ಮುಂಜಾನೆ 8 ಗಂಟೆಯ ಸಮಯ. ಅರ್ಚನಾ ಅಡುಗೆಮನೆಯಲ್ಲಿ ತಿಂಡಿ ಸಿದ್ಧಪಡಿಸುವಲ್ಲಿ ಮಗ್ನಳಾಗಿದ್ದಳು. ಆಕೆಯ ಪತಿ ಮನೋಜ್‌ ಹಾಗೂ ಮಕ್ಕಳಾದ ಸುರೇಶ್‌ ಸಹನಾ ಡೈನಿಂಗ್‌ ಹಾಲ್‌ನಲ್ಲಿ  ಕುಳಿತಿದ್ದರು. ಅತ್ತೆಮಾವಂದಿರಾದ ರಾಧಿಕಾ ಮತ್ತು ನರೇಂದ್ರ ಕೂಡ ಅಲ್ಲಿಯೇ ಕುಳಿತಿದ್ದರು.

ರಾಧಿಕಾ, ``ಮಾನಸಾ ಇಂದು ಆಫೀಸಿಗೆ ಹೋಗುತ್ತಾಳೆ.... ಇನ್ನಷ್ಟು ದಿನ ಆಕೆ ರಜೆ ತೆಗೆದುಕೊಂಡಿದ್ದರೆ ಚೆನ್ನಾಗಿರುತ್ತಿತ್ತು,'' ಎಂದರು.

``ಅವಳು ರಜೆ ಪಡೆದು 1 ತಿಂಗಳಾಯ್ತು. ಇನ್ನೆಷ್ಟು ದಿನ ರಜೆ ಪಡೆಯಲು ಆಗುತ್ತೆ. ಈಗ ಅವಳು ಆಫೀಸಿಗೆ ಹೋಗಲೇಬೇಕು,'' ನರೇಂದ್ರ ಹೇಳಿದರು.

``ಹೌದು, ನೀವು ಹೇಳೋದು ಸರಿ. ಮದುವೆಯಾಗಿ 1 ತಿಂಗಳಾಯ್ತು. ಈಗಂತೂ ಅವಳು ಹೋಗಲೇಬೇಕು,'' ಎಂದರು ರಾಧಿಕಾ. ಅರ್ಚನಾ ಅಡುಗೆಮನೆಯಿಂದಲೇ ಡೈನಿಂಗ್‌ ಹಾಲ್ ‌ಕಡೆ ಗಮನಹರಿಸಿದಳು. ಅವಳ ನವಿವಾಹಿತ ಓರಗಿತ್ತಿ ಮಾನಸಾ ಹೆಗಲಿಗೆ ಬ್ಯಾಗ್‌ ಹಾಕಿಕೊಂಡು ಆಫೀಸ್‌ಗೆ ಹೋಗಲು ಸಿದ್ಧಳಾಗಿ ನಿಂತಿದ್ಧಳು. ಪ್ಯಾಂಟ್‌ ಮತ್ತು ಶರ್ಟ್‌ ಧರಿಸಿದ್ದ ಮಾನಸಾ ಬಹಳ ಅಂದವಾಗಿ ಕಾಣುತ್ತಿದ್ದಳು.

ಮಾನಸಾ ಅಲ್ಲಿಂದಲೇ ``ಅಕ್ಕಾ, ನಾನು ಜೂಸ್‌ ಮಾತ್ರ ಕುಡಿದು ಹೋಗುತ್ತೇನೆ,'' ಎಂದು ಹೇಳಿದಳು.

``ಎಲ್ಲರ ಜೊತೆ ಕುಳಿತು ತಿಂಡಿ ತಿಂದ್ಕೊಂಡು ಹೋಗು. ನಾನು ನಿನಗೆ ಮಧ್ಯಾಹ್ನಕ್ಕೂ ಡಬ್ಬಿ ಕೊಡ್ತೀನಿ,'' ಎಂದಳು ಅರ್ಚನಾ.

``ವಾಹ್‌!'' ಎನ್ನುತ್ತಾ ಮಾನಸಾ ಅಡುಗೆಮನೆಗೆ ಬಂದು ಅರ್ಚನಾಳನ್ನು ತಬ್ಬಿಕೊಂಡು, ``ಅಕ್ಕಾ, ನೀವು ನಿಜಕ್ಕೂ ಗ್ರೇಟ್‌!'' ಎಂದಳು.

ಅರ್ಚನಾ ಮುಗುಳ್ನಗುತ್ತಾ ಅಡಿಯಿಂದ ಮುಡಿಯವರೆಗೂ ನೋಡುತ್ತಾ, ``ನೀನು ಬಹಳ ಚೆನ್ನಾಗಿ ಕಾಣ್ತೀದಿಯಾ,'' ಎಂದಳು.

``ಮದುವೆಯ ಬಳಿಕ ಇದೇ ಮೊದಲ ಸಲ ಆಫೀಸಿಗೆ ಹೋಗುತ್ತಿರುವೆ. ಬಹಳ ವಿಚಿತ್ರ ಅನಿಸ್ತಿದೆ,'' ಎಂದಳು ಮಾನಸಾ.

``ಸರಿ, ಈಗ ನೀನು ಎಲ್ಲರ ಜೊತೆ ಕುಳಿತು ತಿಂಡಿ ತಿನ್ನು,'' ಅರ್ಚನಾ ಹೇಳಿದಳು.

``ಅತ್ತಿಗೆ, ನನಗೂ ತಿಂಡಿ ಕೊಡಿ,'' ಎನ್ನುತ್ತಾ ಮೈದುನ ಕಪಿಲ್ ‌ಕೂಡ ಅಲ್ಲಿಗೆ ಬಂದ. ಅರ್ಚನಾ ಇಡ್ಲಿ, ಸಾಂಬಾರ್‌, ಚಟ್ನಿ ಮಾಡಿದ್ದಳು.

``ಅಕ್ಕಾ, ನೀವೂ ಬನ್ನಿ,'' ಎಂದು ಮಾನಸಾ ಕರೆದಳು.

``ನಾನು ಆಮೇಲೆ ತಿಂತೀನಿ, ನೀವೆಲ್ಲ ತಿನ್ನಿ,'' ಅರ್ಚನಾ ಅಡುಗೆಮನೆಯಿಂದಲೇ ಹೇಳಿದಳು.

``ಇಲ್ಲ ಅಕ್ಕಾ, ಅದೆಲ್ಲ ನಡೆಯಲ್ಲ, ನಾಳೆಯಿಂದ ನೀವು ನಮ್ಮ ಜೊತೆಗೇ ಕುಳಿತು ತಿಂಡಿ, ಊಟ ಮಾಡಬೇಕು,'' ಎಂದಳು ಮಾನಸಾ.

ಅರ್ಚನಾಳ ಬಾಯಿಂದ ಯಾವುದೇ ಮಾತುಗಳು ಹೊರಬರಲಿಲ್ಲ. ಅವಳ ಕಣ್ಣುಗಳು ತೇವಗೊಂಡವು. ನಮ್ಮ ಜೊತೆಗೇ ಕುಳಿತು ತಿಂಡಿ ತಿನ್ನು ಎಂದು ಈವರೆಗೂ ಯಾರೊಬ್ಬರೂ ಅವಳಿಗೆ ಹೇಳಿರಲಿಲ್ಲ. ಅರ್ಚನಾಳಿಗೆ ಆಶ್ಚರ್ಯವಾಗಿತ್ತು. ಅವಳ ಕೈಗಳು ಕೆಲಸದಲ್ಲಿ ಬಹುವೇಗವಾಗಿ ಚಲಿಸುತ್ತಿದ್ದವು. ಮನಸ್ಸು ಅದಕ್ಕೂ ಹೆಚ್ಚಿನ ವೇಗ ಪಡೆದುಕೊಂಡಿತ್ತು.

ಮೈದುನ ಕಪಿಲ್‌, ಗಂಡ ಮನೋಜ್‌ಗಿಂತ 7 ವರ್ಷ ಚಿಕ್ಕವನು. ಮಾವ ನರೇಂದ್ರ ಕೂಡ ಆಫೀಸ್‌ಗೆ ಹೋಗುತ್ತಿದ್ದರು. ಕಪಿಲ್‌ಗಾಗಿ ಮಾನಸಾಳನ್ನು ಆಯ್ಕೆ ಮಾಡಿದ್ದು ಅತ್ತೆ ರಾಧಿಕಾ. ಆಧುನಿಕ ಸ್ಮಾರ್ಟ್‌ ಹುಡುಗಿಯಾಗಿದ್ದ ಮಾನಸಾ ಅರ್ಚನಾಳಿಗೆ ಮೊದಲ ದಿನದಿಂದಲೇ ಬಹಳ ಇಷ್ಟವಾಗಿಬಿಟ್ಟಿದ್ದಳು. ಇತ್ತೀಚೆಗೆ ಅತ್ತೆಯ ಬದಲಾದ ವರ್ತನೆಯ ಬಗ್ಗೆ ಅರ್ಚನಾಳಿಗೆ ಬಹಳ ಆಶ್ಚರ್ಯವಾಗಿತ್ತು. ಆಧುನಿಕ ನಡೆನುಡಿಯ ಮಾನಸಾಳ ವರ್ತನೆ ಅತ್ತೆಮಾಂದಿರಿಗೆ ಇಷ್ಟವಾಗುವುದಿಲ್ಲ ಎಂದೇ ಅವಳು ಯೋಚಿಸಿದ್ದಳು. ಆದರೆ ಮನೆಯಲ್ಲಿನ ಬದಲಾದ ವಾತಾವರಣ ಆಕೆಯಲ್ಲಿ ಅಚ್ಚರಿ ಮೂಡಿಸಿತ್ತು. ಅತ್ತೆಮಾವನವರ ದೃಷ್ಟಿಯಲ್ಲಿ ಮಾನಸಾಳ ಬಗ್ಗೆ ಸ್ನೇಹ ಹಾಗೂ ಗೌರವ ಎದ್ದು ಕಾಣುತ್ತಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ