ಅನುಪ್ರಿಯಾ ಗೊಯನ್ಕಾ ನಟಿ

ಫ್ಯಾಷನ್‌ ಮಾಡೆಲ್‌ನಿಂದ ನಟನಾ ಕ್ಷೇತ್ರಕ್ಕೆ ಬಂದ ಅನುಪ್ರಿಯಾ ಗೊಯನ್ಕಾ ಕಾನ್ಪುರದಲ್ಲಿ ಹುಟ್ಟಿ, ದೆಹಲಿಯಲ್ಲಿ ಬೆಳೆದವರು. ಅವರ ಆರಂಭಿಕ ಜೀವನ ಬಹಳ ಏರಿಳಿತದಿಂದ ಕೂಡಿತ್ತು. ಆದರೆ `ಟೈಗರ್‌ ಝಿಂದಾ ಹೈ' ಚಿತ್ರದಲ್ಲಿ ನರ್ಸ್‌ ಪೂರ್ಣಾ ಪಾತ್ರ ಮತ್ತು `ಪದ್ಮಾವತ್‌' ಚಿತ್ರದಲ್ಲಿ ನಾಣಿ ನಾಗಮತಿಯ ಪಾತ್ರ ಅವರ ಐಡೆಂಟಿಟಿಯನ್ನೇ ಬದಲಿಸಿಬಿಟ್ಟಿತು.

ನಟನೆಯ ಕ್ಷೇತ್ರದಲ್ಲಿ ಬರುವ ಅಭಿಲಾಷೆಯ ಕುರಿತಂತೆ ಕೇಳಿದ ಪ್ರಶ್ನೆಗೆ ಅನುಪ್ರಿಯಾ ಹೀಗೆ ಹೇಳುತ್ತಾರೆ, ``ನಾನು ಬಿಸ್‌ನೆಸ್‌ಕುಟುಂಬದಿಂದ ಬಂದವಳು. ನನ್ನ ತಂದೆಯದು ಗಾರ್ಮೆಂಟ್‌ ಉದ್ದಿಮೆ. ಅವರ ಕೆಲಸದಲ್ಲಿ ನಾನೂ ಕೈಜೋಡಿಸುತ್ತಿದ್ದೆ. ಅದೇ ಅವಧಿಯಲ್ಲಿ ನಾನು ಕಾಲ್ ‌ಸೆಂಟರ್‌ನಲ್ಲಿ, ಬಳಿಕ ಕಾರ್ಪೊರೇಟ್‌ನಲ್ಲೂ ಕೆಲಸ ಮಾಡಿದೆ. ವಿದ್ಯಾರ್ಥಿನಿಯಾಗಿದ್ದಾಗ ನನಗೆ ಎನ್‌ಎಸ್‌ಡಿಯಲ್ಲಿ 1 ತಿಂಗಳು ವರ್ಕ್‌ಶಾಪ್‌ ಅಟೆಂಡ್‌ ಮಾಡುವ ಅವಕಾಶ ದೊರೆಯಿತು.

``ಅದರ ಪರಿಣಾಮ ನನ್ನ ಮೇಲೆ ಬಹಳ ದಿನಗಳ ಕಾಲ ಇತ್ತು. ರಂಗ ಚಟುವಟಿಕೆಯಲ್ಲೂ ಪಾಲ್ಗೊಳ್ಳಬೇಕೆಂಬುದು ನನ್ನ ಇಚ್ಛೆಯಾಗಿತ್ತು. ಆದರೆ ಕುಟುಂಬದ ಬಿಸ್‌ನೆಸ್‌ನ ಕಾರಣದಿಂದ ಓದನ್ನು ಅರ್ಧದಲ್ಲಿ ನಿಲ್ಲಿಸಿ ಬಿಸ್‌ನೆಸ್‌ನಲ್ಲಿ ಪಾಲ್ಗೊಂಡೆ. ಆದರೆ ಬಿಸ್‌ನೆಸ್‌ ನಡೆಯಲಿಲ್ಲ. ಆಗ ನಾನು ಕಾರ್ಪೊರೇಟ್‌ನಲ್ಲಿ ಕೆಲಸ ಮಾಡತೊಡಗಿದೆ, ಏಕೆಂದರೆ ಕುಟುಂಬದ ಜವಾಬ್ದಾರಿ ನನ್ನ ಮೇಲಿತ್ತು. ಆರ್ಥಿಕ ಪರಿಸ್ಥಿತಿ ಸುಧಾರಣೆಯ ಬಳಿಕ ನನಗಾಗಿ ಏನಾದರೂ ಮಾಡಬೇಕೆಂಬ ಇಚ್ಛೆ ನನ್ನಲ್ಲಿ ಮೊಳೆಯಿತು.''

ಪರಿಶ್ರಮದಲ್ಲಿ ಯಶಸ್ಸುರಂಗ ಚಟುವಟಿಕೆಯಲ್ಲಿ ತೊಡಗಿದ್ದಾಗ ಅನುಪ್ರಿಯಾ ಹಲವು ಬಾರಿ ಆಡಿಶನ್‌ ಕೊಡುತ್ತಿದ್ದರು. ಜಾಬ್‌ ಮತ್ತು ನಾಟಕ ಎರಡೂ ಕಠಿಣ ಎನಿಸುತ್ತಿದ್ದವು. ಆದರೆ ಅದನ್ನು ಮಾಡುವುದು ಅನಿವಾರ್ಯವಾಗಿತ್ತು. ಏಕೆಂದರೆ ಕುಟುಂಬದ ಗಾಡಿ ಓಡಬೇಕಿತ್ತು. ಇಂತಹದರಲ್ಲಿ ಅನುಪ್ರಿಯಾಗೆ ಆ್ಯಡ್‌ ಫಿಲ್ಮ್ ನಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. ಟಿ.ವಿ.ಯಲ್ಲಿ ಕೆಲಸ ಮಾಡಲು ಅವರಿಗೆ ಅಪೇಕ್ಷೆ ಇರಲಿಲ್ಲ. ಏಕೆಂದರೆ ಸಿನಿಮಾದಲ್ಲಿ ನಟಿಸಬೇಕೆನ್ನುವುದೇ ಅವರ ಮುಖ್ಯ ಧ್ಯೇಯವಾಗಿತ್ತು.

ಮುಂಬೈಗೆ ಬಂದ ಬಳಿಕ ಅಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳುವುದು ಕಷ್ಟವಾಗಿತ್ತು. ಇಲ್ಲಿಗೆ ಬಂದ ಬಳಿಕ ಸಂಬಂಧಿಕರ ಮನೆಯಲ್ಲಿ ಉಳಿದರು. ಬಳಿಕ ಮುಂಬೈ ಹತ್ತಿರದ ಠಾಣೆ ನಗರದಲ್ಲಿ ಮನೆ ಕೊಂಡುಕೊಂಡರು. ಆದರೆ ಅಲ್ಲಿಂದ ಪ್ರವಾಸ ಮಾಡುವುದು ಪ್ರಯಾಸದ ಸಂಗತಿಯಾಗಿತ್ತು. ಈ ಕುರಿತಂತೆ ಅವರು ಹೇಳುವುದು ಹೀಗೆ, ``ನಾನು ಮುಂಬೈಗೆ ಪರಿಚಿತಳಲ್ಲ. ಹೀಗಾಗಿ ಅಷ್ಟೊಂದು ದೂರ ಪ್ರತಿದಿನ ಲೋಕಲ್ ಟ್ರೇನ್‌ನಲ್ಲಿ ಪ್ರಯಾಣ ಮಾಡುವುದು ನನಗೆ ಸುಲಭದ ಸಂಗತಿ ಆಗಿರಲಿಲ್ಲ. ಆದರೆ ಕುಟುಂಬದಲ್ಲಿ ನಾನೊಬ್ಬಳೇ ಗಳಿಕೆ ಮಾಡುವವಳಾಗಿದ್ದರಿಂದ ನನಗೆ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇತ್ತು. ಇಂತಹದರಲ್ಲಿ ಕೆಲಸ ಬಿಟ್ಟು ಅಭಿನಯಕ್ಕೆ ಪ್ರಾಧಾನ್ಯತೆ ಕೊಡುವುದು ಸಾಧ್ಯವಿರಲಿಲ್ಲ.``ಗಾಡ್ ‌ಫಾದರ್‌ ಇಲ್ಲದೆಯೇ ಅವಕಾಶಗಳು ಸಿಗುವುದಿಲ್ಲ ಎನ್ನುವುದು ನಿಜ ಅಲ್ಲ. ನಿಮ್ಮಲ್ಲಿ ಪ್ರತಿಭೆ ಇದ್ದರೆ ದಾರಿ ಕಷ್ಟಕರವಲ್ಲ. ಈಗ ಎಲ್ಲ ಸಂಗತಿಗಳು ಪಾರದರ್ಶಕವಾಗಿವೆ. ಹೀಗಾಗಿ ಮುಂದೆ ಬರಲು ಸ್ವಲ್ಪ ಸಮಯ ತಗುಲಬಹುದು. ಆದರೆ ಕೆಲಸ ಸಿಗುವುದು ಕಷ್ಟವೇನಲ್ಲ.''

ಬಣ್ಣ ಮುಖ್ಯವಲ್ಲ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ