ಮದುವೆಯಾದ 5 ವರ್ಷಗಳ ನಂತರ ಗುಂಡ ಪತ್ನಿ ಪುಟ್ನಂಜಿಗಾಗಿ ಅಪ್ಪಟ ಬಿಳಿ ಗುಲಾಬಿ ಹಿಡಿದು ಬಂದ.

ಪತ್ನಿ : ಇದೇನ್ರಿ.... ಇವತ್ತು ಬಿಳಿ ಗುಲಾಬಿ ಹಿಡಿದು ಬಂದಿದ್ದೀರಿ....?

ಗುಂಡ : ಹೌದು ಡಾರ್ಲಿಂಗ್‌, ಈಗ ನಮ್ಮ ಜೀವನದಲ್ಲಿ ಪ್ರೇಮ ಪ್ರಣಯಕ್ಕಿಂತ ಶಾಂತಿ ಸೌಹಾರ್ದಗಳೇ ಮುಖ್ಯ.

 

ಸರ್ಕಾರಿ ಬ್ಯಾಂಕ್‌ ಸಿಬ್ಬಂದಿಯಂತೂ ತಮ್ಮ ಸೇವಾಧರ್ಮಕ್ಕೆ ಖ್ಯಾತರಾದವರು. ಮಹಾ ಪರಿಶ್ರಮಿಗಳಾದ ಅವರು ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಸದಾ ದುಡಿಯುತ್ತಿರುತ್ತಾರೆ. ಒಂದು ಸಲ ಇಂಥ ಬ್ಯಾಂಕ್‌ ನೌಕರ ಕಿಟ್ಟಿಯ ಪತ್ನಿ ರತ್ನಾ ಸೀರಿಯಸ್‌ ಆಗಿ ಒಂದು ದಿನ ಬ್ಯಾಂಕಿಗೆ ಬಂದು ಎಲ್ಲರ ಮುಂದೆ ಗಂಡನನ್ನು ಕೇಳಿಯೇಬಿಟ್ಟಳು, ``ಡಾರ್ಲಿಂಗ್‌.... ಡು ಯು ಲವ್ ಮಿ ನೋ....?''

ಆಜನ್ಮ ಗುಮಾಸ್ತನಾದ ಕಿಟ್ಟಿ ತಲೆ ಎತ್ತದೆ ಬೇಗ ಉತ್ತರಿಸಿದ, ``ದಯವಿಟ್ಟು ಆ 4ನೇ ಕೌಂಟರ್‌ಗೆ ಹೋಗಿ ವಿಚಾರಿಸಿ!''

 

ವ್ಯಾಲೆಂಟೈನ್‌ ಡೇ ದಿನ ಸ್ಮಿತಾ ಕಾರ್ಡ್‌ ಕೊಳ್ಳಲೆಂದು ಹೊಸ ಅಂಗಡಿಗೆ ಹೋದಳು.

ಸ್ಮಿತಾ : ಏನ್ರಿ, ನಿಮ್ಮ ಅಂಗಡಿಯಲ್ಲಿ `ಯೂ ಆರ್‌ ಮೈ ಫಸ್ಟ್ ಲಾಸ್ಟ್ ಲವ್!' ಅಂತ ಬರೆದಿರುವ ಗ್ಲಾಮರಸ್‌ ಕಾರ್ಡ್‌ ಇದೆಯಾ? ಅಂಗಡಿಯವನು : ಹೌದು, ಇದು ನೋಡಿ ಹೊಸ ಡಿಸೈನಿನಲ್ಲಿ ಬಂದಿದೆ.

ಸ್ಮಿತಾ : ಹಾಗಿದ್ದರೆ ಒಂದು 10 ಕಾರ್ಡ್‌ ಕೊಡಿ.

 

ಗಂಡ ಹೆಂಡತಿಯಿಂದ 2 ಸಲ 250-250 ರೂ.ಗಳ ಸಾಲ ಪಡೆದಿದ್ದ. ಜಿಎಸ್‌ಟಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿದ್ದ ಅವಳು ಬಡ್ಡಿ, ಚಕ್ರ ಬಡ್ಡಿ ಜೊತೆ ಅದನ್ನೂ ಸೇರಿಸಿ ಮುಲಾಜಿಲ್ಲದೆ ರೂ.4100/ ವಸೂಲು ಮಾಡಿದಳು. ಇದೇನು ಅನ್ಯಾಯ ಅಂತೀರಾ? ಲೆಕ್ಕದ ವಿವರ ಕೇಳಿ, 250+250=4100 ಹೇಗೆ ಅಂದ್ರೆ.... 50+50=100, 2+2=4, ಒಟ್ಟಾರೆ 4100/!

 

ಪತ್ನಿ ಪಾರ್ಟಿಗೆ ಹೊರಡಲು ತಯಾರಾಗುತ್ತಿದ್ದಳು.

ಪತ್ನಿ : ಡಿಯರ್‌, ಇವತ್ತು ಯಾವ ಸೀರೆ ಉಟ್ಟುಕೊಳ್ಳಲಿ?

ಪತಿ : ಪಿಂಕ್‌ ಕಲರ್‌ ಸೀರೆ ಉಟ್ಟುಕೊ, ಅದು ನಿನಗೆ ಚೆನ್ನಾಗಿ ಒಪ್ಪುತ್ತದೆ.

ಪತ್ನಿ : ಅಯ್ಯೋ ಬಿಡಿ..... ಅದನ್ನು ಮೊನ್ನೆ ತಾನೇ ಕಿಟಿ ಪಾರ್ಟಿಗೆ ಉಟ್ಕೊಂಡಿದ್ದೆ. ಕೆಂಪು ಸೀರೆ ಉಟ್ಟುಕೊಳ್ಳೀ?

ಪತಿ : ಸರಿ, ಹಾಗೆ ಮಾಡು.

ಪತ್ನಿ : ಇದರ ಜೊತೆ ಸ್ಯಾಂಡಲ್ಸ್ ಎಂಥದ್ದು ಧರಿಸಲಿ.... ಪ್ಲೇನ್‌ ಅಥವಾ ಡಿಸೈನರ್‌?

ಪತಿ : ಪ್ಲೇನ್‌ ಇರಲಿ ಬಿಡು.

ಪತ್ನಿ : ನೀವು ಸರಿ ಬಿಡಿ, ಪಾರ್ಟಿಗೆ ಯಾರಾದರೂ ಪ್ಲೇನ್‌ ಚಪ್ಪಲಿ ಹಾಕಿಕೊಳ್ತಾರಾ? ನಾನು ಡಿಸೈನರ್‌ ಸ್ಯಾಂಡಲ್ಸ್ ಧರಿಸಿದರೆ ನಿಮಗೇನು ಪ್ರಾಬ್ಲಮ್?

ಪತಿ : ಸರಿ ಬಿಡೆ.... ಅದನ್ನೇ ಧರಿಸು.

ಪತ್ನಿ : ಎಂಥ ಪೆದ್ದು ಕಣ್ರಿ ನೀವು, ಅದಿರಲಿ, ಎಂಥ ಬಿಂದಿ ಇಟ್ಟುಕೊಳ್ಳಲಿ, ಸಾದಾ ಓವಲ್…?

ಪತಿ : ಸಾದಾ ಸರಿ ಇರುತ್ತೆ.

ಪತ್ನಿ : ಛೀ....ಛೀ.... ನಿಮಗಂತೂ ಲೇಟೆಸ್ಟ್ ಫ್ಯಾಷನ್‌ ಬಗ್ಗೆ ಏನೇನೂ ಗೊತ್ತಾಗೋಲ್ಲ. ಇಂಥ ಗ್ರಾಂಡ್‌ ಸೀರೆ, ಸ್ಯಾಂಡಲ್ಸ್ ತೊಟ್ಟು ಯಾರಾದರೂ ಸಾದಾ ಬಿಂದಿ ಇಟ್ಟುಕೊಳ್ತಾರಾ? ಓವಲ್ ಇರಲಿ ಬಿಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ