ಅವಿವಾಹಿತ ಗಿರೀಶ್‌ ವಿವಾಹಿತ ಗೆಳೆಯ ಸತೀಶ್‌ ನನ್ನು ಹುಡುಕಿಕೊಂಡು ಬಂದ.

ಗಿರೀಶ್‌ : ಅಲ್ಲ, ಜನ ಮದುವೆ ಆದ್ಮೇಲೆ ಹೆಂಡತಿಗೆ ಅಷ್ಟೊಂದು ಹೆದರಿಕೊಳ್ಳೋದು ಯಾಕೆ ಅಂತ?

ಸತೀಶ್‌ : ಬೇರೆಯವರು ಹೇಗೋ ಏನೋ.... ನಾನಂತೂ ಹಾಗಲ್ಲಪ್ಪ. ಇರು, ನೀನು ಮ್ಯಾಚ್‌ ನೋಡ್ತಿರು. ನನ್ನ ಹೆಂಡತಿ ಹೊರಗೆ ಹೋಗಿದ್ದಾಳೆ. ಅವಳು ಬರುಷ್ಟರಲ್ಲಿ ಪಾತ್ರೆ ಉಜ್ಜಿ ಬಂದುಬಿಡ್ತೀನಿ.

ಸೀನ : ಪಾಪದ ಕೊಡ ತುಂಬಿದರೆ ಸಾವು ತಾನಾಗಿ ಹುಡುಕಿಕೊಂಡು ಬರುತ್ತೆ ಅಂತಾರೆ. ಅದೇ ರೀತಿ ಸಂತೋಷ ತುಂಬಿ ತುಳುಕಿದರೆ ಮನುಷ್ಯ ಏನಾಗುತ್ತಾನೆ?

ನಾಣಿ : ಗಂಡಸಾದ ಪ್ರಾಣಿ ಬ್ಯಾಚುಲರ್‌ ಆಗಿ ನೆಮ್ಮದಿಯಾಗಿ ಸಂತೋಷವಾಗಿ ಹಾರಾಡಿಕೊಂಡಿರ್ತಾನೆ. ಅದು ಅತಿಯಾದಾಗ ತಾನಾಗಿ ಮದುವೆಗೆ ಒಪ್ಪಿಕೊಳ್ತಾನೆ. ಇದಕ್ಕಿಂತ ಬೇರೆ ಉದಾಹರಣೆ ಬೇಕಾ?

ಪತಿಪತ್ನಿ ಮಧ್ಯೆ ಘನಘೋರ ಜಗಳ ನಡೆದಿತ್ತು. 1 ವಾರ ಆದರೂ ಮಾತುಕಥೆಯೇ ಇಲ್ಲದ ಪರಿಸ್ಥಿತಿ ಎದುರಾಗಿತ್ತು. ಇಬ್ಬರೂ ಇದರಿಂದ ರೋಸಿಹೋಗಿದ್ದರು.

ಪತ್ನಿ : ನೋಡ್ರಿ, ಎರಡು ದೇಹ ಒಂದು ಜೀವ ಅಂತ ನಾವಿರಬೇಕು. ಇಂಥ ಗಲಾಟೆ ಬೇಡ.

ಪತಿ : ಸರಿ, ಅದಕ್ಕೆ ಏನು ಮಾಡಬೇಕು ಅಂತೀಯಾ?

ಪತ್ನಿ : ತಪ್ಪೆಲ್ಲ ನನ್ನದೇ, ನನ್ನನ್ನು ಕ್ಷಮಿಸಿ ಬಿಡು ಅಂತ ಮೊದಲು ನೀವು ನನ್ನನ್ನು ಕೇಳಿಕೊಳ್ಳಿ. ನಾನು ಎಲ್ಲವನ್ನೂ ಕ್ಷಮಿಸಿ ಬಿಡ್ತೀನಿ. ಮತ್ತೆ ಮೊದಲಿನಂತೆ ಒಂದಾಗಿರೋಣ.

ಪತ್ನಿ : ನೋಡ್ರಿ... ನನಗೆ ಸಾಕಾಗಿ ಹೋಗಿದೆ. ಮನೆ ನೋಡಿಕೊಳ್ಳಬೇಕು, ಮಕ್ಕಳನ್ನು ಗಮನಿಸಬೇಕು, ನಿಮ್ಮಮ್ಮನಿಗೆ ಟೈಂ ಟೈಮಿಗೆ ಮಾಡಿ ಹಾಕಿ ಔಷಧಿ ಕೊಡುತ್ತಿರಬೇಕು... ಆದರೆ ನೀವು ಇದ್ದೀರಿ.... ಏನು ಮಾಡ್ತೀರಿ ಅಂತ?

ಪತಿ : ಡಾರ್ಲಿಂಗ್‌, ಈ ನಿನ್ನ ಪ್ರೇಮ ಸರೋವರದಂಥ ಕಂಗಳಲ್ಲಿ ನಾನು ಸದಾ ಕರಗಿ ಹೋಗ್ತೀನಿ, ನಿನ್ನ ನೋಡುವುದಕ್ಕಿಂತಲೂ ಬೇರೇನು ಭಾಗ್ಯ?

ಪತ್ನಿ : ಥೂ ಹೋಗೀಪ್ಪ... ಮದುವೆ ಆಗಿ 2 ಮಕ್ಕಳಾದರೂ ಇನ್ನೂ ಹುಡುಗಾಟ ಬಿಟ್ಟಿಲ್ಲ ನೀವು. ರಾತ್ರಿಗೆ ನಿಮಗೆ ಪಾಯಸ ಮಾಡಲೋ ಕೇಸರಿಭಾತ್‌ ಮಾಡಲೋ?

ಗುಂಡ : ಮಾಮೂಲಿ ಅದೇ ಕ್ಯಾಲೆಂಡರ್‌ ಬೇಡ, ಹೊಸ ತರಹದ್ದು ಕೊಡಿ.

ಅಂಗಡಿಯನು : ಯಾವ ಕಂಪನಿಯದು ಬೇಕು ಅಂತೀರಾ?

ಗುಂಡ : ಯಾವುದರಲ್ಲಿ ಹೆಚ್ಚು ಹೆಚ್ಚು ರಜೆಗಳಿವೆಯೋ ಅದು!

ಪತ್ನಿ : ನೋಡ್ರಿ.... ಮದುವೆ ಆಗಿ 5 ವರ್ಷ ಆಯ್ತು. ಈಗ್ಲೂ ಇದನ್ನು ಹೇಳೋಕ್ಕೆ ನನಗೆ ಬಹಳ ನಾಚಿಕೆ ಆಗುತ್ತೆ. ಐ ಲವ್ ಯೂ!

ಪತಿ : ಏನೇ ಇದು ಇವತ್ತು ಇಷ್ಟೊಂದು ಲವ್? ಮೊದಲು ನನಗೆ ದೃಷ್ಟಿ ತೆಗಿ.

ಪತ್ನಿ : ಇವತ್ತು ನಿಮ್ಮ ಬರ್ತ್‌ ಡೇ  ಅಲ್ವಾ.....? ಅದಕ್ಕೆ ಸ್ವಲ್ಪ ಜಾಸ್ತಿ ಲವ್......

ಪತಿ : ಸರಿ, ಅದಕ್ಕೇನೀಗ.....?

ಪತ್ನಿ : ರೀ.... ನಿಮ್ಮ ಬರ್ತ್‌ ಡೇ ಅಂತ ಹೊಸ ಡ್ರೆಸ್‌ ತಂದಿದ್ದೀನಿ. ಅದನ್ನು ನೋಡಿದ್ರೆ ನೀವು ಬಹಳ ಖುಷಿ ಪಡ್ತೀರಿ.

ಪತಿ : ಹೌದಾ ಡಾರ್ಲಿಂಗ್‌, ಸೋ ನೈಸ್‌ ಆಫ್‌ ಯು! ಎಲ್ಲಿ ಕೊಡು ನೋಡೋಣ.....

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ