ನಟಿ, ಉದ್ಯಮಿ

ಫಿಟ್‌ನೆಸ್‌ ಐಕಾನ್‌ ಶಿಲ್ಪಾ ತಮ್ಮ ಎರಡನೇ ಇನಿಂಗ್ಸ್ ನಲ್ಲಿ ಯಶಸ್ವೀ ಉದ್ಯಮಿ ಎನಿಸಿ, ಮದುವೆ ಆದಮಾತ್ರಕ್ಕೆ ಹೆಣ್ಣು ತನ್ನ ಅಸ್ತಿತ್ವ ಮುಗಿಯಿತು ಎಂದುಕೊಳ್ಳಬಾರದು ಎಂಬುದನ್ನು ಸಾಬೀತುಪಡಿಸಿದ್ದಾರೆ!

ಯಶಸ್ವೀ ನಟಿ, ಯಶಸ್ವೀ ಬಿಸ್‌ನೆಸ್‌ ವುಮನ್‌, ಬ್ಯೂಟಿಫುಲ್ ಲೈಫ್‌ ಜೊತೆ ಕೇರಿಂಗ್‌ ಮದರ್‌ ಅನಿಸಿರುವ ಶಿಲ್ಪಾಶೆಟ್ಟಿ ಕುಂದ್ರಾ ತಮ್ಮ ಫಿಟ್‌ನೆಸ್‌ ಗ್ಲಾಮರ್‌ನಿಂದ ಇಂದಿಗೂ ಬಾಲಿವುಡ್‌ನಲ್ಲಿ ಹೊಸ ನಟಿಯರಿಗೆ ಭಯ ಹುಟ್ಟಿಸುತ್ತಾರೆ. ಇತ್ತೀಚೆಗೆ ಈಕೆ ತಮ್ಮ ಫಿಟ್‌ನೆಸ್‌ ಚಾನೆಲ್ ಮೂಲಕ ಜನರಿಗೆ ಆರೋಗ್ಯ ಮತ್ತು ಆಹಾರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮಾಡೆಲಿಂಗ್‌ ನಂತರ 1993ರಲ್ಲಿ `ಬಾಝಿಗರ್‌' ಚಿತ್ರದಿಂದ ಎಂಟ್ರಿ ಕೊಟ್ಟ ಈಕೆ, ಹಲವಾರು ಯಶಸ್ವೀ ಚಿತ್ರಗಳ ನಾಯಕಿ ಎನಿಸಿದ್ದಾರೆ. ಕನ್ನಡದಲ್ಲಿ `ಪ್ರೀತ್ಸೋದ್‌ ತಪ್ಪಾ, ಆಟೋ ಶಂಕರ್‌' ಚಿತ್ರಗಳಲ್ಲಿ ಮಿಂಚಿದ್ದಾರೆ. ತಮಿಳು, ತೆಲುಗು ಚಿತ್ರಗಳಲ್ಲೂ ಈಕೆ ಹೆಸರುವಾಸಿ. ಮುಖ್ಯವಾಗಿ ಈಕೆ ಬ್ರಿಟಿಷ್‌ ಟಿ.ವಿ ಶೋ `ಬಿಗ್‌ ಬ್ರದರ್‌'ನಲ್ಲಿ (ನಮ್ಮಲ್ಲಿನ ಬಿಗ್‌ಬಾಸ್‌ನಂತೆ) ತನ್ನ ಕುರಿತಾಗಿ ವರ್ಣಭೇದ ನೀತಿ ತೋರಿದವರನ್ನು ಖಂಡಿಸಿ, ಅದರಲ್ಲಿ ವಿನ್ನರ್‌ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ಪಕ್ಕಾ ವಾಣಿಜ್ಯೋದ್ಯಮಿ ರಾಜ್‌ ಕುಂದ್ರಾರೊಂದಿಗೆ ಮದುವೆಯಾಗಿ, ಆಕೆ ಸಿನಿ ಪ್ರೊಡ್ಯೂಸರ್‌ ಮಾತ್ರವಲ್ಲದೆ,  ವರೆಗೂ ತಮ್ಮ ನೈಪುಣ್ಯ ಪ್ರದರ್ಶಿಸಿದರು. ಈಕೆ ತಮ್ಮ 4 ವರ್ಷದ ಮಗ ವಿಯಾನ್‌ನ ಜವಾಬ್ದಾರಿ ಜೊತೆಗೆ ಫಿಟ್‌ನೆಸ್‌  ಬಿಸ್‌ನೆಸ್‌ ಹೇಗೆ ಸಂಭಾಳಿಸುತ್ತಾರೆ, ತಿಳಿಯೋಣ ಬನ್ನಿ.

ನೀವು ಯಶಸ್ವೀ ಉದ್ಯಮಿ ಎನಿಸಿದ್ದೀರಿ. ಬಿಸ್‌ನೆಸ್‌ಗೆ ನಿಮಗೆ ಎಲ್ಲಿಂದ ಪ್ರೇರಣೆ ಸಿಕ್ಕಿತು? ಇದನ್ನು ಹೇಗೆ ಆರಂಭಿಸಿದಿರಿ?

ನಾನು ಕುಂದ್ರಾ ಆಗುವ ಮೊದಲು ಶೆಟ್ಟಿ, ಮಂಗಳೂರಿನವಳು! ನಮ್ಮಂಥ ಶೆಟ್ಟಿಯವರಿಗೆ ರಕ್ತದಲ್ಲೇ ಬಿಸ್‌ನೆಸ್‌ ಬೆರೆತಿರುತ್ತದೆ. ನನ್ನ ಅಪ್ಪ ಬಿಸ್‌ನೆಸ್‌ ಮ್ಯಾನ್‌, ಹಾಗಾಗಿ ಬಾಲ್ಯದಿಂದಲೇ ಆ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೆ. ಸಿನಿಮಾಗೆ ಮುಂಚೆ ನಾನು ಮಾಡೆಲಿಂಗ್‌ ಮಾಡುತ್ತಿದ್ದೆ. ಆಗಲೇ ನಾನು ಮುಂದೆ ಬಿಸ್‌ನೆಸ್‌ಗೆ ಇಳಿಯಬೇಕೆಂದು ಐಡಿಯಾ ಹಾಕಿಕೊಂಡಿದ್ದೆ. ಒಬ್ಬ ಉದ್ಯಮಿಯ ಕೈಹಿಡಿದು, ನಾನೂ ಸೀರಿಯಸ್‌ ಆಗಿ ಈ ಕ್ಷೇತ್ರಕ್ಕೆ ಇಳಿಯಬೇಕೆನಿಸಿತು. ಹಾಗಾಗಿ ಶುರು ಮಾಡಿದೆ. ಕೇವಲ ಹಣಕ್ಕಾಗಿ ನಾನು ಬಿಸ್‌ನೆಸ್‌ ಮಾಡುತ್ತಿಲ್ಲ. ಯಾರಾದರೂ ಬಂದು ನನಗೆ ಈ ಹೊಸ ಪ್ರಾಜೆಕ್ಟ್ ನಲ್ಲಿ ಬೇಕಾದಷ್ಟು ಹಣ ಬರುತ್ತದೆ ಎಂದರೆ, ಅದು ನನಗೆ ಇಷ್ಟವಾಗದಿದ್ದ ಪಕ್ಷದಲ್ಲಿ, ಅದರಲ್ಲಿ ಕೋಟ್ಯಂತರ ಲಾಭ ಬಂದರೂ ಆ ಬಿಸ್‌ನೆಸ್‌ ನನಗೆ ಬೇಡ!

ರಾಜ್‌ ಹೇಳುವ ಪ್ರಕಾರ, ನನ್ನ ಮನಸ್ಸಿಗೆ ಬಹಳ ಒಪ್ಪಿದಂಥ ಕ್ಷೇತ್ರ ಆರಿಸಿಕೊಂಡೆ. ಹಾಗಾಗಿ ಸಿನಿಮಾ ನಿರ್ಮಾಣಕ್ಕೆ ಬಂದೆ. ಇದೇ ಇಂಡಸ್ಟ್ರಿಯಲ್ಲಿ ಮೊದಲಿನಿಂದ ಇದ್ದವಳು, ಇದರ ಆಗುಹೋಗುಗಳ ಪಕ್ಕಾ ಅರಿವಿದೆ. ನಟಿಸುವಾಗಿನಿಂದಲೇ ಮುಂದೆ ನಾನು ನಿರ್ಮಾಪಕಿ ಆಗಲೇಬೇಕೆಂಬ ಆಸಕ್ತಿ ಹೊಂದಿದ್ದೆ. ನನ್ನ ನಿರ್ಮಾಣದ ಮೊದಲ ಚಿತ್ರ ಅಷ್ಟೇನೂ ಹಿಟ್‌ ಎನಿಸಲಿಲ್ಲ. ಅದಾದ ಮೇಲೆ ನಾನು ಫಿಟ್‌ನೆಸ್‌ ದಂಧೆಗಿಳಿದೆ, ಫಿಟ್‌ನೆಸ್‌ ಚಾನೆಲ್‌ ಆರಂಭಿಸಿದೆ. ಹೆಲ್ತ್ ಬಗ್ಗೆ ಒಂದು ಬುಕ್‌ ಬರೆದೆ. ಆನ್‌ಲೈನ್‌ ಬಿಸ್‌ನೆಸ್‌ ಸಹ ನಡೀತಿದೆ, ಅಲ್ಲಿನ ರೆಸ್ಪಾನ್ಸ್ ಎಷ್ಟೋ ಉತ್ತಮ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ