ಬದಲಾಗಿರುವ ಇಂದಿನ ಯಾಂತ್ರಿಕ ಯುಗದಲ್ಲಿ ಮಹಿಳೆಯರು ವೇಗದ ಬದುಕಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಈ ಅನಿವಾರ್ಯತೆಗಳಲ್ಲಿ ವಾಹನ ಚಾಲನೆಯೂ ಒಂದು. ಅದು ದ್ವಿಚಕ್ರ ವಾಹನವಾಗಿರಬಹುದು ಅಥವಾ ಕಾರು, ಜೀಪುಗಳಾಗಿರಬಹುದು. ಇವುಗಳ ಚಾಲನೆ ಸಮಯದಲ್ಲಿ ಅರಿವಿದ್ದೋ ಅಥವಾ ಅರಿವಿಲ್ಲದೆಯೋ ಕೆಲವು ಮುಂಜಾಗ್ರತಾ ಕ್ರಮಗಳನ್ನು ಸಾಮಾನ್ಯವಾಗಿ ಮರೆತುಬಿಡುತ್ತಾರೆ. ಇತ್ತೀಚೆಗಂತೂ ಕೆಲವು ಹುಡುಗಿಯರು ತಮ್ಮ ಸ್ನೇಹಿತರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತ ಗಾಡಿ ಚಲಾಯಿಸುತ್ತಾ ಅಪಘಾತಕ್ಕೀಡಾಗುವುದನ್ನು ಕಂಡಾಗ ಹುಡುಗಿಯರಿಗೆ ಡ್ರೈವಿಂಗ್ ಎಷ್ಟು ಸೇಫ್‌....? ಎನ್ನುವ ಪ್ರಶ್ನೆ ಮೂಡುತ್ತದೆ. ಈಗಿನ ಕಾಲೇಜು ಹುಡುಗಿಯರಿಗಂತೂ ಮೊಬೈಲ್ ‌ತಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿದೆ. ಒಂದು ಕ್ಷಣ ಮೊಬೈಲ್ ‌ಬಿಟ್ಟಿರಲಾರದಷ್ಟೇ ಅವಿನಾಭಾವ. ಹಾಗಾಗಿ ಗಾಡಿ ಓಡಿಸುವಾಗ ಇಯರ್ ಫೋನಿನಲ್ಲಿ ಮಧುರವಾದ ಹಾಡು ಕೇಳುತ್ತಾ ತಮ್ಮದೇ ಆದ  ಭ್ರಮಾಲೋಕದಲ್ಲಿ ತೇಲಾಡುತ್ತ ಸಾಗುವುದು ಇಂದಿನ ಫ್ಯಾಷನ್ ಎನಿಸಿಕೊಂಡಿದೆ. ಹಾಡು ಕೇಳಿದರಷ್ಟೇ ಗಾಡಿ ಓಡಿಸಲು ಸ್ಛೂರ್ತಿ ಎನ್ನುವಂತಾಗಿದ್ದು, ಈ ಹವ್ಯಾಸ ಅಪಘಾತಕ್ಕೆ ಆಹ್ವಾನವಿತ್ತಂತೆ.

ಇನ್ನು ಕಾರು ಚಲಾಯಿಸುವ ಹುಡುಗಿಯರಂತೂ ಒಂದು ಕೈಯಲ್ಲಿ ಸ್ಟೇರಿಂಗ್‌ ಇನ್ನೊಂದು ಕೈಯಲ್ಲಿ ಮೊಬೈಲ್ ‌ಹಿಡಿದುಕೊಂಡು ಮಾತನಾಡುತ್ತಲೋ ಅಥವಾ ಮೇಕಪ್‌ ಮಾಡಿಕೊಳ್ಳುವಲ್ಲಿ ಮಗ್ನರಾಗಿರುತ್ತಾರೆ. ಅಷ್ಟೇ ಅಲ್ಲ ಕೆಲವು ಹುಡುಗಿಯರು ಅವಸರದಲ್ಲಿ ಮನೆಯಿಂದ ಹೊರಟು ಡ್ರೈವಿಂಗ್‌ ಮಾಡುತ್ತಲೇ ಕಾರಿನಲ್ಲಿ ತಿಂಡಿ ಕೂಡ ಮುಗಿಸಿಬಿಡುತ್ತಾರೆ. ಆದರೆ ಇದು ಸರಿಯಾದ ರೀತಿಯಲ್ಲ. ಇದರಿಂದ ಅಪಘಾತವಾಗುವ ಸಂಭವವೇ ಹೆಚ್ಚು. ಹಾಗೆಯೇ ದ್ವಿಚಕ್ರ ವಾಹನ ಚಲಾಯಿಸುವ ಬಹುತೇಕ ಹುಡುಗಿಯರು ಒಂದೋ ಸೀರೆ ಉಟ್ಟಿರುತ್ತಾರೆ, ಇಲ್ಲವೇ ಚೂಡಿದಾರ್‌ ಧರಿಸಿರುತ್ತಾರೆ. ಸೀರೆಯ ಸೆರಗಿನ ಅಂಚು ಚಕ್ರಕ್ಕೆ ಸಿಲುಕಬಹುದು ಅಥವಾ ಚೂಡಿದಾರ್‌ ದುಪಟ್ಟಾ ಗಾಡಿಗೆ ಸಿಲುಕಿದಲ್ಲಿ ಅದೂ ಗಂಭೀರ ಸ್ವರೂಪದ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ.

ಈಗಾಗಲೇ ಹಲವಾರು ಮಹಿಳೆಯರು ಸೀರೆ, ದುಪಟ್ಟಾ ಗಾಡಿಗೆ ಸಿಲುಕಿ ಗಂಭೀರ ಗಾಯ, ಶಾಶ್ವತ ಅಂಗವಿಕಲತೆ ಕೆಲವೊಮ್ಮೆ ಮಾರಣಾಂತಿಕ ಹಂತ ತಲುಪಿ, ಸಾವನ್ನಪ್ಪಿದ ಉದಾಹರಣೆಗಳೂ ನಮ್ಮ ಕಣ್ಣ ಮುಂದಿದೆ.

ಇನ್ನು ಕೆಲವು ತಾಯಂದಿರು ತಮ್ಮದೇ ಗಡಿಬಿಡಿಯಲ್ಲಿ ಒಂದೇ ಸಮಯದಲ್ಲಿ ಎರಡೆರಡು ಕೆಲಸ ಮಾಡಲು ಮುಂದಾಗುತ್ತಾರೆ. ಒಂದು ಕೈಯಲ್ಲಿ ಮಗುವನ್ನು ಎತ್ತಿಕೊಂಡು, ಇನ್ನೊಂದು ಕೈಲಿ ಗಾಡಿ ಓಡಿಸುವ ದೃಶ್ಯ ಕಾಣಬಹುದು. ಇದು ಎಷ್ಟೊಂದು ಅಪಾಯಕಾರಿ ಚಾಲನೆ ಎನ್ನುವುದು ಅವರಿಗೆ ಅರಿವಿರುವುದಿಲ್ಲ. ಕ್ಲುಪ್ತ ಸಮಯದಲ್ಲಿ ತನ್ನ ಕೆಲಸವನ್ನು ಮಾಡಿ ಮುಗಿಸಬೇಕೆನ್ನುವ ಧಾವಂತ. ಇನ್ನು ಕೆಲವು ಮಹಿಳೆಯರಂತೂ ತಮ್ಮ ಸುಂದರವಾದ ಕೇಶರಾಶಿ ಎಲ್ಲಿ ಹಾಳಾಗುತ್ತೋ ಎನ್ನುವ ಚಿಂತೆಯಲ್ಲಿ ಹೆಲ್ಮೆಟ್ ಧರಿಸುವುದೇ ಇಲ್ಲ. ಹೆಲ್ಮೆಟ್‌ ಧರಿಸದೆ ಗಾಡಿ ಚಲಾಯಿಸುವ ಇವರಿಗೆ ಪ್ರಾಣಕ್ಕಿಂತ ಕೇಶದ ಕುರಿತು ಕಾಳಜಿ ಮುಖ್ಯವಾಗಿ ಇರುತ್ತದೆ. ಹೆಲ್ಮೆಟ್‌ ಧರಿಸದೇ ಗಾಡಿ ಚಲಾಯಿಸುವುದು ಕಾನೂನಿನ ಪ್ರಕಾರ ಅಪರಾಧ ಎನ್ನುವ ಸಾಮಾನ್ಯ ಅರಿವಿಲ್ಲದೆ `ನಮ್ಮ ಗಾಡಿ ನಾವು ಹೇಗಾದರೂ ಓಡಿಸ್ತೀವಿ ನಿಮಗೇನು?' ಎಂದು ದೌಲತ್ತಿನಿಂದಲೇ ಸಾಗುತ್ತಿರುತ್ತಾರೆ. ಇನ್ನು ಕೆಲವು ಯುವತಿಯರು ಸಿಗ್ನಲ್ ಜಂಪ್‌ ಮಾಡುವ ಚಾಳಿ ಬೆಳೆಸಿಕೊಂಡಿರುತ್ತಾರೆ. ಅಷ್ಟು ಸಾಲದೆಂಬಂತೆ ರಾಂಗ್‌ ರೂಟಿನಲ್ಲಿ ಗಾಡಿ ಚಲಾಯಿಸಿಕೊಂಡು ಬಂದು ಹಲ್ಲು ಕಿರಿಯುವುದನ್ನು ಕಾಣಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ