ಸುಮಾರು ಎರಡೂವರೆ ವರ್ಷದ ಬಳಿಕ ಬೆಂಗಳೂರಿಗೆ ಹೊರಟಿದ್ದ ನಾನು ಪೂನಾ ರೈಲು ನಿಲ್ದಾಣಕ್ಕೆ ಹನ್ನೊಂದು ಗಂಟೆ ಹೊತ್ತಿಗೆ ತಲುಪಬೇಕಾಗಿತ್ತು. ಪೂನಾ ನಗರದಲ್ಲಿದ್ದ ಟ್ರಾಫಿಕ್‌ ಸಮಸ್ಯೆಗಳ ಮಧ್ಯೆಯೂ ಹತ್ತು ನಿಮಿಷ ಮುಂಚಿತವಾಗಿ ನಿಲ್ದಾಣಕ್ಕೆ ಸೇರಿದೆ. ಆದರೆ ಅಲ್ಲಿ ಹೋದ ಮೇಲೆ ತಿಳಿದ ವಿಚಾರವೆಂದರೆ, ಇಂದು ರೈಲು ಅರ್ಧ ಗಂಟೆ ತಡವಾಗಿ ಆಗಮಿಸಲಿದೆ ಎಂದು ಮೈಕ್‌ನಲ್ಲಿ ಅನೌನ್ಸ್ ಮೆಂಟ್‌ ಆಗುತ್ತಿತ್ತು. ನಾನು ಒಮ್ಮೆ ಲಗೇಜ್‌ ಚೆಕ್‌ ಮಾಡಿಕೊಂಡೆ.

ವಾಟರ್‌ ಬಾಟಲ್, ಸೂಟ್‌ಕೇಸ್‌, ಐಡಿ ಪ್ರೂಫ್‌ ಎಲ್ಲಾ ಸರಿಯಾಗಿದೆ. ಟಿಕೆಟ್‌......? `ಹಾಂ! ಟಿಕೆಟ್‌ ಎಲ್ಲಿದೆ? ಛೇ! ನಾನೆಂಥಾ ಕೆಲಸ ಮಾಡಿದೆ? ಪ್ರಯಾಣಕ್ಕೆ ಮುನ್ನ ಮನೆಯಲ್ಲೇ ಚೆಕ್‌ ಮಾಡಿಕೊಳ್ಳಬೇಕಲ್ಲವೇ? ಈಗೇನು ಮಾಡಲಿ? ಟಿಕೆಟ್‌ ಇಲ್ಲದೆ ರೈಲು ಹತ್ತಿ, ಸಿಕ್ಕಿ ಹಾಕಿಕೊಂಡರೆ ದಂಡ ಕಟ್ಟಬೇಕು. ಏನು ಮಾಡುವುದು?' ಎಂದು ಮನದಲ್ಲೇ ಆತಂಕಗೊಂಡೆ.

ಅಷ್ಟರಲ್ಲಿ ಬೆಂಗಳೂರು ರೈಲು ಸಹ ಬಂದೇಬಿಟ್ಟಿತು. ನಾನು ಗಾಬರಿಯಿಂದಲೇ ರೈಲನ್ನೇರಿ ನನ್ನ ಬರ್ತ್‌ ಹುಡುಕುತ್ತಿದ್ದೆ. ಹಾಗೆ ಜನರ ನಡುವೆ ಮುನ್ನುಗ್ಗುತ್ತಿದ್ದೆ.

``ಹಲೋ, ಸ್ವಲ್ಪ ಬದಿಗೆ ಸರಿದು ಮುಂದುವರಿಯಿರಿ. ನೀವು ನನ್ನ ದಾರಿಗೆ ಅಡ್ಡವಾಗಿದ್ದೀರಿ,'' ಎಂದು ಹಿಂದಿನಿಂದ ಒಂದು ಧ್ವನಿ ಕೇಳಿಸಿತು. ನಾನು ತುಸು ಹಿಂದೆ ಸರಿದು ನಿಂತೆ. ಅವನು ನನ್ನನ್ನು ಸವರಿಕೊಂಡೇ ಮುಂದೆ ಹೋದ. ಆಗ ನನ್ನ ಕೈಯಲಿದ್ದ ವ್ಯಾಲೆಟ್‌ನಿಂದ ಕಾಗದದ ತುಂಡೊಂದು ಕೆಳಗೆ ಬಿತ್ತು. ತಕ್ಷಣ ನಾನದನ್ನು ಎತ್ತಿಕೊಂಡು ನೋಡಿದೆ... ಅದು ನನ್ನ ಟಿಕೆಟ್‌! ನಾನು ಕಳೆದುಕೊಂಡಿದ್ದ ಅದೇ ಟಿಕೆಟ್‌! ನಾನು ಅವನತ್ತ ತಿರುಗಿ ನೋಡುವಷ್ಟರಲ್ಲಿ ಅವನು ಅಲ್ಲಿಂದ ಎಲ್ಲೋ ಮುಂದೆ ಹೋಗಿದ್ದ. ನಾನು ನಿರಾಳವಾಗಿ ನನ್ನ ಬರ್ತ್‌ ಹುಡುಕಿಕೊಂಡು ಕುಳಿತೆ. ರೈಲು ನಿಧಾನವಾಗಿ ಚಲಿಸಲು ಪ್ರಾರಂಭಿಸಿತು. ಆಗ ನನ್ನ ಬರ್ತ್‌ಗೆ ಬಂದ ಅದೇ ವ್ಯಕ್ತಿಯನ್ನು ಕಂಡು ನನಗೆ ಅಚ್ಚರಿಯಾಯಿತು. ನಾಲ್ಕು ವರ್ಷಗಳ ಹಿಂದೆ ನನ್ನಿಂದ ದೂರಾಗಿದ್ದ ರಾಘವನ ಪಡಿಯಚ್ಚು ಎನ್ನುವಂತಿದ್ದ ವ್ಯಕ್ತಿಯನ್ನು ನಾನು ತದೇಕ ದೃಷ್ಟಿಯಿಂದ ನೋಡಿದೆ.

``ಏಕೆ ಹಾಗೆ ನೋಡುತ್ತಿದ್ದೀರಿ?'' ಅವನು ಕೇಳಿದ.

``ನಾನು ಬಹಳ ಪ್ರೀತಿಸುತ್ತಿದ್ದ, ನಾಲ್ಕು ವರ್ಷಗಳಿಂದ ದೂರಾದ ಓರ್ವ ವ್ಯಕ್ತಿಯನ್ನು ನೀವು ಹೋಲುತ್ತಿದ್ದೀರಾದ್ದರಿಂದ ನಾನು ನಿಮ್ಮನ್ನೇ ನೋಡಿದೆ,'' ಎಂದೆ.

``ಅದಕ್ಕೇ?''

``ಅದಕ್ಕೇ....?'' ತಕ್ಷಣ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚಲಿಲ್ಲ.

``ನೀವು ಯಾವಾಗಲೂ ಹೀಗೆ ಬೇರೆಯವರೊಂದಿಗೆ ಕಠೋರವಾಗಿಯೇ ಮಾತನಾಡುವಿರಾ?'' ಎಂದು ಕೇಳಿದ ನಾನು ನನ್ನ ರಾಘವನನ್ನು ನೆನಪಿಸಿಕೊಂಡೆ. ಅವನು ಹೀಗೆ ಸ್ವಲ್ಪ ಕಠೋರವಾಗಿಯೇ ಮಾತನಾಡುತ್ತಿದ್ದ. ನಂತರ ನಾನೇ ಸಾವರಿಸಿಕೊಂಡು, ``ಕ್ಷಮಿಸಿ, ನೀವು ನೋಡಲು ಅವನಂತೆಯೇ ಇದ್ದೀರಿ. ಅದೇ ಕೇಶ ವಿನ್ಯಾಸ, ಮುಖ, ಮೈಕಟ್ಟು ಹಾಗಾಗಿ.....''

``ನೀವು ಅವರನ್ನು ಅಷ್ಟೊಂದು ಪ್ರೀತಿಸುತ್ತಿದ್ದೀರಾ?'' ಅವನು ಕೇಳಿದ.

``ಅದು ಹಾಗೆ... ನಾನು ಈಗ.....''

``ಇಲ್ಲ ಬಿಡಿ ಅದನ್ನೇನೂ ಹೇಳಬೇಕಾಗಿಲ್ಲ,'' ಅವನು ಮಧ್ಯದಲ್ಲಿಯೇ ನನ್ನನ್ನು ತಡೆದ.

ನೋಡಲು ರಾಘನಂತೆಯೇ ಇದ್ದ ಆ ವ್ಯಕ್ತಿ ಅವನಂತೆಯೇ ವರ್ತಿಸಿದ್ದ. ನಾಲ್ಕು ವರ್ಷಗಳ ಹಿಂದೆ ನನ್ನಿಂದ ದೂರಾದ ರಾಘವನೇ ಇವನೇನೋ ಎನ್ನುವ ಸಣ್ಣ ಅನುಮಾನ ನನ್ನಲ್ಲಿ ಬಂದರೂ ಅವನೇಕೆ ಇಲ್ಲಿ, ಇಂತಹ ಸ್ಥಿತಿಯಲ್ಲಿ ನನಗೆ ಎದುರಾಗುತ್ತಾನೆಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಕೆಲವು ಕ್ಷಣಗಳು ಉರುಳಿದವು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ