ಹೊಸ ಸೊಸೆ : ಅತ್ತೆ... ಅತ್ತೆ... ಇವತ್ತು ಸ್ವಲ್ಪ ನೀವೇ ಅಡುಗೆ ಮಾಡಿಬಿಡಿ. ನನಗ ತುಂಬಾ ತಲೆನೋವು, ಸ್ವಲ್ಪ ಹೊತ್ತು ಮಲಗ್ತೀನಿ.

ಹಳೆ ಅತ್ತೆ : ಆಗ್ಲಿ ಬಿಡು, ಅದೇನು ಮಹಾ... ಆದರೆ ನಿನ್ನದೆಲ್ಲ ನಾಟಕ ಅಂತ ನನಗೆ ಗೊತ್ತಾಯ್ತು ಬಿಡು. ಇಷ್ಟೆಲ್ಲ ಸುಳ್ಳು ಹೇಳಬೇಡ.

ಸೊಸೆ : ನಾನು ಹೇಳ್ತಿರೋದು ಸುಳ್ಳು ಅಂತ ನಿಮಗೆ ಹೇಗೆ ಗೊತ್ತಾಯಿತು?

ಅತ್ತೆ : ನಾನೂ ಒಂದು ಕಾಲದಲ್ಲಿ ನಿನ್ನ ತರಹ ಹೊಸ ಸೊಸೆ ಆಗಿದ್ದೆ.....

ಒಂದು ಸಲ ಮಾಡರ್ನ್‌ ಮಾಲತಿ ತನ್ನ ಹೊಸ ಕಾರು ನಡೆಸುತ್ತಾ ಸಿಗ್ನಲ್ ಬಳಿ ಬಂದಾಗ, ಏನೋ ಎಡವಟ್ಟಾಗಿ ಕಾರು ನಿಂತೇಹೋಗಬೇಕೇ?

ಗ್ರೀನ್‌ ಸಿಗ್ನಲ್ ಬಂದಿದೆ, ಆದರೂ ಜಪ್ಪಯ್ಯ ಅಂದ್ರೂ ಕಾರು ಮಾತ್ರ ಸ್ಟಾರ್ಟ್‌ ಆಗಲಿಲ್ಲ. ಹಿಂದೆ ನಿಂತಿದ್ದ ಗಾಡಿಯವರಿಗೆಲ್ಲ ಸಿಟ್ಟು ಬಂದು ಹಾರ್ನ್‌ ಮಾಡತೊಡಗಿದರು. ಸಿಗ್ನಲ್ ಗ್ರೀನ್‌ ಬದಲು ಯಲ್ಲೋ ಆಗಿ, ಮುಂದೆ ರೆಡ್‌ಗೂ ತಿರುಗಿತು! ಆದರೂ ಈಕೆಯ ಕಾರು ಸ್ಟಾರ್ಟ್‌ ಆಗಲೇ ಇಲ್ಲ. ಹಿಂದಿದ್ದವರಿಗೆಲ್ಲ ಅಸಹನೆ ಹೆಚ್ಚಿ ಇಡೀ ಊರಿಗೇ ಕೇಳಿಸುವಂತೆ ಹಾರ್ನ್‌ ಮಾಡತೊಡಗಿದರು.

ಆಗ ಕೆಲಸಕ್ಕೆ ಹೊಸದಾಗಿ ಸೇರಿದ್ದ ಕ್ಯಾತಮಾರನ ಹಳ್ಳಿಯ ಸಿಗ್ನಲ್ ಮ್ಯಾನ್‌ ಸಿದ್ದಪ್ಪ ಪೊಲೀಸ್‌ ನಡಿಗೆಯಲ್ಲಿ ಓಡಿಬಂದು, ``ಏನಾಯ್ತು ಮೇಡಂ, ಮೂರು ಬಣ್ಣಗಳಲ್ಲಿ ಯಾವ ದೀಪದ ಬಣ್ಣವೂ ಇಷ್ಟ ಆಗ್ತಿಲ್ಲವೇ?'' ಎಂದು ಕಳಕಳಿಯಿಂದ ವಿಚಾರಿಸಿಕೊಂಡ.

ಮದುವೆಯಾದ 15 ದಿನಗಳಿಗೆ ಹೆಂಡತಿಯ ಬರ್ತ್‌ಡೇ ಬಂತೆಂದು ಕುಲಕರ್ಣಿ ಹೂವಿನ ಬೊಕೆಗೆ ಆರ್ಡರ್‌ ಕೊಟ್ಟಿದ್ದ. ಬಿಸ್‌ನೆಸ್‌ ಟೂರ್‌ ಎಂದು ಹೊರಟಿದ್ದರಿಂದ ಮುಂಬೈನಿಂದಲೇ ಬೆಂಗಳೂರಿನ ಫ್ಲವರಿಸ್ಟ್ ಗೆ ಆರ್ಡರ್‌ ಮಾಡಿ ಹೊಸ ಹೆಂಡತಿಗೆ 24 ಹೂಗಳ ಬೊಕೆ ಕೊಡಲು ಸೂಚಿಸಿ, ಬೆಸ್ಟ್ ಹೂವುಗಳಿರಲಿ ಎಂದು 2 ಪಟ್ಟು ಹಣ ರವಾನಿಸಿದ್ದ. ಹೆಂಡತಿಗೆ ಫೋನ್‌ ಮಾಡಿ ವಿಷ್‌ ಮಾಡುತ್ತಾ, ``ನಿನಗೆ ಈಗ ಎಷ್ಟು ವರ್ಷ ತುಂಬಿದವೋ ಅಷ್ಟು ಹೂಗಳ ಬೊಕೆ ಬರಲಿದೆ,'' ಎಂದು ತಿಳಿಸಿದ್ದ. ಅವಳು ಆತುರದಿಂದ ಅದಕ್ಕಾಗಿ ಕಾಯತೊಡಗಿದಳು.

ಅಂದಿನ ಡೀಲ್ ‌ನಿಂದ ಸಂತೋಷಪಟ್ಟ ಫ್ಲಾರಿಸ್ಟ್ ಈ ಕಸ್ಟಮರ್‌ಗೆ ಇನ್ನಷ್ಟು ಹೂವುಗಳ ಬೋನಸ್‌ ನನ್ನ ಪರವಾಗಿರಲಿ ಎಂದು ಬೊಕೆಗೆ 20 ಹೂಗಳನ್ನು ಹೆಚ್ಚಿಗೆ ಸೇರಿಸಿದ. ಆ ಬೊಕೆಯ ಕೊರಿಯರ್‌ ಪಡೆದ ಕುಲಕರ್ಣಿಯ ಹೆಂಡತಿ ತವರಿಗೆ ಹೋದಳು ಎಷ್ಟು ದಿನಗಳಾದರೂ ವಾಪಸ್ಸು ಬರಲೇ ಇಲ್ಲ. ಹೀಗೇಕಾಯಿತು ಎಂದು ಕುಲಕರ್ಣಿ ಲೆಕ್ಕ ಹಾಕುವುದರಲ್ಲೇ ಆತನಿಗೆ ವಯಸ್ಸಾಗಿ ಹೋಯಿತಂತೆ!

ರತ್ನಾ ಎಷ್ಟು ಹೊತ್ತಾದರೂ ಸಂತೆಯಲ್ಲಿ ಚೌಕಾಶಿ ಮಾಡದೆ ತರಕಾರಿ ಕೊಳ್ಳುತ್ತಿರಲಿಲ್ಲ. ಒಂದಲ್ಲ 4 ಅಂಗಡಿ ತಿರುಗಿ, 40 ಸಲ ಪ್ರಶ್ನೆ ಕೇಳುತ್ತಿದ್ದಳು. ಇದರಿಂದ ರೋಸಿದ ಅವಳ ಗಂಡ, ``ಬೇಗ ಏನೋ ಒಂದು ತೆಗೆದುಕೊಂಡು ಬರಬಾರದೇ? ಈಗಾಗಲೇ ಸಂಜೆ 7 ಗಂಟೆ ಆಯ್ತು. ನಾವು ಯಾವಾಗ ಮನೆಗೆ ಹೋಗೋದು? ಯಾವಾಗ ನಾನು ಅಲ್ಲಿಂದ ಕ್ಲಬ್ಬಿಗೆ ಹೋಗೋದು...?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ