ನೀವು ಪ್ರೇಮಿಗಳಾಗಿದ್ದು ಆಗಾಗ ಪಾರ್ಕ್‌ ನಲ್ಲಿ ಭೇಟಿಯಾಗುತ್ತಿದ್ದರೆ, ಈ ಮಾಹಿತಿ ನಿಮಗಾಗಿಯೇ ಇದೆ. ಯುವಕ ಯುವತಿಯರು ಪರಸ್ಪರ ಆಕರ್ಷಣೆಗೆ ಒಳಗಾಗಿ ಪ್ರೀತಿಸುವುದು ಸಹಜ. ಆ ಪ್ರೀತಿ ಮುಂದುವರಿಯಬೇಕಾದರೆ ಅವರು ಆಗಾಗ ಭೇಟಿ ಮಾಡುತ್ತಿರಬೇಕು. ಪ್ರೇಮಿಗಳಿಗೆ ಭೇಟಿ ಮಾಡುವುದೇ ಒಂದು ತೊಡಕಾಗಿಬಿಡುತ್ತದೆ. ಕಾಲೇಜು ಅಥವಾ ವರ್ಕಿಂಗ್‌ ಪ್ಲೇಸ್‌ ನಲ್ಲಿ ಸಂಬಂಧಿಸಿದರೆ ಲೈಲಾ-ಮಜ್ನು ಎಂಬ ಹಣೆಪಟ್ಟಿ ಸಿದ್ಧವಾಗಿಬಿಡುತ್ತದೆ. ಯಾವುದಾದರೂ ಪಬ್ಲಿಕ್‌ ಪ್ಲೇಸ್‌ ನಲ್ಲಿ ಭೇಟಿ ಮಾಡಿದರೆ ಪುಂಡರು ಹಿಂದೆ ಬೀಳುತ್ತಾರೆ.

ಹಾಗೆ ನೋಡಿದರೆ ಇಂದಿನ ದಿನಗಳಲ್ಲಿ ಇಂತಹ ಭೇಟಿಗೆ ಮಾಲ್ ‌ಗಳು ಸೂಕ್ತ ಸ್ಥಳವೆನಿಸುತ್ತದೆ. ಆದರೆ ಅಲ್ಲಿ ಪರಿಚಿತರ ಕಣ್ಣಿಗೆ ಬೀಳುವ ಸಂಭವವಿರುತ್ತದೆ. ಜೊತೆಗೆ ಅಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗುವ ಸಾಧ್ಯತೆಯೂ ಇರುತ್ತದೆ. ಇವೆಲ್ಲಕ್ಕಿಂತ ಪಾರ್ಕ್ ನಂತಹ ಸ್ಥಳದಲ್ಲಿ ಇದಾವ ಭಯವೂ ಇರುದಿಲ್ಲ. ಅನಗತ್ಯ ಖರ್ಚೂ ಬೀಳುವುದಿಲ್ಲ ಎಂದು ಲೆಕ್ಕ ಹಾಕಿದರೆ, ಅಲ್ಲಿ ಪುಂಡ ಪೋಕರಿಗಳ ಕಾಟವನ್ನು ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ.

ಹಿಂದೆ ಪ್ರೇಮಿಗಳು ಪರಸ್ಪರ ಭೇಟಿಯಾಗಲು ಕಾತರಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಈ ಪ್ರೀತಿಯ ಪಕ್ಷಿಗಳು ಬಹಿರಂಗವಾಗಿ ಪ್ರಣಯ ಲೀಲೆಯಲ್ಲಿ ಮೈಮರೆತಿರುತ್ತವೆ. ಕೆಲವರು ಪಾರ್ಕ್‌ ನಲ್ಲಿ, ಕೆಲವರು ನಿರ್ಜನ ರಸ್ತೆಯ ಬದಿಯಲ್ಲಿದ್ದರೆ ಮತ್ತೆ ಕೆಲವರು ಖಾಲಿ ಕಟ್ಟಡಗಳ ಮರೆಯಲ್ಲಿ ಕುಳಿತು ಪ್ರೇಮ ಸಂಭಾಷಣೆಯಲ್ಲಿ ತಲ್ಲೀನರಾಗಿರುತ್ತಾರೆ.

ಆದರೆ ಈ ಜೋಡಿಗಳ ಪ್ರಣಯಲೀಲೆ ನಿರ್ವಿಘ್ನವಾಗಿ ನಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರನ್ನು ಬೆದರಿಸಿ ಸುಲಿಗೆ ಮಾಡುವ ಮಂದಿ ಅಲ್ಲೇ ಸುಳಿದಾಡುತ್ತಿರುತ್ತಾರೆ. ಇಂಥವರು ವೇಷ ಬದಲಿಸಿ ಬರುವುದರಿಂದ ಅವರನ್ನು ಪತ್ತೆಹಚ್ಚುವುದು ಸುಲಭದ ಕೆಲಸವಲ್ಲ.

ರೇಖಾ ಮತ್ತು ಸುನೀಲ್ ‌ಒಳ್ಳೆಯ ಸ್ನೇಹಿತರು. ಕ್ರಮೇಣ ಅವರ ಸ್ನೇಹ ಪ್ರೇಮಕ್ಕೆ ತಿರುಗಿ ಅವರು ಆಗಾಗ ಭೇಟಿಯಾಗುತ್ತಿದ್ದರು. ಹೀಗೇ ಒಂದು ದಿನ ಅವರು ಪಾರ್ಕ್‌ ನಲ್ಲಿ ಬೆಂಚಿನ ಮೇಲೆ ಕುಳಿತು ಪ್ರೇಮ ಸಲ್ಲಾಪದಲ್ಲಿ ಮುಳುಗಿದರು. ರೊಮ್ಯಾಂಟಿಕ್‌ ಮೂಡ್ ನಲ್ಲಿದ್ದ ಅವರಿಗೆ ಸಮಯ ಸರಿದದ್ದೇ ತಿಳಿಯಲಿಲ್ಲ. ಕಡೆಗೆ ಕತ್ತಲು ಮುಸುಕಿದಾಗ ರೇಖಾ ಎಚ್ಚೆತ್ತಳು.``ಸುನೀಲ್‌, ನಾವಿನ್ನು ಹೊರಡೋಣ ಬಹಳ ತಡವಾಗಿದೆ,'' ಎಂದಳು ರೇಖಾ.

ಹೊರಡುವ ಮೊದಲು ಇಬ್ಬರೂ ಪ್ರೀತಿಯ ಆಲಿಂಗನದಲ್ಲಿ ಮೈ ಮರೆತಿದ್ದಾಗ ಇಬ್ಬರು ಪೊಲೀಸ್‌ ರು ಅಲ್ಲಿಗೆ ಬಂದರು. ಅವರಲ್ಲಿ ಒಬ್ಬನು ಸುನೀಲ್ ‌ನ ಕಾಲರ್‌ ಹಿಡಿದು ಕೆನ್ನೆಗೆ ಬಾರಿಸಿದ. ಮತ್ತೊಬ್ಬನು ರೇಖಾಳನ್ನು ಕೆಕ್ಕರಿಸಿ ನೋಡಿದ. ಸುನೀಲ್ ‌ಮತ್ತು ರೇಖಾರಿಗೆ ಏನಾಗುತ್ತಿದೆ ಎಂದೇ ಅರ್ಥವಾಗಲಿಲ್ಲ. ಪೊಲೀಸರು ರೇಖಾಳ ಉಂಗುರ, ಸರ ಮತ್ತು ಸುನೀಲ್ ನ ಎಟಿಎಂ ಕಾರ್ಡ್ ಮತ್ತು ಮನಿಪರ್ಸ್‌ ನ್ನು ಕಿತ್ತುಕೊಂಡರು. ಅಲ್ಲದೆ, ಮತ್ತೆ ಈ ಪಾರ್ಕ್‌ ಗೆ ಬರಬಾರದೆಂದೂ ಮತ್ತು ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದೂ ಎಚ್ಚರಿಕೆ ನೀಡಿದರು.

ಆಗ ರೇಖಾ ಮತ್ತು ಸುನೀಲ್ ‌ಬಹಳ ಹೆದರಿದರು. ಒಂದೂ ಮಾತನಾಡದೆ ಅಲ್ಲಿಂದ ಹೊರಟುಹೋದರು. ಆದರೆ ಅವರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಸುಳಿದಾಡಿದವು. ಪೊಲೀಸ್‌ ನವರು ಹೀಗೇಕೆ ಮಾಡಿದರು? ಹೆಚ್ಚೆಂದರೆ ಗದರಿಸುತ್ತಾರೆ, ಎಚ್ಚರಿಸುತ್ತಾರೆ. ಆದರೆ ನಮ್ಮನ್ನು ಲೂಟಿ ಮಾಡಿದರಲ್ಲ ಎಂದು ಚಿಂತಿಸಿದರು. ಕಡೆಗೆ ಇಬ್ಬರೂ ಪೊಲೀಸ್‌ ಸ್ಟೇಷನ್‌ ಗೆ ಹೋಗೋಣವೆಂದು ಆಲೋಚಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ