``ಆರತಿ, ನೀನೀಗ ಬಹಳ ಬದಲಾಗಿದ್ದೀಯ. ಮೊದಲು ನೀನು ಹೀಗಿರಲಿಲ್ಲ. ಏನೇ ಇದ್ದರೂ ನೇರವಾಗಿ ಮಾತಾಡುತ್ತಿದ್ದೆ. ಈಗ ನಿನ್ನ ಮಾತುಗಳಲ್ಲಿ ಸಾವಿರಾರು ಬಾಣಗಳಿರುತ್ತವೆ. ಪ್ರತಿ ಮಾತಿನಲ್ಲಿಯೂ ಏನೋ ಮುಚ್ಚಿಡುವುದು. ಇಲ್ಲಿನ ವಿಷಯ ಅಲ್ಲಿ ಹೇಳೋದು, ಅಲ್ಲಿನ ವಿಷಯ ಇಲ್ಲಿ ಹೇಳೋದು. ಸಿಕ್ಕಿ ಹಾಕ್ಕೊಂಡ್ರೆ ಏನಾಗುತ್ತೇಂತ ಭಯ ಇಲ್ವಾ? ಅದಕ್ಕೆ ಯಾವಾಗಲೂ ಟೆನ್ಶನ್‌ನಲ್ಲಿರ್ತೀಯ.''

``ಏನು ನೀನು ಹೇಳೋದು? ನನಗೆ ಅರ್ಥ ಆಗ್ಲಿಲ್ಲ.''

``ನೇರವಾಗಿ, ಸರಳ ಭಾಷೆಯನ್ನು ಉಪಯೋಗಿಸ್ತಿದ್ದೀನಿ ನಿನಗ್ಯಾಕೆ ಅರ್ಥ ಆಗಿಲ್ಲ? ಅಂಥಾ ಕ್ಲಿಷ್ಟವಾದ ಪದಗಳನ್ನು ಉಪಯೋಗಿಸಲಿಲ್ಲ ನಾನು. ನೀನು ಹೇಗೆ ಇಷ್ಟು ಚೆನ್ನಾಗಿ  ಆ್ಯಕ್ಟಿಂಗ್‌ ಮಾಡೋದು ಕಲಿತುಕೊಂಡೆ? ಪ್ರತಿ ಕ್ಷಣ ಅಭಿನಯ ಮಾಡ್ತಿರ್ತೀಯ ನಿನಗೆ ಬೇಸರ ಆಗಲ್ವಾ? ಅಭಿನಯದ ಗೂಡಿಂದ ಹೊರಗೆ ಬಾ. ಡ್ರಾಮಾ, ಸಿನಿಮಾದಲ್ಲಿ ಅಭಿನಯ ಮಾಡೋರು ತಮ್ಮ ಸೀನ್‌ ಮುಗಿದ ಮೇಲೆ ಮೇಕಪ್‌ ತೆಗೆದು ನೆಮ್ಮದಿಯಾಗಿ ಇದ್ದಾರೆ, ನೀನು ನೋಡಿದ್ರೆ ಮನೆಯಲ್ಲೇ ಆಟ ಆಡ್ತಿದ್ದೀಯ. ನನ್ನ ಜೊತೆ ಮಾತಾಡುವಾಗಲೇ ಒಂದು ರೀತಿ ಮಾತಾಡ್ತೀಯ. ಬೇರೆಯವರ ಜೊತೆ ಇನ್ನೊಂದು ರೀತಿ. ಯಾವಾಗ ನೋಡಿದ್ರು ತಲೆನೋವು ಅಂತ ಹೇಳ್ತಾ ಇರ್ತೀಯ. ಇಷ್ಟೊಂದು ಟೆನ್ಶನ್‌ನಲ್ಲಿದ್ರೆ ತಲೆನೋವು ಬರದೆ ಇನ್ನೇನಾಗುತ್ತೆ? ''

ರಾಜೀವ್ ‌ತಮ್ಮ ತಂಗಿ ಆರತಿಯ ಜೊತೆ ಮಾತಾಡುತ್ತಿದ್ದರು. ಮಾತಾಡ್ತಾ ಮಾತಾಡ್ತಾ ಅವರ ಧ್ವನಿ ಹೆಚ್ಚಾಗುತ್ತಿತ್ತು. ಅವರ  ಆಕ್ರೋಶ ಇನ್ನೂ ಹೆಚ್ಚಾಗುತ್ತಿತ್ತು. ಹಾಗೆ ಆದಾಗ ಮನೆಯಲ್ಲಿ ರುದ್ರತಾಂಡವವಾಗುತ್ತಿತ್ತು. ಆ ತಾಂಡವದಿಂದ ಏನು ಪ್ರಭಾವ ಉಂಟಾಗುತ್ತದೆಂದು ನನಗೆ ತಿಳಿದಿಲ್ಲ. ಆದರೆ, ಕೆಲವು ವಿಷಯಗಳು ಇಂದು ಅಗತ್ಯವಾಗಿ ಸ್ಪಷ್ಟವಾಗುವುದೆಂದು ನನಗೆ ತಿಳಿದಿತ್ತು.

``ಯಾವಾಗಲೂ ತಮಾಷೆ ಮಾಡೋದು ನಿನಗೆ ಅಭ್ಯಾಸವಾಗಿ ಹೋಗಿದೆ.''

``ನಾನು ಅಂಥಾದ್ದೇನು ಹೇಳಿದೆ ರಾಜೀವಣ್ಣಾ?''

``ಹುಂ ನನ್ನ ಮಾತಿನ ಅರ್ಥ ನಿನಗೆ ಆಗಲ್ಲ. ಏಕೆಂದರೆ ಯಾವಾಗ ಏನು ಹೇಳಿದ್ದೀಯಾಂತ ಸ್ವತಃ ನಿನಗೆ ಗೊತ್ತಾಗಲ್ಲ. ನೀನು ಓದಿದಳು, ತಿಳಿವಳಿಕೆ ಇರೋಳು. ಕಿಟಿ ಪಾರ್ಟಿಗಳಿಗೆ ಹೆಚ್ಚು ಹೋಗೋಕೆ ಶುರು ಮಾಡಿದಾಗಿನಿಂದ ನಿನ್ನ ಹಾವಭಾವ ಬಹಳ ಬದಲಾಗಿದೆ ನೇರವಾಗಿ ಮಾತಾಡೋದನ್ನು ನೀನು ಮರೆತು ಹೋಗ್ತೀಯ. ಅಮ್ಮ ಸರಿಯಾಗೆ ಹೇಳ್ತಿದ್ದರು ನಿನ್ನ ಬಗ್ಗೆ. ನೀನು ಎಲ್ಲರನ್ನೂ ಬಹಳ ಸುಲಭವಾಗಿ ನಂಬಿಬಿಡ್ತೀಯ. ಸಹವಾಸದ ಪ್ರಭಾವ ನಿನ್ನ ಮೇಲೆ ಬಹಳ ಬೇಗ ಆಗುತ್ತೇ ಅಂತ.''

``ಅಮ್ಮನನ್ನು ಯಾಕೆ ತಗೋಳ್ತೀ ಅಣ್ಣ? ನಿನ್ನ ಹೆಂಡತಿ ಅಂತ ಹೇಳು.....''

``ಅದರಿಂದ ಏನು ಅರ್ಥವಾಯ್ತು? ಅವಳು ನಿನ್ನ ಅತ್ತಿಗೆ! ಏನು ಮಾತಾಡ್ತಿದ್ದೀಯಾ ನೀನು? ನಿನ್ನ ಕೆಲಸ ಮಾಡಿಸಿಕೊಳ್ಳೋಕೆ ನೀನು ಅವಳಿಗೆ ಅಮ್ಮನ ಸ್ಥಾನ ನೀಡಿದೆ. ಈಗ ನಾನು ನಿನ್ನ ಬೇಜವಾಬ್ದಾರಿತನದ ಬಗ್ಗೆ ಮಾತನಾಡಿದಾಗ ಅವಳು ನನ್ನ ಹೆಂಡತಿ ಆಗಿಬಿಟ್ಟಳು.''

``ಸಾಕ್ರಿ ನಿಮ್ಮ ಮಾತು. ವಿಷಯ ಹೆಚ್ಚಿಸಬೇಡಿ. ಇವತ್ತು ರಾಖಿ ಹಬ್ಬ, ಶಾಂತವಾಗಿ ಕಳೀಲಿ.''

``ಚಂದ್ರಾ, ನೀನು ಸುಮ್ನಿರು. ಇದರಲ್ಲಿ ತಲೆ ಹಾಕಬೇಡ. ನೀನು ಸಮಸ್ಯೇನ ಮುಗಿಯೋಕೆ ಬಿಡಲ್ಲ. ನಾನು ಮಾತಾಡೋಕೆ ಶುರು ಮಾಡಿದ ಕೂಡಲೇ ಮಾತನ್ನು ಮುಗಿಸಿಬಿಡ್ತೀಯ. ಗಂಟುಗಳ ಮೇಲೆ ಗಂಟು ಬೀಳ್ತಿದೆ. ಕೊನೆ ಮೊದಲಿಲ್ಲ. ಮನೆಯ ಪರಿಸ್ಥಿತಿ ದಿನದಿನಕ್ಕೂ ಹಾಳಾಗ್ತಿದೆ. ಅಣ್ಣನಂತೂ ನನ್ನ ಜೊತೆ ಮಾತಾಡ್ತಾನೇ ಇಲ್ಲ. ನನಗೂ ಅವರಿಗೂ ಯಾವುದೇ ಜಗಳ ಆಗ್ಲಿಲ್ಲ. ಮನಸ್ತಾಪ ಇಲ್ಲ. ಅವನ ಮನೇಲಿ ಅವನು ಇದ್ದಾನೆ. ನನ್ನ ಮನೇಲಿ ನಾನಿದ್ದೀನಿ. ಆಸ್ತಿ ಬಗ್ಗೆ ಯಾವುದೇ ಜಗಳ ಇತ್ಯಾದಿ ಇಲ್ಲ. ಫೋನ್‌ ಮಾಡಿದಾಗಲೂ ಅಣ್ಣ ಒಂದು ರೀತಿಯ ಸಿಡಿಮಿಡಿಯಲ್ಲಿ ಇರುತ್ತಾನೆ. ನನ್ನ ಮೇಲೆ ತುಂಬಾ ದೂರುಗಳಿರೋ ಹಾಗೆ ವರ್ತಿಸ್ತಾನೆ. ನಾವಿಬ್ಬರೂ ಗಂಡ ಹೆಂಡತಿ ನಮ್ಮ ನಮ್ಮ ಕೆಲಸಗಳಲ್ಲಿ ಎಷ್ಟು ವ್ಯಸ್ತರಾಗಿ ಇರ್ತೀವೀಂದ್ರೆ ವ್ಯರ್ಥವಾದ ವಿಷಯಗಳನ್ನು ಮಾತಾಡೋಕೆ ನಮಗೆ ಪುರಸತ್ತಿಲ್ಲ. ಅಂತಹ ವಿಷಯಗಳೂ ಇಲ್ಲ...''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ