ಕಥೆ - ವೀಣಾ ರಾವ್ 

ಇವತ್ತೂ ದಿವ್ಯಾ ಅದೇ ಬಾಲ್ಕನಿಯಲ್ಲಿ ನಿಂತಿದ್ದಾಳೆ. ಇಲ್ಲೇ ಅವಳು ನಕ್ಷತ್ರಗಳ ಜೊತೆ ಮಾತನಾಡಲು ಶುರು ಮಾಡಿದ್ದು, ಇಲ್ಲಿಂದಲೇ ಧ್ರುವತಾರೆಯನ್ನು ಗುರುತಿಸಿದ್ದು. ಇಂದು ಅವಳು ನಕ್ಷತ್ರಗಳ ಪ್ರಪಂಚವನ್ನು ಕ್ಷಮೆ ಕೇಳಲು ಬಂದಿದ್ದಾಳೆ. ಏಕೆಂದರೆ ಅವುಗಳ ಜೊತೆ ಮಾತನಾಡಿ ತುಂಬಾ ಸಮಯವೇ ಕಳೆದಿದೆ.

ತಾಯಿಯ ನಡವಳಿಕೆ ಬದಲಾಗಿದೆ. ಅದರಿಂದ ಅವಳು ಕೊಡುತ್ತಿದ್ದ ಬಾಲ್ಕನಿಯಲ್ಲಿ ನಿಲ್ಲುವ ಶಿಕ್ಷೆಯೂ ನಿಂತುಹೋಗಿದೆ. ಚಿಕ್ಕವಳಿದ್ದಾಗ ಕಿವಿ ಹಿಡಿದುಕೊಂಡು ಬಾಲ್ಕನಿಯಲ್ಲಿ ನಿಂತುಕೊಳ್ಳುವ ಶಿಕ್ಷೆ ಎಷ್ಟು ಸಲ ಅನುಭವಿಸಿದ್ದಾಳೋ... ಅದು ಸಾಧಾರಣ ವಿಷಯಕ್ಕೂ ಶಿಕ್ಷೆ. ಹಿಂದಿನ ಜನ್ಮದ ಬದ್ಧ ವೈರಿಯೇನೋ  ಎಂಬಂತೆ. ದಿವ್ಯಾ ಆಜ್ಞಾಕಾರಿಯಾದ ಮುದ್ದಾದ ಹುಡುಗಿ, ಈಗಲೂ ಹಾಗೆ ಇದ್ದಾಳೆ. ತಾಯಿ ಅವಳಿಗೆ ಪೆದ್ದಿ, ಮಂದಬುದ್ಧಿ ಮತ್ತು ಇನ್ನೂ ಏನೇನೋ ಹೆಸರುಗಳಿಂದ ಕರೆಯುತ್ತಿದ್ದಳು. ಮೊದಲ ಸಲ ಮಂದಬುದ್ಧಿ ಅಂತ ಕೇಳಿದಾಗ ದಿವ್ಯಾ ಮತ್ತು ಅಪೂರ್ವಾ ಇಬ್ಬರೂ ನಕ್ಕಿದ್ದರು. ಅದರ ಅರ್ಥ ಆಮೇಲೆ ಯಾವಾಗಲೋ ಗೊತ್ತಾಗಿತ್ತು.

ಮೊದಲನೆ ಸಲ ಶಿಕ್ಷೆ ಸಿಕ್ಕಿದ್ದೂ ಅವಳಿಗೆ 7 ವರ್ಷವಾಗಿದ್ದಾಗ. ಅವಳ ಎರಡು ಕೆನ್ನೆಗಳೂ ಕಣ್ಣೀರಿನಿಂದ ತೊಯ್ದು ಹೋಗಿದ್ದವು. ಸ್ವಲ್ಪ ಹೊತ್ತು ಮುಚ್ಚಿದ ಬಾಗಿಲ ಕಡೆ ಮುಖ ಮಾಡಿ ನಿಂತಿದ್ದಳು. ಏಕೋ ಅಮಾವಾಸ್ಯೆಯ ಆಕಾಶ ನೋಡಿದಾಗ ಅವಳ ಅಳು ನಿಂತುಹೋಯಿತು.

ಮಿನುಗು ನಕ್ಷತ್ರಗಳು ತನ್ನೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿವೆ ಎಂದು ಅನಿಸುತ್ತಿತ್ತು. ತನ್ನೆದುರು ಒಂದು ಹೊಸ ಲೋಕವೇ ತೆರೆದು ಕೊಂಡಿದೆ ಎಂದು ಅವಳಿಗನ್ನಿಸಿತು. ಅವಳಿಗೆ ತನ್ನ ಪಠ್ಯಪುಸ್ತಕದಲ್ಲಿ ಓದಿದ್ದ ಧ್ರುವತಾರೆಯ ನೆನಪಾಯಿತು. ಹಾಗೇ ಹೊಳೆಯುವ ಆಕರ್ಷಕ ನಕ್ಷತ್ರಗಳ ಲೋಕದಲ್ಲಿ ಮುಳುಗಿಹೋದಳು. ತಾಯಿ ಬಾಗಿಲು ತೆರೆದು ಕೂಗಿದ್ದೂ ತಿಳಿಯದಷ್ಟು, ಅದರಲ್ಲಿ ಮಗ್ನಳಾಗಿದ್ದಳು. ಯಾವುದೋ ಸವಿಗನಸಿನಲ್ಲಿ ಮುಳುಗಿಹೋಗಿದ್ದ ದಿವ್ಯಾಳನ್ನು ನೋಡಿ ತಾಯಿಗೂ ಕಡಿಮೆ ಆಶ್ಚರ್ಯವಾಗಲಿಲ್ಲ. ಕಪ್ಪು ಮಸಿಯಂಥ ಆಕಾಶದ ಎಲ್ಲಾ ನಕ್ಷತ್ರಗಳೂ ಈಗ ಅವಳ ಸಂಗಾತಿಗಳು, ಸ್ನೇಹಿತರು. ಹುಣ್ಣಿಮೆ ಬರುತ್ತಿದ್ದಂತೆ ಅವಳು ಚಡಪಡಿಸುತ್ತಿದ್ದಳು.

ಏಕೆಂದರೆ ಚಂದ್ರನ ಪೂರ್ಣ ಬೆಳಕಿನಲ್ಲಿ ನಕ್ಷತ್ರಗಳ ಗುಂಪು ಅವಳ ಜೀವನದಲ್ಲಿ ಕಾಂತಿ ತುಂಬಿದ್ದವು. ಜೀವನವನ್ನು ಸರಳವಾಗಿಸಿದ್ದವು. ಆಗಾಗ ಅವಳ ಕಣ್ಣೆದುರಿನಲ್ಲಿ ಯಾವುದಾದರೂ ನಕ್ಷತ್ರ ಬಿದ್ದಾಗ ಅವಳು ತಕ್ಷಣ ಕಣ್ಣುಚ್ಚಿ ನನ್ನನ್ನೂ ಧ್ರುವನ ಹಾಗೆ ಮಾಡು ಎಂದು ಪ್ರಾರ್ಥಿಸುತ್ತಿದ್ದಳು. ಅವಳ ಬಾಲಿಶ ಮನಸ್ಸು ತಾನು ಬಹಳ ಒಳ್ಳೆಯ ಹುಡುಗಿಯಾಗಿ ಇರುತ್ತೇನೆ ಮತ್ತು ಧ್ರುವನ ತರಹ ನಕ್ಷತ್ರವಾಗಿ ಆಕಾಶದಲ್ಲಿ ಹೊಳೆಯುತ್ತೇನೆ ಎಂದು ಯೋಚಿಸುತ್ತಿತ್ತು.

ಈ ಬಾಲ್ಕನಿ ಇರಲಿ ಇಲ್ಲದಿರಲಿ ತಾನು ಇಲ್ಲಿಗೆ ಬರಬಾರದು ಎಂದಿದ್ದರೆ ತನ್ನ ಸ್ಥಿತಿ ಏನಾಗುತ್ತಿತ್ತು ಎಂದು ಎಷ್ಟೋ ಸಲ ದಿವ್ಯಾ ಯೋಚಿಸುತ್ತಿದ್ದಳು. ಅವಳಿಗೆ ಅಮಾವಾಸ್ಯೆ ಮತ್ತು ಮಿನುಗುವ ನಕ್ಷತ್ರಗಳು ತನ್ನವರು ಎನಿಸುತ್ತಿತ್ತು. ಅವಳು ಬಹಳ ಸುಲಭವಾಗಿ ಅವುಗಳೊಂದಿಗೆ ಮಾತನಾಡುತ್ತಿದ್ದಳು. ತನ್ನ ತಾಯಿಯ ಜೊತೆ ಸರಿಯಾಗಿ ಮಾತನಾಡಲು ಆಗುತ್ತಿರಲಿಲ್ಲ.

ಅಪ್ಪ ಮಾತ್ರ ಅವಳ ಜೊತೆ ಮಾತನಾಡುತ್ತಿದ್ದರು. ಅವಳನ್ನು ಮುದ್ದು ಮಾಡುತ್ತಿದ್ದರು. ಅಮ್ಮನಿಗೆ ಅಣ್ಣ ಮತ್ತು ಅಕ್ಕಂದಿರನ್ನು ನೋಡಿಕೊಳ್ಳುವುದರಲ್ಲಿ ತನಗಾಗಿ ಪುರಸತ್ತು ಎಲ್ಲಿರುತ್ತಿತ್ತು? ಅವರಿಬ್ಬರೇ ತನ್ನ ನಿಜವಾದ ಮಕ್ಕಳೇನೋ ಎಂಬಂತೆ ಅವರ ಮೇಲೆ ತನ್ನೆಲ್ಲೇ ಪ್ರೀತಿ ಸುರಿಸುತ್ತಿದ್ದಳು. ಬಾಲ್ಯದಲ್ಲಿ ತಾಯಿ ಅವಳನ್ನು ಕಾರಣ ಇರಲಿ ಇಲ್ಲದಿರಲಿ ಬೈಯುತ್ತಿದ್ದರೆ ಅವಳು ಜೋರಾಗಿ ಕಿರುಚುತ್ತಾ ಅಳುತ್ತಿದ್ದಳು. ಅಪ್ಪ ಮನೆಯಲ್ಲಿದ್ದರೆ ಬಂದು ಅವಳನ್ನು ಪುಸಲಾಯಿಸಿ, ಸಮಾಧಾನ ಮಾಡಿ ಚಾಕಲೇಟ್‌ ಕೊಡುತ್ತಿದ್ದರು. ಅಪ್ಪ ಇಲ್ಲದಿದ್ದಾಗ ಅವಳಿಗಿಂತ 5 ವರ್ಷ ದೊಡ್ಡವನಾದ ಅಮಿತ್‌ ಅಣ್ಣ ಅವಳನ್ನು ಸುಮ್ಮನಾಗಿಸುತ್ತಿದ್ದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ