ಹಾಂಕಾಂಗ್‌ ನಗರ ಪೂರ್ವ ಹಾಗೂ ಪಶ್ಚಿಮದ ಸಂಸ್ಕೃತಿಯ ಮಿಶ್ರಣ ಎಂದೇ ಹೇಳಬಹುದು. ಇಲ್ಲಿ ಹಳೆಯದೂ ಇದೆ, ಹೊಸದೂ ಇದೆ. ಭೂತ ಹಾಗೂ ಭವಿಷ್ಯತ್‌ ಕಾಲದ ಕನಸಿನ ಸಂಗಮ ಇಲ್ಲಿ ರಾರಾಜಿಸುತ್ತದೆ.

ಗಗನಚುಂಬಿ ಕಟ್ಟಡಗಳು, ವಿಶಾಲ ಸ್ವಚ್ಛ ರಸ್ತೆಗಳು ಇಲ್ಲಿನ ವಿಶೇಷಗಳಾಗಿವೆ. ಪ್ರವಾಸಿಗರು ಈ ಎಲ್ಲ ಕಾರಣಗಳಿಂದಾಗಿ ಹಾಂಕಾಂಗ್‌ನ ಆಕರ್ಷಣೆಗೆ ಮಾರುಹೋಗುತ್ತಾರೆ. ಹಾಂಕಾಂಗ್‌ನಲ್ಲಿ ಪ್ರತಿದಿನ ನಡೆಯುವ ಮಲ್ಟಿಮೀಡಿಯಾ ಶೋ ಪ್ರತಿಯೊಬ್ಬ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಹಾಂಕಾಂಗ್‌ 1842 ರಿಂದ ಬ್ರಿಟಿಷರ ವಶದಲ್ಲಿತ್ತು. ಇಲ್ಲಿನ ಬೆಳವಣಿಗೆ ಹಾಗೂ ಕಣ್ಣು ಕೋರೈಸುವ ಬೆಳಕು ಎಂಥವರನ್ನೂ ಸೆಳೆಯುತ್ತದೆ. ಅನೇಕರು ಕೇವಲ ಶಾಪಿಂಗ್‌ ಮಾಡಲೆಂದೇ ಹಾಂಕಾಂಗ್‌ಗೆ ಬರುತ್ತಾರೆ. 1947ರಲ್ಲಿ ಹಾಂಕಾಂಗ್‌ಗೆ ಸ್ಪೆಷಲ್ ಅಡ್ಮಿನಿಸ್ಟ್ರೇಶನ್‌ ರೀಜನ್‌(ಎಸ್‌ಎಆರ್‌)ನ ಸ್ಥಾನಮಾನ ಕೊಟ್ಟು ಸ್ವತಂತ್ರಗೊಳಿಸಿದರು.

Rides-in-HK-Ocean-Park

ಹಾಂಕಾಂಗ್‌ನಲ್ಲಿ ಒಂದು ದೇಶ, ಎರಡು ವ್ಯವಸ್ಥೆಯ ನಿಯಮ ಅನ್ವಯಿಸುತ್ತದೆ. ಅಲ್ಲಿ ತಮ್ಮದೇ ಆದ ನ್ಯಾಯಾಂಗ ವ್ಯವಸ್ಥೆ ಇದೆ, ಕರೆನ್ಸಿ ಇದೆ, ಕಸ್ಟಮ್ಸ್ ಪಾಲಿಸಿ ಇದೆ, ಅಂತಾರಾಷ್ಟ್ರೀಯ ತಂಡ ಹಾಗೂ ಅನುಸರಿಸುವ ನಿಯಮಗಳಿವೆ. ಆದರೆ ಇಲ್ಲಿ ಚೀನಾದ ಪ್ರಭಾವ ಮತ್ತು ಕಾನೂನು ಅನ್ವಯಿಸುತ್ತದೆ.

ಹಾಂಕಾಂಗ್‌ ಪರ್ಲ್ ನದಿ ದಂಡೆಯ ಮೇಲಿದೆ. ಇದು ಚೀನಾದ ಅತ್ಯಂತ ಶ್ರೀಮಂತ ನಗರ. ಇಲ್ಲಿನ ಆರ್ಥಿಕ ನೀತಿಗಳು ಅತ್ಯಂತ ಸಡಿಲವಾಗಿವೆ. ಈ ಕಾರಣದಿಂದ ಇದು ವ್ಯಾಪಾರದ ಅತಿ ದೊಡ್ಡ ಕೇಂದ್ರ ಎನಿಸಿದೆ.

ಕರೆನ್ಸಿ : ಇಲ್ಲಿ ಮಾಡುವ ಪ್ರತಿಯೊಂದು ಖರೀದಿ ಹಾಗೂ ಹಣ ಪಾವತಿಗೆ ಹಾಂಕಾಂಗ್‌ ಡಾಲರ್‌ ಹಾಗೂ ಅಮೆರಿಕನ್‌ ಡಾಲರ್ ಸಮಾನ ರೂಪದಲ್ಲಿ ಚಿರಪರಿಚಿತವಾಗಿವೆ.

ಭಾಷೆ : ಇಲ್ಲಿ ಹೆಚ್ಚಿನ ಜನರು ಚೀನಿ ಭಾಷೆ ಬಳಸುತ್ತಾರೆ. ಆದರೆ ದೊಡ್ಡ ದೊಡ್ಡ ಮಾಲ್‌ಗಳಲ್ಲಿ ನೀವು ಆಂಗ್ಲ ಭಾಷೆಯನ್ನು ಸುಲಭವಾಗಿ ಬಳಸಬಹುದು.

ಎಬರ್ಡೀನ್ಫಿಶಿಂಗ್ವಿಲೇಜ್

ಇದು ನೀರಿನಲ್ಲಿಯೇ ಇರುವ ಒಂದು ಗ್ರಾಮ. ಇಲ್ಲಿ ನೀವು ಮೀನುಗಾರರ ಜೀವನವನ್ನು ಅತ್ಯಂತ ಹತ್ತಿರದಿಂದ ನೋಡಬಹುದು. ಇಲ್ಲಿ ಮೋಟಾರು ಚಾಲಿತ ನಾಲೆಗಳು ಬಾಡಿಗೆಗೆ ದೊರೆಯುತ್ತವೆ. ಅದರಲ್ಲಿ ಕುಳಿತು ನೀವು ಇಡೀ ಪ್ರದೇಶವನ್ನು ಸುತ್ತಾಡಬಹುದು. ಈ ಮೋಟಾರ್‌ ಬೋಟ್‌ಗಳಲ್ಲಿ ಚಿಕ್ಕಪುಟ್ಟ ವಸ್ತುಗಳ ಅಂಗಡಿಗಳು ಕೂಡ ಇರುತ್ತವೆ. ಅದರಲ್ಲಿ ನೀವು ಗಿಫ್ಟ್ ಐಟಮ್ ಗಳನ್ನು ಖರೀದಿಸಬಹುದು.

ರಿಪ್ಸ್ಬೇ ಬೀಚ್

ದಕ್ಷಿಣ ಚೀನಾದ ಈ ಸಮುದ್ರ ಭಾಗದಲ್ಲಿ ನೀವು ಪಿಕ್ನಿಕ್‌ನ ಆನಂದ ಅನುಭವಿಸಬಹುದು. ಈ ಸ್ಥಳಕ್ಕೆ ಬ್ರಿಟಿಷ್‌ ಯುದ್ಧ ವಿಮಾನದ ಹೆಸರನ್ನು ಇಡಲಾಗಿದೆ. ನಗರ ಮಧ್ಯದಿಂದ ಜನರು ರಜೆ ಕಳೆಯಲು ಇಲ್ಲಿಗೆ ಬರುತ್ತಾರೆ.

ಓಶನ್ಪಾರ್ಕ್

ಇದು ಏಷ್ಯಾದ ಅತ್ಯಂತ ಪ್ರಸಿದ್ಧ ಥೀಮ್ ಪಾರ್ಕ್‌ಗಳಲ್ಲಿ ಒಂದು. ಇದು ಬಹು ದೊಡ್ಡ ಕ್ಷೇತ್ರದಲ್ಲಿ ವ್ಯಾಪಿಸಿಕೊಂಡಿದೆ. ಓಶನ್ ಪಾರ್ಕಿನ ಟವರ್‌ 72 ಮೀಟರ್‌ ಎತ್ತರವಾಗಿದ್ದು, ಅದರ ಮೇಲಿಂದ ನೀವು ದಕ್ಷಿಣ ಚೀನಾದ ಸಮುದ್ರದ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು.

ಈ ಪಾರ್ಕ್‌ 2 ಭಾಗಗಳಲ್ಲಿ ವಿಂಗಡಣೆಯಾಗಿದ್ದು, ಲೋ ಲ್ಯಾಂಡ್‌ ಹಾಗೂ ಹೆಡ್‌ ಲ್ಯಾಂಡ್‌. ಲೋ ಲ್ಯಾಂಡ್‌ ಕೆಳಭಾಗದಲ್ಲಿ ನಿರ್ಮಾಣವಾಗಿದೆ. ಅಲ್ಲಿ ಬರ್ಡ್ಸ್, ಥಿಯೇಟರ್‌, ಕಿಡ್ಸ್ ವರ್ಲ್ಡ್, ಸೀ ಲಯನ್‌ ಗ್ರ್ಯಾಂಡ್‌ ಪ್ರಿಕ್ಸ್ (ಚಿಕ್ಕ ಕಾರುಗಳ ರೇಸಿಂಗ್‌) ಹಾಗೂ ಡಾಲ್ಛಿನ್‌ಗಳ ಆಟದ ಮಜ ಪಡೆಯಬಹುದು. ಹೆಡ್‌ ಲ್ಯಾಂಡ್‌ಗೆ ಹೋಗಲು ಕಾರಿನ ಮಜ ಪಡೆಯಬಹುದು. ಅಲ್ಲಿಂದ ನಾಲ್ಕೂ ಕಡೆಯ ಮನೋಹರ ದೃಶ್ಯ ಕಣ್ತುಂಬಿಸಿಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ