ಸಾಮಾಜಿಕ ಜಾಲತಾಣಗಳಲ್ಲಿ ಹಾನಿಕಾರಕ ವಿಡಿಯೋ, ಸಂದೇಶಗಳನ್ನು ಕಳುಹಿಸುವುದೆಂದರೆ ಕೆಲವರಿಗೆ ಸುಳ್ಳು ಮತ್ತು ಹರಟೆ ಹೊಡೆಯುವುದನ್ನು ಬಿಟ್ಟರೆ ಬೇರೇನೂ ಸೂಚನೆ ಬರುವುದೇ ಇಲ್ಲ ಎಂದೆನಿಸುತ್ತದೆ. ಫೋಟೋ ಶಾಪ್‌ ಬಳಸಿ, ಕೆಲವರು ಮನೆಗಳಲ್ಲಷ್ಟೇ ಅಲ್ಲ, ದೇಶದ ವಿದೇಶಾಂಗ ನೀತಿಯನ್ನೂ ಹಾದಿ ತಪ್ಪಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋವನ್ನು ಬದಲಿಸಿ, ಮೋದಿಯವರ ಲೇಹ್‌ ಪ್ರವಾಸದ ಸಂದರ್ಭದಲ್ಲಿ 3 ನಾಯಿಗಳ ಜೊತೆ ತೋರಿಸಲಾಯಿತು. ಅದರಲ್ಲಿ ಒಂದು ಮುಖ ಪಾಕಿಸ್ತಾನದ್ದು, ಇನ್ನೊಂದು ಚೀನಾ ರಾಷ್ಟ್ರಾಧ್ಯಕ್ಷರದು, ಮೂರನೆಯದು ನೇಪಾಳ ಪ್ರಧಾನಿಯರದ್ದಾಗಿತ್ತು. ನಿಜಕ್ಕೂ ಇದು ಆಕ್ಷೇಪಾರ್ಹ ಸಂಗತಿ.

ನೇಪಾಳದ ಜೊತೆಗೆ ಭಾರತದ ಸಂಬಂಧ ಬಿಗಡಾಯಿಸಿದೆ. ಆದರೆ ಪಾಕಿಸ್ತಾನದ ಹಾಗೆ ವೈರಿ ದೇಶದ ಸ್ಥಾನದಲ್ಲಿಡುವಷ್ಟು ನೇಪಾಳದ ಜೊತೆಗಿನ ಸಂಬಂಧ ಕೆಟ್ಟಿಲ್ಲ. ನೇಪಾಳಕ್ಕೆ ಹೋಗಲು ಭಾರತೀಯರಿಗೆ ಈಗಲೂ ವೀಸಾ ಬೇಕಿಲ್ಲ. ಈಗಲೂ ಅಲ್ಲಿ ಭಾರತದ ರೂಪಾಯಿ ಚಲಾವಣೆಯಲ್ಲಿದೆ. ಲಕ್ಷಾಂತರ ನೇಪಾಳಿಗಳು ಭಾರತದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾವಿರಾರು ಜನ ಭಾರತೀಯರು ನೇಪಾಳದಲ್ಲಿದ್ದರು. ನೇಪಾಳದ ತರಾಯಿ ಪ್ರಾಂತ್ಯದ ಮಘೇಶಿ ಜನರು ತಮ್ಮನ್ನು ತಾವು ಭಾರತಕ್ಕೂ ಅತ್ಯಂತ ನಿಕಟ ಎಂದು ಭಾವಿಸುತ್ತಾರೆ. ಪರ್ವತ ಪ್ರದೇಶಗಳಲ್ಲಿ ವಾಸಿಸುವ ಗೂರ್ಖಾಗಳು ನೇಪಾಳಿ ಭಾಷೆಯ ಬದಲು ಹಿಂದಿ ಹಾಗೂ ಬಿಹಾರದ ಸ್ಥಳೀಯ ಭಾಷೆಯಲ್ಲಿ ಮಾತನಾಡುತ್ತಾರೆ. ಅಂದಹಾಗೆ ಭಾರತೀಯರ ವ್ಯಾಪಾರ ನೇಪಾಳದೊಂದಿಗೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಹಾಕಲ್ಪಡುವ ಇಂತಹ ಕೆಟ್ಟ ಪೋಸ್ಟ ಗಳಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.

ಅದೇ ರೀತಿ ಉತ್ತರ ಪ್ರದೇಶದ ವಿಕಾಸ್‌ ದುಬೆ ಪ್ರಕರಣದಲ್ಲೂ ಬ್ರಾಹ್ಮಣ ಹ್ಯಾಂಡ್‌ನಿಂದ ಅವನನ್ನು ಮುಲ್ಲಾ ಎಂದು ಬದಲಿಸಿ ಅವರ ಅಜ್ಜ ಮುತ್ತಜ್ಜ ಮುಸ್ಲಿಮರು ಎಂದು ಬಿಂಬಿಸಲಾಯಿತು. ಏಕೆಂದರೆ ಬ್ರಾಹ್ಮಣರ ಶ್ರೇಷ್ಠತ್ವಕ್ಕೆ ಯಾವುದೇ ಧಕ್ಕೆ ಬರದಿರಲಿ ಎಂಬುದೇ ಅದರ ಹಿಂದಿನ ಉದ್ದೇಶವಾಗಿತ್ತು.

ಈ ದ್ವೇಷದ ಪಾಠವನ್ನು ನಮಗೆ ಬಾಲ್ಯದಿಂದಲೇ ಕಲಿಸುತ್ತಾ ಬರಲಾಗುತ್ತಿದೆ. ಹೇಳಿಕೊಳ್ಳಲು ನಾವು ಜಗದ್ಗುರುಗಳು. ಪೂಜೆ ಅರ್ಚನೆಗಳಿಂದ ಜನರು ದಿನ ಆರಂಭಿಸುತ್ತಾರೆ ಹಾಗೂ ಅಂತ್ಯಗೊಳಿಸುತ್ತಾರೆ. ಕೆಟ್ಟ ಕರ್ಮ, ಕೆಟ್ಟ ಫಲ ಎಂದು ದಿನಕ್ಕೆ 4 ಸಲವಾದರೂ ಹೇಳುತ್ತಾರೆ. ಪ್ರವಚನಗಳು, ಗೀತ ರಾಮಾಯಣ ಕೀರ್ತನೆ, ಆರತಿ ಮುಂತಾದವುಗಳಿಂದ ತಮ್ಮ ಚಾರಿತ್ರ್ಯ ಸುಧಾರಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಒಂದಿಷ್ಟು ಸುಧಾರಣೆಯಾಗುವ ಮುನ್ನ ಅಸೂಯೆ, ದ್ವೇಷದ ಭಾವನೆ ಬೆಳೆಸಿಕೊಳ್ಳುತ್ತಾರೆ.

ಯಾವ ರೀತಿ ಇವರು ಪಾಕಿಸ್ತಾನದವರನ್ನು ಮುಸ್ಲಿಮರನ್ನು, ದಲಿತರನ್ನು ಹೀಯಾಳಿಸುತ್ತಾರೋ ಅದೇ ರೀತಿ ತಮ್ಮ ಮನೆಗಳಲ್ಲೂ ಅಣ್ಣತಮ್ಮ, ಅಕ್ಕತಂಗಿ, ಅಜ್ಜಿತಾತಾ, ಚಿಕ್ಕಪ್ಪರನ್ನೂ ಹೀಯಾಳಿಸಿ ಮಾತನಾಡುತ್ತಾರೆ.

ಬೈಗುಳ, ಅಪಶಬ್ದಗಳು ಅವರ ನಾಲಿಗೆಯ ಒಂದು ಭಾಗವೇ ಆಗಿಬಿಟ್ಟಿವೆ. ಅವರ ಈ ತೆರನಾದ ಭಾಷೆಗೆ ಧರ್ಮದ ಸಂಪೂರ್ಣ ಸಮರ್ಥನೆ ಕೂಡ ಇದೆ. ಅದನ್ನು ತಮ್ಮವರಿಗಲ್ಲದಿದ್ದರೂ ಬೇರೆಯವರಿಗಾದರೂ ಬೈಯುವುದಕ್ಕೆ ಮಾನ್ಯ ಎಂದು ಬಳಸುತ್ತಾರೆ.

ತಿಲಕ ಹಚ್ಚಿಕೊಳ್ಳುವುದು, ಜನಿವಾರ ಧರಿಸುವುದು, ಕೈಗೆ ಪಟ್ಟಿ ಕಟ್ಟಿಕೊಳ್ಳುವುದು ಇವೆಲ್ಲದರ ನಡುವೆ ಅವರವರ ಬಾಯಿಂದ ಬರುವ ಬೈಗುಳಗಳು ಬೇರೆ ಯಾರಿಗೂ ಕಡಿಮೆ ಎನಿಸುವುದಿಲ್ಲ. ಅದೇ ಯೋಚನೆ ಅವರಿಗೆ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಬರ್ಖಾ ದತ್ತ ವಿರುದ್ಧ ಸಿಡಿದೇಳಲು ಟ್ರೇನಿಂಗ್‌ ಕೊಡುತ್ತವೆ. ಈಗ ಅದೇ ದ್ವೇಷ, ಅಸೂಯೆ ನೇಪಾಳವನ್ನು ವೈರಿ ದೇಶವನ್ನಾಗಿ ಮಾಡಲಾಗುತ್ತಿದೆ.

ಮಹಾಭಾರತದಲ್ಲೂ ಹೀಗೆ ಕೌರವರ ಮಾವ ಪಾಂಡವರ ಪರವಾಗಿ ಕದನ ಮಾಡುತ್ತಿದ್ದನೆ? ರಾಮಾಯಣದಲ್ಲಿ ಭರತ, ರಾಮರಾವಣರ ಯುದ್ಧದಲ್ಲಿ ಅಯೋಧ್ಯೆಯಿಂದ ಸೈನ್ಯವನ್ನೇಕೆ ತೆಗೆದುಕೊಂಡು ಬಂದಿರಲಿಲ್ಲ? ನಮ್ಮ ಸಂಸತ್ ಬಗ್ಗೆ ಸಾವಿರ ಸಾವಿರ ಡಂಗುರ ಹೊಡೆದುಕೊಂಡರೂ ವಾಸ್ತವದಲ್ಲಿ ಮಾನವತೆಯ ಸದ್ವರ್ತನೆಯನ್ನು ಎಲ್ಲಿಂದಲೊ ಕಲಿತುಕೊಳ್ಳಬೇಕಾದ ಅಗತ್ಯವಿಲ್ಲ. ನೇಪಾಳ ಈ ಕಪಿಮುಷ್ಟಿಯಲ್ಲಿ ನಲಗುತ್ತಿದೆ, ಇದು ಬಹಳ ಖೇದಕರ ಸಂಗತಿ.

ಯಥಾ ಪ್ರಜೆ ತಥಾ ಶಾಸಕ

ಚೀನಾ ಹಾಗೂ ಕೊರೋನಾ ಈ ಎರಡೂ ಸಂಗತಿಗಳು ಮುಂದಿನ ಕೆಲ ವರ್ಷಗಳ ಕಾಲ ದೇಶದ ಅರ್ಥ ವ್ಯವಸ್ಥೆಯನ್ನು ಅಸ್ತ್ಯವ್ಯಸ್ತಗೊಳಿಸಲಿವೆ. ಪ್ರತಿ ಮನೆ ಮನೆಯೂ ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಕೊರೋನಾದ ಕಾರಣದಿಂದ ಮೇಲಿಂದ ಮೇಲೆ  ಲಾಕ್ ಡೌನ್‌ಗಳನ್ನು ಎದುರಿಸಬೇಕಾಗಿ ಬರುತ್ತದೆ. ಜನರು ಈಗ ತಾನೇ ಹೆದರಿಕೆಯಿಂದ ಮನೆಯಿಂದ ಹೊರಗೆ ಬರಲು ಸಿದ್ಧರಿಲ್ಲ. ಹೋದರೆ ಎಲ್ಲಿ ತಮಗೆ ಕೋವಿಡ್‌ ಬರುತ್ತದೊ ಎಂಬ ಭಯ ಕಾಡುತ್ತದೆ.

ಚೀನಾದ ಕಾರಣದಿಂದ ದೇಶದ ಹಣವೆಲ್ಲ ಹಿಮಾಲಯದ ಬಂಡೆಗಳ ಮೇಲೆ ಅಂದರೆ ರಸ್ತೆ, ವಿಮಾನ ನಿಲ್ದಾಣ, ಬ್ಯಾಂಕುಗಳನ್ನು ನಿರ್ಮಿಸಲು ಹಾಗೂ ಆಹಾರ ಸಾಮಗ್ರಿಗಳಿಗಾಗಿ ಬಳಸಲಾಗುತ್ತದೆ.

ಮೇಲ್ಕಂಡ ಎರಡೂ ಕಾರಣಗಳು ಉದ್ಯಮಗಳು ಹಾಗೂ ವ್ಯಾಪಾರ ವಹಿವಾಟುಗಳಿಗೆ ಭಾರಿ ಹೊಡೆತ ಕೊಡಬಹುದು. ಈಗ ಹಿಂದಿಗಿಂತ ಒಳ್ಳೆಯ ಮನೆ, ಡ್ರಾಯಿಂಗ್‌ ರೂಮ್, ನೌಕರಿ, ವಾಹನ, ಪ್ರವಾಸದ ಕನಸನ್ನು ಮರೆತುಬಿಡಿ. ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಹೆಚ್ಚಲ್ಪಟ್ಟ ಹಾಗೆ ಇತರೆ ಪದಾರ್ಥಗಳ ಬೆಲೆಗಳು ಹೆಚ್ಚಬಹುದು. ಬೇಡಿಕೆ ಕಡಿಮೆಯಾದಾಗ, ಪೂರೈಕೆ ಕೂಡ ಕಡಿಮೆಯಾಗಲಿದೆ. ಇನ್ನು ಮುಂದೆ ಪ್ರತಿಯೊಂದು ಮನೆಯೂ ಅನಾರೋಗ್ಯ ಹಾಗೂ ನಿರುದ್ಯೋಗಕ್ಕಾಗಿಯೇ ಹಣವನ್ನು ಮೀಸಲಿಡಬೇಕಾಗಿ ಬರುತ್ತದೆ. ಅದರಿಂದಾಗಿ ಪ್ರತಿಯೊಂದರಲ್ಲೂ ಕಡಿತ ಮಾಡಬೇಕಾಗುತ್ತದೆ. ಒಂದು ಒಳ್ಳೆಯ ಬೆಳವಣಿಗೆ ಎಂದರೆ, ಇನ್ಮುಂದೆ ತೋರಿಕೆಯ ಅಗತ್ಯ ಉಂಟಾಗುವುದಿಲ್ಲ. ಏಕೆಂದರೆ ಮದುವೆ, ಪಾರ್ಟಿ, ಸಿನಿಮಾ, ಹೋಟೆಲ್‌ಗಳಿಗೆ ಹೋಗುವ ಅಗತ್ಯ ಬೀಳುದಿವುಲ್ಲ. ಮುಂದಿನ ದಿನಗಳಲ್ಲಿ ಮನೆಯಿಂದ ಹೊರಬೀಳುವುದೇ ಕಡಿಮೆಯಾಗುತ್ತದೆ.ಇದರರ್ಥ ಇಷ್ಟೇ. ಸಾವಿರಾರು ಚಿಕ್ಕಪುಟ್ಟ ಉದ್ಯಮಗಳು ಬಾಗಿಲು ಮುಚ್ಚುತ್ತಿವೆ. ಸಿನಿಮಾಗಳ ಭವ್ಯತೆ ಮೊದಲಿನ ಹಾಗೆ ಇರುವುದಿಲ್ಲ. ಸಿನಿಮಾ ಮಂದಿರಗಳು ಬಣ್ಣ ಕಳೆದುಕೊಂಡು ಸಪ್ಪೆ ಎನಿಸುತ್ತವೆ. ಮನೆ ಮನೆಗಳ ಮನರಂಜನೆಯ ಪರಿಕರಗಳನ್ನು ಮೊದಲು ಕೊರೋನಾ ಹಾಳುಗೆಡವಿತು. ಈಗ ಆ ಕೆಲಸನ್ನು ಡ್ರ್ಯಾಗನ್‌ ಮಾಡುತ್ತಿದೆ.

ಎರಡೂ ಯಾವ ರೀತಿ ಪಸರಿಸಿವೆ ಎಂದರೆ, ಮೊದಲಿನ ಅರ್ಥ ವ್ಯವಸ್ಥೆಯನ್ನು ಚೆಲ್ಲಾಪಿಲ್ಲಿ ಮಾಡಿಬಿಟ್ಟಿವೆ. ಅದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ, `ಅಂಧೇರ್‌ ನಗರಿ ಚೌಪಟ್‌ ರಾಜಾ’ ರೀತಿಯ ಯುಗ ನಡೆಯುತ್ತಿದೆ ಎನಿಸುತ್ತದೆ. ಬೇರೆ ಕೆಲವು ದೇಶಗಳಲ್ಲೂ ಕೂಡ ಹೀಗೆಯೇ ನಡೆಯುತ್ತದೆ. ಅಮೆರಿಕ ಅದಕ್ಕೆ ಅತಿದೊಡ್ಡ ಉದಾಹರಣೆ. ಅಲ್ಲಿನ ರಾಜ ಡೊನಾಲ್ಡ್ ಟ್ರಂಪ್‌ ತಮ್ಮದೇ ಆದ ಕಾನೂನು ಬರೆಯುತ್ತಿದ್ದಾರೆ. ಟರ್ಕಿಯ ಸುಲ್ತಾನ್ ರಿಸೆಪ್‌ ತೈಯಿವ್‌ ಇದೊಗಾನ್‌ ಕೂಡ ಅದೇ ರೀತಿಯ ಹೆಜ್ಜೆ ಇಡುತ್ತಿದ್ದಾರೆ. ಅವರು ಇಸ್ತಾಂಬೂಲ್ ನಲ್ಲಿನ 6ನೇ ಶತಮಾನದ ಸೋಫಿಯಾ ಸಂಗ್ರಹಾಲಯದ ಕಟ್ಟಡವನ್ನು ಮಸೀದಿಯನ್ನಾಗಿ ಮಾಡಿದರು. ಮಸೀದಿ ಕೆಡವಿ ಮಂದಿರ ನಿರ್ಮಿಸುವಂತೆ. ಇದೆಲ್ಲದರ ತಪ್ಪಿತಸ್ಥರು ಜನತೆ ಅಥವಾ ನೀವೇ. `ಯಥಾ ರಾಜಾ ತಥಾ ರಾಜ್ಯ.’ `ಎ ಪೀಪಲ್ ಡಿಸರ್ವ್‌ ದಿ ಕಿಂಗ್‌ ವಾಟ್‌ ದೇ ಆರ್‌’ ಜನರು ಹೇಗಿರುತ್ತಾರೊ ಅಂತಹ ಆಡಳಿತಗಾರನೇ ಸಿಗುತ್ತಾನೆ. ಯಾವ ಜನರು ವಾಟ್ಸ್ ಆ್ಯಪ್, ಫೇಸ್‌ ಬುಕ್‌, ಫಾರ್ ವರ್ಡ್ ಮಾಡಲ್ಪಟ್ಟ ಜ್ಞಾನದ ಮೇಲೆ ಸೀಮಿತರಾಗಿರುತ್ತಾರೊ, ಅವರಿಂದ ಏನು ತಾನೇ ಅಪೇಕ್ಷೆ ಮಾಡಲು ಸಾಧ್ಯ? ಚೀನಾ, ಕೊರೋನಾ, ಜಿಎಸ್‌ಟಿ, ನೋಟು ಅಮಾನ್ಯೀಕರಣ ಇವು ನಮ್ಮದೇ ಆದ ಕೆಲವು ಉಡುಗೊರೆಗಳು. ಅವನ್ನು ಎಂಜಾಯ್‌ ಮಾಡಿ. ಚಪ್ಪಾಳೆ ತಟ್ಟಿ ಎಲ್ಲ ಗುಣಗಳು ಹೇಗೆ ನಿವಾರಣೆ ಆಗುತ್ತವೆ ಎಂದರೆ ಮಂದಿರ ಮಸೀದಿಗಳಿಗೆ ಹೋದಾಗ ಆಗುವಂತೆ.

ಅವಕಾಶಗಳ ಬಾಗಿಲು ಮುಚ್ಚಿದಾಗ…….

ಆ ಕೋಪಕ್ಕೆ ಯಾರು ಟ್ರೇನಿಂಗ್‌ ಕೊಡುತ್ತಾರೆ? ತಮ್ಮ ಮನೆಯೆದುರು ಮೋಟರ್‌ ಸೈಕಲ್ ಸ್ಟಂಟ್‌ ಮಾಡಲು ಅಡ್ಡಿಯನ್ನುಂಟು ಮಾಡಿದ 25 ವರ್ಷದ  ಯುವಕನನ್ನು 3 ಹುಡುಗರು ಕೇವಲ ಥಳಿಸಲಿಲ್ಲ, ಚಾಕುವಿನಿಂದ ಇರಿದು ಹತ್ಯೆ ಕೂಡ ಮಾಡಿದರು. ನಾಗರಿಕ ಸಮಾಜದ ದಾಳಿ ಮಾಡು, ಪೂಜೆ ಪುನಸ್ಕಾರದ ಯಾರೊಬ್ಬ ದಾರಿಹೋಕರು ಈ ಹತ್ಯೆ ನಡೆಯುವುದನ್ನು ತಡೆಯಲಾಗಲಿಲ್ಲ. ಪೊಲೀಸರು ಆ ಮೂವರನ್ನು  ಬಂಧಿಸಿದರು. ಆದರೆ ಅವರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನರಾಗಿರುವ ಕಾರಣ, ಅತ್ಯಲ್ಪ ಸಜೆ ಮುಗಿಸಿ ಹೊರಬರುತ್ತಾರೆ.

ದೆಹಲಿ ಸಮೀಪದ ಬೋರ್ಡಿಂಗ್‌ ಶಾಲೆಯೊಂದರ 14 ವರ್ಷದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು. ತನ್ನ ಸಹಪಾಠಿಗಳು ತೊಂದರೆ ಕೊಡುತ್ತಾರೆಂದು ಆಕೆ ಹೀಗೆ ಮಾಡಿಕೊಂಡಿದ್ದಳು. ಶಾಲೆಯವರು ಆತುರಾತುರದಲ್ಲಿ ಶವ ಸಂಸ್ಕಾರ ಮಾಡಿ ಮುಗಿಸಿಬಿಟ್ಟರು. ಏಕೆಂದರೆ ಹೆಚ್ಚಿನ ಪ್ರಶ್ನೆ ಮಾಡದಿರಲಿ ಎಂದು.

ನಾವಿಂದು ಮಕ್ಕಳಿಗೆ ಕೊಡುತ್ತಿರುವ ಶಿಕ್ಷಣ ಪೂಜೆ ಪುನಸ್ಕಾರಗಳಿಗೆ ಸಂಬಂಧಪಟ್ಟಂತೆ ಇದೆ. ಅದರಲ್ಲಿ ಸತ್ಯ ಹಾಗೂ ತರ್ಕಗಳಿಗೆ ಜಾಗವೇ ಇಲ್ಲ. ನಾಗರಿಕ ಸಮಾಜಕ್ಕೆ ಅದು ಅತ್ಯವಶ್ಯ. ನಿಮಯಗಳನ್ನು ಪಾಲಿಸದಿರುವ ಪ್ರವೃತ್ತಿ ಪ್ರತಿಯೊಂದು ಸಮಾಜದಲ್ಲಿ ಇದೆ. ಎಲ್ಲಿ ರೋಮಾಂಚನ ಇರುವುದಿಲ್ಲವೊ, ಹೊಸದನ್ನು ಮಾಡಲು ಅಕಾಶವಿರುವುದಿಲ್ಲವೊ ಅಲ್ಲಿ ಮನೆ ಹಾಗೂ ಆಸುಪಾಸಿನ ನಿಯಮ ಭಂಗ ಆಗುತ್ತದೆ.

ಇಂದು ನಮ್ಮ ಸಮಾಜ ಎಂತಹದೊಂದು ವಾತಾರಣದಲ್ಲಿದೆ ಎಂದರೆ, ಅಲ್ಲಿ ಯುವಕರು ಹಾಗೂ ಹದಿವಯಸ್ಸಿನವರ ಮುಂದೆ ಘೋರ ಅಂಧಕಾರವಿದೆ. ಹುಡುಗಿಯರಿಗೆ ಕೇವಲ ಮದುವೆಯಲ್ಲಿ ಭವಿಷ್ಯ ಗೋಚರಿಸಿದರೆ, ಹುಡುಗರಿಗೆ ಪುಂಡತನ, ಗೂಂಡಾಗಿರಿ ರಾಜಕೀಯದಲ್ಲಿ ಭವಿಷ್ಯವಿದೆ ಎನಿಸುತ್ತದೆ. ಏನನ್ನಾದರೂ ಮಾಡಬೇಕೆಂಬ ಅವಕಾಶಗಳ ಬಾಗಿಲು ಮುಚ್ಚಿಹೋಗಿವೆ.

ಆಧುನಿಕ ತಂತ್ರಜ್ಞಾನದ ಕಾರಣದಿಂದಾಗಿ ಇಂದು ಯಾರೊಬ್ಬರೂ ಹಸಿವಿನಿಂದ ಇರುವುದಿಲ್ಲ. ಆದರೆ ಬೆಳೆಯುತ್ತಿರುವ ಯುವ ಜನಾಂಗಕ್ಕೆ ಅದು ಸಾಕೆನಿಸುವುದಿಲ್ಲ. ಅವರಿಗೆ ಏನನ್ನಾದರೂ ಮಾಡಬೇಕೆಂಬ ತಹತಹಿಕೆ ಇರುತ್ತದೆ. ಆದರೆ ಬ್ಯಾಕ್‌ ಪ್ಯಾಕ್‌ ಕಟ್ಟಿಕೊಂಡು ಬೆಟ್ಟ ಗುಡ್ಡಗಳನ್ನು ಹತ್ತುವ ಸೌಲಭ್ಯಗಳಿಲ್ಲ, ನದಿ ಸಮುದ್ರಗಳನ್ನು ದಾಟುವ ವ್ಯವಸ್ಥೆಗಳಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಬೋಧಿಸುವ ಶಿಕ್ಷಣ ಹೇಗಿದೆಯೆಂದರೆ ಅದರಲ್ಲಿ ರೋಮಾಂಚನ ಆಗುವಂಥದ್ದು ಏನೂ ಇಲ್ಲ.

ಇನ್ನುಳಿದದ್ದು ಮೊಬೈಲ್. ಅದರಲ್ಲಿ ಅವರು ಟಿಕ್‌ಟಾಕ್‌ ನಂತಹ ಆ್ಯಪ್‌ಗಳಲ್ಲಿ ಹಾಡಿ, ಕುಣಿದು ತೋರಿಸಬಹುದು. ಆದರೆ ಅದು ಸಾಕಾಗುವುದಿಲ್ಲ. ಲೈಕ್ಸ್ ನಿಂದ ಜೀವನ ರೂಪಿಸಿಕೊಳ್ಳಲು ಆಗುವುದಿಲ್ಲ.

ಹತ್ಯೆ ಮಾಡಿ ಕಾನೂನು ಕೈಗೆತ್ತಿಕೊಳ್ಳುವುದು, ಖಿನ್ನತೆಗೆ ಒಳಗಾಗುವುದು, ಆತ್ಮಹತ್ಯೆಗೆ ಶರಣಾಗುವುದು ಒಂದು ದೊಡ್ಡ ಸಮಸ್ಯೆಯ ಭಾಗವಾಗಿದೆ. ಖೇದದ ಸಂಗತಿಯೆಂದರೆ, ಸಾಲಗಾರರಿಗೆ ಇದರ ಚಿಂತೆ ಇಲ್ಲ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ