ಭಾರತದ ಕ್ರೀಡಾ ಪರಿಸರವನ್ನು ಬಲಪಡಿಸುವ ದಿಟ್ಟ ನಿಲುವಿನ ಭಾಗವಾಗಿ, ಭಾರತದ ಪ್ರಮುಖ ಖಾಸಗಿ ವಿತ್ತ ಸಂಸ್ಥೆಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್, ಲಕ್ಷ್ಯ ಶೂಟಿಂಗ್ ಕ್ಲಬ್ (LSC) ಜೊತೆಗೂಡಿ ‘ಆಕ್ಸಿಸ್ ಬ್ಯಾಂಕ್ ಲಕ್ಷ್ಯ ಶೂಟಿಂಗ್ ಕ್ಲಬ್ ಹೈ ಪರ್ಫಾರ್ಮೆನ್ಸ್ ಸೆಂಟರ್’ ಅನ್ನು ನವಿ ಮುಂಬೈನಲ್ಲಿ ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.

ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಆಕ್ಸಿಸ್ ಬ್ಯಾಂಕ್‌ನ ಗ್ರೂಪ್ ಎಕ್ಸಿಕ್ಯೂಟಿವ್ ಮತ್ತು ಹೆಡ್ – ಹೋಲ್ಸೇಲ್ ಬ್ಯಾಂಕ್ ಕವರೇಜ್ ಮತ್ತು ಸಸ್ಟೈನಬಿಲಿಟಿಯ ವಿಜಯ್ ಮುಲ್ಬಾಗಲ್ ಹಾಗೂ ಲಕ್ಷ್ಯ ಶೂಟಿಂಗ್ ಕ್ಲಬ್‌ನ ಅಧ್ಯಕ್ಷೆ ಸುಮಾ ಶಿರೂರ್ ಅವರು ಸಹಮತದ ಪತ್ರಕ್ಕೆ ಸಹಿ ಹಾಕಿದರು.

ಈ ವಿಶಿಷ್ಟ ಶೂಟಿಂಗ್ ಸೆಂಟರ್ ಅತ್ಯಾಧುನಿಕ ಸೌಕರ್ಯಗಳು, ಸಮಗ್ರ ಆಟಗಾರ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಸಮುದಾಯ ಭಾಗವಹಿಸುವ ಕ್ರಿಯೆಗಳು ಸೇರಿದಂತೆ ಪುಟಾಣಿ ಶೂಟರ್‌ಗಳ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ಒದಗಿಸುತ್ತದೆ. ಇದರಿಂದ ಒಲಿಂಪಿಕ್ ಮಟ್ಟದ ಶ್ರೇಷ್ಠ ಶೂಟರ್‌ಗಳನ್ನು ತರಬೇತುಗೊಳಿಸಲಾಗುವುದು ಮತ್ತು ಹೊಸ ಪ್ರತಿಭೆಗಳನ್ನು ಗುರುತಿಸಲು ಒಂದು ಮುಕ್ತ ವೇದಿಕೆಯನ್ನು ರೂಪಿಸಲಿದೆ.

ಲಕ್ಷ್ಯ ಶೂಟಿಂಗ್ ಕ್ಲಬ್ ದೇಶದಾದ್ಯಾಂತ ಯುವ ಶೂಟರ್‌ಗಳಿಗಾಗಿ ಪ್ರಸಿದ್ಧವಾದ ತರಬೇತಿ ಕೇಂದ್ರವಾಗಿದ್ದು, ಇದನ್ನು ಒಲಿಂಪಿಯನ್ ಹಾಗೂ ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತೆ ಸುಮಾ ಶಿರೂರ್ ಅವರು ಸ್ಥಾಪಿಸಿದ್ದಾರೆ. ಸುಮಾ ಶಿರೂರ್ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ರಾಷ್ಟ್ರೀಯ ಶೂಟಿಂಗ್ ತಂಡವನ್ನು ಐತಿಹಾಸಿಕ ಪದಕ ಗಳಿಕೆಗೆ ಮುನ್ನಡೆಸಿದ eminent ಕೋಚ್ ಆಗಿದ್ದಾರೆ.

ಲಕ್ಷ್ಯ ಶೂಟಿಂಗ್ ಕ್ಲಬ್ ಅಭಿವೃದ್ಧಿಗೆ ಆಕ್ಸಿಸ್ ಬ್ಯಾಂಕ್ ಆರ್ಥಿಕ ಹಾಗೂ ಮೂಲಸೌಕರ್ಯ ಬೆಂಬಲ ನೀಡಲಿದೆ. ಈ ಬೆಂಬಲದ ಮೂಲಕ ಸಮಗ್ರತೆಯೊಂದಿಗೆ ಅಭಿವೃದ್ಧಿಪಡಿಸಲಾಗುವ ಕೇಂದ್ರದಲ್ಲಿ ಈ ಕೆಳಗಿನ ಸೌಲಭ್ಯಗಳು ಇರಲಿವೆ:

ಏರ್ ರೈಫಲ್, ಏರ್ ಪಿಸ್ಟಲ್ ಮತ್ತು ನಿಗದಿತ 50 ಮೀ. ರೈಫಲ್‌ಗಾಗಿ ಇಬ್ಬರಿಗಾಗಿ ಸುಧಾರಿತ ಶೂಟಿಂಗ್ ಶ್ರೇಣಿಗಳು.

ಕಾರ್ಯಕ್ಷಮತೆಯ ವಿಶ್ಲೇಷಣೆ, ಗಾಯ ತಡೆಗಟ್ಟುವಿಕೆ ಮತ್ತು ಪುನಶ್ಚೇತನ ನೆರವುಗಳನ್ನು ಒಳಗೊಂಡ ಸ್ಪೋರ್ಟ್ಸ್ ಸೈನ್ಸ್ ಸೆಂಟರ್.

ಕ್ರೀಡಾಪಟುಗಳ ಭಾವನಾತ್ಮಕ ಹಾಗೂ ಮಾನಸಿಕ ಕ್ಷೇಮಾಭಿವೃದ್ಧಿಗೆ ಸಹಾಯ ಮಾಡುವ ಸ್ಪೋರ್ಟ್ಸ್ ಸೈಕೋಲಜಿ ಘಟಕ.

ಆಟಗಾರರು ಮತ್ತು ಕೋಚ್‌ಗಳಿಗಾಗಿ ವಾಸ್ತವ್ಯ ಸೌಲಭ್ಯಗಳು ಹಾಗೂ ಹೆಚ್ಚಿನ ತರಬೇತಿ ವ್ಯವಸ್ಥೆಗಳು

ಈ ಕೇಂದ್ರದಲ್ಲಿ ಪ್ರತಿವರ್ಷ 400ಕ್ಕಿಂತ ಹೆಚ್ಚು ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ.  ಭಾರತದ ಪ್ಯಾರಾಲಿಂಪಿಕ್ಸ್ ಮತ್ತು ಡೆಫ್ಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿದ ಪ್ಯಾರಾ ಕ್ರೀಡಾಪಟುಗಳು ಸೇರಿದಂತೆ ಎಲ್ಲರಿಗೂ ಇಲ್ಲಿ ಬೆಂಬಲ ಒದಗಿಸಲಾಗುತ್ತದೆ.

ಈ ಬಗ್ಗೆ ಮಾತನಾಡಿದ  ಆಕ್ಸಿಸ್ ಬ್ಯಾಂಕಿನ ಸಗಟು ಬ್ಯಾಂಕ್ ಕವರೇಜ್ & ಸುಸ್ಥಿರತೆಯ ಸಮೂಹ ಕಾರ್ಯನಿರ್ವಾಹಕ ಮತ್ತು ಮುಖ್ಯಸ್ಥ ವಿಜಯ್ ಮುಲ್ಬಾಗಲ್, "ಭಾರತದಲ್ಲಿ ವಿಶ್ವ ದರ್ಜೆಯ ಶೂಟಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಲು ನಾವು ಲಕ್ಷ್ಯ ಶೂಟಿಂಗ್ ಕ್ಲಬ್‌ನೊಂದಿಗೆ ಪಾಲುದಾರಿಕೆ ಹೊಂದಿರುವುದರಿಂದ ಭಾರತೀಯ ಕ್ರೀಡೆಗಳಿಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ನಾವು ಹೆಮ್ಮೆಪಡುತ್ತೇವೆ. ನಮ್ಮ ಉನ್ನತ ಶೂಟರ್‌ಗಳು ಒಲಿಂಪಿಕ್ ಮಟ್ಟದಲ್ಲಿ ಯಶಸ್ವಿಯಾಗಲು ಅನುವು ಮಾಡಿಕೊಡುವಲ್ಲಿ ಕೇಂದ್ರವು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಭಾರತದಲ್ಲಿ ಮುಂದಿನ ಪೀಳಿಗೆಯ ಶೂಟಿಂಗ್ ಪ್ರತಿಭೆಯನ್ನು ಗುರುತಿಸಲು ಮತ್ತು ಪೋಷಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ