ಪತಿ : ನೀನೇಕೆ ಸದಾ ಹೀಗೆ ಜಗಳ ಆಡ್ತೀಯಾ? ಯಾವಾಗಲೂ ನನ್ನ ಮಾತುಗಳಲ್ಲಿ ಏನಾದರೊಂದು ಕೊರತೆ ಹುಡುಕುತ್ತಾ ಖಂಡಿಸುತ್ತೀಯಲ್ಲ...... ಹೀಗೇಕೆ?

ಪತ್ನಿ : ಅಸಲಿಗೆ ನಮ್ಮಿಬ್ಬರ ಮೊದಲ ಭೇಟಿ ಆಗಿದ್ದೇ ಕಾಲೇಜಿನ ವಾದ ವಿವಾದದ ಪೈಪೋಟಿಯಲ್ಲಲ್ಲವೇ? ಅದಕ್ಕೆ ಅದು ಅಭ್ಯಾಸವಾಗಿದೆ.

 

ಪತ್ನಿ ಬಹಳ ಪ್ರೀತಿಯಿಂದ ತನ್ನ ಪತಿಯನ್ನು ರಮಿಸುತ್ತಾ ಹೇಳಿದಳು, ``ಡಿಯರ್‌, ನಾವಿಬ್ಬರು ಪ್ರತಿ ಜನುಮದಲ್ಲೂ ಹೀಗೆ ಪರಸ್ಪರ ಭೇಟಿಯಾಗುತ್ತಾ ಒಂದಾಗಿರೋಣ. ಹೀಗೆ ಪ್ರತಿ ಜನುಮದಲ್ಲೂ ಪ್ರೀತಿ ಮಾಡುತ್ತಿರೋಣ.....''

ಪತಿ ದೀರ್ಘ ನಿಟ್ಟುಸಿರುಬಿಡುತ್ತಾ ಹೇಳಿದ, ``ಅದೆಲ್ಲ ಸರಿ ಬಿಡು, ನೀನು ಈ ಜನುಮದಲ್ಲಿ ನನ್ನ ಬೆನ್ನು ಹತ್ತುವುದನ್ನು ಬಿಟ್ಟರೆ ತಾನೇ ನಾವು ಮುಂದಿನ ಜನುಮದಲ್ಲಿ ಮತ್ತೆ ಭೇಟಿಯಾಗಲು ಸಾಧ್ಯ?''

 

ಬಹಳ ದಿನಗಳಿಂದ ಆಸ್ಪತ್ರೆಯಲ್ಲಿ  ಅಡ್ಮಿಟ್‌ ಆಗಿದ್ದ ರಾಮು ಕೊನೆಗೆ ಓ.ಟಿ.ಗೆ ಹೊರಡುವ ಘಳಿಗೆ ಬಂದಿತು.

ರಾಮು : ನನಗೆ ಆಪರೇಷನ್‌ ಅಂತ ಗಾಬರಿ ಆಗ್ಬೇಡ. ಅಕಸ್ಮಾತ್‌ ಆಪರೇಷನ್‌ ಮಧ್ಯೆ ನಾನು ಸತ್ತುಹೋದ್ರೆ ನೀನೊಂದು ಕೆಲಸ ಮಾಡ್ಬೇಕು.

ರೇಖಾ : ಹಾಗೆಲ್ಲ ಹೇಳಬೇಡಿ.... ಆದರೂ ಅದೇನೂಂತ ಹೇಳಿ.

ರಾಮು : ನಾನು ಸತ್ತುಹೋದರೆ ನೀನು ನನಗೆ ಆಪರೇಷನ್‌ ಮಾಡಿದ ಆ ಡಾಕ್ಟರ್‌ನ್ನೇ ಮದುವೆ ಆಗಬೇಕು.

ರೇಖಾ : ಹಾಗೇಕೆ ಹೇಳ್ತಿದ್ದೀರಿ?

ರಾಮು : ಇನ್ನೇನು....? ಡಾಕ್ಟರ್‌ನ್ನು ಹಾಗೇ ಕ್ಷಮಿಸಿಬಿಡಲೇ?

 

ಹೊಸದಾಗಿ ಮದುವೆಯಾಗಿದ್ದ ಗುಂಡನಿಗೆ ಹೆಂಡತಿ ಮೊದಲು ಮಾಡಿದ ಪಲಾವ್ ತಂದಿಟ್ಟು ನಾಚಿಕೊಳ್ಳುತ್ತಾ, ಸವಿಯಲು ಹೇಳಿದಳು. ಒಂದು ಚಮಚ ಬಾಯಿಗಿಟ್ಟ ಗುಂಡ ಥಟ್ಟನೇ ಸಿಡುಕಿದ, ``ಇದೇನು ಕರ್ಮ? ಒಳ್ಳೆ ಗೊಬ್ಬರ ತರಹ ಮಾಡಿದ್ದೀಯಲ್ಲ....''

``ಛೇ...ಛೇ... ನೀವು ಬ್ಯಾಚುಲರ್‌ ಆಗಿದ್ದಾಗ ಅದನ್ನೂ ಬಿಟ್ಟವರಲ್ಲ ಅಂತ ನನಗೆ ಹೇಗೆ ಗೊತ್ತಾಗಬೇಕು?'' ಎಂದು ಗುಡುಗುವುದೇ?

 

ಗಂಡ : ಪ್ರತಿ ದಿನ ಬೆಳಗ್ಗೆ ದೇವರಿಗೆ ಕೈ ಮುಗಿಯುವಾಗ ಭಗವಂತ ಎಲ್ಲ ಗಂಡಸರಿಗೂ ನಿನ್ನಂಥ ಹೆಂಡತಿಯನ್ನೇ ಸಂಗಾತಿಯಾಗಿ ಕೊಡಲಿ ಅಂತ ಪ್ರಾರ್ಥಿಸುತ್ತೇನೆ.

ಹೆಂಡತಿ : ಹೌದೇನ್ರಿ.....? ನನ್ನನ್ನು ಅಷ್ಟು ಮೆಚ್ಚಿಕೊಂಡಿದ್ದೀರಿ ಅಂತಾಯ್ತು.

ಗಂಡ : ಮತ್ತೆ....? ನಾನೊಬ್ಬನೇ ಕರ್ಮ ಅನುಭವಿಸುತ್ತಾ ಅವರೆಲ್ಲಾ ನೆಮ್ಮದಿಯಾಗಿದ್ದಾರಲ್ಲ ಅಂತ!

 

ಕಿಲಾಡಿ ಕಿಟ್ಟಿ ಕೆಲಸಕ್ಕಾಗಿ ಅಲೆದಲೆದು ದಣಿದು ಹೋದ. ಎಲ್ಲೂ ಕೆಲಸ ಕೊಡದ ಈ ಸಮಾಜಕ್ಕೆ ಟೋಪಿ ಹಾಕಿಯೇ ಸಂಪಾದಿಸಬೇಕು ಎಂದು ನಿರ್ಧರಿಸಿದ. ಹೀಗಾಗಿ ತಾನೊಂದು ಕ್ಲಿನಿಕ್‌ ತೆರೆದು, `ನಿಮ್ಮ ಆರೋಗ್ಯ ಸಮಸ್ಯೆಗೆ ಇಲ್ಲಿ ಚಿಕಿತ್ಸೆ ಪಡೆಯಿರಿ. ಒಂದು ಚಿಕಿತ್ಸೆಗೆ ಕೇವಲ ರೂ.500 ಮಾತ್ರ. ಗುಣವಾಗದಿದ್ದರೆ ರೂ.1000/ ವಾಪಸ್ಸು ಕೇಳಿ ಪಡೆಯಿರಿ,' ಎಂದು ಬೋರ್ಡು ಹಾಕಿದ.

ಇದನ್ನು ಗಮನಿಸಿದ ಗುಂಡನಿಗೆ, `ಎಲಾ ಇವನ... ಮಾಡ್ತೀನಿ ತಾಳು, ಹೇಗಾದರೂ ರೂ.1000/ ಗಿಟ್ಟಿಸದೇ ಬಿಡುವುದಿಲ್ಲ!' ಎಂದು ನಿರ್ಧರಿಸಿ ಕಿಟ್ಟಿಯ ಕ್ಲಿನಿಕ್‌ಗೆ ಬಂದ.

 

ಗುಂಡ : ಡಾಕ್ಟ್ರೇ.... ಇತ್ತೀಚೆಗೆ ಏನು ತಿಂದರೂ ನನ್ನ ನಾಲಿಗೆಗೆ ರುಚಿಯೇ ಗೊತ್ತಾಗೋಲ್ಲ. ಏನಾಯ್ತೆಂದು ಸ್ವಲ್ಪ ನೋಡ್ತೀರಾ?

ಕಿಟ್ಟಿ : ಹ್ಞಾಂ..... ಎಲ್ಲಿ ನಾಲಿಗೆ ಹೊರಗೆ ಚಾಚಿ.. ಆ, ತಿಳೀತು ಬಿಡಿ. ನರ್ಸ್‌, ಎಲ್ಲಿ ಆ 22ನೇ ಬಾಕ್ಸಿನ ಡ್ರಾಪ್ಸ್ ತೆಗೆದುಕೊಂಡು ಬಂದು ಇವರ ಬಾಯಿಗೆ 3 ತೊಟ್ಟು ಹಾಕಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ