿಬ್ಬರ ಜೀವನದಲ್ಲಿ ಬಹಳಷ್ಟು ಸಕಾರಾತ್ಮಕ ಪರಿವರ್ತನೆಗಳು ಉಂಟಾದವು. ಹೀಗಾಗಿ ಯಾವುದೇ ಚಟುವಟಿಕೆಯನ್ನು ಜೊತೆ ಜೊತೆಗೆ ಸೇರಿಕೊಂಡೇ ನಡೆಸಬೇಕು.''
ಹೇಗೆ ಹೆಚ್ಚಿಸಬೇಕು?
ಅಂಜಲಿ ಹೀಗೆ ಹೇಳುತ್ತಾರೆ, ``ಬೆಡ್‌ಗೆ ಇಬ್ಬರೂ ಜೊತೆ ಜೊತೆಗೆ ಹೋಗಬೇಕು. ಇದರಿಂದ ಇಬ್ಬರಿಗೂ ಜೊತೆಗೆ ಸಮಯ ಕಳೆಯಲು ಒಂದಿಷ್ಟು ಅವಕಾಶ ದೊರೆಯುತ್ತದೆ. ಇದರಿಂದ ಆಪ್ತತೆ ಹೆಚ್ಚುತ್ತದೆ. ಇದು ಪ್ರತಿದಿನ ಸಾಧ್ಯವಾಗುವುದಿಲ್ಲ. ಏಕೆಂದರೆ ಒಬ್ಬರು ಹೆಚ್ಚು ಹೊತ್ತಿನ ತನಕ ಕೆಲಸ ಮಾಡುತ್ತಾರೆ, ಇಲ್ಲವೇ ಹೊರಗೆ ಇರುತ್ತಾರೆ. ಹೀಗೆ ತಿಂಗಳಲ್ಲಿ 7 ದಿನಗಳಾದರೂ ಆಗಬೇಕು.''
1991ರಲ್ಲಿ ಜೆಫ್ರಿ ವಾಸ್ರನ್ ಅವರ ಸಂಶೋಧನೆಯ ಪ್ರಕಾರ, ಯಾವ ಗಂಡಹೆಂಡತಿಯರು ಸ್ಲೀಪಿಂಗ್ ಪ್ಯಾಟರ್ನ್ ಹೊಂದಾಣಿಕೆ ಆಗುದಿಲ್ಲವೋ, ಅವರಿಗೆ ಹೊಂದಾಣಿಕೆಯಲ್ಲಿ ಕಷ್ಟ ಉಂಟಾಗುತ್ತದೆ.
ಚಿಕ್ಕಪುಟ್ಟ ಸಂಕೇತಗಳಿಂದ ಪ್ರೀತಿ ಹೆಚ್ಚಿಸಿಕೊಳ್ಳಿ
ಪರಸ್ಪರರ ಕೈ ಹಿಡಿದುಕೊಂಡು ದಿನದ ಆರಂಭ ಮಾಡಿ ಅಥವಾ ಮುಂಜಾನೆ ವಾಕ್ ಸಮಯ ಇಲ್ಲವೇ ಚಹಾ ಸೇವನೆ ಮಾಡುವಾಗ, ಇದರಿಂದ ಪ್ರೀತಿಯ ದಾಹ ಹೆಚ್ಚುತ್ತದೆ. ಹೊರಗೆ ಹೋದಾಗ ಟೇಬಲ್ ತನಕ ಮಾತ್ರ ಕೈಹಿಡಿದುಕೊಳ್ಳಿ. ಕೈ ಹಾಗೂ ಬೆರಳುಗಳಲ್ಲಿ ಎಲ್ಲಕ್ಕೂ ಹೆಚ್ಚು ಸ್ಪರ್ಶದ ಅನುಭವ ಆಗುತ್ತದೆ. ಅದರಿಂದ ಸ್ಟ್ರೆಸ್ ಹಾರ್ಮೋನು ಕಡಿಮೆಯಾಗಿ, ಇಬ್ಬರೂ ರಿಲ್ಯಾಕ್ಸ್ಡ್ ಆಗುತ್ತಾರೆ. ಹೀಗಾಗಿ ಪರಸ್ಪರರ ಕೈಯಲ್ಲಿ ನಿಮ್ಮ ಕೈಯನ್ನಿಡಲು ತಡ ಮಾಡದಿರಿ. ಈ ಸ್ಪರ್ಶದ ಆನಂದ ಅನುಭವಿಸಿ.