ನೀರಜಾ ಪರೀಕ್ಷೆ ಬರೆಯಲೆಂದು ಹಾಲ್‌ಗೆ ಬಂದಳು. ಕೈಗೆ ಪೇಪರ್‌ ಬಂದಾಗ ಹೆದರಿಕೆಯಿಂದ ಬೆವರತೊಡಗಿದಳು. ಪೇಪರ್ ಬಹಳ ಕಠಿಣಕರ ಎನಿಸಿತು. ಅವಳು ಬೇರೆ ವಿದ್ಯಾರ್ಥಿಗಳ ಕಡೆ ನೋಡಿದಳು. ಹೆಚ್ಚು ಕಡಿಮೆ ಎಲ್ಲರ ಪರಿಸ್ಥಿತಿಯೂ ಹಾಗೇ ಇತ್ತು. ಆಗ ಅವಳು ಆಳವಾದ ನಿಟ್ಟುಸಿರಿಟ್ಟು ತಕ್ಷಣ ಜೋರಾಗಿ ಕಿರುಚಿದಳು, ``ಫೇಲ್ ‌ಮಾಡಲೇಬೇಕು ಅಂತ ನಿರ್ಧರಿಸಿರುವಾಗ ಈ ಪರೀಕ್ಷೆಯ ನಾಟಕವೇಕೆ?''

 

ನಗರದ ಒಬ್ಬ ಹುಡುಗಿ, ಹಳ್ಳಿಯ ಹುಡುಗನನ್ನು ಮದುವೆಯಾಗಿ ಬಂದಳು. ಅತ್ತೆಮನೆಗೆ ಬಂದ ಮಾರನೇ ಬೆಳಗ್ಗೆ ಅವಳು ಬ್ರಶ್ಶಿಗೆ ಪೇಸ್ಟ್ ಹಾಕಿ ಹಲ್ಲು ಉಜ್ಜತೊಡಗಿದಳು. ಆಗ ಅವಳಿಗಿಂತ ಕಿರಿ ವಯಸ್ಸಿನ ಮೈದುನ ಅವಳ ಮುಂದೆ ಬಂದು ನಿಂತು, ``ಅತ್ತಿಗೆ, ಏನು ತಿನ್ನುತ್ತಿದ್ದೀರಿ? ನನಗೂ ಕೊಡಿ,'' ಎಂದು ಕೇಳಿದ. ಆಗ ಅವಳು ಅವನ ಬೆರಳ ಮೇಲೆ ಪೇಸ್ಟ್ ಹಾಕಿದಳು. ಆ ಹುಡುಗ ಅದನ್ನು ಗಬ್ಬಕ್ಕನೇ ಹಾಗೇ ತಿಂದುಬಿಟ್ಟ. ಅವಳಿಗೆ ಸಿಟ್ಟು ಬಂದು, ಅವನ ತಲೆ ಮೇಲೆ ಮೊಟಕಿದಳು. ಆ ಹುಡುಗ ಅಳುತ್ತಾ ತನ್ನ ಅಣ್ಣನ ಬಳಿ ಹೋಗಿ ದೂರು ನೀಡಿದ. ಅಣ್ಣ ಬಂದು ನೇರವಾಗಿ ಹೆಂಡತಿಯನ್ನು ವಿಚಾರಿಸಿದ, ``ಯಾಕೆ, ಅವನನ್ನು ಹೊಡೆದೆ?'' ಅದಕ್ಕೆ ಅವಳು, ``ಅವನು ಪೇಸ್ಟ್ ಕೇಳಿದ. ಕೊಟ್ಟರೆ ಅದನ್ನು ಹಾಗೇ ತಿಂದುಬಿಡುವುದೇ?'' ಎಂದಳು.

ತಕ್ಷಣ ಅವನು ತಮ್ಮನ ತಲೆಯ ಮೇಲೆ ಗುದ್ದಿ, ``ಏ ಪೆದ್ದೇ.... ಈ ಕ್ರೀಂ ಬ್ರೆಡ್‌ ಮೇಲೆ ಹಾಕಿ ತಿನ್ನುವಂಥದು. ಹಾಗೇ ತಿನ್ನಬಾರದು,'' ಎನ್ನುವುದೇ?

 

ರವಿ ಅಜ್ಜಿಯ ಕೈಗೆ ಹುರಿದ ಬಟಾಣಿ ಕೊಡುತ್ತಾ ಹೇಳಿದ, ``ಅಜ್ಜಿ, ನೀನೂ ಇದನ್ನು ತಿನ್ನಜ್ಜಿ. ರುಚಿ ಬಹಳ ಚೆನ್ನಾಗಿದೆ,'' ಎಂದ.

ಅಜ್ಜಿ : ಎಲ್ಲಪ್ಪ ಮಗು... ಅದನ್ನು ತಿನ್ನಲು ನನಗೆ ಹಲ್ಲೇ ಇಲ್ಲವಲ್ಲ?

ರವಿ : ಹಾಗಾದರೆ ಇದು ನಿನ್ನ ಹತ್ತಿರ ಇರುವುದೇ ಒಳ್ಳೆಯದಜ್ಜಿ. ಸಂಜೆ ಸ್ಕೂಲಿನಿಂದ ಬಂದ ಮೇಲೆ ಈಸ್ಕೊಂತೀನಿ.

 

ಯುವ ಪ್ರೇಮಿಗಳಾದ ರಾಜು ಗೀತಾ ಬಹಳ ದಿನಗಳ ನಂತರ ಹೋಟೆಲ್‌ಗೆ ಹೋದರು. ಗೀತಾಳ ಆಸೆಯಂತೆ ಸವೋಸಾ ಆರ್ಡರ್‌ ಮಾಡಲಾಯಿತು. ರಾಜು ಗಮನಿಸುತ್ತಾನೆ, ಗೀತಾ ಕೇವಲ ಸವೋಸಾದ ಒಳಭಾಗದ ತಿರುಳಾದ ಆಲೂ ಪಲ್ಯ ಮಾತ್ರ ಸವಿಯುತ್ತಿದ್ದಳು. ಎರಡನೇ ಸವೋಸಾ ತಿನ್ನುವಾಗಲೂ ಹಾಗೇ ಮಾಡಿದಳು ರಾಜುವಿಗಿನ್ನು ತಡೆಯಲು ಆಗಲಿಲ್ಲ.

ರಾಜು : ಇದೇನು ಗೀತಾ, ನೀನು ಕೇವಲ ಆಲೂ ಪಲ್ಯ ಮಾತ್ರ ತಿನ್ನುತ್ತಿರುವೆ. ಇಡೀ ಸವೋಸಾ ತಿನ್ನಬೇಕಲ್ಲವೇ?

ಗೀತಾ : ಇಲ್ಲಪ್ಪ ಇಲ್ಲ.... ನನಗೆ 2 ವಾರದಿಂದ ವೈರಲ್ ಫೀವರ್‌. ಡಾಕ್ಟರ್‌ ಹೊರಗಿನ ಯಾವ ಪದಾರ್ಥವನ್ನೂ ತಿನ್ನಬಾರದೆಂದು ಕಟ್ಟಪ್ಪಣೆ ಮಾಡಿದ್ದಾರೆ.

 

ರೇಖಾ ರವಿ ಹಳೆಯ ಪ್ರೇಮಿಗಳು. ಒಂದು ದಿನ ಯಾವುದೋ ಕಾರಣಕ್ಕೆ ಇಬ್ಬರಲ್ಲೂ ಜಗಳ ತಾರಕಕ್ಕೆ ಹೋಯಿತು.

ರೇಖಾ : ಸಾಕಾಯ್ತು ನಿನ್ನ ಸಹವಾಸ! ನಿನ್ನನ್ನು ಬಿಟ್ಟು ನಾನು ಶಾಶ್ವತವಾಗಿ ದೂರ ಹೋಗ್ತಿದ್ದೀನಿ, ಇನ್ನೆಂದೂ ನಾನು ನಿನ್ನನ್ನು ನೋಡಲು ಬರೋದಿಲ್ಲ. ಎಂದೂ ನನ್ನನ್ನು ಭೇಟಿಯಾಗಲು ಪ್ರಯತ್ನಿಸಬೇಡ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ