ಮನೆ ಮುಂದಿನ ವರಾಂಡಾದಲ್ಲಿ ವಯಸ್ಸಾದ ತಂದೆ, ಜೊತೆಗೆ ಮಗಳು ಕುಳಿತಿದ್ದರು. ಅಷ್ಟರಲ್ಲಿ ಅವಳ ಬಾಯ್‌ಫ್ರೆಂಡ್ ಅಲ್ಲಿಗೆ ಬಂದ.
ಹುಡುಗಿ : ನೀವು ರಾಮ್ ಪಾಲ್ ಯಾದವ್ ರ `ಡ್ಯಾಡ್ ಈಸ್ ಅಟ್ ಹೋಂ,' ಬುಕ್ ತಂದಿದ್ದೀರಾ?
ಹುಡುಗ : ಇಲ್ಲ. ನಾನು ಕೀಮತಿ ಆನಂದ್‌ರ `ವೇರ್ ಶುಡ್ ಐ ವೆಯ್ಟ್ ಫಾರ್ ಯೂ?' ತಂದಿದ್ದೇನೆ.
ಹುಡುಗಿ : ಬೇಡ ಬಿಡಿ, ನನ್ನ ಬಳಿ ಪ್ರೇಮ್ ವಾಜ್‌ಪೇಯಿ ಅವರ `ಅಂಡರ್ ದಿ ಮ್ಯಾಂಗೋ ಟ್ರೀ' ಪುಸ್ತಕ ಇದೆ.
ಹುಡುಗ : ಸರಿ. ನೀವು ಜೊತೆಗೆ ಆನಂದ್‌ಬಕ್ಷಿಯವರ `ಕಾಲ್‌ಯೂ ಇನ್ ಫೈವ್ ಮಿನಿಟ್ಸ್' ಸಹ ಓದಬೇಕು.
ಹುಡುಗಿ : ಆಯ್ತು. ಜೊತೆಗೆ ನಾನು ಜಾನ್‌ಅಬ್ರಹಾಮ್ ರ `ಐ ವೋಂಟ್ ಲೆಟ್ ಯೂ ಡೌನ್' ಸಹ ತರುತ್ತೀನಿ.
ಅದಾದ ಮೇಲೆ ಆ ಹುಡುಗ ಹುಡುಗಿಯ ತಂದೆಯ ಕಾಲಿಗೆ ವಿನಮ್ರವಾಗಿ ನಮಸ್ಕರಿಸಿ ಅಲ್ಲಿಂದ ಹೊರಟುಹೋದ. ಹುಡುಗಿಯ ತಂದೆ ಇವರಿಬ್ಬರ ಮಾತುಗಳನ್ನೂ ಗಮನವಿಟ್ಟು ಕೇಳುತ್ತಿದ್ದರು.
ತಂದೆ : ಅದೆಲ್ಲ ಸರಿ ಕಣಮ್ಮ, ಈ ಹುಡುಗ ಇಷ್ಟೊಂದು ಪುಸ್ತಕ ಓದುತ್ತಾನಾ ಅಂತ?
ಹುಡುಗಿ : ಹೌದಪ್ಪ, ಈ ಹುಡುಗ ನಮ್ಮ ಕ್ಲಾಸಿನ ವೆರಿ ಇಂಟೆಲಿಜೆಂಟ್ ಬಾಯ್, ಗೊತ್ತಾ?
ತಂದೆ : ಹೌದೇನಮ್ಮ......? ಹಾಗಾದರೆ ಈ ಹುಡುಗನಿಗೆ ಒಮ್ಮೆ ಮುಂಶಿ ಪ್ರೇಮ್ ಚಂದ್‌ರ `ಓಲ್ಡ್ ಮೆನ್ ಆರ್ ನಾಟ್ ಸ್ಟುಪಿಡ್' ಸಹ ಓದಬೇಕು ಅಂತ ಹೇಳು.
ಪುಟ್ನಂಜಿಗೆ ಜ್ವರ ಬಂತೆಂದು ಗುಂಡ ಅವಳನ್ನು ಡಾಕ್ಟರ್‌ಬಳಿ ಕರೆದೊಯ್ದ. ಸದಾ ಬಡಬಡ ಎಂದು ಬಾಯಿ ಮಾಡುವ ಪುಟ್ನಂಜಿ ಬಾಯಿಗೆ ಥರ್ಮಾಮೀಟರ್ ತುರುಕಿದ ಡಾಕ್ಟರ್ ಅವಳನ್ನು 5 ನಿಮಿಷ ಹಾಗೇ ಇರುವಂತೆ ಕೂರಿಸಿದರು. ಮೌನವಾಗಿರುವ ಹೆಂಡತಿಯನ್ನು ಗಮನಿಸಿ ಗುಂಡ ದಂಗಾದ.
ಮುಗ್ಧನಾದ ಗುಂಡ ತಕ್ಷಣ ವೈದ್ಯರನ್ನು ಪ್ರಶ್ನಿಸಿದ, ``ಸಾರ್, ನಮಗೆ ಬೇಕಾದಾಗೆಲ್ಲ ಇದನ್ನು ಇವಳ ಬಾಯಿಗಿರಿಸಿ ಹೀಗೆ ಪರೀಕ್ಷಿಸಬಹುದೇ?'' ಎಂದು ಕೇಳುವುದೇ?
ಹುಡುಗಿ : ನಿನಗೆ ಗೊತ್ತೇ? ಹೆಂಗಸರು ದಿನ ಮ್ಯಾಚಿಂಗ್ ಡ್ರೆಸ್ ಬದಲಾಯಿಸುವ ಹಾಗೆ ತಮ್ಮ ಸಾಕ್ಸ್ ಕೂಡ ಬದಲಾಯಿಸುತ್ತಾರೆ.
ಹುಡುಗ : ಅದೇ ಗಂಡಸರು ತಮ್ಮ ಸಾಕ್ಸ್ ಮೂಸಿ ನೋಡಿ, ಬಹುಶಃ ಈ ದಿನ ಇದರಲ್ಲಿ ನಿಭಾಯಿಸಬಹುದು ಅನ್ಸುತ್ತೆ, ಅಂದುಕೊಳ್ತಾರೆ.
ನೋವು ಬೆರೆತ ಹಾಸ್ಯ ವೈವಾಹಿಕ ಜೀವನದ ಮೊದಲ ವರ್ಷ. ಹೊಸದಾಗಿ ಮದುವೆಯಾದ ಖುಷಿಯಲ್ಲಿ ದಿನ ಬೇಗ ಬೇಗ ಕಳೆದು ಹೋಗುತ್ತಿತ್ತು. ಪತಿರಾಯ ಬೆಳಗ್ಗೆ ಬೇಗ ಆಫೀಸ್‌ಗೆ ಹೊರಡುವ ಆತುರದಲ್ಲಿ ಶೇವಿಂಗ್ ಮಾಡಿಕೊಳ್ಳುವಾಗ ಬ್ಲೇಡ್ ತಗುಲಿ ತುಸು ರಕ್ತ ಚಿಮ್ಮಿತು. `ಹ್ಞಾಂ' ಎಂದು ನರಳಿದ.
ಅದನ್ನು ಕೇಳಿಸಿಕೊಂಡು ಪತ್ನಿ ಅಡುಗೆಮನೆಯಿಂದ ಒಂದೇ ಓಟ ಓಡಿ ಬಂದಳು, ``ಏನಾಯ್ತು ಡಾರ್ಲಿಂಗ್?'' ಏದುಸಿರು ಬಿಡುತ್ತಾ ಕೇಳಿದಳು.
``ಏನಿಲ್ಲ ಡಿಯರ್..... ತುಸು ಬ್ಲೇಡ್ ತಗುಲಿತು ಅಷ್ಟೇ,'' ಅವಳು ಓಡಿಹೋಗಿ ಬೇಗ ಡೆಟಾಲ್ ಹಿಡಿದು ಬಂದಳು.
``ಛೇ....ಛೇ! ಎಷ್ಟು ರಕ್ತ ಬರ್ತಿದೆ ಅಂತೀನಿ.... ಇವತ್ತು ಆಫೀಸ್‌ಗೆ ಹೋಗಬೇಡಿ, ರಜ ಹಾಕಿ ವಿಶ್ರಾಂತಿ ಪಡೆಯಿರಿ. ಒಂದಿಷ್ಟು ಆ್ಯಪಲ್ ಕಟ್ ಮಾಡಿಕೊಡ್ತೀನಿ. ಹಸಿರು ಸೊಪ್ಪಿನ ಅಡುಗೆ, ಬೀಟ್‌ರೂಟ್ ಜೂಸ್ ಕುಡಿದರೆ ರಕ್ತ ಬೇಗ ಕೂಡಿಕೊಳ್ಳುತ್ತೆ,'' ಎಂದು ಗಂಡನ ಗಲ್ಲಕ್ಕೆ ಬ್ಯಾಂಡೇಜ್ ಹಾಕಿದಳು.