ಕಥೆ - ವಸುಂಧರಾ ಭಟ್‌

ಸುಧಾ ಇನ್ನೂ ಬಾಗಿಲತ್ತಲೇ ದಿಟ್ಟಿಸುತ್ತಿದ್ದರು. ರಮ್ಯಾ ಮತ್ತು ಅವಳ ಪತಿ ಆಗ ತಾನೇ ಹೊರ ಹೋಗಿದ್ದರು. ಹಳದಿ ಸೀರೆ, ಸಡಿಲವಾಗಿ ಹೆಣೆದ ಜಡೆ, ಹಣೆಯ ಮೇಲೆ ಕುಂಕುಮ, ಕೈಯಲ್ಲಿ ಬಳೆಗಳು, ಕುತ್ತಿಗೆಯಲ್ಲಿ ಮಾಂಗಲ್ಯ ಸರ.... ಇವುಗಳೆಲ್ಲ ಸೇರಿ ರಮ್ಯಾ ಅಪ್ಪಟ ಭಾರತೀಯ ನಾರಿಯಂತೆ ಕಂಗೊಳಿಸುತ್ತಿದ್ದಳು. ಕಂಕುಳಲ್ಲಿದ್ದ ಮಗು ಸ್ತ್ರೀಗೆ ಮಾತೆಯ ರೂಪವನ್ನಿತ್ತು  ಶೋಭೆಯನ್ನು ಒದಗಿಸಿತ್ತು.

ಸುಧಾ ತಲೆಯನ್ನು ಕುರ್ಚಿಗೆ ಒರಗಿಸಿ ಕಣ್ಣು ಮುಚ್ಚಿದರು. 34 ವರ್ಷಗಳ ಹಿಂದೆ ರಮ್ಯಾಳ ತಂದೆ ತಾಯಿ ಅವಳನ್ನು ಕೌನ್ಸೆಲಿಂಗ್‌ಗಾಗಿ ಸುಧಾಳ ಬಳಿಗೆ ಕರೆತಂದ ದೃಶ್ಯಗಳೆಲ್ಲ ಚಲನಚಿತ್ರದಂತೆ ಅವರ ಕಣ್ಣು ಮುಂದೆ ಓಡತೊಡಗಿತು.

ಸುಧಾ ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬ ಮನೋವಿಜ್ಞಾನಿ. ಜೊತೆಗೆ ಕೌನ್ಸೆಲರ್‌ ಕೂಡ. ಆಸ್ಪತ್ರೆಯ ಕೆಲಸ ಕಾರ್ಯಗಳ ಜೊತೆಗೆ ಸೋಶಿಯಲ್ ಕೌನ್ಸೆಲಿಂಗ್‌ ಮಾಡುತ್ತಿದ್ದರು. ಜೀವನದಲ್ಲಿ ನೊಂದು ಹತಾಶೆ ನಿರಾಶೆಗಳಿಂದ ಕುಸಿದಿರುವ ಜನರನ್ನು ಮೇಲೆತ್ತಿ ಅವರಿಗೆ ಪುನಃ ಬದುಕಿನಲ್ಲಿ ಉತ್ಸಾಹ ಮೂಡಿಸುವುದು ಅವರ ಏಕಮಾತ್ರ ಉದ್ದೇಶವಾಗಿತ್ತು.

ಒಮ್ಮೆ ರಮ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಳು. ಅದನ್ನು ಕಂಡು ಅವಳ ತಾಯಿ ಅವಳನ್ನು ಆಸ್ಪತ್ರೆಗೆ ಕರೆತಂದಿದ್ದರು. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆಕಿದ್ದರಿಂದ ರಮ್ಯಾ ಬದುಕುಳಿದಳು. ಅವಳ ಶರೀರಕ್ಕಿಂತ ಹೆಚ್ಚಾಗಿ ಮನಸ್ಸು ಘಾಸಿಗೊಂಡಿದೆ ಎಂದು ಅವಳನ್ನು ನೋಡಿದ ಕೂಡಲೇ ಸುಧಾ ಅರ್ಥ ಮಾಡಿಕೊಂಡರು.

ನಿಜ ಸಂಗತಿಯನ್ನು ತಿಳಿಯಲು ರಮ್ಯಾಳ ತಾಯಿ ಕಾಂತಿಯೊಡನೆ ಸುಧಾ ಮಾತನಾಡಿದರು. ಆದರೆ ಆ ಬಗ್ಗೆ ಮಾತನಾಡಲು ಕಾಂತಿ ಹಿಂಜರಿದರು. ಸುಧಾ, ವಿಷಯವನ್ನು ಗೌಪ್ಯವಾಗಿಡುವ ಹಾಗೂ ಅವರಿಗೆ ಸಹಾಯ ಮಾಡುವ ಆಶ್ವಾಸನೆ ಕೊಟ್ಟ ಮೇಲೆ ಕಾಂತಿ ನಿಧಾನವಾಗಿ ಆ ಬಗ್ಗೆ ಹೇಳತೊಡಗಿದರು.

``ನನ್ನ ಮಗಳು ಅತ್ಯಾಚಾರಕ್ಕೆ ಬಲಿಯಾಗಿದ್ದಾಳೆ. ಅದೂ ತನ್ನ ತಂದೆಯ ಸ್ನೇಹಿತರಿಂದ. ಅವರ ಕಡೆಯ ಮಗಳು ಮತ್ತು ರಮ್ಯಾ ಗೆಳತಿಯರು. ಒಂದೇ ಕ್ಲಾಸ್‌ನಲ್ಲಿ ಓದುತ್ತಿದ್ದರು. ಒಂದು ದಿನ ರಮ್ಯಾ ಯಾವುದೋ ಪುಸ್ತಕಕ್ಕಾಗಿ ಅವರ ಮನೆಗೆ ಹೋಗಿದ್ದಳು. ಆ ಹುಡುಗಿ ತನ್ನ ತಾಯಿಯ ಜೊತೆ ಹೊರಗೆ ಹೋಗಿದ್ದಳು. ಅವಳ ತಂದೆ ಮಾತ್ರ ಮನೆಯಲ್ಲಿದ್ದರು. ಅವರು ರಮ್ಯಾಳಿಗೆ, ` ನಿನ್ನ ಗೆಳತಿಯ ಬ್ಯಾಗ್‌ ಒಳಗೆ ರೂಮಿನಲ್ಲಿದೆ. ಹೋಗಿ ನಿನಗೇನು ಬೇಕೋ ತೆಗೆದುಕೊ,' ಎಂದರು.

``ಅವರ ಮನೆಯಿಂದ ಹಿಂದಿರುಗಿದ ರಮ್ಯಾ ಕೋಣೆಯೊಳಗೆ ಹೋಗಿ ಮಾತಿಲ್ಲದೆ ಮಲಗಿಬಿಟ್ಟಳು. ಮಾರನೆಯ ದಿನ ಬೆಳಗ್ಗೆ ಎದ್ದಾಗ ಅವಳಿಗೆ ಜ್ವರದ ತಾಪದಿಂದ ಮೈ ಸುಡುತ್ತಿತ್ತು. ನಾವು ಅದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಿಲ್ಲ. ಅದಾದ ಮೇಲೆ ಅವಳು ಕಾಲೇಜಿಗೂ ಹೋಗುತ್ತಿರಲಿಲ್ಲ. ಕ್ಲಾಸ್‌ಗಳು ಮುಗಿದಿರಬಹುದು ಎಂದು ಭಾವಿಸಿದೆವು.

``ಇದಾದ ಮೇಲೆ ಒಂದು ದಿನ ಅವಳ ತಂದೆಯ ಸ್ನೇಹಿತ ಮನೆಗೆ ಬಂದರು. ಯಾವಾಗಲೂ ಅವರೊಡನೆ ಚಟಪಟನೆ ಮಾತನಾಡುತ್ತಾ ತಿಂಡಿ, ಕಾಫಿ ಕೊಡುತ್ತಿದ್ದ ರಮ್ಯಾ ಕೋಣೆಗೆ ಹೋಗಿ ಬಚ್ಚಿಟ್ಟುಕೊಂಡಳು. ಆಗ ನನ್ನ ಮನಸ್ಸಿನಲ್ಲಿ ಸಂದೇಹ ಸುಳಿದಾಡಿತು. ನಾನು ಅವಳ ತಲೆ ನೇವರಿಸಿ, ಮೃದುವಾಗಿ ವಿಚಾರಿಸಿದಾಗ, ಅವಳು ಬಿಕ್ಕಳಿಸುತ್ತಾ ಈ ಅಸಹ್ಯಕರ ಘಟನೆಯ ಬಗ್ಗೆ ಹೇಳಿದಳು. ಅದನ್ನು ಕೇಳಿ ನನ್ನ ಮೈ ಉರಿಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ