ನಮ್ಮೆಲ್ಲರಿಗೂ ತಿಳಿದಿರುವಂತೆ ಶ್ರೀರಾಮ ಅಯೋಧ್ಯೆಯ ಮೂಲದವನು ಮತ್ತು ವನವಾಸದಲ್ಲಿದ್ದಾಗ ಕಳೆದು ಹೋದ ತನ್ನ ಪತ್ನಿಯನ್ನು ಹುಡುಕುತ್ತ ದಕ್ಷಿಣ ಭಾಗದಲ್ಲಿ ಬರುತ್ತಿದ್ದಾಗ ಅವನಿಗೆ ಈಗಿನ ವಿಜಯನಗರ ಸಾಮ್ರಾಜ್ಯದ ಹಂಪೆಯ ಹತ್ತಿರವಿರುವ ಆನೆಗುಂದಿ ಬಳಿಯ ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ಪರಿಚಯವಾಗಿ ಸೀತಾ ಮಾತೆಯನ್ನು ಹುಡುಕಲು ಸಹಕರಿಸಿ, ಲಂಕಾ ದಹನ ಮಾಡಿ, ರಾಮ ರಾವಣರ ಯುಧ್ಧದಲ್ಲಿ ಪ್ರಮುಖ ಪಾತ್ರವಹಿಸಿ ಕಡೆಗೆ ರಾಮ ಸೀತೆಯರನ್ನು ತನ್ನ ಹೃದಯದಲ್ಲೇ ಪ್ರತಿಷ್ಠಾಪನೆಗೊಳಿಸಿ ಕೊಂಡವನು. 

ಇಂದು ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ. ಇದೇ ದಿನ ರಾಮನ ಪರಮ ಭಕ್ತ ಅಂಜನಿಯ ಪುತ್ರ ಆಂಜನೇಯನು ಹುಟ್ಟಿದ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿರುವ ಪರಿಣಾಮ ದೇಶಾದ್ಯಂತ ಇಂದು ಬಹಳ ಸಂಭ್ರಮ ಸಡಗರಗಳಿಂದ ಹನುಮ ವರ್ಧಂತಿಯನ್ನು ಆಚರಿಸಲಾಗುತ್ತದೆ. ಅರೇ ಇದೇನು? ಎಲ್ಲರೂ ಹನುಮ ಜಯಂತಿ ಎಂದು ಹೇಳುವಾಗ, ಇದೇನೂ ವರ್ಧಂತಿ? ಎಂದು ಅಚ್ಚರಿ ಪಟ್ಟರೆ, ಮೃತಪಟ್ಟವರ ಹುಟ್ಟಿದ ಹಬ್ಬವನ್ನು ಜಯಂತಿ (ಗಾಂಧಿ ಜಯಂತಿ) ಎಂದು ಆಚರಿಸುತ್ತೇವೆ ಮತ್ತು ಬದುಕಿದ್ದವರ ಆಯಸ್ಸು ವೃದ್ಧಿಯಾಗುವ ಸಲುವಾಗಿ ವರ್ಧಂತಿ ಎಂದು ಆಚರಿಸುತ್ತೇವೆ. ಹನುಮಂತ ಚಿರಂಜೀವಿ ಆದ ಕಾರಣ ಆತನಿಗೆ ಸಾವಿಲ್ಲ. ಹಾಗಾಗಿ ಇಂದಿನ ದಿನವನ್ನು ಹನುವ ವರ್ಧಂತಿ ಎನ್ನುವುದೇ ಸೂಕ್ತ. ಹನುಮಂತನ ಆರಾಧ್ಯ ದೈವ ಪ್ರಭು ಶೀರಾಮಚಂದ್ರ ಚೈತ್ರ ಮಾಸ ಶುದ್ಧ ನವಮಿಯಂದು ಜನಿಸಿದರೆ ಅವನ ಪರಮ ಭಕ್ತ ಹನುಮಂತ ಅದೇ ಹುಣ್ಣಿಮೆಯಂದು ಜನಿಸಿರುವ ಮೂಲಕ ಇಲ್ಲೂ ಗುರು ಶಿಷ್ಯರ ಅವಿನಾಭಾವ ಸಂಬಂಧಕ್ಕೆ ಜ್ವಲಂತ ಉದಾಹರಣೆಯಾಗಿದ್ದಾರೆ.

ಅದೇಕೋ ಏನು ಹನುಮನ ಕುರಿತು ನಾನಾ ಜಿಜ್ಞಾಸೆಗಳು ನಮ್ಮಲ್ಲಿವೆ. ಕೆಲವೊಬ್ಬರ ಪ್ರಕಾರ ಹನುಮ ಹುಟ್ಟಿದ್ದು ಕಾರ್ತಿಕ ಕೃಷ್ಣ ಚತುರ್ದಶಿ ಎಂದರೆ ಆಂಧ್ರ ಪ್ರದೇಶದ ತೆಲಂಗಾಣದವರು ವೈಶಾಖ ಶುದ್ಧ ಪೌರ್ಣಮಿಯಂದು ಆಚರಿಸಿದರೆ, ತಮಿಳುನಾಡಿನಲ್ಲಿ ಮಾರ್ಗಶಿರ ಅಮಾವಾಸ್ಯೆಯಂದು ಆಚರಿಸುತ್ತಾರಾದರು ಕರ್ನಾಟಕ ಮತ್ತು ದೇಶಾದ್ಯಂತ ಚೈತ್ರ ಶುಕ್ಲ ಹುಣ್ಣಿಮೆಯಂದು ಆಚರಿಸುವ ಸಂಪ್ರದಾಯವಿದೆ.

anjanadri

ಇನ್ನು ಐತಿಹ್ಯದ ಮತ್ತು ಪುರಾಣ ಶಾಸ್ತ್ರಗಳ ಪ್ರಕಾರ ಹನುಮಂತ ಹುಟ್ಟಿದ್ದು ಕರ್ನಾಟಕದ ಐತಿಹಾಸಿಕ ಹಂಪಿ ಬಳಿ ಇರುವ ಕಿಷ್ಕಿಂಧೆಯ ಅಂಜನಾದ್ರಿ ಬೆಟ್ಟದಲ್ಲಿ ಎಂದು ಸಹಸ್ರಾರು ವರ್ಷಗಳಿಂದಲೂ ನಂಬಿಕೊಂಡು ಬರಲಾಗಿದೆ ಅದಕ್ಕೆ ಪುರಾವೆಯಾಗಿ ಪಂಪ ಸರೋವರ, ವಾಲಿ ಸುಗ್ರೀವನು ರಾಜನಾಗಿದ್ದ ಸ್ಥಳ ಕಿಷ್ಮಿಂದೆ ಹನುಮಂತನ ತಂದೆ ಕೇಸರಿಯು ಮತ್ತು ತಾಯಿ ವಾಸವಾಗಿದ್ದ ಅಂಜನಾದ್ರಿ ಬೆಟ್ಟ ಎಲ್ಲವೂ ಪೂರಕವಾಗಿ ಸಾಕ್ಷಿಯಾಗಿದೆ. ಇನ್ನೂ ಕೆಲವರು ಗೋಕರ್ಣದ ಬಳಿ ಆಂಜನೇಯ ಹುಟ್ಟಿದ ಎಂದು ಹೇಳಿದರೆ, ಮತ್ತೆ ಕೆಲವರ ಪ್ರಕಾರ ಗುಜರಾತ್‌ನ ಡಾಂಗ್‌ ಜಿಲ್ಲೆಯ ಗುಹೆಯಲ್ಲಿ ಅಂಜನಿಗೆ ಪುತ್ರನಾಗಿ ಆಂಜನೇಯನು ಜನಿಸಿದನೆಂದು ಹೇಳಲಾಗುತ್ತದೆ. ಇವೆಲ್ಲದರ ಮಧ್ಯೆ ಹಿಂದೂಗಳ ಶ್ರದ್ಧಾ ಕೇಂದ್ರ ಸಪ್ತಗಿರಿಯ ಬೆಟ್ಟಗಳಲ್ಲಿ ಕ್ರೈಸ್ತರ ಚರ್ಚುಗಳನ್ನು ಮತ್ತು ಮುಸಲ್ಮಾನರ ಶ್ರದ್ಧಾಕೇಂದ್ರವನ್ನು ಬೆಳೆಯಲು ಅನುವು ಮಾಡಿಕೊಟ್ಟಿರುವ ಟಿಟಿಡಿ ತಿರುಪತಿಯೇ ಆಂಜನೇಯಮ ಜನ್ಮಸ್ಥಾನ ಎಂಬಾ ವರಾತೆ ತೆಗೆದಿರುವುದು ನಿಜಕ್ಕೂ ಆಶ್ಚರ್ಯವಾಗಿದೆ. ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ಎಲ್ಲರಿಗೂ ಹನುಮ ನಮ್ಮವನೇ ಎಂಬ ಪ್ರೀತಿ ಈ ಮೂಲಕ ವ್ಯಕ್ತವಾಗುತ್ತಿದೆ.

ಒಟ್ಟಿನಲ್ಲಿ ಪ್ರಭು ಶ್ರೀರಾಮನನ್ನು ಒಲಿಸಿಕೊಳ್ಳಲು ಅವನ ಪರಮ ಭಕ್ತನಾದ ಆಂಜನೇಯನನ್ನು ಆರಾಧನೆ ಮಾಡುವುದೇ ಉತ್ತಮ ಎಂದು ಭಾವಿಸಿದಂತಿದೆ. ಎಲ್ಲಿ ಹನುನೋ ಅಲ್ಲಿ ರಾಮನು. ರಾಮನ ಉಸಿರೇ ಹನುಮ. ಹನುಮನ ಪ್ರಾಣವೇ ರಾಮಾ.. ಎನ್ನುವಂತೆ ಹನುಮ ಜಯಂತಿಯ ದಿನ ಶ್ರೀ ರಾಮನ ಆರಾಧನೆಯನ್ನೂ ಅತ್ಯಂತ ವೈಭವೋಪೇತವಾಗಿ ಮಾಡಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ