ಹಿಮಾಲಯದ ಬೆಟ್ಟಗುಡ್ಡಗಳಿಂದ ಆವೃತವಾದ ಲಢಾಕ್ಕಿನ ಭೂಭಾಗವಾದ ಕಾರ್ಗಿಲ್‌ ಕಾಶ್ಮೀರದ ರಾಜಧಾನಿ ಶ್ರೀನಗರದಿಂದ ಸುಮಾರು 205 ಕಿ.ಮೀ. ದೂರದಲ್ಲಿದೆ. ಲೇಹ್‌ ಮತ್ತು ಶ್ರೀನಗರವನ್ನು ಸಂಪರ್ಕಿಸುವ ಏಕೈಕ ರಾಷ್ಟ್ರೀಯ ಹೆದ್ದಾರಿ 1 ಕಾರ್ಗಿಲ್‌ ಮೂಲಕವೇ ಹಾದುಹೋಗುವುದಲ್ಲದೇ, ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ಗೂ ಇದೇ ಹೆದ್ದಾರಿಯ ಮೂಲಕವೇ ಹೋಗಬೇಕಾಗಿದೆ. ಇಂತಹ ಕಾರ್ಗಿಲ್‌ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿರೇಖೆ ಲೈನ್‌ ಆಫ್‌ ಕಂಟ್ರೋಲ್‌ (ಎಲ್‌ಒಸಿ) ಇದ್ದು

kargil4

ಚಳಿಗಾಲದಲ್ಲಿ ಉಷ್ಣಾಂಶ ಮೈನಸ್‌ 48 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಯುವ ಕಾರಣ ಎರಡೂ ದೇಶದ ಸೈನಿಕರಿಗೆ ಗಡಿ ಕಾಯುವುದು ಅತ್ಯಂತ ಕಠಿಣವಾದ ಸವಾಲಾಗಿರುವ ಕಾರಣ ಎರಡೂ ದೇಶಗಳ ಸೈನಿಕರು ಚಳಿಗಾಲದಲ್ಲಿ ಬೂಟ್ ಕ್ಯಾಂಪ್ ಕಡೆಗೆ ಮರಳಿ, ಚಳಿಗಾಲ ಮುಗಿದ ನಂತರ ಮತ್ತೆ ಕಾವಲು ಕಾಯಲು ಹೋಗುವುದು 1999ರ ವರೆಗೂ ಒಂದು ರೀತಿಯ ಅಲಿಖಿತ ನಿಯಮದಂತೆ,ಅನೂಚಾನವಾಗಿ ನಡೆದುಕೊಂಡು ಬಂದಿತ್ತು.

kargil3

1999ರ ಮೇ 3ರಂದು ಕಾಶ್ಮೀರದ ದನ ಕಾಯುವ ಹುಡುಗನೊಬ್ಬ ತನ್ನ ಕಳೆದು ಹೋದ ಸಾಕು ಪ್ರಾಣಿ ಯಾಕ್ ) ಹುಡುಕಿಕೊಂಡು ತೋಲೊಲಿಂಗ್ ಶಿಖರದ ಹತ್ತಿರ ಹೋದಾಗ ಅಂತಹ ಚಳಿಗಾಲದಲ್ಲಿಯೂ ಆ ಶಿಖರದ ಬಳಿ ಸೈನಿಕರು ಅಡ್ಡಾಡುತ್ತಿರುವುದನ್ನು ಕಂಡು ಗಾಬರಿಯಾಗಿ ಸ್ವಲ್ಪ ಎಚ್ಚರಿಕೆಯಿಂದ ಗಮನಿಸಿದಾಗ ಆಸೈನಿಕರೆಲ್ಲರೂ ಭಾರತೀಯರಾಗಿರದೇ ಪಾಕೀಸ್ಥಾನದ ಸೈನಿಕರಾಗಿದ್ದದ್ದನು ಕಂಡು ಕೂಡಲೇ, ಭಾರತೀಯ ಸೇನಾಪಡೆಯ ಚೆಕ್ ಪೋಸ್ಟ್ ಬಳಿ ಬಂದು ತಾನು ಕಂಡ ಘನ ಘೋರ ಸತ್ಯವನ್ನು ಅಲ್ಲಿನ ಅಧಿಕಾರಿಗಳಿಗೆ ತಿಳಿಸಿದ.

sourabh_kalia

ಮೇ 5ರಂದು ಭಾರತೀಯ ಸೇನೆಯ ಪೆಟ್ರೋಲಿಂಗ್‌ ತಂಡವು ಕಾರ್ಗಿಲ್‌ ಪ್ರದೇಶದ ಸ್ಥಿತಿಗತಿಯನ್ನು ಅವಲೋಕಿಸಲು 4 ಜಾಟ್ ರಜಪೂತ ರಜನಿಮೆಂಟ್ ಕ್ಯಾಪ್ಟನ್ ಸೌರವ್ ಕಾಲಿಯ ನೇತೃತ್ವದಲ್ಲಿ ತೆರಳಿದಾಗ ಸ್ಪಷ್ಟವಾಗಿ ತಿಳಿದ ಬಂದ ಸಂಗತಿಯೇನಂದರೆ, ಚಳಿಗಾಲದ ಅಲಿಖಿತ ನಿಯಮವನ್ನು ಮೀರದ್ದ ಪಾಕಿಸ್ಥಾನದ ಸೈನ್ಯ ಭಾರತದ ಗಡಿಯೊಳಗೆ ಅನಧಿಕೃತವಾಗಿ ನುಸುಳಿದ್ದಲ್ಲದೇ ನಮ್ಮ ದೇಶದ ಸೈನಿಕರ ಅಡಗುದಾಣದೊಳಗಿ ನುಗ್ಗಿ ನಮ್ಮ ಸೈನಿಕರ ಬರುವಿಕೆಗಾಗಿ ಹೊಂಚಿಹಾಕಿ ಕುಳಿತಿತ್ತು. ಕ್ಯಾಪ್ಟನ್ ಸೌರಭ್ ಕಾಲಿಯ ಮತ್ತವರ ತಂಡದವರನ್ನು ಕಂಡ ಕೂಡಲೇ ಅವರನ್ನು ಸುತ್ತುವರೆದ ಪಾಕೀಸ್ಥಾನದ ಸೈನ್ಯೆ, ಯುದ್ದದಲ್ಲಿ ಸಿಕ್ಕ ಶತ್ರು ಸೈನಿಕರನ್ನು ಹಿಂಸಿಸಬಾರದು ಎಂಬ ಯುದ್ಧದ ಎಲ್ಲಾ ನಿಯಮಗಳನ್ನು ಮೀರಿ ಅವರಿಗೆ ಚಿತ್ರಹಿಂಸೆ ನೀಡಲಾರಂಭಿಸಿತು. ಅದರಲ್ಲಿಯೂ ತಂಡದ ನಾಯಕ ಸೌರಭ ಕಾಲಿಯ ಅವರಿಗಂತೂ ಚಿತ್ರ ವಿಚಿತ್ರ ಹಿಂಸೆ ನೀಡಿದ್ದು ಜಗತ್ತಿನ ಯಾವ ಯೋಧನಿಗೂ ಬಾರದಿರಲಿ ಎಂದೇ ಪ್ರಾರ್ಥಿಸಬೇಕುಸೌರಭ ಕಾಲಿಯ ಅವರ ಕೈ ಕಾಲು ಬೆರಳುಗಳನ್ನು ಕತ್ತರಿಸಿದ್ದಲ್ಲದೇ, ಇಡೀ ಅವರ ದೇಹವನ್ನು ಸಿಗರೇಟಿನಿಂದ ಸುಟ್ಟಿದ್ದರು. ಕಾಯಿಸಿದ ಕಬ್ಬಣದ ಸಲಾಕೆಯನ್ನು ಕಿವಿಯೊಳಗೆ ಹಾಕಿದ್ದಲ್ಲದೇ, ಅವರ ಕಣ್ಣುಗಳನ್ನು ಕಿತ್ತು, ಜೀವಂತವಾಗಿ ಇರುವಾಗಲೇ ಅವರ ಮರ್ಮಾಂಗವನ್ನು ಕತ್ತರಿಸಿ ಹಾಕಿದ್ದರು. ಸುಮಾರು 22 ದಿನಗಳ ಕಾಲ ಚಿತ್ರಹಿಂಸೆಗೆ ತುತ್ತಾಗಿ ಸೌರಭ್ ಕಾಲಿಯ ವೀರ ಮರಣವನ್ನು ಹೊಂದಿದರು.

vajapeye

ಅಂದಿನ ಪ್ರಧಾನಿಗಳಾಗಿದ್ದ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಅವರು 1999ರ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಹೋಗಿ ಉಭಯ ದೇಶಗಳ ನಡುವೆ ಶಾಂತಿ ಇಂದೆ ಇರಬೇಕು ಎಂಬ ಸ್ನೇಹ ಹಸ್ತವನ್ನು ಚಾಚಿದ್ದಲ್ಲದೇ, ಕಾಶ್ಮೀರದ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ದೆಹಲಿ-ಲಾಹೋರ್‌ ನಡುವೆ ಬಸ್‌ ಸಂಚಾರಕ್ಕೆ ಚಾಲನೆ ನೀಡಿದ್ದಲ್ಲದೇ ಸಂಜೋತಾ ಎಕ್ಸ್ ಪ್ರೆಸ್ ರೈಲಿನ ಸಂಚಾರಕ್ಕೂ ಅನುವು ಮಾಡಿಕೊಟ್ಟಿದ್ದರೆ, ಪಾಪಿಸ್ಥಾನ ಅದೆಲ್ಲವನ್ನು ಮರೆತು ಕಾಲು ಕೆರೆದುಕೊಂಡು ಯುದ್ದಕ್ಕೆ ಸನ್ನದ್ಥವಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ