ನಮಗೆಲ್ಲರಿಗೂ ತಿಳಿದಿರುವಂತೆ ಸೇತುವೆ ಎಂದರೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶವನ್ನು ಸಂಪರ್ಕಿಸುವ ಕೊಂಡಿ. ಸಾಮಾನ್ಯವಾಗಿ ಈ ಸೇತೆವೆಗಳನ್ನು ಕಾಲುವೆ, ಹಳ್ಳ, ನದಿ, ಕಣಿವೆ, ಕೊರಕಲು ಮುಂತಾದ ನೈಸರ್ಗಿಕ ಅಡಚಣೆಗಳಿರುವ ಪ್ರದೇಶದವನ್ನು ಸುಲಭವಾಗಿ ದಾಟಲು ನಿರ್ಮಿಸಿರುವ ಮೂಲಭೂತ ಸೌಕರ್ಯ ಅದರಲ್ಲೂ ವಿಶೇಷವಾಗಿ ಸಾರಿಗೆ ಸಂಪರ್ಕದ ಮುಖ್ಯ ಕೊಂಡಿ ಎಂದರೂ ತಪ್ಪಾಗದು. ಹಾಗಾಗಿ ಈ ಸೇತುವೆಗಳು ಬಹಳ ಭದ್ರವಾಗಿರಬೇಕು. ಆದರೆ ಇಲ್ಲೊಂದು ಐತಿಹಾಸಿಕ ಸೇತುವೆ, ಸಮುದ್ರದ ಮಧ್ಯೆ ಇದ್ದು ಆ ಹಾದಿಯಲ್ಲಿ ಹಡಗುಗಳು ಬರುವಾಗ ಆ ಸೇತುವೆ ಇಭ್ಭಾಗವಾಗಿ ಮತ್ತೆ ಒಂದಾಗಿ ಸೇರಿಕೊಳ್ಳುವ ಅಪರೂಪದ ಸೇತುವೆ ಬಗ್ಗೆ ತಿಳಿಯೋಣ ಬನ್ನಿ.

ಈ ರೀತಿಯಾಗಿ ಪೀಠಿಕೆ ಹಾಕುತ್ತಿದ್ದಂತೆಯೇ ಬಹುತೇಕರಿಗೆ ತಮಿಳುನಾಡಿನ ತುದಿಯಲ್ಲಿರುವ ಮಂಡಪಂ ಪಟ್ಟಣವನ್ನು ಪಂಬನ್ ದ್ವೀಪದಲ್ಲಿರುವ ರಾಮೇಶ್ವರಂನೊಂದಿಗೆ ಸಂಪರ್ಕಿಸುವ ರೈಲ್ವೆ ಸೇತುವೆ ಎಂದು ತಿಳಿದು ಬರುತ್ತದೆ. ತಮಿಳುನಾಡಿನಲ್ಲಿರುವ ಈ ಶ್ರೀ ಕ್ಷೇತ್ರ ರಾಮೇಶ್ವರಂನಲ್ಲಿರುವ ವಿಶಾಲವಾದ ರಾಮಲಿಂಗೇಶ್ವರ ಜ್ಯೋತಿರ್ಲಿಂಗ ಹಿಂದೂಗಳ ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಒಂದಾಗಿರುವುದಲ್ಲದೇ, ನಮ್ಮೆ ನೆರೆಯ ರಾಷ್ಟ್ರ ಶ್ರೀಲಂಕಾಕ್ಕೆ ಅತ್ಯಂತ ಸಮೀಪದಲ್ಲಿರುವ ಭೂಭಾಗವಾಗಿದೆ. ತ್ರೇತಾಯುಗದಲ್ಲಿ ಪ್ರಭು ಶ್ರೀರಾಮನ ಧರ್ಮಪತ್ನಿ ಸೀತಾಮಾತೆಯನ್ನು ರಾವಣ ಲಂಕೆಗೆ ಹೊತ್ತೊಯ್ದಿದ್ದಾಗ ಇದೇ ರಾಮೇಶ್ವರದ ಧನುಷ್ಕೋಟಿಯಿಂದಲೇ ರಾಮ ತನ್ನ ಕಪಿಸೇನೆಗಳ ನೆರೆವಿನಿಂದ ಲಂಕೆಯವರೆಗೂ ಸೇತುವೆಯನ್ನು ಕಟ್ಟಿ ಸಮುದ್ರವನ್ನು ದಾಟಿ ರಾವಣನ್ನು ಸಂಹಾರ ಮಾಡಿ ಸೀತೆಯನ್ನು ಕರೆತಂದದ್ದರ ಕುರುಹಾಗಿ ಇಂದಿಗೂ ನೀರಿನಲ್ಲಿ ಮುಳುಗಿರುವ ಆ ಭವ್ಯವಾದ ರಾಮಸೇತು ಸೇತುವೆಯನ್ನು ಅಂತರಿಕ್ಷದ ಉಪಗ್ರಹಗಳ ಮೂಲಕ ಕಾಣಬಹುದಾಗಿದೆ.

pamban2

ಈ ರೀತಿಯಾಗಿ ಶ್ರೀಲಂಕಾಕ್ಕೆ ಅತ್ಯಂತ ಸಮೀಪದಲ್ಲಿರುವ ಈ ರಾಮೇಶ್ವರಂ ದ್ವೀಪ ಎಂದೂ ಕರೆಯಲ್ಪಡುವ ಪಂಬನ್ ದ್ವೀಪದೊಂದಿಗೆ ತಮಿಳುನಾಡನ್ನು ಸಂಪರ್ಕಿಸುವ ಸಲುವಾಗಿ ಅಂದಿನ ಬ್ರಿಟಿಷ್ ಸರ್ಕಾರ ಸಮುದ್ರದ ಮೇಲೆ ಅಂದಿನ ಕಾಲದಲ್ಲೇ ಅತ್ಯಂತ ಉದ್ದದ್ದ ಸೇತುವೆಯನ್ನು ನಿರ್ಮಿಸಲು ಬ್ರಿಟೀಷರು ನಿರ್ಧರಿಸಿ 1887 ರಲ್ಲಿ ಆರಂಭವಾದ ಈ ಸೇತುವೆ 1912 ರಲ್ಲಿ ಪೂರ್ಣಗೊಂಡು ಅಧಿಕೃತವಾಗಿ 24 ಫೆಬ್ರವರಿ 1914 ರಂದು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಯಾಯಿತು. ಈ ಸೇತುವೆಯ ನಿರ್ಮಾಣದ ಜೊತೆಗೆ ಆ ಸೇತುವೆ ನಿರ್ಮಿಸಿದ ಕಾರ್ಮಿಕರೇ ರಾಮಸೇತು ನಿರ್ಮಾಣದ ಕಾಲದಲ್ಲಿ ಮುಖ್ಯ ಇಂಜೀನಿಯರ್ ಆಗಿದ್ದ ನಳ ಮತ್ತು ನೀಲ ಅವರ ನೆನಪಿನಾರ್ಥವಾಗಿ ಏಳು ಗುಮ್ಮಟಗಳನ್ನು ಹೊಂದಿರುವ ಪ್ರಸಿದ್ಧ ನೀಲ್-ಮಂದಿರವನ್ನೂ ಸಹ ಅಂದಿನ ಕಾಲದಲ್ಲೇ ಇಲ್ಲಿ ನಿರ್ಮಿಸಿರುವುದು ಗಮನಾರ್ಹವಾಗಿದೆ.

pamban4

ಈ ಸೇತುವೆಯ ಮುಖ್ಯ ವಿಶೇಷತೆಯೆಂದರೆ ಇದು ಪಲ್ಕ್ ಸ್ಟ್ರೈಟ್ / ಜಲಸಂಧಿ ಮೇಲೆ ನಿರ್ಮಿಸಲ್ಪಟ್ಟ ಒಂದು ಕ್ಯಾಂಟಿಲಿವರ್ ಸೇತುವೆಯಾಗಿದೆ. ಸುಮಾರು 2.3 ಕಿ.ಮೀ. ಉದ್ದದ ಈ ಸೇತುವೆ ಅಂದಿನ ಕಾಲಕ್ಕೆ ಸಮುದ್ರದ ಮೇಲೆ ನಿರ್ಮಾಣ ಗೊಂಡ ಮೊದಲ ಮತ್ತು ಅತ್ಯಂತ ಉದ್ದದ ಸೇತುವೆ ಎಂಬ ಕೀರ್ತಿಯನ್ನು ಪಡೆದಿತ್ತು. ಅಂದಿನ ಕಾಲದಲ್ಲೇ ಈ ಸೇತುವೆಯು ದಕ್ಷಿಣ ಭಾರತೀಯ ರೈಲ್ವೆ ಯೋಜನೆಯ ಭಾಗವಾಗಿ ನಿರ್ಮಾಣಗೊಂಡಿತು. ರೈಲ್ವೆ ಸೇತುವೆಯು ಸಮುದ್ರ ಮಟ್ಟದಿಂದ 12.5 ಮೀಟರ್ (41 ಅಡಿ) ಎತ್ತರದಲ್ಲಿದೆ ಮತ್ತು 6,776 ಅಡಿ ಉದ್ದವಾಗಿದೆ. ಇಡೀ ಸೇತುವೆಯು ಸುಮಾರು 143 ಪಿಯರ್ಗಳನ್ನು ಒಳಗೊಂಡಿದ್ದು ಶೆರ್ಜರ್ ರೋಲಿಂಗ್ ಟೈಪ್ ಲಿಫ್ಟ್ ಸ್ಪ್ಯಾನ್ನೊಂದಿಗೆ ಡಬಲ್-ಲೀಫ್ ಬ್ಯಾಸ್ಕ್ಯೂಲ್ ವಿಭಾಗವನ್ನು ಹೊಂದಿದೆ. ಸೇತುವೆಯ ಕ್ಯಾಂಟಿಲಿವರ್ ಅಂಶವೆಂದರೆ ಈ ಸೇತುವೆಯ ಮಧ್ಯಭಾಗದ ಕೆಳಗೆ ಸಣ್ಣ ಪುಟ್ಟ ನಾಡ ದೋಣಿಗಳು ಸುಲಭವಾಗಿ ಹಾದು ಹೋಗಲು ಅವಕಾಶ ನೀಡುತ್ತದೆ. ಕಾಂಕ್ರೀಟ್ ಪಿಯರ್ಗಳ ಸಹಾಯದಿಂದ ನಿರ್ಮಾಣವಾಗಿರುವ ಈ ಸೇತುವೆಯ ಮಧ್ಯೆ ಎರಡು-ಎಲೆಯ ಬಾಸ್ಕುಲ್ ವಿಭಾಗವನ್ನು ಹೊಂದಿದ್ದು ದೊಡ್ಡ ದೊಡ್ಡ ಎತ್ತರದ ಹಡಗುಗಳು ಈ ಸೇತುವೆ ಮೂಲಕ ಹಾದು ಹೋಗುವಾಗ ಅ ಡಬಲ್-ಲೀಫ್ ಬ್ಯಾಸ್ಕ್ಯೂಲ್ ಗಳನ್ನು ಲಿವರ್ಗಳನ್ನು ಬಳಸಿ ಕೈಯಾರೆ ತೆರೆಯಲಾಗುತ್ತದೆ. ಹೀಗೆ ಎತ್ತುವ ಅವಧಿಯ ಪ್ರತಿ ಅರ್ಧವು 415 ಟನ್ಗಳಷ್ಟು ತೂಗುತ್ತದೆ. ಹೀಗೆ ಸೇತುವೆಯ ಎರಡು ಎಲೆಗಳನ್ನು ಮೇಲಕ್ಕೆ ತೆರೆದುಕೊಂಡಾಗ ದೊಡ್ಡ ಹಡಗುಗಳು ಆ ಸೇತುವೆ ಮಧ್ಯಭಾಗದಲ್ಲಿ ಸುಲಭವಾಗಿ ಹಾದು ಹೋಗುವಂತಹ ವ್ಯವಸ್ಥೆಯನ್ನು ಅಂದಿನ ಕಾಲದಲ್ಲೇ ಮಾಡಿರುವುದು ನಿಜಕ್ಕೂ ಅಚ್ಚರಿಯ ಮತ್ತು ಗಮನಾರ್ಹವಾದ ಸಂಗತಿಯಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ