ರಜನಿ ಕಳೆದ 7-8 ತಿಂಗಳಿಂದ ತವರುಮನೆಯಲ್ಲಿ ಠಿಕಾಣಿ ಹೂಡಿದ್ದಾಳೆ. ಅವಳ ಮದುವೆ 5 ವರ್ಷಗಳ ಹಿಂದೆ ರಾಜೇಶ್‌ ಜೊತೆಗೆ ಅದ್ಧೂರಿಯಾಗಿ ನಡೆದಿತ್ತು. ರಾಜೇಶ್‌ ಒಬ್ಬ ಶಾಲಾ ಶಿಕ್ಷಕ. ರಜನಿ ಕೂಡ ಆಂಗ್ಲಭಾಷೆಯಲ್ಲಿ ಮಾಸ್ಟರ್‌ ಡಿಗ್ರಿ ಪಡೆದಿದ್ದಳು. ಮದುವೆಯಾದ ಕೆಲವೇ ತಿಂಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಶುರುವಾಯಿತು. ಎರಡೂ ಮನೆಯವರು ಅವರಿಗೆ ತಿಳಿವಳಿಕೆ ಹೇಳಿ ನೋಡಿದರು. ಆದರೆ ಅವರು ಅದಕ್ಕೆ ತಲೆಬಾಗಲು ಸಿದ್ಧರಿರಲಿಲ್ಲ. ಅದೊಂದು ದಿನ ಗಂಡ ಕೋಪದಲ್ಲಿ ಅವಳ ಮೇಲೆ ಕೈ ಎತ್ತಿದ. ಗಂಡ ತನ್ನ ಮೇಲೆ ಕೈ ಮಾಡಿದ ಎಂಬ ಕಾರಣದಿಂದ ಅವಮಾನ ತಡೆಯಲಾರದೆ ಅವಳು ಗಂಡನ ಮನೆ ಬಿಟ್ಟು ತವರಿಗೆ ಬಂದುಬಿಟ್ಟಳು.

ಅದೊಂದು ದಿನ ರಜನಿಯ ಅಣ್ಣನ ಮಗಳು ಸ್ನೇಹಾ ತನ್ನ ಅಮ್ಮನ ಮುಂದೆ, ``ಅಮ್ಮಾ, ನಮ್ಮ ಅತ್ತೆ ಮಹಾದೇವಿಯ ಪೂಜೆ ಏಕೆ ಮಾಡಬಾರದು? ಅದರಿಂದ ಅವರ ಎಲ್ಲ ದುಃಖ ಕಮ್ಮಿ ಆಗಬಹುದಲ್ವಾ?'' ಎಂದಳು.

ಪುಟ್ಟ ಹುಡುಗಿಯ ಮಾತುಗಳನ್ನು ಕೇಳಿ ಅವಳಮ್ಮನಿಗೆ ಆಶ್ಚರ್ಯವಾಯಿತು. ಆ ಬಳಿಕ ಅವರು ಮಗಳಿಗೆ, ``ನಿನಗೆ ಮಹಾದೇವಿಯ ಬಗ್ಗೆ ಏನು ಗೊತ್ತು?'' ಎಂದು ಅಚ್ಚರಿಯಿಂದ ಕೇಳಿದರು.``ನಾನು ಒಂದು ಧಾರಾವಾಹಿಯಲ್ಲಿ ನೋಡಿದೆ. ಒಬ್ಬಳು ದೇವಿಯ ಪೂಜೆ ಮಾಡುತ್ತಾಳೆ. ದೇವಿ ಅವಳ ಕಷ್ಟವನ್ನೆಲ್ಲ ನಿವಾರಣೆ ಮಾಡುತ್ತಾಳೆ. ಅತ್ತೆ ಕೂಡ ಹಾಗೆಯೇ ಪೂಜೆ ಮಾಡಿದರೆ ಅವರ ಕಷ್ಟಗಳು ನಿವಾರಣೆ ಆಗಬಹುದಲ್ಲವೇ?''

ಮೂಢನಂಬಿಕೆಯ ಜಾಲ

ವಿಜ್ಞಾನ ವಿಷಯದ 16 ವರ್ಷದ ವಿದ್ಯಾರ್ಥಿನಿ ಮೋನಿತಾ ತನ್ನ ತಾಯಿಯ ಬಳಿ, ``ಅಮ್ಮಾ, ನಾನು ಇನ್ಮುಂದೆ ಮುಟ್ಟಾದಾಗ ಯಾವುದೇ ಕೆಲಸ ಮಾಡೊಲ್ಲ, ದೇವರ ಕೋಣೆಗೂ ಹೋಗಲ್ಲ,'' ಎಂದಳು.

ಅದಕ್ಕೆ ಕಾರಣ ಕೇಳಿದಾಗ, ಒಂದು ಧಾರಾವಹಿಯಲ್ಲಿ ಹೀಗೆ ಮಾಡುವುದರಿಂದ ಬಹುದೊಡ್ಡ ಪಾಪ ತಗುಲುತ್ತದೆ, ನರಕಕ್ಕೂ ಹೋಗಬೇಕಾಗುತ್ತದೆ ಎಂದು ತೋರಿಸಲಾಗಿತ್ತು. ಮಗಳ ಮಾತನ್ನು ಕೇಳಿ ಅವರು ಚಕಿತರಾದರು. ಸ್ನೇಹಾ ಹಾಗೂ ಮೋನಿಕಾ ಅಷ್ಟೇ ಅಲ್ಲ, ಎಳೆಯ ವಯಸ್ಸಿನ ಸಾಕಷ್ಟು ಮಕ್ಕಳು ಧಾರಾವಾಹಿಗಳು ಪಸರಿಸುವ ಮೂಢನಂಬಿಕೆಯ ಜಾಲದಲ್ಲಿ ಸಿಲುಕಿದ್ದಾರೆ.

2013ನೇ ಸಾಲಿನಲ್ಲಿ ರಾಜಾಸ್ತಾನ ರಾಜ್ಯದ ಒಂದು ಪಟ್ಟಣದಲ್ಲಿ ಕುಟುಂಬವೊಂದು ಕೇವಲ ಧಾರ್ಮಿಕ ಧಾರಾವಾಹಿಗಳನ್ನಷ್ಟೇ ನೋಡುತ್ತಿತ್ತು. ಭಗವಾನ್‌ ಶಿವನನ್ನು ಕಾಣಲೇಬೇಕೆಂಬ ಇಚ್ಛೆಯಿಂದ 8 ಜನರು ವಿಷ ಸೇವಿಸಿದರು. ಅದರಲ್ಲಿ ಐವರು ಸತ್ತುಹೋದರು.

ಇಂದಿನ ಯುಗದಲ್ಲಿ ಟಿವಿ ಮನರಂಜನೆ ಅತ್ಯಂತ ಅಗ್ಗದ ಹಾಗೂ ಸುಲಭದಲ್ಲಿ ಲಭ್ಯವಾಗುವ ಸಾಧನವಾಗಿದೆ. ಪ್ರತಿಯೊಂದು ಮನೆಯ ಡ್ರಾಯಿಂಗ್‌ ರೂಮ್, ಬೆಡ್‌ ರೂಮುಗಳಲ್ಲಿ ಪ್ರತಿಷ್ಠಾಪನೆಗೊಳ್ಳು ಟಿವಿ, ಹೆಚ್ಚಾಗಿ ಮಹಿಳೆಯರನ್ನು, ಮಕ್ಕಳನ್ನು ತನ್ನ ಕಪಿಮುಷ್ಟಿಗೆ ಸೆಳೆದುಕೊಳ್ಳುತ್ತಿದೆ. ಪುರುಷರು ಅದಕ್ಕೆ ಮೋಹಿತರಾಗುವುದಿಲ್ಲ ಎಂದೇನಿಲ್ಲ. ಆದರೆ ಅವರು ತಮ್ಮ ಹೆಚ್ಚಿನ ಸಮಯವನ್ನು ನ್ಯೂಸ್‌ ಚಾನೆಲ್‌, ಸ್ಪೋರ್ಟ್ಸ್ ಚಾನೆಲ್‌ನಲ್ಲಿಯೇ ಕಳೆಯುತ್ತಾರೆ. ಇನ್ನು ಕೆಲವರು ಬಿಸ್‌ನೆಸ್‌ ಚಾನೆಲ್ ‌ನೋಡುತ್ತಾರೆ. ಒಂದು ವಾಸ್ತವ ಸಂಗತಿಯೆಂದರೆ, ಬಹಳಷ್ಟು ಪುರುಷರಿಗೆ ಟಿ.ವಿ. ನೋಡಲು ಸಮಯವೇ ಇರುವುದಿಲ್ಲ. ಆದರೆ ಮಕ್ಕಳು ಮತ್ತು ಮಹಿಳೆಯರು ಅದರಲ್ಲೂ ವಿಶೇಷವಾಗಿ ಗೃಹಿಣಿಯರು ಇದರ ಹೆಚ್ಚಿನ ಆಸಕ್ತರಾಗಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ