ರೈಲು ಹೊರಡುವುದು ಇನ್ನೂ ಅರ್ಧ ಗಂಟೆ ತಡವಾಗಲಿದೆ ಎಂದಾಗ ರೈಲಿನಲ್ಲಿದ್ದ ಪ್ರಯಾಣಿಕರೆಲ್ಲ ಒಬ್ಬೊಬ್ಬರಾಗಿ ಇಳಿದು ಹತ್ತಿರದ ಅಂಗಡಿ, ಹೋಟೆಲ್‌ಗಳತ್ತ ಹೋದರು. ಶೇಖರ್‌ ಅದೇ ರೈಲಿನಲ್ಲಿ ಮುಂಬೈಗೆ ಹೊರಟ್ಟಿದ್ದ. ಅವನಿಗಿದು ಮೊಟ್ಟ ಮೊದಲ ಮುಂಬೈ ಪ್ರಯಾಣವಾಗಿತ್ತು. ಅವನು ಕೆಲಸ ಮಾಡುತ್ತಿದ್ದ ಸಂಸ್ಥೆಯವರು ಹೆಚ್ಚಿನ ತರಬೇತಿಗಾಗಿ ಆರು ವಾರಗಳ ಕಾಲ ಅವನನ್ನು ಮುಂಬೈಗೆ ಕಳುಹಿಸಿದ್ದರು. ಮುಂಬೈನಲ್ಲಿ ಉಳಿದುಕೊಳ್ಳಲು ಸಂಸ್ಥೆ ಅಲ್ಲಿನ ಗೆಸ್ಟ್ ಹೌಸ್‌ನಲ್ಲಿ ವ್ಯವಸ್ಥೆ ಮಾಡಿತ್ತು.

ಶೇಖರ್‌ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಮಂದಾಕಿನಿ ಕೂಡ ಪ್ರಯಾಣಿಸುತ್ತಿದ್ದಳು. ಹಿಂದಿನ ರಾತ್ರಿ ಶೇಖರ್‌ ಮತ್ತು ಮಂದಾಕಿನಿ ಪರಸ್ಪರ ಪರಿಚಯವಾದರು. ಶೇಖರನ ವ್ಯಕ್ತಿತ್ವಕ್ಕೆ ಆಕರ್ಷಿತಳಾಗಿದ್ದ ಮಂದಾಕಿನಿ ಅವನೊಂದಿಗೆ ಸ್ನೇಹ ಬೆಳೆಸಿದಳು. ಇಬ್ಬರೂ ಒಟ್ಟಾಗಿ ಕುಳಿತು ಚರ್ಚಿಸುತ್ತಿದ್ದರು. ಶೇಖರ್‌ ಮತ್ತು ಮಂದಾಕಿನಿ ಪರಸ್ಪರ ತಮ್ಮ ವಿಳಾಸ, ದೂರವಾಣಿ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡರು. ಮುಂದಿನ ಭಾನುವಾರ ತನ್ನ ಮನೆಗೆ ಬಂದು ಆತಿಥ್ಯ ಸ್ವೀಕರಿಸುವಂತೆ ಮಂದಾಕಿನಿ ಶೇಖರನನ್ನು ಆಹ್ವಾನಿಸಿದ್ದಳು. ಇಬ್ಬರ ನಡುವೆ ವಿಶೇಷ ಬಾಂಧವ್ಯ ಬೆಳೆಯಿತು.

ಅದರಂತೆಯೇ ಭಾನುವಾರ ಶೇಖರ್‌ ಮಂದಾಕಿನಿ ಮನೆಗೆ ಬಂದ. ಅವಳು ಅವನನ್ನು ಕರೆದುಕೊಂಡು ಮುಂಬೈ ನಗರದ ಮುಖ್ಯ ಮುಖ್ಯ ಭಾಗಗಳನ್ನೆಲ್ಲಾ ತೋರಿಸಿದಳು. ಜೊತೆಗೆ ಹೋಟೆಲ್‌ನಲ್ಲಿ ಊಟ ಮಾಡಿದರು. ಅಂದು ಬೆಳಗ್ಗೆ 11 ರಿಂದ ರಾತ್ರಿ 8ರವರೆಗೆ ಇಬ್ಬರೂ ತಿರುಗಾಡಿ  ಅವನ ಗೆಸ್ಟ್ ಹೌಸ್‌ ಬಳಿ ಅವನನ್ನು ಬಿಟ್ಟು ಮಂದಾಕಿನಿ ತನ್ನ ಮನೆಯತ್ತ ಹೊರಟಳು.

ಮುಂದಿನ ಭಾನುವಾರ ಕೂಡ ಅವರಿಬ್ಬರೂ ದಿನಪೂರ್ತಿ ಒಟ್ಟಾಗಿ ಮುಂಬೈನ ನಾನಾ ಸ್ಥಳಗಳಲ್ಲಿ ಸುತ್ತಾಡಿದರು. ಹೀಗೆ ಶೇಖರ್ ಮುಂಬೈನಲ್ಲಿದ್ದಷ್ಟು ಕಾಲ ಪ್ರತಿ ಭಾನುವಾರ ಮಂದಾಕಿನಿಯೊಂದಿಗೆ ಔಟಿಂಗ್‌ ಹೋಗುವುದು ಖಾಯಂ ಆಯಿತು. ಇದರಿಂದ ಅವರಿಬ್ಬರ ನಡುವೆ ಇದ್ದ ಸ್ನೇಹ ಇನ್ನಷ್ಟು ಗಟ್ಟಿಯಾಯಿತು. ಶೇಖರನಿಗೆ ಮಂದಾಕಿನಿ ತನಗೆ ತಕ್ಕ ಸಂಗಾತಿಯಾಗುತ್ತಾಳೆಂಬ ನಂಬಿಕೆ ಮೂಡಿತು.

ನಂತರ ಮುಂದಿನ ಭಾನುವಾರ ಮಂದಾಕಿನಿಯನ್ನು ಭೇಟಿಯಾದ ಶೇಖರ್‌ ತನ್ನ ಮನದಿಂಗಿತವನ್ನು ತಿಳಿಸಿದ. ಆದರೆ ಮಂದಾಕಿನಿ ಮಾತ್ರ ಇವನ ಮಾತುಗಳನ್ನು ಕೇಳಿ ಅಚ್ಚರಿಪಟ್ಟಳು. ಜೊತೆಗೆ ಹೀಗೆ ಪ್ರತಿಕ್ರಿಯಿಸಿದಳು, ``ಶೇಖರ್‌, ನೀನು ನನ್ನ ಮೆಚ್ಚಿನ ಸ್ನೇಹಿತ. ಸ್ನೇಹಿತನೇ ಹೊರತು ಇನ್ನೇನೂ ಅಲ್ಲ. ನಾನು ನನ್ನ ಮದುವೆ ಯೋಚನೆಯನ್ನು ಬಿಟ್ಟು ಬಹಳ ದಿನಗಳಾದವು. ನಾನು ನನ್ನ ಕೆಲಸವನ್ನು ಪ್ರೀತಿಸುವಷ್ಟು ಇನ್ನಾರನ್ನೂ ಇನ್ನಾವುದನ್ನೂ ಪ್ರೀತಿಸಲಾರೆ. ನನ್ನ ವೃತ್ತಿ ಬದುಕಿನಲ್ಲಿ ನಾನು ಇನ್ನಷ್ಟು ಎತ್ತರಕ್ಕೆ ಏರಬೇಕು, ಉನ್ನತ ಸ್ಥಾನ ಹೊಂದಬೇಕೆಂಬ ಹಂಬಲವಿರುವವಳು ನಾನು. ಮದುವೆ, ಮನೆ, ಮಕ್ಕಳು ಇವೆಲ್ಲ ನನ್ನ ಪ್ರಕಾರ ಒಬ್ಬ ಮಹಿಳೆಯ ಕನಸನ್ನು ಕಿತ್ತುಕೊಳ್ಳುವ ಅಂಶಗಳು. ನಾನು ಅವುಗಳಿಂದ ಹೊರತಾಗಿ ನನ್ನ ಕನಸು ನನಸಾಗಿಸಿಕೊಳ್ಳಲು ಬಯಸುತ್ತೇನೆ.

``ಇನ್ನು ಹೇಳಬೇಕೆಂದರೆ ನಾನು ಈ ನಿರ್ಧಾರಕ್ಕೆ ಬರಲು ಇನ್ನಷ್ಟು ಕಾರಣಗಳಿವೆ. ನಾನು ಚಿಕ್ಕವಳಾಗಿದ್ದಾಗಿನಿಂದಲೂ ನನ್ನ ತಾಯಿ ತಂದೆ ದಿನನಿತ್ಯ ಜಗಳವಾಡುವುದನ್ನು ನೋಡುತ್ತಾ ಬೆಳೆದವಳು. ನನ್ನ ತಮ್ಮ ಮತ್ತು ನಾನು ಅವರ ಜಗಳದಿಂದ ರೋಸಿಹೋಗಿದ್ದೆವು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ