ಇದುವೇ ಅಸಲಿ ಆಗಿದ್ದರೆ....! :  ಇಲ್ಲಿ ದೈತ್ಯಾಕಾರದ ಕ್ಯಾಟರ್‌ ಪಿಲರ್‌ ಅಸಲಿ ಆಗಿದ್ದಿದ್ದರೆ, ಇಲ್ಲಿದ್ದವರೆಲ್ಲರೂ ಎದ್ದೆವೋ ಬಿದ್ದೆವೋ ಎಂದು ಓಡಿಹೋಗಿರುತ್ತಿದ್ದರು. ಅದು ಪಕ್ಕಾ ನಕಲಿಯಾದ್ದರಿಂದಲೇ ಸುಂದರಿಯರು ಅದರ ಬಳಿ ಬಂದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಹೆಣ್ಣಿನಷ್ಟೇ ಗಂಡಿಗೂ ಗ್ಲಾಮರ್‌ ಮುಖ್ಯ ಎಂದು ಈ ಚಿತ್ರ ಗಮನಿಸಿದರೆ ಗೊತ್ತಾಗುತ್ತದಲ್ಲವೇ.....?

samachar-darshan-2

ಆಹಾ.... ಇದು ನನ್ನದಾಗಿಬಾರದಿತ್ತೇ? : ಆಹಾ.... ಈ ಅಪರೂಪದ, ಅಮೋಘ ವಜ್ರವನ್ನು ನೋಡುತ್ತಿದ್ದರೆ ಬಾಯಲ್ಲಿ ಮಾತ್ರವಲ್ಲದೆ ಕಣ್ಣು, ಮೂಗಿನಲ್ಲೂ ನೀರೂರುತ್ತದೆ. ಇದಾವುದು ಅಂದಿರಾ? ಇದು ಅತಿ ದುಬಾರಿಯಾದ ಸನ್‌ ರೈಸ್‌ ಕೆಂಪು ವಜ್ರ, ಮ್ಯಾನ್ಮಾರ್‌ (ಬರ್ಮಾ) ಮೂಲದ ಇದರ ಬೆಲೆ ಎಷ್ಟಿರಬಹುದು ಅಂತೀರಾ? 70-80 ಲಕ್ಷ ಅಲ್ಲ, 70-80 ಕೋಟಿ ರೂ.ಗಳಿಗೂ ಮೀರಿದ್ದು!

ಹೊಸ ತಂತ್ರಜ್ಞಾನದ ಚಮತ್ಕಾರ :  ಇದೇನು....? ಅಂದಿನ ತ್ರೇತಾಯುಗದಲ್ಲೇ ಮೊಬೈಲ್ ‌ಇದ್ದಿರಬಹುದೇ ಎಂದು ಹುಬ್ಬೇರಿಸದಿರಿ. ಉ.ಭಾರತದ ಪ್ರಸಿದ್ಧ ಪೌರಾಣಿಕ ರಾಮ್ ಲೀಲಾ ಪಾತ್ರಧಾರಿಗಳಾದ ಲಕ್ಷ್ಮಣ ಹನುಮಂತರು ತಮ್ಮ ಮೊಬೈಲ್‌ನಲ್ಲಿ ಮೆಸೇಜ್‌ ನೋಡುತ್ತಿದ್ದಾಗ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ.

ರಸಿಕರ ದೃಷ್ಟಿಯಿಂದ ಮಿಸ್ಆಗದಿರಲು : ಇಷ್ಟೊಂದು ಕಂಗಳು.... ಅದೂ ಪರವಶಗೊಳಿಸುವ ಸಮ್ಮೋಹನಾಸ್ತ್ರ ಬೀರುತ್ತಾ! ಆದರೆ ಇದು ಬೇರೆ ಬೇರೆ ಅಲ್ಲ... ಒಂದೇ! ಅಸಲಿಗೆ ಇಲ್ಲಿ ನಡೆದಿರುವುದೇನೆಂದರೆ ಈ ಮಾಡೆಲ್ ತನ್ನ ಹ್ಯಾಟ್‌ನಲ್ಲೇ ಕಂಗಳ ಫೋಟೋಗಳನ್ನು ಅಳವಡಿಸಿಕೊಂಡು ಕ್ಯಾಟ್‌ ವಾಕ್‌ನಲ್ಲಿ ಹೀಗೆ ಮಿಂಚುತ್ತಿದ್ದಾಳೆ. ಹಾಗಾಗಿ ದೂರದೂರದಲ್ಲಿ ಕುಳಿತ ರಸಿಕ ಪ್ರೇಕ್ಷಕರಿಗೂ ಇವಳ ಕಣ್‌ದೃಷ್ಟಿ ಮಿಸ್‌ ಆಗದು. ಈಕೆ ಮಿಸ್‌ ದುಬೈ ಕೂಡ ಹೌದಂತೆ, ಕುದುರೆ ಜೂಜಿಗೆ ಬಂದವಳು ಎಷ್ಟು ಜನರನ್ನು ಬೇಸ್ತು ಬೀಳಿಸಿದಳೋ ಗೊತ್ತಿಲ್ಲ.

ಅತಿಯಾಸೆ ದುರಾಸೆಯಲ್ಲ... ಮಹತ್ವಾಕಾಂಕ್ಷೆ ! :  ವಿಶ್ವದ ಎಲ್ಲಾ ಶ್ರೀಮಂತರು ಹಾಗೂ ಅಧಿಕಾರವುಳ್ಳವರು ಅತಿಯಾಸೆ, ದುರಾಸೆಗಳ ಪ್ರಭಾವಕ್ಕೆ ಒಳಗಾಗದೆ ಇರಲಾರರು. ಜೊತೆಗೆ ಎಲ್ಲಾ ಮನ್ನಣೆ, ಗೌರವಾದರಗಳೂ ಅಂಥವರಿಗೇ ಸಲ್ಲುತ್ತವೆ. ಹೀಗಾಗಿ ಇತ್ತೀಚೆಗೆ ನ್ಯೂಯಾರ್ಕ್‌ನ ಒಂದು ಪೆರೇಡ್‌ನಲ್ಲಿ `ಅತಿಯಾಸೆ' (ಗ್ರೀಡ್‌)ಯನ್ನೇ ವೈಭವೀಕರಿಸಿ ಮೆರೆಸಲಾಯಿತು. ಯಾರಾದರೂ ಬಲವಂತವಾಗಿ ಗಂಟುಬಿದ್ದಾಗ, ಮೇಳ ತಾಳಗಳೊಡನೆ ಅದನ್ನು ಸಾರಬಾರದೇಕೆ?

samachar-darshan-6

ಹೆತ್ತಮ್ಮನನ್ನೇ ಕೊಂದದ್ದೇಕೆ? :  ಇಲ್ಲಿರುವ ಬಂಧಿ ಹ್ಯಾದರ್‌ ಮ್ಯಾಕ್‌. ಈಕೆ ಕೊಲೆ ಮಾಡಿದಳೆಂದು 15 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ, ಇವಳ ಹಸುಗೂಸು ಇವಳ ಬಳಿಯೇ 1 ವರ್ಷ ಇರುತ್ತದೆ. ಕೊಲೆ ಮಾಡಿದ್ದಾದರೂ ಯಾರನ್ನು? ಸ್ವಂತ ಹೆತ್ತಮ್ಮನನ್ನು. ಈ ಅಮೆರಿಕನ್‌ ಯುವತಿ ಅಮ್ಮನನ್ನು ಕೊಂದು, ಕತ್ತರಿಸಿ ಸೂಟ್‌ಕೇಸಿನಲ್ಲಿ ಹಾಕಿಕೊಂಡು ಎತ್ತಲೋ ಬಿಸಾಡಿ, ಕೊನೆಗೆ ಸಿಕ್ಕಿಬಿದ್ದಳು. ತಾಯಿ ಮಗಳಲ್ಲಿ ಅಂಥ ದ್ವೇಷವೇಕೆ ಎಂಬುದನ್ನು ಕೊನೆಗೂ ಅವಳು ಕೋರ್ಟಿಗೆ ಹೇಳಲೇ ಇಲ್ಲ.

samachar-darshan-7

ಇದು ಸವಿಯಲು ಅಲ್ಲ... ನೋಡಲು :   ಅಬ್ಬಬ್ಬಾ.... ಇಷ್ಟು ದೊಡ್ಡ ಗಾತ್ರದ ಬರ್ಗರ್ರೆ! ಆದರೆ ಇದು ತಿನ್ನಲು ಅಲ್ಲ ಬಿಡಿ, ಕೇವಲ ನೋಡಲಿಕ್ಕೆ. ಈ ಅದ್ಭುತ ಆರ್ಟ್‌ ಪೀಸ್‌ನ್ನು ಟಾಮ್ ಫ್ರೈಡ್‌ ಮ್ಯಾನ್‌ ಇತ್ತೀಚೆಗೆ ಇಟಲಿಯ ಮಿಲಾನ್‌ನಲ್ಲಿ ಪ್ರದರ್ಶನಕ್ಕಿಟ್ಟಿದ್ದರು.        

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ