ಸಂಧ್ಯಾಳ ಕಣ್ಣಲ್ಲಿ ಆವರಿಸಿಕೊಂಡಿದ್ದ ನಿದ್ದೆ ಹಾರಿ ಹೋಗಿತ್ತು. ಹಾಸಿಗೆಯಲ್ಲಿ ಹೊರಳಾಡುತ್ತಿದ್ದರೂ ದೃಷ್ಟಿ ಮಾತ್ರ ನೇರವಾಗಿ, ಛಾವಣಿಯತ್ತ ನೆಟ್ಟಿತ್ತು. ಮನದಲ್ಲಿ ಬೇರು ಬಿಟ್ಟ ದುಗುಡ, ಪದೇಪದೇ ಕಾಡುವ ಅಭದ್ರತೆ, ವಿಚಿತ್ರ ಭಯ, ಯಾರಲ್ಲೂ ಹೇಳಿಕೊಳ್ಳಲಾಗದ ಅಸಹನೀಯ ಪರಿಸ್ಥಿತಿ....! ಮುಂದೇನಾಗಬಹುದೆಂಬ ಆತಂಕ.... ಒಂದು ವೇಳೆ ಪರಿಸ್ಥಿತಿ ಕೈ ಮೀರಿ ಹೋದಲ್ಲಿ, ಫಲಿತಾಂಶ ಮಾತ್ರ ಅತ್ಯಂತ ಕೆಟ್ಟದ್ದಾಗಿರುತ್ತೆ ಅನ್ನೋ ಸಂಕಟ. ಇಡೀ ದೇಹವೇ ಕಂಪಿಸಿ ನೂರು ಗಾಲಿಯಲ್ಲಿ ಹಾಕಿ ತಿರುಗಿಸಿದ ಅನುಭವ.

ಇದೆಂತಹ  ಇಕ್ಕಟ್ಟಿನಲ್ಲಿ ಸಿಲುಕಿಬಿಟ್ಟೆ.....? ನನ್ನ ಅಜಾಗ್ರತೆಯಿಂದಾಗಿ ಅನ್ಯಾಯವಾಗಿ ಆಕಾಶ್‌ನ ಕಪಿಮುಷ್ಟಿಯಲ್ಲಿ ಸಿಲುಕಿ ಸುಲಭವಾಗಿ ಬ್ಲ್ಯಾಕ್‌ಮೇಲ್‌ಗೆ ಒಳಗಾಗುವಂತಾಯಿತಲ್ಲ ಅನ್ನೋ ನೋವು ಕಾಡಲಾರಂಭಿಸಿತು. ಎಲ್ಲೆಲ್ಲೂ ಶೂನ್ಯತೆ, ತಾನೇನೂ ಮಾಡಲಾಗದ ಅಸಹಾಯಕತೆ ಅವಳನ್ನು ಆವರಿಸಿಕೊಂಡಿತು. ತಪ್ಪು ತನ್ನದೇ ಆದರೂ ಅನ್ಯಾಯವಾಗಿ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡುವಂತಹ ಅವಕಾಶ ಆಕಾಶ್‌ಗೆ ಮಾಡಿಕೊಟ್ಟೆನಲ್ಲಾ ಎನ್ನುತ್ತಾ  ಪರಿತಪಿಸಿದಳು. ಅವಕಾಶ ಸಿಕ್ಕಿದಾಗೆಲ್ಲ ಆಕಾಶ್‌ ಕೆಟ್ಟದಾಗಿ ಕೈ ಸನ್ನೆ ಮಾಡಿ ಸರಸಕ್ಕೆ ಕರೆಯುತ್ತಿದ್ದ. ಜೊತೆಗೆ ತನ್ನೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯಿಸುತ್ತಿದ್ದ. ಒಟ್ಟಾರೆ  ಸಂಧ್ಯಾಳ ಬದುಕು ನೀರಿನಿಂದ ತೆಗೆದ ಮೀನಿನಂತಾಗಿತ್ತು.

ಈ ಆಕಾಶ್‌ ಬೇರಾರೂ ಅಲ್ಲ. ಅವಳ ಪತಿಯ ತಮ್ಮ ಅಂದರೆ ಖಾಸಾ ಮೈದುನ. ಒಂದೇ ಮನೆ ಒಂದೇ ಛಾವಣಿಯಡಿಯಲ್ಲಿ ಒಟ್ಟಾಗಿ ಬದುಕುವ ಇಂತಹ ಸೌಜನ್ಯಯುತ, ಸಂಸ್ಕಾರವಂತ ಕುಟುಂಬದಲ್ಲಿ ಆಕಾಶ್‌ ಎಂಬ ಈ ವಿಕೃತ ಮನುಷ್ಯ ಹೇಗೆ ಹುಟ್ಟಿಕೊಂಡ? ಎಂದು ಯೋಚಿಸುತ್ತಿದ್ದ ಸಂಧ್ಯಾಳಿಗೆ ಕನಸಿನಲ್ಲೂ ಊಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದಿನ ಬೆಳಗಾದರೆ ಸಂಧ್ಯಾಳನ್ನು ಕಾಡುತ್ತಿದ್ದ. ಇವನ ಕಾಟವನ್ನು ತಪ್ಪಿಸಿಕೊಳ್ಳಲಾಗದೆ ಅಸಹಾಯಕತೆಯಿಂದ ಹೈರಾಣಾಗಿದ್ದಳು.

ಇದು ತೀರಾ ಹಳೆಯ ವಿಚಾರವೇನಲ್ಲ. ಎರಡು ತಿಂಗಳ ಹಿಂದೆ ಸಂಧ್ಯಾ ತನ್ನ ಪತಿ ಸುನೀಲ್ ಜೊತೆ ಯೂರೋಪ್‌ ಟ್ರಿಪ್‌ಗೆ ಹೋಗಿದ್ದಳು. ಸುಮಾರು 50 ಜನರಿದ್ದ ತಂಡ ಬೆಂಗಳೂರಿನಿಂದ ಹೊರಟಿತ್ತು. ಅದರಲ್ಲಿ ಸಂಧ್ಯಾ ದಂಪತಿಯೂ ಇದ್ದರು. ಹದಿನೈದು ದಿನದ ಪ್ರವಾಸವಾಗಿದ್ದರಿಂದ ಯೂರೋಪಿನಲ್ಲಿ ಒಬ್ಬರಿಗೊಬ್ಬರು ಪರಿಚಯವಾಗಿ, ಆತ್ಮೀಯರಾದರು. ಆ ತಂಡದಲ್ಲಿದ್ದ ಅಷ್ಟೂ ಜನರಲ್ಲಿ ತೀರಾ ಇತ್ತೀಚೆಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿದ್ದ ನವಿವಾಹಿತೆ ಭಾಗ್ಯಾ ಎಲ್ಲರಿಗಿಂತಲೂ ಚುರುಕಾಗಿದ್ದು, ಆಕರ್ಷಕವಾಗಿದ್ದಳು. ನೇರ ಮಾತು, ಸದಾ ನಗುತ್ತಿದ್ದ ಭಾಗ್ಯಾ, ಸಂಧ್ಯಾಳ ಆತ್ಮೀಯ ಸ್ನೇಹಿತೆಯಾಗಿ ತೀರಾ ಹತ್ತಿರವಾದಳು. ಭಾಗ್ಯಾಳ ಪತಿ ದಿವಾಕರ್‌ ಕೂಡ ಶಿಸ್ತಿನ ವ್ಯಕ್ತಿ. ಸದಾ ಏನಾದರೊಂದು ಕುತೂಹಲಕಾರಿ ವಿಚಾರಗಳನ್ನು ಹೇಳುತ್ತಾ ಎಲ್ಲರ ಮುಖದಲ್ಲೂ ವಿಸ್ಮಯ ಭಾವನೆಯನ್ನು ಮೂಡಿಸುತ್ತಿದ್ದ. ಜೊತೆಗೆ ಪುಟ್ಟ ಪುಟ್ಟ ಜೋಕುಗಳನ್ನು ಸಿಡಿಸುತ್ತಾ ಎಲ್ಲರನ್ನೂ ನಗಿಸುತ್ತಿದ್ದ. ಒಟ್ಟಾರೆ ಜಾಲಿ ಟೈಪ್‌ ವ್ಯಕ್ತಿಯಾಗಿದ್ದ. ಆ ದಂಪತಿಗಳು ಅದೆಷ್ಟು ಅನ್ಯೋನ್ಯವಾಗಿದ್ದರೆಂದರೆ ಜನರನ್ನು ನಗಿಸುವಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿದ್ದರು. ಈ ನವದಂಪತಿಗಳ ಉಲ್ಲಾಸ, ಸಂಭ್ರಮ ಹಾಗೂ ಉಕ್ಕಿ ಹರಿಯು ಜೀವನಪ್ರೀತಿ ಕಂಡು ಅದರಿಂದ ಸಂಧ್ಯಾ ತುಂಬಾ ಪ್ರಭಾವಿತಳಾಗಿ, `ಬದುಕಿದರೆ ಹೀಗೆ ಬದುಕಬೇಕು. ಇದ್ದರೆ ಇವರಂತೆ ಇರಬೇಕು,' ಅನ್ನುವಷ್ಟರ ಮಟ್ಟಿಗೆ ಆ ದಂಪತಿಗಳು ಸಂಧ್ಯಾಳ ಹೃದಯಕ್ಕೆ ಹತ್ತಿರವಾಗಿದ್ದರು. ಇವರೊಂದಿಗೆ ಸಂಧ್ಯಾ ಸುನೀಲ್‌ರ ನಡುವೆ ಈ ತರಹ ತಮಾಷೆ, ಕಚಗುಳಿ ಎಲ್ಲಾ ಸಾಮಾನ್ಯವಾಗಿತ್ತು. ಆದರೆ ಈ ಜೋಡಿಯ ಮುಂದೆ ಅವಳಿಗೆ ತಮ್ಮದೇನೂ ಅಲ್ಲ ಎಂದೆನಿಸಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ