ಮಕ್ಕಳಲ್ಲಿ ಅಪರಾಧ ಪ್ರವೃತ್ತಿ ಬೆಳೆಯದಂತೆ ನೋಡಿಕೊಳ್ಳಲು ತಂದೆತಾಯಿಗಳು ಈ ಕೆಳಕಂಡ ಸಂಗತಿಗಳ ಬಗ್ಗೆ ಗಮನಹರಿಸಬೇಕು.

ಮಕ್ಕಳೇಕೆ ಅಪರಾಧಿಗಳಾಗುತ್ತಾರೆ? ಬಾಲಾಪರಾಧ ಏಕೆ ಹುಟ್ಟಿಕೊಳ್ಳುತ್ತದೆ? ಮನುಷ್ಯನಲ್ಲಿ ಹಿಂಸೆ ಹಾಗೂ ಅಪರಾಧೀಭಾವ ಏಕೆ ಜನ್ಮ ತಳೆಯುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಾವು ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸಬೇಕಾಗುತ್ತದೆ. ಇದಕ್ಕೆ ಮುಖ್ಯವಾಗಿ 2 ಕಾರಣಗಳಿವೆ ಸ್ವಭಾವಗತ ಮತ್ತು ಸನ್ನಿವೇಶಗತ. ಈ ಎರಡು ಕಾರಣಗಳಿಗೆ ಹಲವು ಉಪಕಾರಣಗಳೂ ಕೂಡ ಇರಬಹುದು. ಒಂದು ವೇಳೆ ನಾವು ಮೇಲ್ಕಂಡ ಎರಡೂ ಕಾರಣಗಳನ್ನು ಸಮಗ್ರವಾಗಿ ಅರಿತಾಗ ಉಪಕಾರಣಗಳು ತಂತಾನೇ ಸ್ಪಷ್ಟವಾಗುತ್ತವೆ.

ಮೊದಲನೆಯದು : ಸ್ವಭಾವಗತ ಕಾರಣದ ಮುಖ್ಯ ಲಕ್ಷಣಗಳೆಂದರೆ, ಹುಡುಗನ ಉಗ್ರ ಹಾಗೂ ಕ್ರೋಧದ ಸ್ವಭಾವ, ಹಠಮಾರಿತನ, ಚಿಕ್ಕಪುಟ್ಟ ಮಾತುಗಳಿಗೆ ಜೋರಾಗಿ ಕೂಗಾಡುವುದು, ಹಿಂಸೆಗೆ ಇಳಿಯುವುದು, ಇವೆಲ್ಲ ಲಕ್ಷಣಗಳು ಜಾಸ್ತಿ ಆಗಿಬಿಟ್ಟರೆ ಅವು ಅಪರಾಧದ ರೂಪ ಪಡೆದುಕೊಳ್ಳುತ್ತವೆ.

ಎರಡನೆಯದು : ಸನ್ನಿವೇಶಗತ ಕಾರಣಗಳು ಅತ್ಯಂತ ಸ್ಪಷ್ಟವಾಗಿರುತ್ತದೆ. ಬಡತನ, ಅನಕ್ಷರತೆ, ನಿರುದ್ಯೋಗ, ಕೆಟ್ಟ ಸಹವಾಸ, ಆಲಸ್ಯತನ, ದುರಾಸೆ, ಅತಿ ಮಹತ್ವಾಕಾಂಕ್ಷೆ, ಮೈಗಳ್ಳತನ, ಏನೂ ಕೆಲಸ ಮಾಡದೆಯೇ ಬಹಳಷ್ಟನ್ನು ದೊರಕಿಸಿಕೊಳ್ಳಬೇಕೆನ್ನುವ ಅಪೇಕ್ಷೆ.

ಅಪರಾಧ ಯಾವುದೇ ಆಗಿರಬಹುದು ಅದರ ಅಪರಾಧಿಕ ಲಕ್ಷಣಗಳು ಕಾಲಕಾಲಕ್ಕೆ ಬದಲಾಗುತ್ತವೆ. ಕುಟುಂಬ ಹಾಗೂ ಸಮಾಜ ಅವನ್ನು ಸಕಾಲಕ್ಕೆ ಗುರುತಿಸುವುದಿಲ್ಲ ಅಥವಾ ಗುರುತಿಸಿದರೂ ಗೊತ್ತಿಲ್ಲದವರಂತೆ ಉಳಿದುಬಿಡುತ್ತಾರೆ. ತಂದೆತಾಯಿಗಳು ಅತಿಯಾದ ಪ್ರೀತಿಯಿಂದ ತಮ್ಮ ಮಗನ ದುರ್ವರ್ತನೆಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಮುಂದೆ ಅವೇ ದುರ್ವರ್ತನೆಗಳು ಅವರನ್ನು ದೊಡ್ಡ ಅಪರಾಧಗಳತ್ತ ಕೊಂಡೊಯ್ಯುತ್ತವೆ. ಪೋಷಕರಿಗೆ ಅರಿವಾಗುವಷ್ಟರಲ್ಲಿ ನೀರು ಕುತ್ತಿಗೆಯ ಮಟ್ಟ ಮೀರಿರುತ್ತದೆ.

ಸ್ಮಾರ್ಟ್‌ ಫೋನ್‌ಗಳು, ಇಂಟರ್‌ನೆಟ್‌ ಸೌಲಭ್ಯದಿಂದಾಗಿ ಹುಡುಗರು ಸೆಕ್ಸ್ ಬಗ್ಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬಲಾತ್ಕಾರದ ಆರೋಪಿ ಹಾಗೂ ಸಂತ್ರಸ್ತೆ ಇಬ್ಬರೂ ಕಡಿಮೆ ವಯಸ್ಸಿನವರಾಗಿರುತ್ತಾರೆ.

ಸೆಕ್ಸ್ ಬಗ್ಗೆ ಆಕರ್ಷಣೆ

ಬಾಲಮನಸ್ಸಿನಲ್ಲಿ ಜಿಜ್ಞಾಸೆಗಳು ಹೆಚ್ಚಾಗಿರುತ್ತವೆ. ಹಿಂದೆ ವೈಜ್ಞಾನಿಕ ಉಪಕರಣಗಳು ಇರದೇ ಇದ್ದುದರಿಂದ ಹದಿವಯಸ್ಸಿನವರು ತಮ್ಮ ಜಿಜ್ಞಾಸೆಯನ್ನು  ಹಾಗೆಯೇ ಹತ್ತಿಕ್ಕುತ್ತಿದ್ದರು. ಜಿಜ್ಞಾಸೆಗಳು ಅತಿಯಾದರೂ ಕೌಟುಂಬಿಕ ಹಾಗೂ ಸಾಮಾಜಿಕ ಶಿಸ್ತಿನಿಂದಾಗಿ ಅವರು ಅಪರಾಧದತ್ತ ಆಕರ್ಷಿತರಾಗುತ್ತಿರಲಿಲ್ಲ. ಆದರೆ ಈಗ ಚಿತ್ರಣ ಬದಲಾಗಿದೆ.

ಚಲನಚಿತ್ರಗಳಲ್ಲಿ ನಾಯಕ ನಾಯಕಿಯರ ಮುಕ್ತ ಅಭಿನಯ ಮಕ್ಕಳಲ್ಲಿ ಸೆಕ್ಸ್ ಭಾವನೆಗಳನ್ನು ಕೆರಳಿಸುತ್ತವೆ. ಇಂಟರ್‌ನೆಟ್‌ನಲ್ಲಿ ಅದರ ಮಾಹಿತಿ ಯಥೇಚ್ಛವಾಗಿ ದೊರೆಯುತ್ತಿರುವುದು ಇದಕ್ಕೆ ಕಾರಣವಾಗಿದೆ. ಬಾಲಮನಸ್ಸಿಗೆ ಅದು ಬಹಳ ಆಕರ್ಷಿಸುತ್ತಿದೆ.

ಮಕ್ಕಳಲ್ಲಿ ಸೆಕ್ಸ್ ಬಗೆಗೆ ಆಕರ್ಷಣೆ ಪ್ರೀತಿ ಹಾಗೂ ಸೆಕ್ಸ್ ಗಾಗಿ ಹುಡುಗಿಯರತ್ತ ಆಕರ್ಷಿತರಾಗುವಂತೆ ಮಾಡುತ್ತದೆ. ತಮ್ಮ ಆಸೆ ಸುಲಭವಾಗಿ ಈಡೇರದಿದ್ದರೆ. ಅವರು ಅಪಹರಣ, ಅತ್ಯಾಚಾರದಂತಹ ಕುಕೃತ್ಯಗಳಲ್ಲಿ ತೊಡಗುತ್ತಾರೆ. ಸಿಕ್ಕಿಬೀಳುವ ಭಯದಿಂದ ಒಮ್ಮೊಮ್ಮೆ ಹುಡುಗಿಯರನ್ನು ಸಾಯಿಸಿಯೂಬಿಡುತ್ತಾರೆ.

ಗಾಬರಿಗೊಳಿಸುವ ಘಟನೆಗಳು

ಇಲ್ಲಿ ಎರಡು ಘಟನೆಗಳ ಉಲ್ಲೇಖ ಸೂಕ್ತ ಎನಿಸುತ್ತದೆ. ದೆಹಲಿಯ 4 ಹದಿವಯಸ್ಸಿನ ಹುಡುಗರು ಹಾಗೂ ಒಬ್ಬ ವಯಸ್ಕ ವ್ಯಕ್ತಿ ಹುಟ್ಟುಹಬ್ಬದ ಆಚರಣೆಗೆಂದು ಪಕ್ಕದ ಮನೆಯ 23 ವರ್ಷದ ಯುವತಿಯನ್ನು ಆಮಂತ್ರಿಸುತ್ತಾರೆ. ರಾತ್ರಿ ಆ ಯುವತಿಯನ್ನು ಬಂಧಿಯಾಗಿಸಿ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುತ್ತಾರೆ. ಅದರಲ್ಲಿ ಒಬ್ಬ ಅಪ್ರಾಪ್ತ ವಯಸ್ಸಿನ ಹುಡುಗ ಮಾತ್ರ ಅವಳಿಗೆ ಪರಿಚಿತನಾಗಿದ್ದ. ಅವನೇ ಹೋಗಿ ಅವಳನ್ನು ಕರೆದಿದ್ದ. ಅವರೆಲ್ಲ ಸೇರಿ ಸಂಚು ಮಾಡಿ ಈ ಘಟನೆ ನಡೆಯಲು ಕಾರಣರಾಗಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ