ಬಾಲ್ಯದಿಂದಲೂ ಸ್ನೇಹಿತೆಯರಾಗಿದ್ದ ಸವಿತಾ ಮತ್ತು ನಮಿತಾ ದಿನದ ಬಹುಪಾಲು ಸಮಯವನ್ನು ಒಟ್ಟಿಗೇ ಕಳೆಯುತ್ತಿದ್ದರು. ಶಾಲಾ ದಿನಗಳಿಂದಲೂ ಒಟ್ಟಾಗಿರುತ್ತಿದ್ದ ಇವರು, ಎಲ್ಲಿ ಹೋದರೂ ಜೊತೆಯಾಗಿ ಹೋಗುತ್ತಿದ್ದರು. ಇವರಲ್ಲಿ ಯಾರೊಬ್ಬರಿಗೆ ಆರೋಗ್ಯ ಸಮಸ್ಯೆಯಾದರೂ ಒಬ್ಬರು ಮತ್ತೊಬ್ಬರ ಶುಶ್ರೂಷೆಗೆ ನಿಲ್ಲುತ್ತಿದ್ದರು. ಹೀಗೆ ಅವರ ಸ್ನೇಹ ಸಂಬಂಧ ಮನೆಯವರಿಗೂ, ಸುತ್ತಲಿನವರಿಗೂ ಅಚ್ಚರಿಗೂ, ಸಂತೋಷಕ್ಕೂ ಕಾರಣವಾಗಿತ್ತು.

ನಗರದ ಪ್ರಮುಖ ಬೀದಿಯೊಂದರಲ್ಲಿ ಅವರ ಮನೆಗಳು ಸಮೀಪದಲ್ಲಿಯೇ ಇದ್ದುದರಿಂದ ಅವರ ಗೆಳೆತನ ಗಟ್ಟಿಗೊಳ್ಳಲು ಇನ್ನೂ ಒಂದು ಕಾರಣ. ಕೆಲವೊಮ್ಮೆ ಸವಿತಾ ಮನೆಯಲ್ಲಿ ನಮಿತಾ, ನಮಿತಾ ಮನೆಯಲ್ಲಿ ಸವಿತಾ ಉಳಿದುಕೊಳ್ಳುತ್ತಿದ್ದರು. ದಿನಗಳು ಉರುಳಿದವು. ಇಬ್ಬರೂ ಕಾಲೇಜು ವಿದ್ಯಾಭ್ಯಾಸ ಪೂರೈಸಿದರು. ಇಬ್ಬರಿಗೂ ನಗರದ ದೂರದಲ್ಲಿನ ಬೇರೆ ಬೇರೆ ಸಾಫ್ಟ್ ವೇರ್‌ಸಂಸ್ಥೆಗಳಲ್ಲಿ ಕೆಲಸ ಸಿಕ್ಕಿತು. ಪ್ರತೀ ವಾರಾಂತ್ಯದಲ್ಲೂ ಇಬ್ಬರೂ ಒಟ್ಟಿಗೆ ಸೇರುವುದನ್ನು ಮರೆಯುತ್ತಿರಲಿಲ್ಲ. ಹೀಗಿರುವಾಗ ಇಬ್ಬರಿಗೂ ಮದುವೆ ಮಾಡಲು ಅವರ ಮನೆಯವರು ಆಲೋಚಿಸಿ ಆ ನಿಟ್ಟಿನಲ್ಲಿ ಪ್ರಯತ್ನಿಸಿದರು. ತಾವು ಮದುವೆಯಾದರೆ ಒಬ್ಬರನ್ನೊಬ್ಬರು ಅಗಲಬೇಕಾಗುವುದಲ್ಲ ಎಂಬ ಯೋಚನೆ ಉಂಟಾಯಿತು.

``ಈಗ ನಮ್ಮ ಜೀವನ ಎಷ್ಟು ಚೆನ್ನಾಗಿದೆ. ಆದರೆ ನಾಳೆ ಮದುವೆಯಾದರೆ ನೀನೆಲ್ಲಿಯೋ, ನಾನೆಲ್ಲಿಯೋ ಹೋಗಬೇಕಾಗುತ್ತದೆ,'' ಸವಿತಾ ಆತಂಕದಿಂದ ನುಡಿದಳು.

``ಹೌದು. ಆದರೆ ಇದು ಅನಿವಾರ್ಯ. ಹೆಣ್ಣಾದವಳು ಮದುವೆಯಾಗಿ ಬೇರೆ ಸ್ಥಳಕ್ಕೆ ಹೋಗಲೇಬೇಕು. ಮುಂದೆ ಅಲ್ಲೇ ಜೀವನ ನಡೆಸುವುದು ಒಂದು ಸಾಹಸವೇ ಸರಿ,'' ಎಂದಳು ನಮಿತಾ.

ಹೀಗೆ ಅವರು ಪ್ರತಿ ಬಾರಿ ಭೇಟಿ ಯಾದಾಗಲೂ ಮದುವೆ ವಿಚಾರವಾಗಿ ಚರ್ಚಿಸುತ್ತಿದ್ದರು.

ಒಮ್ಮೆ ನಮಿತಾ ಸವಿತಾಳ ಮನೆಯಲ್ಲಿ ಉಳಿದುಕೊಂಡಿದ್ದಳು. ಅಂದು ರಾತ್ರಿ ಊಟದ ನಂತರ ಇಬ್ಬರೂ ಕೋಣೆಯಲ್ಲಿ ಏನೇನೋ ಮಾತನಾಡಿಕೊಳ್ಳುತ್ತಾ ಮಲಗಿದ್ದರು. ಆಗ ಸವಿತಾ ಕೇಳಿದಳು, ``ನೀನು ಯಾರನ್ನಾದರೂ ಪ್ರೀತಿಸುತ್ತಿರುವೆಯಾ?''

``ನಿನ್ನನ್ನು ಪ್ರೀತಿಸುವಷ್ಟು ಇನ್ನಾರನ್ನೂ ನಾನು ಪ್ರೀತಿಸಲಾರೆ.''

``ಹಾಗಲ್ಲ....``

``ಹಾಗೆಂದರೆ? ಬಾಯ್‌ಫ್ರೆಂಡ್‌.....?''

ಸ್ವಲ್ಪ ಹೊತ್ತು ಇಬ್ಬರೂ ಮಾತನಾಡಲಿಲ್ಲ.

``ನಾನು ಇನ್ನೂ ಯಾರನ್ನೂ ನನ್ನ ಬಾಯ್‌ಫ್ರೆಂಡ್‌ ಎನ್ನುವಂತೆ ಕಾಣಲಿಲ್ಲ,'' ನಮಿತಾ ಮೆಲ್ಲನೆ ನುಡಿದಳು.

ಸವಿತಾ ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ಕೆಲವು ದಿನಗಳವರೆಗೂ ಅವರು ಒಬ್ಬರನ್ನೊಬ್ಬರು ಭೇಟಿಯಾಗಲಿಲ್ಲ. ಸವಿತಾ ಉದ್ಯೋಗ ನಿಮಿತ್ತ ಹೈದರಾಬಾದ್‌ಗೆ ಹೋಗಬೇಕಾಗಿದ್ದರಿಂದ ನಮಿತಾಗೆ ಒಮ್ಮೆ ಕರೆ ಮಾಡಿ ತಾನು ಪ್ರಯಾಣದಲ್ಲಿರುವುದಾಗಿ ತಿಳಿಸಿದಳು. ನಮಿತಾ ಸವಿತಾಳನ್ನು ಕಾಣಲು ಹೆಚ್ಚು ಕಾತುರತೆ ತೋರಿಸಲಿಲ್ಲ.

ಒಂದು ದಿನ ಸಂಜೆಯ ಸಮಯದಲ್ಲಿ ನಮಿತಾ ಮನೆಗೆ ಬಂದ ಸವಿತಾಳ ತಂದೆ, ``ನನ್ನ ಮಗಳು ನಿನ್ನ ಬಳಿ ಏನಾದರೂ ಹೇಳಿದ್ದಳಾ?'' ಎಂದು ಕೇಳಿದರು.

``ಏಕೆ ಅಂಕಲ್?''

``ಅವಳು ಮನೆಗೆ ಬಂದು ನಾಲ್ಕು ದಿನಗಳಾದವು.''

``ಹೌದಾ?! ನನಗೇನೂ ಹೇಳಲಿಲ್ಲ,'' ಎಂದಳು ನಮಿತಾ.

``ಫೋನ್‌ ಕೂಡ ಸ್ವಿಚ್‌ ಆಫ್‌ ಆಗಿದೆ. ನನಗೆ ಗೊತ್ತಿದ್ದವರೆಲ್ಲೆಲ್ಲಾ ವಿಚಾರಿಸಿದೆ. ಏನೂ ಸುಳಿವಿಲ್ಲ.''

``ಪೊಲೀಸರಿಗೆ ಕಂಪ್ಲೇಂಟ್‌ ಕೊಟ್ಟಿದ್ದೀರಾ?'' ನಮಿತಾಳ ತಂದೆ ಕೇಳಿದರು.

``ಇನ್ನೂ ಇಲ್ಲ.''

``ನನಗೂ ಏನೂ ಹೇಳಲಿಲ್ಲ...'' ನಮಿತಾ ಪುನಃ ನುಡಿದಳು.

ಅವರು ಮತ್ತೆ ಪ್ರತಿಕ್ರಿಯಿಸದೆ ಹಿಂತಿರುಗಿದರು. ಸವಿತಾ ಎಲ್ಲಿ ಹೋಗಿರುವಳೆಂದು ನಮಿತಾಗೆ ನಿಜಕ್ಕೂ ತಿಳಿದಿರಲಿಲ್ಲ. ಅವಳ ಮಿಕ್ಕ ಸ್ನೇಹಿತೆಯರಲ್ಲಿ ವಿಚಾರಿಸಿದಳಾದರೂ ಎಲ್ಲೂ ಯಾವ ಸುಳಿವು ಸಿಗಲಿಲ್ಲ. ಹೀಗೆ ಒಂದು ವಾರ ಕಳೆಯಿತು. ಸವಿತಾ ಎಲ್ಲಿರುವಳೆನ್ನುವುದು ಮಾತ್ರ ಪತ್ತೆ ಆಗಲಿಲ್ಲ. ಇದ್ದಕ್ಕಿದ್ದಂತೆ ಒಂದು ಮಧ್ಯಾಹ್ನ ನಮಿತಾ ಮೊಬೈಲ್‌ಗೆ ಒಂದು ಕರೆ ಬಂದಿತು. ಅತ್ತ ಕಡೆಯಿಂದ ಸವಿತಾ ಮಾತನಾಡಿ, ``ಇಂದು ಸಂಜೆ ಪಿಜ್ಜಾ ಹಟ್‌ ಬಳಿ ಸಿಗೋಣ,'' ಎಂದು ಫೋನ್‌ ಕಟ್‌ ಮಾಡಿದಳು. ಅಂದು ಸಂಜೆ ಸುಮಾರು ಆರೂವರೆ ಗಂಟೆಗೆ ನಮಿತಾ ಅಲ್ಲಿಗೆ ಹೋದಳು. ಸವಿತಾ ಆಗಲೇ ಅಲ್ಲಿದ್ದಳು. ಇಬ್ಬರೂ ಸಂತೋಷದಿಂದ ಆಲಂಗಿಸಿಕೊಂಡರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ