ಇತ್ತೀಚೆಗೆ ತಮ್ಮ ವಠಾರಕ್ಕೆ ಹೊಸದಾಗಿ ಒಬ್ಬ ವಯೋವೃದ್ಧ ವ್ಯಕ್ತಿ ಮೂಲೆ ಮನೆಗೆ ಬಂದುದನ್ನು ರವಿ ಗಮನಿಸಿದ. ಅವರು ಬಹಳ ಹಸನ್ಮುಖಿ, ಲವಲವಿಕೆಯ ಹಾಗೂ ಈಸಿ ಗೋಯಿಂಗ್‌ ನೇಚರ್‌ ಸ್ವಭಾವದರಾಗಿದ್ದರು. ಒಮ್ಮೆ ಅವರನ್ನು ಭೇಟಿಯಾಗಿ ರವಿ ಉತ್ಸಾಹದಿಂದ ಅವರ ಬಗ್ಗೆ ವಿವರಗಳನ್ನು ಕಲೆಹಾಕಿದ.

ರವಿ : ನಿಮ್ಮ ಹಿರಿಯ ವಯಸ್ಸನ್ನು ಗಮನಿಸಿದರೆ ನಿಮ್ಮ ಬಾಡಿ ಅದಕ್ಕಿಂತ ಎಷ್ಟೋ ಭಿನ್ನವಾಗಿದೆ. ನಿಮ್ಮ ಸುಖೀ ಹಾಗೂ ಸ್ವಸ್ಥ ಜೀವನದ ರಹಸ್ಯವೇನು? ಬಹುಶಃ ತುಂಬಾ ವ್ಯಾಯಾಮ ಮಾಡ್ತೀರಿ ಅನ್ಸುತ್ತೆ. ಸಿಗರೇಟ್‌, ಹೆಂಡ ಮುಟ್ಟುವುದೇ ಇಲ್ಲ ಅನ್ಸುತ್ತೆ.

ವೃದ್ಧ : ಹಾಗೇನಿಲ್ಲ ಬಿಡಿ, ನಾನು ಪ್ರತಿದಿನ 3 ಪ್ಯಾಕೆಟ್‌ ಸಿಗರೇಟ್‌ ಸೇದ್ತೀನಿ, ಪ್ರತಿ ರಾತ್ರಿ ತಪ್ಪದೆ ಒಂದೊಂದು ಬಾಟಲ್ ಸ್ಕಾಚ್ ಕುಡಿಯುತ್ತೀನಿ. ಮಸಾಲೆಭರಿತ ನಾನ್‌ವೆಜ್‌ ಇಲ್ಲದಿದ್ದರೆ ನನಗೆ ಆಗುವುದೇ ಇಲ್ಲ. ಮತ್ತೆ.... ವ್ಯಾಯಾಮ, ಜಾಗಿಂಗ್‌, ವಾಕಿಂಗ್‌ಇದಕ್ಕೆಲ್ಲ ನನಗೆ ಪುರಸತ್ತೇ ಇಲ್ಲ.

ರವಿ : ನಿಜಕ್ಕೂ ಆಶ್ಚರ್ಯ, ಅದಿರಲಿ... ನಿಮ್ಮ ವಯಸ್ಸೆಷ್ಟು?

ವೃದ್ಧ : 38 ವರ್ಷ!

18ರ ಹರೆಯದ ಹಲವು ಹುಡುಗರು ಸಾಯಂಕಾಲ ಒಂದೆಡೆ ಕುಳಿತು ಹರಟುತ್ತಿದ್ದರು. ಅಲ್ಲಿಗೆ ತೂರಾಡುತ್ತಾ ಒಬ್ಬ ಕುಡುಕ ಬಂದ. ಆ ಮಬ್ಬುಗತ್ತಲಿನಲ್ಲಿಯೂ ಅವನು ಆ ಹುಡುಗರ ಮಧ್ಯೆ ಕುಳಿತಿದ್ದ ರಾಜುವನ್ನೇ ದಿಟ್ಟಿಸಿ, ``ಏ... ಕೇಳಿಲ್ಲಿ, ನಿಮ್ಮಮ್ಮ ಈ ನಗರದ ಅತಿ ಸುಂದರ ಹೆಂಗಸು!'' ಎಂದು ಹಲ್ಲುಕಿರಿದ. ಅಲ್ಲಿದ್ದ ಬೇರೆ ಹುಡುಗರು ಈಗ ದೊಡ್ಡ ಜಗಳ ನಡೆಯಲಿದೆ ಎಂದು ಕಾದರು. ಹಾಗೇನೂ ಆಗಲಿಲ್ಲ, ರಾಜು ಸುಮ್ಮನಿರುವುದನ್ನು ನೋಡಿ ಆ ಕುಡುಕ ಅಲ್ಲಿಂದ ತೂರಾಡುತ್ತಾ ಹೋಗಿ ಮತ್ತೆ 2 ಬಾಟಲು ಕುಡಿದು ಬಂದಿದ್ದ.
ಈ ಸಲ ಮತ್ತೆ ರಾಜುವನ್ನೇ ದಿಟ್ಟಿಸುತ್ತಾ, ``ಏ ಹುಡುಗ, ನಾನು ನಿಮ್ಮಮ್ಮನನ್ನು ಬಹಳ ಪ್ರೀತಿಸುತ್ತೇನೆ. ನಿಂಗೆ ಗೊತ್ತಾ?'' ಎಂದ. ರಾಜು ಏನೂ ಉತ್ತರಿಸದೆ ಸುಮ್ಮನೆ ಕುಳಿತಾಗ ಆ ಕುಡುಕ ಅಲ್ಲಿಂದ ಹೊರಟುಹೋದ. ರಾಜು ಏಕೆ ಸುಮ್ಮನಿದ್ದಾನೋ ತಿಳಿಯದೆ ಹುಡುಗರು ಬೇಸತ್ತರು.

ಸ್ವಲ್ಪ ಹೊತ್ತಿನ ನಂತರ ಬಂದ ಅದೇ ಕುಡುಕ ಈ ಸಲ ರಾಜುವಿಗೆ, ``ಏ ಹುಡುಗ, ನಿಮ್ಮಮ್ಮ ಸಹ ನನ್ನನ್ನು ಅಷ್ಟೇ ಪ್ರೀತಿಸುತ್ತಾಳೆ. ನಿನಗದು ಗೊತ್ತಾ...?'' ಎಂದು ತೂರಾಡುತ್ತಾ ಅಲ್ಲೇ ನಿಲ್ಲಲು ಯತ್ನಿಸಿದ.

ರಾಜು ತನ್ನ ಜಾಗದಿಂದ ಎದ್ದು ಬಂದ. ಆ ಕುಡುಕನಿಗೆ ಏನು ಗತಿ ಕಾದಿದೆಯೋ ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದರೆ ರಾಜು, ``ಅಪ್ಪ.... ಪ್ಲೀಸ್‌ ಈಗ ಮನೆಗೆ ನಡಿ. ನೀನು ಕುಡಿದದ್ದು ಜಾಸ್ತಿ ಆಯ್ತು,'' ಎಂದು ಹೆಗಲ ಮೇಲೆ ಕೈ ಹಾಕಿಕೊಂಡು ಕರೆದೊಯ್ದ.

ಮಗರಾಯ ಕಾಲೇಜಿನ ವಿದ್ಯಾಭ್ಯಾಸ ಮುಗಿಸಿ ರಜೆಯಲ್ಲಿ ಹಳ್ಳಿಗೆ ಹಿಂದಿರುಗಿದ್ದ.

ತಂದೆ : ಮಗ, ಹಿಂದೆ ನಿನಗೆ ಗೊತ್ತಿರದಿದ್ದ ಯಾವ 2 ಕಷ್ಟದ ಕೆಲಸಗಳನ್ನು ಈಗ ಕಾಲೇಜಿನಲ್ಲಿ ಕಲಿತು ಬಂದಿರುವೆ?

ಮಗ : ಹೌದಪ್ಪ, ಉಳಿದದ್ದು ಹೇಗೋ ಏನೋ... ಅದರೆ 2 ಕಷ್ಟದ ಕೆಲಸಗಳನ್ನು ಕಲಿತು ಬಂದಿರುವುದಂತೂ ನಿಜ. ಇದು ನನಗೆ ಮೊದಲು ಬರುತ್ತಿರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ