ಕುಂಭಮೇಳ ಎನ್ನುವುದು ಪ್ರಪಂಚದ ಅತಿದೊಡ್ಡ ಧಾರ್ಮಿಕ ಮತ್ತು ಆಧ್ಯಾತ್ಮಿಕ ವೇದಿಕೆಯಾಗಿದ್ದು, ಪ್ರತಿ 12 ವರ್ಷಕ್ಕೊಮ್ಮೆ ಈ ಮೇಳ ನಡೆಯುತ್ತದೆ. ಈ ಆಚರಣೆಯ ಹಿಂದೆ ಸಮುದ್ರ ಮಂಥನಕ್ಕೆ ಸಂಬಂಧಿಸಿದ ಪೌರಾಣಿಕೆ ಹಿನ್ನಲೆಯಿದ್ದು, ಕ್ಷೀರ ಸಮುದ್ರದ ಮಧ್ಯೆ, ಕೂರ್ಮಾವತಾರದಲ್ಲಿದ್ದ ಭಗವನ್ ವಿಷ್ಣುವಿನ ಬೆನ್ನಿನ ಮೇಲೆ  ಕೈಲಾಸ ಪರ್ವತವನ್ನು ಕಡೆಗೋಲಾಗಿಸಿಕೊಂಡು ವಾಸುಕಿಯನ್ನು ಹಗ್ಗವನ್ನಾಗಿಸಿಕೊಂಡು ದೇವತೆಗಳು ಹಾಗೂ ಅಸುರರ ನಡುವೆ ಅಮೃತಕ್ಕಾಗಿ ಸಮುದ್ರ ಮಂಥನ ಮಾಡಿ,  ಅಂತಿಮವಾಗಿ ಪಡೆದ ಅಮೃತವನ್ನು ಹಂಚಿಕೊಳ್ಳಲು ಅವರಿಬ್ಬರ ನಡುವೆ ನಡೆದ ಯುದ್ದದಲ್ಲಿ ಅಮೃತವಿದ್ದ ಕೊಡದಿಂದ ನಾಲ್ಕು ಹನಿಗಳು ಪ್ರಯಾಗ, ಹರಿದ್ವಾರ, ಉಜ್ಜಯನಿ ಹಾಗು ನಾಸಿಕ್ ಪ್ರದೇಶಗಳಲ್ಲಿ ಬಿದ್ದ ಕಾರಣ  ಆ ಕ್ಷೇತ್ರಗಳು ಪುಣ್ಯಕ್ಷೇತ್ರಗಳಾಗಿ, ಪ್ರತೀ ಹನ್ನೆರಡು ವರ್ಷಕೊಮ್ಮೆ ಅಲ್ಲಿ ಕುಂಭ ಮೇಳವನ್ನು ನಡೆಸುವ ಸಂಪ್ರದಾಯ ಸಾವಿರಾರು ವರ್ಷಗಳಿಂದಲೂ ರೂಢಿಯಲ್ಲಿದೆ.

ಆ ಕುಂಭಮೇಳದ ಶುಭ ಲಗ್ನದಲ್ಲಿ ಅಲ್ಲಿ ಹರಿಯುವ ನದಿಗಳಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಮನುಷ್ಯರ ಎಲ್ಲಾ ಪಾಪಕರ್ಮಗಳೂ ಕಳೆದು ಶುದ್ಧಯಾಗುತ್ತಾರೆ ಮತ್ತು ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇರುವ ಕಾರಣ ಕುಂಭ ನಡೆಯುವ 45 ದಿನಗಳ ಕಾಲ  ದೇಶ ವಿದೇಶಗಳಿಂದ ಕೋಟ್ಯಾಂತರ ಭಕ್ತಾದಿಗಳಲ್ಲದೇ ಹಿಂದೂ ಧರ್ಮವನ್ನು  ಅನುಸರಿಸುವ ಸಾಧು ಸಂತರು ಅದರಲ್ಲೂ ವಿಶೇಷವಾಗಿ ಶಂಕರಾಚಾರ್ಯರಿಂದ ವಿಂಗಡಿಸಲ್ಪಟ್ಟ  ಸುಮಾರು 13 ಅಖಾಡಗಳಿಗೆ ಸೇರಿದ ಅಘೋರಿಗಳು, ನಾಗಾ ಸಾಧುಗಳು  ಹಠ ಯೋಗಿಗಳು  ಆ ಪುಣ್ಯಕ್ಷೇತ್ರಗಳಿಗೆ ಬಂದು ತಮ್ಮ ಭಕ್ತಿಯ  ಪರಾಕಾಷ್ಠೆಯನ್ನು ತೋರುವುದನ್ನು ನೋಡಲು ಸಹಾ ಲಕ್ಷಾಂತರ ಜನರು ಅಲ್ಲಿ ಸೇರುತ್ತಾರೆ. ಸಹಜವಾಗಿಯೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವ ಕಡೆಯಲ್ಲಿ ಕೋಟ್ಯಾಂತರ ರೂಪಾಯಿಗಳ ವ್ಯಾಪಾರ ವಹಿವಾಟುಗಳು ಸಹಾ ನಡೆಯುತ್ತದೆ. ಈ ಬಾರಿಯ  ಪ್ರಯಾಗ ರಾಜ್ ನಲ್ಲಿ  144 ವರ್ಷಗಳ ನಂತರ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೂ ಸಹಾ ನಿರೀಕ್ಷೆಗೂ ಮೀರಿ ಭಕ್ತಾದಿಗಳು, ಸಾಧು ಸಂತರು ದೇಶ ವಿದೇಶಗಳಿಂದ ಬರುತ್ತಿರುವ ಕಾರಣ ಒಂದು ಆಂದಾಜಿನ ಪ್ರಕಾರ ಸುಮಾರು 30 ಸಾವಿರ ಕೋಟಿಗಳಿಗೂ ಹೆಚ್ಚಿನ  ಆರ್ಥಿಕ  ವ್ಯಾಪಾರ ವಹಿವಾಟುಗಳು ಅಲ್ಲಿ ನಡೆಯುತ್ತವೆ ಎಂದು ಹೇಳಲಾಗುತ್ತಿದೆ.

ಹೀಗೆ 2025ರ ಜನವರಿ 13ರಂದು ಆರಂಭವಾದ ಕುಂಭ ಮೇಳ ಫೆಬ್ರವರಿ 26ರ ಶಿವರಾತ್ರಿಯವರೆಗೆ ನಡೆಯಲಿದ್ದು, ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ಆರಂಭವಾದ 7 ದಿನಗಳಲ್ಲಿಯೇ ದೇಶ ವಿದೇಶಗಳಿಂದ ಕೋಟ್ಯಾಂತರ ಸಂಖ್ಯೆಯಲ್ಲಿನ  ಭಕ್ತಾದಿಗಳು ಆಲ್ಲಿಗೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಸಹಜವಾಗಿಯೇ ಹಾಗೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಪೂಜಾ ಸಾಮನುಗಳು, ಧೋತಿ ವಸ್ತ್ರಗಳು ಮತ್ತು ಹಿಂದೂಗಳು ಭಕ್ತಿಯಿಂದ ಧರಿಸುವ ತುಳಸೀ/ರುದ್ರಾಕ್ಷಿ ಮಾಲೆಗಳು ವಿವಿಧ ಹರಳುಗಳುಳ್ಳ ಉಂಗುರಗಳನ್ನು ಮಾರುವ ವ್ಯಾಪಾರಿಗಳೂ ಸಹಾ ದೇಶ ವಿವಿಧ ಪ್ರದೇಶಗಳಿಂದ ತಮ್ಮ ಉದರ ಪೋಷಣೆಗಾಗಿ ಅಲ್ಲಿಗೆ ಆಗಮಿಸಿ ನಾಲ್ಕಾರು ಕಾಸನ್ನು ಸಂಪಾದಿಸಿಕೊಳ್ಳುತ್ತಿದ್ದಾರೆ.

 

ಸಾಧುಗಳು, ಸಂತರು, ನಾಗಸಾಧುಗಳು, ಆಸ್ತಿಕರಿಂದಲೇ ತುಂಬಿ ತುಳುಕುತ್ತಿರುವ ಈ  ಮಹಾ ಕುಂಭ ಮೇಳದಂತಹ ಪವಿತ್ರ ಧಾರ್ಮಿಕ ಸ್ಥಳದಲ್ಲಿ  ರುದ್ರಾಕ್ಷಿ ಮತ್ತು ತುಳಸೀ ಹಾರವನ್ನು ಮಾರುವ ಮಧ್ಯಪ್ರದೇಶದ ಇಂದೋರಿನ  ಮಹೇಶ್ವರ್ ಎಂಬ ಗ್ರಾಮಕ್ಕೆ ಸೇರಿರುವ ಹದಿ ಹರೆಯದ ಸುಂದರವಾದ ಹುಡುಗಿ ಇದ್ದಕ್ಕಿದ್ದಂತೆಯೇ ವಿಶೇಷವಾದ ಆಕರ್ಷಣೆಯ ಕೇಂದ್ರ ಬಿಂದುವಾಗಿರುವುದು ನಿಜಕ್ಕೂ ವಿಪರ್ಯಾಸವಾಗಿದ್ದು, ಕಳೆದ ಎರಡು ಮೂರು ದಿನಗಳಿಂದ  ಬಹುತೇಕ ಎಲ್ಲಾ ರೀತಿಯ  ಮಾಧ್ಯಮಗಳಲ್ಲಿಯೂ ಆಕೆಯ ಕುರಿತಾದ ಒಂದಲ್ಲಾ ಒಂದು ಸುದ್ದಿ ಪ್ರಸಾರವಾಗುತ್ತಿದ್ದರೆ ಇನ್ನು ಸಾಮಾಜಿಕ ಜಾಲತಾಣಗಳಲ್ಲಂತೂ ಆಕೆ ಸಾವಿರಾರು ವಿಡೀಯೋಗಳು ವೈರಲ್ ಆಗುತ್ತಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ