ಮುಸ್ಸಂಜೆ ಆಗುತ್ತಿರುವುದನ್ನು ಕಂಡು ದೀಪಿಕಾ ಕೂದಲು ಸರಿಪಡಿಸಿಕೊಂಡು ಮೇಲೆದ್ದಳು. ಅವಳ ರೇಷ್ಮೆಯಂತಹ ಕೂದಲು ಮತ್ತೆ ಮತ್ತೆ ಗುಲಾಬಿ ಕೆನ್ನೆಗಳನ್ನು ಮುತ್ತಿಡುತ್ತಿದ್ದವು, ಅವಳು ಪದೇ ಪದೇ ಅವುಗಳನ್ನು ಹಿಂದೆ ತಳ್ಳುತ್ತಿದ್ದಳು.

``ನಿನ್ನ ಸುಂದರ ಮುಖದ ಮೇಲೆ ಮುಂಗುರುಳು ಇರಲಿ ಬಿಡು.... ಮೋಡಗಳು ಚಂದ್ರನನ್ನು ಮರೆಮಾಡುವ ಹಾಗೆ ಇರುತ್ತದೆ,'' ಸಂತೋಷ್‌ ಅವಳ ಮುಖವನ್ನೇ  ದಿಟ್ಟಿಸುತ್ತಾ ಹೇಳಿದ.

``ಈಗಾಗಲೇ ಸೂರ್ಯ ಮನೆಗೆ ಹೋಗಿ ಆಯಿತು. ನೀನು ಇನ್ನೂ ಹೀಗೇ ಮಲಗಿದ್ದರೆ ಈ ಚಂದ್ರನೂ ಮನೆಯಿಂದ ಹೊರಗೆ ಹೋಗಬೇಕಾಗುತ್ತದೆ ಅಷ್ಟೆ,'' ಎಂದಳು ದೀಪಿಕಾ.

``ಅದಕ್ಕೆ ಯಾಕೆ ಭಯ? ನಿನ್ನನ್ನು ಮನೆಯಿಂದ ಹೊರಗೆ ಹಾಕಿದರೆ, ಕರೆದುಕೊಂಡು ಹೋಗೋದಿಕ್ಕೆ ನಾನು ಸಿದ್ಧನಾಗಿದ್ದೇನಲ್ಲ.....''

``ಮಾತು ಸಾಕು ಎದ್ದೇಳು. ಉದಯ್‌ ಬರುವ ಹೊತ್ತಿಗೆ ನಾನು ಬೆಡ್‌ ಎಲ್ಲವನ್ನೂ ಸರಿಪಡಿಸಬೇಕು. ನಾಳೆ ಬಂದಾಗ ಉಳಿದ ಮಾತು.....'' ದೀಪಿಕಾ ಹಾಸಿಗೆ, ಹೊದಿಕೆಗಳನ್ನು ಚೊಕ್ಕಗೊಳಿಸುತ್ತಾ ಹೇಳಿದಳು.

``ಅದೂ ಸರಿ. ಆದರೆ ಹೀಗೆ ಕದ್ದುಮುಚ್ಚಿ ಸೇರೋದು ನನಗೆ ಇಷ್ಟವಾಗೋದಿಲ್ಲ. ನಾವು ಪ್ರೇಮಿಗಳು. ತಪ್ಪು ಮಾಡುವವರ ಹಾಗಿದ್ದೇವೆ,'' ಸಂತೋಷ್‌ ಬೇಸರದ ಧ್ವನಿಯಲ್ಲಿ ಹೇಳಿದ.

``ನಾವು ಮಾಡುತ್ತಿರುದು ತಪ್ಪು ತಾನೇ? ನಮ್ಮ ಮದುವೆ ಆಗಿದ್ದಿದ್ದರೆ ಅದು ಬೇರೆ ಮಾತು. ಆದರೆ ನಾನೀಗ ಉದಯ್‌ನ ಪತ್ನಿ...... ನೀನು ನಮ್ಮ ಮನೆಗೆ ಬರುತ್ತಿರುವುದು ಸಂಗೀತದ ಮೇಷ್ಟರ ಹಾಗೆ. ಅಂಥದರಲ್ಲಿ ನಮ್ಮ ಈ ಸಂಬಂಧ ತಪ್ಪಲ್ಲದೆ ಮತ್ತೇನು..?''

``ನಾವಿಬ್ಬರು ತಾನೇ ಮೊದಲು ಪ್ರೀತಿಸಿದ್ದು. ಉದಯ್‌ ಆಮೇಲೆ ಬಂದದ್ದು. ನಿಮ್ಮ ಮನೆಯವರು ಜಾತಿ ಜಾತಿ ಅಂತ ನಮ್ಮ ಪ್ರೀತಿಗೆ ಅಡ್ಡಹಾಕಿ ನಿನಗೆ ಬೇರೆ ಯಾವುದೋ ಊರಿನಲ್ಲಿ ಮದುವೆ ಮಾಡಿಲ್ಲದಿದ್ದರೆ.....''

``ಆ ಹಳೇ ವಿಷಯ ಬಿಟ್ಟುಬಿಡು. ಈ ಗೊತ್ತಿಲ್ಲದ ಊರಿನಲ್ಲಿ ನಾವು ಒಬ್ಬರಿಗೊಬ್ಬರು ಸಿಕ್ಕಿದ್ದೇವಲ್ಲ..... ಮತ್ತೆ ನಮಗೇನು ಕಡಿಮೆಯಾಗಿದೆ ಹೇಳು. ನನ್ನ ಮನಸ್ಸಿನಲ್ಲಿ ನಿನ್ನ ಮೇಲೆ ಇರೋ ಪ್ರೀತಿಯನ್ನು ಗುರುತಿಸಿ ದೈವವೇ ನಮ್ಮನ್ನು ಈ ರೀತಿ ಒಂದುಗೂಡಿಸಿರಬಹುದು.''

ಸಂತೋಷ್‌ ಹೋದ ಕೂಡಲೇ ದೀಪಿಕಾ ಕೊಠಡಿಯನ್ನು ಸುಸ್ಥಿತಿಗೊಳಿಸಿ ಸ್ವೆಟರ್‌ ಹೆಣೆಯುತ್ತಾ ಕುಳಿತಳು. ದೀಪಿಕಾಳ ಕೈಯಿಂದ ತಯಾರಾದ ವಸ್ತುಗಳೆಂದರೆ ಸಂತೋಷನಿಗೆ ಬಲು ಮೆಚ್ಚಿಗೆ. ಆದ್ದರಿಂದ ಅವಳು ಸ್ವೆಟರ್‌ ಅಥವಾ ಗ್ಲೌಸ್ ಹೆಣೆದು ಸಂತೋಷನಿಗೆ ಉಡುಗೊರೆಯಾಗಿ ಕೊಡುತ್ತಿದ್ದಳು. ಅದರ ಬಗ್ಗೆ ಉದಯ್‌ ಕೇಳಿದರೆ ಅದು ತನ್ನ ತಮ್ಮನಿಗೆ ಅಥವಾ ಗೆಳತಿಗೆ ಎಂದು ಸುಳ್ಳು ಹೇಳುತ್ತಿದ್ದಳು.

ದೀಪಿಕಾ ಮತ್ತು ಉದಯರ ವಿವಾಹವಾಗಿ 2 ವರ್ಷಗಳು ಕಳೆದಿದ್ದವು. ಹೊಸತರಲ್ಲಿ ದೀಪಿಕಾ ಬಹಳ ಸಪ್ಪಗಿರುತ್ತಿದ್ದಳು. ಹೊಸ ಜಾಗ, ಹೊಸ ಬದುಕು, ಹಿಂದಿನ ಜೀವನವನ್ನು ನೆನೆಸಿಕೊಂಡು ಬೇಸರದಲ್ಲಿದ್ದಾಳೆ ಎಂದು ಉದಯ್‌ ಭಾವಿಸುತ್ತಿದ್ದ. ಆದರೆ ವಾಸ್ತವವಾಗಿ ತನ್ನ ಪ್ರೀತಿಯ ಸಂತೋಷ್‌ನಿಂದ ದೂರವಾಗಬೇಕಾಗಿ ಬಂದದ್ದೇ ಅದಕ್ಕೆ ಕಾರಣವಾಗಿತ್ತು.

ಅದೊಂದು ಸಾಯಂಕಾಲವನ್ನು ಮರೆಯಲು ದೀಪಿಕಾಳಿಗೆ ಸಾಧ್ಯವೇ ಆಗಿಲ್ಲ. ಆ ದಿನ ಸಂತೋಷನೊಂದಿಗೆ ಸಿನಿಮಾ ನೋಡಿಕೊಂಡು ಕೈ ಕೈ ಹಿಡಿದುಕೊಂಡು ಬರುತ್ತಿರುವಾಗ ಇದ್ದಕ್ಕಿದ್ದಂತೆ ಅವಳ ಅಣ್ಣ ಎದುರಾದ. ಮಿಂಚು, ಸಿಡಿಲು ಎರಗಿದಂತಾಗಿತ್ತು. ರಸ್ತೆಯೆಂದೂ ನೋಡದೆ ಅವಳನ್ನು ದರದರನೆ ಎಳೆದು ತಂದು ಮನೆಯ ಕೋಣೆಯೊಳಕ್ಕೆ ತಳ್ಳಿದ್ದ. ಆ ಕೋಣೆಯೇ ಅವಳ ಪ್ರಪಂಚವಾಯಿತು. ಯಾರನ್ನೂ ಭೇಟಿಯಾಗುವಂತಿಲ್ಲವಾಯಿತು. 2 ದಿನ ಊಟ ಮಾಡದೆ ಹಠ ಮಾಡಿ ಕುಳಿತಳು. ಅವಳ ಹಠಕ್ಕೆ ಮನೆಯವರು ಮಣಿಯಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ