ಕಥೆ - ಸವಿತಾ ರಮೇಶ್

`ಮಾನವ ತಾನೊಂದು ಬಗೆದರೆ ದೈವ ಬೇರೊಂದು ಬಗೆಯಿತು' ಎಂಬಂತೆ, ಕೃಷ್ಣಸ್ವಾಮಿ ಇರುವ ಸೇವಾ ಭಾಗ್ಯವನ್ನು ಬಿಟ್ಟು, ಹೊರಗಿನಿಂದ ಇನ್ನಾರನ್ನೋ ಕರೆತಂದು ಅವರ ಸೇವೆಗೆ ನಿಂತುಬಿಟ್ಟ. ವಾಸ್ತವತೆ ಅರಿವಾಗುವಷ್ಟರಲ್ಲಿ ಮುಂದೆ ಏನಾಯಿತು.......?

ಅದೊಂದು ಪ್ರತಿಷ್ಠಿತ ಕಾರ್ಯಕ್ರಮ. ನಮ್ಮ ಸಮಾಜದಲ್ಲಿ ಸೇವೆ ಮಾಡುತ್ತಾ ತೆರೆಮರೆಯಲ್ಲೇ ಇರುವ ಜನರನ್ನು ವೇದಿಕೆಯ ಮೇಲೆ ಕರೆದು ಎಲ್ಲರಿಗೂ ಪರಿಚಯಿಸುವ ಹಾಗೂ ಗೌರವದಿಂದ ಸನ್ಮಾನ ಮಾಡುವ ಕಾರ್ಯಕ್ರಮ.

ನಿರೂಪಕರು ಮಾತನಾಡುತ್ತಿದ್ದರು......ನಮ್ಮ ಭಾರತದ ಎಷ್ಟೋ ಜನರು ವಿದೇಶದಲ್ಲಿ ವಾಸಿಸುತ್ತಿದ್ದರೂ, ಭಾರತದ ಜನರಿಗೋಸ್ಕರ ಸಾಕಷ್ಟು ಸಹಾಯ ಮಾಡಿರುತ್ತಾರೆ.

ಅವರುಗಳು ತಾವು ಮಾಡಿದ ಸಹಾಯ ಯಾರಿಗೂ ಹೇಳುವುದು ಬೇಡ ಎನ್ನುತ್ತಾರೆ. ಆದರೆ ನಾವು ಈ ತರಹದವರನ್ನು ಸನ್ಮಾನ ಮಾಡಿ ಎಲ್ಲರಿಗೂ ಪರಿಚಯಸಿದರೆ ಇನ್ನಷ್ಟು ಜನರಿಗೆ ಸಮಾಜ ಸೇವೆ ಮಾಡಲು ಸ್ಫೂರ್ತಿ ಬರುತ್ತದೆ ಅಲ್ಲವೇ.....?

ನಿರೂಪಕರು ಕಾರ್ಯಕ್ರಮದ ಶುರುವಿನಲ್ಲಿಯೇ ತಾವು ಈ ಕಾರ್ಯಕ್ರಮ ಮಾಡುವ ಉದ್ದೇಶದ ಬಗ್ಗೆ  ಹೇಳಿ ಒಬ್ಬೊಬ್ಬರನ್ನಾಗಿ ಪರಿಚಯಿಸಿದರು. ಅದರಲ್ಲಿ ಬಹಳ ಜನ ತಾವು ಓದಿದ ಶಾಲೆಗೆ ಹಣದ ಸಹಾಯ ಮಾಡಿದ್ದರು. ತಾವು ಬೆಳೆದ ಊರಿನಲ್ಲಿ ಕುಡಿಯುವ ನೀರು ಮತ್ತು ಸೋಲಾರ್‌ ದೀಪದ ವ್ಯವಸ್ಥೆ ಮಾಡಿದ್ದರು.

ಒಂದಿಬ್ಬರು ಅನಾಥಾಶ್ರಮದಿಂದ ಮಕ್ಕಳನ್ನು ದತ್ತು ಪಡೆದು ಅವರ ಖರ್ಚು ವೆಚ್ಚಗಳನ್ನು ನೋಡಿಕೊಂಡರು. ವೃದ್ಧಾಶ್ರಮಕ್ಕೆ ಮಂಚ ಹಾಗೂ ಫ್ಯಾನ್‌ ಗಳನ್ನು ಹಾಕಿಸಿದರು. ಹಾಗೆಯೇ ಪ್ರತಿ ವರ್ಷ ವೃದ್ಧಾಶ್ರಮದ ಒಂದು ತಿಂಗಳು ಊಟದ ಖರ್ಚು ಕೊಡುತ್ತಿದ್ದರು ಎಲ್ಲರೂ ಇದ್ದರು.

ಮಕ್ಕಳಿಲ್ಲದವರು ಇಲ್ಲಿಯ ಅನಾಥಾಶ್ರಮದಿಂದ ಮಗುವನ್ನು ದತ್ತು ತೆಗೆದುಕೊಂಡು ಆ ಮಗುವನ್ನು ಬೆಳೆಸುವುದಲ್ಲದೆ, ಪ್ರತಿ ವರ್ಷ ಆಶ್ರಮಕ್ಕೆ ಹಣ ಕೊಡುವವರು ಇದ್ದರು. ಪ್ರತಿ ವರ್ಷ ಬಡ ಮಕ್ಕಳಿಗೆ ಓದಿಗೆ ಸಹಾಯ ಮಾಡುವವರು ಇದ್ದರು. ಎಲ್ಲರನ್ನೂ ಪರಿಚಯಿಸಿ ಸನ್ಮಾನ ಮಾಡುತ್ತಾ ಬಂದರು. ಕೆಲವರು ವಿದೇಶದಲ್ಲಿ ಇದ್ದ ಕಾರಣ ಅವರುಗಳ ಉಪಸ್ಥಿತಿ ಇರಲಿಲ್ಲ. ಎಲ್ಲರನ್ನೂ ಪರಿಚಯಿಸಿದರು ಕೊನೆಯಲ್ಲಿ ಇವರಿಬ್ಬರು ಎಲ್ಲರಿಗಿಂತ ವಿಭಿನ್ನ ವ್ಯಕ್ತಿತ್ವದವರು ಎಂದರು.

``ಇವರು ಕೃಷ್ಣಸ್ವಾಮಿ ಅಂತ, ಕಳೆದ ಇಪ್ಪತ್ತು ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿದ್ದಾರೆ. ತಮ್ಮ ಜೊತೆ ಕೆಲಸ ಮಾಡುವ ಸ್ಪೇನ್‌ ದೇಶದ ಹುಡುಗಿಯನ್ನು ಮದುವೆಯಾಗಿರುತ್ತಾರೆ. ಅವರಿಗೆ ಒಬ್ಬ ಗಂಡು ಮಗ ಇದ್ದರೂ ದಂಪತಿಗಳಿಬ್ಬರೂ ಸೇರಿ ಒಂದು ಹೆಣ್ಣು ಮಗು ಹಾಗೂ ಒಬ್ಬ ಹ್ಯಾಂಡಿಕ್ಯಾಪ್‌ ಮಗುವನ್ನು ದತ್ತು ತೆಗೆದುಕೊಂಡು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಬೆಳೆಸುತ್ತಿದ್ದಾರೆ. ಅಲ್ಲದೆ ನಮ್ಮ ಭಾರತದ ಅನಾಥಾಶ್ರಮಕ್ಕೆ ಪ್ರತಿ ವರ್ಷ ಹಣ ಡೊನೇಟ್‌ ಮಾಡುತ್ತಾರೆ. ಇವರು ಇಂದು ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದು ನಮ್ಮ ಪುಣ್ಯ,'' ಎಂದು ಈ ದಂಪತಿಗಳನ್ನು ಹೊಗಳಿ ಸನ್ಮಾನ ಮಾಡಿದರು.

``ನಿನ್ನೆ ವಾಪಸ್‌ ಅಮೆರಿಕಾಗೆ ಹೋಗಬೇಕಿದ್ದ ಅವರು ನಮ್ಮ ಕಾರ್ಯಕ್ರಮಕ್ಕೋಸ್ಕರ ತಮ್ಮ ಪಯಣವನ್ನು ಮುಂದೂಡಿದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರಿಗೆ ಈ ಸನ್ಮಾನ ಏನೂ ಹೊಸದಲ್ಲ, ಅವರ ಈ ಕಾರ್ಯ ಶ್ಲಾಘಿಸಿ ಅಮೆರಿಕಾದಲ್ಲಿ ತುಂಬಾ ಕಡೆ ಸನ್ಮಾನ ಮಾಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ