ನೀಳ್ಗಥೆ - ಚಂದ್ರಿಕಾ ಸುಧೀಂದ್ರ 

ತುಂಬು ಮನೆಯ ಆದರ್ಶ ಸೊಸೆ ಎನಿಸಿದ ನಂದಿತಾ, ಹಿರಿಯರ ನಿಧನಾನಂತರ ತಾನೇ ಮುಂದೆ ನಿಂತು ನಾದಿನಿಯ ಮದುವೆ ಮಾಡಿಸಿದಳು. ನಂತರ ಗಂಡನನ್ನು ಕಳೆದುಕೊಂಡ ತಂಗಿಗೂ ಆಸರೆಯಾದಳು. ಇವರಿಬ್ಬರ ಮಕ್ಕಳ ಬದುಕು ಹೇಗೆ ಮುಂದುವರಿಯಿತು..... ಪಲ್ಲವಿ ಬದಲಾದಳೆ....? ನಂದಿತಾ ಏನಾದಳು.......?

ಕಳೆದ ಸಂಚಿಕೆಯ ಕಥೆ :

ಮಧ್ಯಮ ವರ್ಗದ ಕುಟುಂಬದ ಹಿರಿಯ ಮಗಳಾದ ನಂದಿತಾ ತನ್ನ ಸೌಂದರ್ಯ, ಸದ್ಗುಣಗಳಿಂದ ಎಲ್ಲರ ಬಳಿ ಆದರ್ಶ ಹೆಸರು ಗಳಿಸಿದ್ದಳು. ಇದರಿಂದ ಸದಾ ಅಸೂಯೆಗೆ ಗುರಿಯಾಗುತ್ತಿದ್ದ ಅವಳ ತಂಗಿ ಪಲ್ಲವಿ ಅಕ್ಕನಿಗೆ ಒಳ್ಳೆಯ ಕಡೆ ಮದುವೆ ಗೊತ್ತಾಗದಂತೆ ಆ ಸಂಬಂಧಗಳನ್ನು ತಪ್ಪಿಸುತ್ತಿದ್ದಳು. ಮುಂದೆ ಅವಳ ಅನುಪಸ್ಥಿತಿಯಲ್ಲಿ ನಂದಿತಾಳ ಮದುವೆ ವಿನಯನೊಂದಿಗೆ ಗೊತ್ತಾಯಿತು. ಅನುಕೂಲಸ್ಥರ ಮನೆಯ ಸೊಸೆಯಾದ ನಂದಿತಾ ಅತ್ತೆಮನೆಯಲ್ಲಿ ಎಲ್ಲರ ಕಣ್ಮಣಿ ಎನಿಸಿದಳು. ತಂಗಿ ಪಲ್ಲವಿ ಆಸ್ತಿವಂತನೆಂದು ನಂಬಿಸಿದ್ದ ಮೋಹನನ ಕೈಹಿಡಿದು ಏಮಾರಿದಳು. ಸಾಧಾರಣ ಬದುಕಿನ ಪಲ್ಲವಿ ಅಕ್ಕನ ಸುಖೀ ಸಂಸಾರ ಕಂಡು ಕರುಬುತ್ತಿದ್ದಳು. ಬದುಕಿನ ಏರುಪೇರು ಇವರನ್ನು ಎಲ್ಲಿಗೆ ಕೊಂಡೊಯ್ಯಿತು...?

ಮುಂದೆ ಓದಿ........

ತೀರ್ಥಯಾತ್ರೆಗೆಂದು ಹೋಗಿದ್ದ ವಿನಯ್‌ ತಂದೆ ತಾಯಿ ಹಿಂದಿರುಗುವಾಗ ಬಸ್‌ದುರಂತಕ್ಕೆ ಸಿಲುಕಿ ಮಾರ್ಗ ಮಧ್ಯದಲ್ಲೇ ಇಬ್ಬರೂ ಅಸುನೀಗಿದರು. ವಿಚಾರ ತಿಳಿದ ವಿನಯ್‌, ನಂದಿತಾ, ಜ್ಯೋತಿಗೆ ಆಘಾತವಾಗಿ ಚೇತರಿಸಿಕೊಳ್ಳಲಾಗಲಿಲ್ಲ. ನಂದಿತಾ ಜ್ಯೋತಿಯನ್ನು ಎಷ್ಟು ಸಮಾಧಾನಪಡಿಸಿದರೂ ಆಗಲಿಲ್ಲ. ನಂದಿತಾಳ ತಾಯಿ ಮಮತೆ, ಅಣ್ಣನ ತಂದೆಯ ಪ್ರೀತಿಯ ಬಂಧನದಿಂದ ಜ್ಯೋತಿ ತಾಯಿ ತಂದೆಯ ಅಗಲಿಕೆಯನ್ನು ಅಣ್ಣ ಅತ್ತಿಗೆಯರಲ್ಲಿ ಕಂಡಳು. ಅದಾದ ಒಂದೆರಡು ತಿಂಗಳಲ್ಲಿ ನಂದಿತಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ತನ್ನ ಮಗುವಿಗಾಗಿ ಹಂಬಲಿಸುತ್ತಿದ್ದ ಅತ್ತೆ ಮಾವನನ್ನು ನೆನೆದು ನಂದಿತಾ ಕಣ್ಣೀರಿಟ್ಟಳು. ಮಗುವಿನ ಆಗಮನದಿಂದ ಹಳೆಯ ನೋವು ದುಗುಡದಿಂದ ಎಲ್ಲರೂ ಹೊರಬಂದರು.

ವಿನಯ್‌ ನಂದಿತಾ ಇಬ್ಬರೂ ಜ್ಯೋತಿಯ ಅಪೇಕ್ಷೆಯಂತೆ ಮಗುವಿಗೆ ಅಪೇಕ್ಷಾ ಎಂದು ನಾಮಕರಣ ಮಾಡಿದರು. ಜ್ಯೋತಿಯಂತೂ ಮಗುವನ್ನು ಬಿಟ್ಟಿರುತ್ತಿರಲಿಲ್ಲ. ಅದರ ಲಾಲನೆ ಪಾಲನೆಯಲ್ಲಿ ಕಾಲ ಕಳೆಯುತ್ತಾ ತನ್ನ ನೋವನ್ನು ಮರೆತಳು.

ತುಂಬು ಗರ್ಭಿಣಿಯಾದ ಪಲ್ಲವಿಯನ್ನು ತಾಯಿ ಮನೆಗೆ ಕರೆಸಿಕೊಂಡರು. ಆದರೆ ಅವಳ ಬೇಕು ಬೇಡಗಳನ್ನು ಪೂರೈಸುವಷ್ಟು ಆರ್ಥಿಕವಾಗಿ ಸಮರ್ಥರಾಗಿರಲಿಲ್ಲ. ಅಲ್ಲದೆ ಹೆರಿಗೆ ಕಷ್ಟವಾಗಿ ತಾಯಿ, ಮಗುವನ್ನು ಉಳಿಸಲು ನಂದಿತಾ ಅವಳನ್ನು ಖಾಸಗಿ ನರ್ಸಿಂಗ್‌ ಹೋಮ್ ನಲ್ಲಿ ಸೇರಿಸಿ ಹಣವನ್ನು ಧಾರಾಳವಾಗಿ ಖರ್ಚು ಮಾಡಿ ತಾಯಿ, ಮಗುವನ್ನು ಉಳಿಸಿಕೊಂಡಳು. ಪಲ್ಲವಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು.

ಪಲ್ಲವಿಗೆ ಅಕ್ಕನ ಈ ಧಾರಾಳ ಸ್ವಭಾವವನ್ನು ಕಂಡು ತನ್ನ ನಡವಳಿಕೆ ಬಗ್ಗೆ ನಾಚಿಕೆ ಉಂಟಾಯಿತು. ಜೊತೆಗೆ ಅವಳ ಸ್ವಭಾವದಲ್ಲಿ ಸ್ವಲ್ಪ ಸ್ವಲ್ಪವಾಗಿ ಬದಲಾವಣೆಯಾಗತೊಡಗಿತು. ಈ ಮಧ್ಯೆ ಮೋಹನ ಕಾಯಿಲೆಯಿಂದ ಬಳಲಿ ಬದುಕುಳಿಯಲಾರದ ಪರಿಸ್ಥಿತಿ ಬಂದಾಗ ಪಲ್ಲವಿ ನಂದಿತಾಳ ಮನೆಗೆ ಸಹಾಯ ಕೇಳಲು ಬಂದಳು. ನಂದಿತಾಳಿಗೆ ಆಶ್ಚರ್ಯ ಮತ್ತು ಸಂತೋಷ ಏಕಕಾಲಕ್ಕಾಯಿತು. ಅವಳು ನಿರ್ಮಲವಾದ ಮನಸ್ಸಿನಿಂದ ತಂಗಿಯನ್ನು ಆದರಿಸಿದಳು. ರೂಮಿಗೆ ಬಂದ ಪಲ್ಲವಿ ಅಕ್ಕನ ಕಾಲನ್ನು ಹಿಡಿದುಕೊಂಡು, ``ನನ್ನನ್ನು ಕ್ಷಮಿಸಕ್ಕಾ, ನಿನಗೆ ನಾನು ಸಾಕಷ್ಟು ಕೇಡು ಬಗೆದೆ. ಯಾವ ತಂಗಿಯೂ ಮಾಡದಂತಹ ಕೆಡುಕನ್ನೆಲ್ಲಾ ಮಾಡಿದೆ,'' ಎಂದು ಕಣ್ಣೀರಿಟ್ಟಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ