"ಅಮ್ಮ, ನೋಡು, ಈ ದೊಡ್ಡ ಚಾಕೋಲೇಟ್ ನನಗೆ ಗಿಫ್ಟಾಗಿ ಸಿಕ್ತು"

"ಪುಟ್ಟಿ , ನಿನಗೆ ಯಾರು ಕೊಟ್ಟಿದ್ದು ಇಷ್ಟು ದೊಡ್ಡ ಚಾಕೋಲೇಟ್ನ"

" ಅಲ್ಲಿ ಹೊಸಾ ಮನೆ ಕಟ್ತಾ ಇದ್ದಾರಲ್ಲ! ಅಲ್ಲಿ, ಆ ಮನೆ ಅಂಕಲ್ ಕೊಟ್ಟಿದ್ದು. ಅಮ್ಮ.. ನೀನು ವಾಪಸ್ ಕೊಡು ಅಂತ ಹೇಳಬೇಡ, ನನಗೆ ಈ ಚಾಕ್ಲೇಟ್ ತುಂಬಾ ಇಷ್ಟ"

"ಹಾಗಲ್ಲ ಪುಟ್ಟಿ, ಯಾರ್ಯಾರ್ ಹತ್ರನೋ ಗಿಫ್ಟ್ ತಗೋಬಾರ್ದು ಅಂತ ನಿಂಗೆ ಎಷ್ಟು ಸಲ ಹೇಳಿಲ್ಲ?"....

"ನಿನಗೆ ಇಷ್ಟವಾದ ಚಾಕ್ಲೇಟ್ ನಾನು ಪ್ರತಿ ಭಾನುವಾರ ತಂದುಕೊಡಲ್ವಾ,? ಬಾ, ನಾನೂ ಬರ್ತೀನಿ ನಿನ್ನ ಜೊತೆ, ಆ

ಅಂಕಲ್ಗೆ ಇದರ ಬೆಲೆ ಕೊಟ್ಟು ಬರೋಣ. ಇನ್ನು ಯಾವತ್ತೂ  ಯಾವ ಅಂಕಲ್, ಆಂಟಿ... ನಿನಗೆ ಏನೂ ಗಿಫ್ಟ್ ಕೊಡಬಾರದು! ನೀನು ತೆಗೆದುಕೊಳ್ಳಲೂಬಾರದು ! ಅರ್ಥವಾಯಿತ? ನನಗೆ ಕೋಪ ಬರುತ್ತೆ. ಬೇಜಾರಾಗುತ್ತೆ, ಅಮ್ಮನ ಕೋಪ, ಬೇಜಾರು ನಿನಗೆ ಪರವಾಗಿಲ್ಲವಾ?"

194271434-family-love-and-children-with-a-mother-father-and-daughter-bonding-or-playing-on-a-sofa-in-the

"ಇಲ್ಲ... ಇಲ್ಲ... ಅಮ್ಮ, ಬೇಡ... ನೀನು ಕೋಪ ಬೇಜಾರು ಮಾಡ್ಕೋಬೇಡ, ನಾನು ಇನ್ನು ಮೇಲೆ ನನಗೆ ಎಷ್ಟೇ ಇಷ್ಟವಾದರೂ ಯಾರ ಹತ್ರನೂ ಗಿಫ್ಟು ತೆಗೆದುಕೊಳ್ಳಲ್ಲ..ಸಾರಿ... ಈ...ಈ.. ಚಾಕ್ಲೇಟ್ ಕೂಡ ನನಗೆ ಬೇಡ"

"ಸರಿ ನಡಿ, ಈಗಲೇ ಅದರ ಹಣ ಕೊಟ್ಟು ಬರೋಣ, ಅವರಿಗೆ ನಾನು ಹೇಳ್ತೀನಿ, ಹೀಗೆಲ್ಲ ಗಿಫ್ಟ್ ಕೊಡಬೇಡಿ ಅಂತ"

"ಬೇಡ ಅಮ್ಮ, ಅಂಕಲ್ ಬೇಜಾರ್ ಮಾಡ್ಕೊಂಡ್ರೆ?  ನಾನು ಇನ್ನು ಮೇಲೆ ಯಾರ್ ಹತ್ರನೂ ಗಿಫ್ಟ್ ಇಸ್ಕೊಳಲ್ಲ, ಪ್ಲೀಸ್, ಅಮ್ಮ."

"ಅದೆಲ್ಲಾ ಏನೂ ನಡೆಯಲ್ಲ, ನಡಿ ತೋರ್ಸು ...ಯಾರು ಆ ಅಂಕಲ್ ಅಂತ".

ಸಂಜೆ ಶಾಲೆಯಿಂದ ಬಂದ ಹತ್ತು ವರ್ಷದ ಮಗಳು ಪಲ್ಲವಿಯನ್ನು ಎಳೆದುಕೊಂಡು ಆರತಿ ಚಾಕೋಲೇಟ್ ಕೊಟ್ಟ ಅಂಕಲ್ನನ್ನು ಹುಡುಕಿಕೊಂಡು ಹೊರಟಳು.

ಆರತಿ  ಮಗಳೊಟ್ಟಿಗೆ ವಾಸಿಸುತ್ತಿದ್ದ ಮನೆಯಿಂದ ಸ್ವಲ್ಪ ದೂರದಲ್ಲಿ ಒಂದು ದೊಡ್ಡ ಮನೆ ಕಟ್ಟುತ್ತಿದ್ದರು.ಆ ಜಾಗದ ಬಳಿ ಮಗಳು ಕರೆದುಕೊಂಡು ಹೋದಾಗ ಅಲ್ಲಿ ಯಾರೂ ಇರಲಿಲ್ಲ. ಮಗಳನ್ನು ಮನೆಗೆ ವಾಪಸ್ ಕರೆದುಕೊಂಡು ಬಂದ ಆರತಿ ಕೋಪದಿಂದ ಆ ಚಾಕೋಲೇಟನ್ನು ಕಸದ ಬುಟ್ಟಿಗೆ ಎಸೆದು, ಮತ್ತೆ ಆ ಚಾಕೋಲೇಟ್ ಮುಟ್ಟಕೂಡದಂತೆ ಮಗಳಿಗೆ ತಾಕೀತು ಮಾಡಿ, ಮಗಳನ್ನು ರಮಿಸಿ ,ತಿಂಡಿ... ಹಾಲು ಕೊಟ್ಟು, ಮಗಳಿಗೆ ಹೋಂವರ್ಕ್ ಮಾಡಲು ತಿಳಿಸಿ, ರಾತ್ರಿಯಡುಗೆ ಮಾಡಲು ಅಡಿಗೆ ಮನೆ ಕಡೆ ಹೊರಟಳು. ಪ್ರತಿದಿನದಂತೆ ಮಗಳು ಸಂಜೆ ಹಾಲು ತಿಂಡಿ ಮುಗಿಸಿದ ನಂತರ ಹತ್ತಿರದಲ್ಲೇ ಇದ್ದ ಪಾರ್ಕಗೆ ಮಗಳನ್ನು ಆಟವಾಡಲು ಕರೆದುಕೊಂಡು ಹೋಗುತ್ತಿದ್ದಳು. ಕೋಪದಿಂದ ಆ ದಿನ ಎಲ್ಲೂ ಕರೆದುಕೊಂಡು ಹೋಗಲಿಲ್ಲ. ಮಗಳಿಗೆ ಊಟ ಮಾಡಿಸಿ ತಾನೂ ಉಂಡು ಮಲಗಿದಳು. ಆರತಿಯ ಗಂಡ ಅಶೋಕ ದೂರ ದೇಶದಲ್ಲಿ ಒಬ್ಬನೇ ಇದ್ದು ಕೆಲಸ ಮಾಡುತ್ತಿದ್ದ, ಮಡದಿ ಮಗಳನ್ನು ತನ್ನ ಜೊತೆ ಕರೆದೊಯ್ಯಲಾಗದ ಕಾರಣ ಇಬ್ಬರನ್ನೂ ನಗರದ ಸುಸಜ್ಜಿತ ಮನೆಯೊಂದರಲ್ಲಿ ಇರಿಸಿ, ತಾನು ವರ್ಷ... ಎರಡು  ವರ್ಷಕ್ಕೆ ಒಮ್ಮೆ ಬಂದು ಹೋಗುತ್ತಿದ್ದ, ಆತನ ಕೆಲಸದ ವ್ಯಾಪ್ತಿ ಹಾಗಿತ್ತು. ಒಂಟಿ ಜೀವನ ಆರತಿಗೆ ಅನಿವಾರ್ಯವಾಗಿತ್ತು . ಆಕೆಯ ಹಾಗೂ ಗಂಡನ ತಂದೆ ತಾಯಿಗಳಿಬ್ಬರೂ ಬೇಗನೆ ತೀರಿ ಹೋಗಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ