``ಮೃಣಾಲಿನಿ, ಎದ್ದೇಳು. ಶಾಲೆಗೆ ತಡವಾಗುತ್ತದೆ,'' ಕುಮುದಾ ತನ್ನ ಮಗಳನ್ನು ಎಬ್ಬಿಸಿದಳು.

``ರಾತ್ರಿ ಬಹಳ ಹೊತ್ತು ಟಿ.ವಿ. ನೋಡಬೇಡ ಬೇಗನೆ ಮಲಗು ಎಂದು ಎಷ್ಟು ಹೇಳಿದರೂ ಕೇಳಲಾರಳು,'' ಎನ್ನುತ್ತಾ ಅಲ್ಲೇ ಇದ್ದ ಪತಿ ಡಾ. ರಮಾಕಾಂತನತ್ತ ತಿರುಗಿ, ``ನೋಡಿ, ನಿಮ್ಮ ಮಗಳು ಇನ್ನೂ ಎದ್ದಿಲ್ಲ... ಎಬ್ಬಿಸಿ ಕರೆತನ್ನಿ,'' ಎಂದಾಗ ರಮಾಕಾಂತ್‌ಮಗಳ ಕೋಣೆಯತ್ತ ಹೋದ.

ಕೆಲವು ನಿಮಿಷ ಮಗಳನ್ನು ನೋಡಿದ ರಮಾಕಾಂತ್‌ ಅವಳನ್ನು ಹಾಗೇ ಮಲಗಲು ಬಿಟ್ಟು ಹೊರಬಂದು, ``ಇಂದು ನಾನೇ ಮುದ್ದು ಮೃಣಾಲಿಯನ್ನು ಶಾಲೆಗೆ  ಡ್ರಾಪ್‌ ಮಾಡ್ತೀನಿ. ಅವಳಿನ್ನೂ ಸ್ವಲ್ಪ ಹೊತ್ತು ಮಲಗಿರಲಿ,'' ಎಂದ.

ಮೃಣಾಲಿನಿ ರಮಾಕಾಂತ್‌ ಕುಮುದಾರ ಮುದ್ದಿನ ಮಗಳು. ರಮಾಕಾಂತ್‌ ನ್ಯೂರೋ ಸರ್ಜನ್‌ ಆಗಿದ್ದರಿಂದ ಮಗಳೂ ಚೆನ್ನಾಗಿ  ಓದಿ ಖ್ಯಾತ ವೈದ್ಯೆ ಎನಿಸಬೇಕೆಂದು ಹಂಬಲಿಸಿದ್ದನು. ಕುಟುಂಬವನ್ನು ಪ್ರೀತಿಸುತ್ತಿದ್ದ ಅವನಿಗೆ ಮಗಳ ಮೇಲೆ ಅಪಾರವಾದ ಮಮತೆ. ಮೃಣಾಲಿನಿಗೂ ಅಪ್ಪ ಎಂದರೆ ಎಲ್ಲಿಲ್ಲದ ಅಕ್ಕರೆ. ಅಮ್ಮ ಯಾವಾಗಲಾದರೊಮ್ಮೆ ಗದರುತ್ತಿದ್ದಳಾದರೂ ಅಪ್ಪ ಮಾತ್ರ ಎಂದೂ ಗಟ್ಟಿಯಾಗಿ ಗದರಿದವನಲ್ಲ. ಯಾವಾಗಲೂ ಅವಳ ಪರವಾಗಿಯೇ ಮಾತನಾಡುತ್ತಿದ್ದನು.

ಇನ್ನು ರಾತ್ರಿ ವೇಳೆ ಮೃಣಾಲಿನಿಗೆ ನಿದ್ರೆ ಬರುವವರೆಗೂ ಅವಳ ಅಪ್ಪ ಅವಳೊಂದಿಗೇ ಇರಬೇಕಾಗಿತ್ತು. ಆ ಸಮಯದಲ್ಲಿ ಅಪ್ಪ ಅವಳಿಗೆ ವಿವಿಧ ಬಗೆಯ ಕಥೆಗಳನ್ನು ಹೇಳುತ್ತಿದ್ದರು. ಅವರಲ್ಲಿ ಹಲವು ಕಥೆಗಳು ವೈದ್ಯಕೀಯ ಲೋಕದ ವಿಸ್ಮಯಗಳನ್ನು ಕುರಿತಂತೆ ಇರುತ್ತಿತ್ತು. ಇಂತಹ ಕಥೆಗಳಲ್ಲಿ ಮೃಣಾಲಿನಿಗೂ ಆಸಕ್ತಿ ಇದ್ದು ಅವಳು ತಿರುಗಿ ತಿರುಗಿ ಪ್ರಶ್ನೆ ಕೇಳಿ ತನ್ನ ಸಂದೇಹವನ್ನು ನಿವಾರಿಸಿಕೊಳ್ಳುತ್ತಿದ್ದಳು.

ಸಂಜೆ ವೇಳೆ ಅವಳು ಮನೆಯ ಹೊರಗಡೆ ಸಾಕಷ್ಟು ಚಟುವಟಿಕೆಗಳಲ್ಲಿ ನಿರತಳಾಗಿದ್ದಳು. ರಮಾಕಾಂತ್‌ ಮಗಳ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸುವ ಸಾಕಷ್ಟು ಬಗೆಯ ಚಟುವಟಿಕೆಗಳು, ಆಟಗಳಲ್ಲಿ ಅವಳನ್ನು ತೊಡಿಗಿಸುವಂತೆ ಪ್ರೇರೇಪಿಸುತ್ತಿದ್ದ.

ಕಾಲ ಸರಿಯುತ್ತಿತ್ತು. ಮೃಣಾಲಿನಿಯೂ ಬೆಳೆದು ಲಾವಣ್ಯವತಿಯಾದಳು. ಅವಳ ದೈಹಿಕ, ಮಾನಸಿಕ ಸ್ಥಿತಿಗಳಲ್ಲಿ ಸಾಕಷ್ಟು ಬದಲಾವಣೆಗಳಾದವು. ಅವಳೀಗ ಮೊದಲಿನಂತೆ ತನ್ನ ಗಲ್ಲಿಯ ಹುಡುಗರೊಂದಿಗೆ ಆಡಲು ಹೋಗುವುದಿಲ್ಲ. ಅಪ್ಪನೊಂದಿಗೆ ಮೊದಲಿನಂತೆ ಬೆರೆಯಲಾರಳು. ಇದು ತಂದೆಗೂ ಆತಂಕವನ್ನುಂಟು ಮಾಡಿತ್ತು. ಆದರೆ ಮಗಳ ಭವಿಷ್ಯ ಉಜ್ವಲವಾಗಿರಬೇಕು ಎನ್ನುವ ಹಂಬಲವಿದ್ದುದರಿಂದ ಇವೆಲ್ಲವನ್ನೂ ಅವರಷ್ಟು ಗಮನಕ್ಕೆ  ತಂದುಕೊಂಡಿರಲಿಲ್ಲ. ಆದರೂ ಕೆಲವೊಮ್ಮೆ ತಾನೆಲ್ಲಿಯೋ ಪುಟ್ಟ ಮೃಣಾಲಿನಿಯನ್ನು `ಮಿಸ್‌' ಮಾಡಿಕೊಳ್ಳುತ್ತಿದ್ದೇನೇನೋ ಎನಿಸುತ್ತಿತ್ತು.

ಮೃಣಾಲಿನಿ ಎಂ.ಎ. ಮುಗಿಸಿದ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಗರದ ಕಾಲೇಜು ಸೇರಿದಳು. ಅವಳ ಮನೆಯಿಂದ ಕಾಲೇಜು ಸಾಕಷ್ಟು ದೂರದಲ್ಲಿದ್ದ ಕಾರಣ ಅವಳು ಹಾಸ್ಟೆಲ್ ‌ಸೇರಿಕೊಳ್ಳಬೇಕಾಯಿತು. ಕಾಲೇಜಿನಲ್ಲಿ ಅವಳಿಗೆ ಬಹಳಷ್ಟು ಸ್ನೇಹಿತರು ದೊರಕಿದರು. ಅವರುಗಳಲ್ಲಿ ಅವಳಿಗಿಂತ ಒಂದು ವರ್ಷ ಸೀನಿಯರ್‌ ಆಗಿದ್ದ ಅವಿನಾಶ್‌ ಕೂಡ ಒಬ್ಬ.

ಇಬ್ಬರ ನಡುವೆ ಪ್ರಾರಂಭವಾದದ್ದು ಸಾಮಾನ್ಯ ಗೆಳೆತನವಾದರೂ, ಬಲು ಬೇಗನೇ ಅದು ಪ್ರೀತಿಯಾಗಿ ಬದಲಾಯಿತು. ಇಬ್ಬರೂ ಹಲವಾರು ವಿಷಯಗಳ ಕುರಿತು ಗಂಟೆಗಳ ಕಾಲ ಮಾತನಾಡುತ್ತಿದ್ದರು.

ತನ್ನ ಪೋಷಕರೊಂದಿಗೆ ಮೃಣಾಲಿನಿ ಯಾವ ವಿಚಾರವನ್ನೂ ಮುಚ್ಚಿಟ್ಟಿರಲಿಲ್ಲ. ಹಾಗೆಯೇ ಒಮ್ಮೆ ಮನೆಗೆ ಬಂದಾಗ ತಾನು ಅವಿನಾಶ್‌ನನ್ನು ಇಷ್ಟಪಡುತ್ತಿರುವ ವಿಚಾರವನ್ನು ತಿಳಿಸಿದಳು. ಕುಮುದಾಗೆ ಇದರಿಂದ ಬಹಳ ಆಘಾತವಾಯಿತು. ಅವಳು ಕೆಲವುಮಟ್ಟಿಗೆ ಕೋಪದಿಂದ ಮಗಳನ್ನು ಗದರಿದಳು. ಆದರೆ ರಮಾಕಾಂತ್‌ ಮಾತ್ರ ತಾಳ್ಮೆ ಕಳೆದುಕೊಳ್ಳಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ