ನಗರದಲ್ಲಿ ಮಳೆಗಾಲ ಬಂತೆಂದರೆ ಎಷ್ಟೋ ಜನರಿಗೆ ತೊಂದರೆಯಾಗುವುದು ಸಾಮಾನ್ಯ ಸಂಗತಿ. ಆದರೆ ನಾನು ಮಾತ್ರ ಮಳೆಗಾಲ ಬರಲೆಂದು ಹಾರೈಸುತ್ತೇನೆ. ಬೇಸಿಗೆಯ ವಿಪರೀತವಾದ ತಾಪಮಾನದಿಂದ ಬೇಸತ್ತು ಎಲ್ಲಾ ದಿನಗಳೂ ಮಳೆ ಬಂದರೆ ಉತ್ತಮ. ಹವಾಮಾನ ತಂಪಾಗಿ ವಾತಾರಣ ಹಿತವಾಗಿರುತ್ತದೆ ಎನ್ನುವುದು ನನ್ನ ಹಾರೈಕೆಗೆ ಕಾರಣ.

ಅಂತೂ ನನ್ನ ಹಾರೈಕೆ ಫಲಿಸಿತ್ತು. ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿತ್ತು. ಬೆಳಗಿನ ಜಾವಕ್ಕೆ ಸ್ವಲ್ಪ ಬಿಡುವು ಕೊಟ್ಟಿತ್ತಾದರೂ ಬೀಸುತ್ತಿದ್ದ ತಂಗಾಳಿಯಿಂದ ವಾತಾವರಣ ಹಿತಕರವಾಗಿತ್ತು. ನಾನು ಬೆಳಗಿನ ಸ್ನಾನಾದಿಗಳನ್ನು ಮುಗಿಸಿ ಕಾಫಿ ಕುಡಿಯುತ್ತಾ ಪತ್ರಿಕೆಯನ್ನು ತಿರುವಿ ಹಾಕುತ್ತಿದ್ದೆ. ಅಷ್ಟರಲ್ಲಿ ನಮ್ಮ ಮನೆಗೆಲಸದಾಕೆ ಶ್ಯಾಮಲಾ ಒಳಬಂದಳು. ಅವಳು ನಮ್ಮ ವಠಾರ ಮತ್ತು ಅದರ ಎದುರಿನ ಬೀದಿಯಲ್ಲಿ ಏನೇ ನಡೆದರೂ ಅದನ್ನು ಪ್ರತಿಯೊಬ್ಬರಿಗೂ ತಿಳಿಸುತ್ತಿದ್ದುದರಿಂದ ಅವಳನ್ನು ಈ ವಠಾರದ `ಲೋಕಲ್ ನ್ಯೂಸ್‌ ಚಾನೆಲ್' ಎನ್ನುತ್ತಿದ್ದೆ.

ಇವರ ಮನೆ ಸಮಾಚಾರ ಅವರ ಮನೆಗೆ, ಅವರ ಮನೆ ಸಮಾಚಾರ ಇವರ ಮನೆಗೂ ತಲುಪಿಸುತ್ತಿದ್ದ ಈಕೆಯ ಎಲ್ಲಾ ಮಾತನ್ನೂ ಸಂಪೂರ್ಣ ನಂಬಲು ಸಾಧ್ಯವಿರಲಿಲ್ಲವಾದರೂ ಎಲ್ಲೋ ಒಂದಂಶ ಸತ್ಯ ಇತ್ತು.

ಇಂದು ಕೂಡ ನಮ್ಮ ಮನೆಗೆ ಬಂದವಳೇ ನನ್ನತ್ತ ತಿರುಗಿ, ``ನಿಮ್ಮ ಮನೆ ಎದುರಿನ ಬೀದಿಯಲ್ಲಿದ್ದವಳಲ್ಲ ಒಬ್ಬ ಹುಚ್ಚಿ ಮುದುಕಿ ಅವಳ ಮೇಲೆ ನಿನ್ನೆ ರಾತ್ರಿ ಅತ್ಯಾಚಾರ ಆಗಿದ್ಯಂತೆ. ಇಂದು ಬೆಳಗಿನ ಜಾವ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದ ಅವಳನ್ನು ಪೊಲೀಸರು ಆ್ಯಂಬುಲೆನ್ಸ್ ನಲ್ಲಿ ಸರ್ಕಾರಿ ಆಸ್ಪತ್ರೆ ಸೇರಿಸಿದರಂತೆ,'' ಎಂದಳು.

``ಹಾಂ! ಹೌದಾ?''

ನನಗಿದು ನಿಜಕ್ಕೂ ದಿಗ್ಭ್ರಾಂತಿಯನ್ನು ಉಂಟು ಮಾಡಿತ್ತು.

ನಾನು ಕಂಡಂತೆ ಅವಳು ಬಡ ಹೆಂಗಸು. ಮೇಲಾಗಿ ಹುಚ್ಚಿ. ಕಳೆದ ಮೂರು ನಾಲ್ಕು ವರ್ಷಗಳಿಂದಲೂ ಅವಳು ನಮ್ಮ ಮನೆ ಎದುರಿನ ರಸ್ತೆಯಲ್ಲೇ ವಾಸವಿದ್ದಳು. ಸುಮಾರು 70 ಪ್ರಾಯದ ಅವಳ ಬಳಿ ಇದ್ದ ಚೀಲದಲ್ಲಿ ನಾಲ್ಕಾರು ಜೊತೆ ಬಟ್ಟೆ, ಎರಡು ಪ್ಲಾಸ್ಟಿಕ್‌ ಬಾಟಲಿಗಳು, ಹಳೆಯ ಮಾಸಲು ಬಣ್ಣದ ಶಾಲಿನಂಥ ವಸ್ತ್ರ ಮಾತ್ರ ಇದ್ದವು.

ಅವಳು ಹುಚ್ಚಿಯಾದರೂ ತಾನಾಗಿ ಯಾರೊಬ್ಬರಿಗೂ ಕಿರುಕುಳ ನೀಡಿದವಳಲ್ಲ. ಭಿಕ್ಷೆ ಬೇಡುತ್ತಿರಲಿಲ್ಲ. ಹತ್ತಿರದಲ್ಲಿದ್ದ ಮನೆಯವರು ನೀಡುತ್ತಿದ್ದ ಬ್ರೆಡ್‌, ಹಣ್ಣುಗಳನ್ನು ತಿಂದು ಜೀವನ ಮಾಡುತ್ತಿದ್ದಳು. ಕೆಲವೊಮ್ಮೆ ಮನೋವಿಕಾರ ಹೆಚ್ಚಿದಾಗ ಮಾತ್ರ ರಸ್ತೆಯಲ್ಲಿ ಆಡುತ್ತಿದ್ದ ಮಕ್ಕಳನ್ನು ಗದರಿಸುತ್ತಾ ಅಟ್ಟಿಸಿಕೊಂಡು ಹೋಗುತ್ತಿದ್ದಳು.

ಒಮ್ಮೆ ದೀಪಾವಳಿಯ ಸಮಯದಲ್ಲಿ ಮಕ್ಕಳು ರಸ್ತೆ ಪಕ್ಕದಲ್ಲಿ ಪಟಾಕಿ ಸಿಡುಸುತ್ತಿದ್ದರು. ಅಲ್ಲೇ ಇದ್ದ ಆ ಮುದುಕಿ ಒಂದೇ ಸಮನೆ ರೇಗಿಕೊಳ್ಳುತ್ತ ಆ ಮಕ್ಕಳತ್ತ ಕಲ್ಲು ಬೀರಲು ತೊಡಗಿದ್ದಳು. ಬಹುಶಃ ಈ ಪಟಾಕಿ ಶಬ್ದದಿಂದ ಅವಳಿಗೆ ಹಿಂಸೆಯಾಗುತ್ತಿತ್ತೇನೋ? ನಂತರ ಎರಡು ದಿನಗಳಲ್ಲಿ ಪೊಲೀಸ್‌ ಜೀಪೊಂದು ಅವಳಿದ್ದಲ್ಲಿಗೆ ಬಂದು ಈ ಬೀದಿ ಬಿಟ್ಟು ಹೋಗಲು ಹೇಳಿ ಕೆಲವು ಮಾರು ದೂರ ಕರೆದೊಯ್ದು  ಬಿಟ್ಟಿದ್ದೂ ಆಗಿತ್ತು. ಆದರೆ ಇದಾದ ಮತ್ತೆರಡು ದಿನಗಳಲ್ಲಿ ಅವಳು ಪುನಃ ಹಳೆಯ ಜಾಗಕ್ಕೆ ಬಂದು ಕುಳಿತಿದ್ದನ್ನು ನಾನು ಗಮನಿಸಿದ್ದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ