``ಸುಮಾ, ನಿನಗೆ ಗೊತ್ತೇ... ಶುಭಾ ಮನೆ ಬಿಟ್ಟು ಹೊರಟುಹೋಗಿದ್ದಾಳೆ...''

``ಮನೆ ಬಿಟ್ಟು ಹೊರಟುಹೋದಳೇ....? ಇದೇನು ಹೇಳ್ತಿದ್ದೀರಿ.... ಏನು ಹೇಳ್ತಿದ್ದೀರೋ ನಿಮಗೆ ಸ್ಪಷ್ಟವಾಗಿ ಗೊತ್ತು ತಾನೇ?'' ಮೋಹನನ ಮಾತು ಕೇಳಿ ಸುಮಾ ಶಾಕ್‌ ತಗುಲಿದಂತೆ ಮೆಟ್ಟಿಬಿದ್ದಳು.

ಅಸಲಿಗೆ ಈ ವಿಷಯ ಹೊಸದಾಗಿ ತಿಳಿದದ್ದಕ್ಕಿಂತ, ಅದನ್ನು ಮೋಹನ್‌ ವ್ಯಂಗ್ಯವಾಗಿ ಹೇಳಿದ ರೀತಿ ಅವಳಿಗೆ ಕೆಡುಕೆನಿಸಿತು. ಅವಳು ಏನೂ ಅರಿಯದವಳಂತೆ ಪ್ರಶ್ನಿಸಿದಳು, ``ಮತ್ತೆ ಮಕ್ಕಳು ಎಲ್ಲಿದ್ದಾರಂತೆ?''

``ಜೊತೆಗೇ ಕರೆದುಕೊಂಡು ಹೋಗಿದ್ದಾಳಂತೆ. ವಿಶ್ವನಾಥ ಬಹಳ ದುಃಖಗೊಂಡಿದ್ದಾನೆ...... ನಾನು ಈಗ ತಾನೇ ಅವನನ್ನು ಭೇಟಿಯಾಗಿದ್ದೆ.''

``ಛೇ.... ಹೀಗೆ ಆಗಬಾರದಿತ್ತು.''

ವಿಷಯ ಏನೆಂಬುದು ಸುಮಾಳಿಗೆ ಸ್ಪಷ್ಟವಾಗಿ ಅರಿವಾಗಿತ್ತು. ಮೋಹನ್‌ ಅವಳ ಮಾತಿನಿಂದ ಇನ್ನೇನೋ ವಿಷಯದ ಸುಳಿವು ಪಡೆದವನಂತೆ, ``ಅಂದ್ರೆ..... ವಿಷಯ ಬೇರೇನೋ ಇರಬೇಕು ಅಂತೀಯಾ?''

``ಇಲ್ಲ.....ಅಂಥ ವಿಶೇಷ ಏನೂ ಇಲ್ಲ. ಇರಿ, ನಾನು ಕಾಫಿ ಮಾಡಿ ತರ್ತೀನಿ,'' ಎನ್ನುತ್ತಾ ಒಳಹೊರಟಳು.

ಮೋಹನ್‌ಗೆ ಯಾವ ವಿಷಯವನ್ನೂ ತಿಳಿಸದೆ ಸುಮಾ ಅಡುಗೆಮನೆಯಲ್ಲಿ ಬಿಝಿ ಆದಳು. ಶುಭಾಳ ಪ್ರಾಮಾಣಿಕತೆ, ಒಳ್ಳೆಯ ಮನಸ್ಸು, ಸನ್ನಡತೆಗಳೇ ಅವಳಿಗೆ ಮುಳುವಾಯಿತಲ್ಲ ಎಂದು ನಿಡುಸುಯ್ದಳು. ಮದುವೆಯಾಗಿ ಇಷ್ಟು ವರ್ಷಗಳಾದರೂ ಶುಭಾ ಗಂಡ ವಿಶ್ವನಾಥನ ದುರ್ಗುಣಗಳನ್ನು ಸರಿಯಾಗಿ ಗುರುತಿಸದೆ ಹೋದಳಲ್ಲ.... ಅವನ ದುಷ್ಕೃತ್ಯಗಳನ್ನೆಲ್ಲ ಸಹಿಸುತ್ತಾ ಹೋದಳು, ಯಾರಿಗೂ ಏನೂ ಹೇಳದೆ ನೋವನ್ನೆಲ್ಲ ತಾನೇ ನುಂಗಿಕೊಂಡಳು, ಎಷ್ಟು ವೇದನೆ ಪಟ್ಟಳೋ ಏನೋ.... ಇದೇ ಅವಳು ಮಾಡಿದ ದೊಡ್ಡ ತಪ್ಪು. ಅವಳ ಮತ್ತೊಂದು ತಪ್ಪು ಎಂದರೆ, ವಿಶ್ವನಾಥನಿಂದ ಶುಭಾ ಏನನ್ನೂ ಮುಚ್ಚಿಡುತ್ತಿರಲಿಲ್ಲ. ಆದರೆ ವಿಶ್ವನಾಥ್‌ಅವಳನ್ನು ಸದಾ ಕತ್ತಲೆಯಲ್ಲೇ ಇರಿಸಿಬಿಟ್ಟಿದ್ದ.

ಸುಮಾಳ ಪತಿ ಮೋಹನ್‌ ಸುಸ್ವಭಾವದ, ಮಿತಭಾಷಿ ವ್ಯಕ್ತಿ. ಆದರೆ ಸುಮಾ ಸದಾ ವಟವಟ ಎನ್ನುತ್ತಾ ಕಲ್ಲನ್ನೂ ಮಾತನಾಡಿಸುವವಳು. ಮನೆಯಿಂದ ಅವಳ ಆಫೀಸ್‌ ದೂರವಿದ್ದ ಕಾರಣ, 2 ಬಸ್‌ ಬದಲಾಯಿಸಿ ಹೋಗುತ್ತಿದ್ದಳು. ಹಾಯ್‌, ಹಲೋ ಮಟ್ಟದ ಪರಿಚಿತರನ್ನೂ ಬಾಯಿ ತುಂಬಾ ಮಾತನಾಡಿಸುತ್ತಿದ್ದಳು.

ಅಂಥ ಎಷ್ಟೋ ಪರಿಚಿತರನ್ನೇ ಗೆಳತಿಯರನ್ನಾಗಿಸಿಕೊಂಡು ಫೋನ್‌ನಲ್ಲಿ ಕಷ್ಟಸುಖ ವಿಚಾರಿಸುತ್ತಿದ್ದಳು. ಆದರೆ ಮೋಹನನಿಗೆ ಇದು ಸಹ್ಯ ಆಗುತ್ತಿರಲಿಲ್ಲ, ಅರ್ಥ ಆಗುತ್ತಿರಲಿಲ್ಲ. ಹೀಗಾಗಿ ಎಲ್ಲಾ ವಿಷಯಗಳನ್ನೂ ಅವನಿಗೆ ಹೇಳಲು ಹೋಗುತ್ತಿರಲಿಲ್ಲ.

ಅಂಥ ಒಬ್ಬರಲ್ಲಿ ಆಪ್ತ ಗೆಳತಿಯಾದ ಶುಭಾಳನ್ನು ಸುಮಾ ಬಹಳ ಹಚ್ಚಿಕೊಂಡಿದ್ದಳು. ಶುಭಾ ಇವಳ ಬಳಿ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದಳು. ಮೂಲತಃ ಮೃದು ಸ್ವಭಾವದ, ಕಷ್ಟಸಹಿಷ್ಣುವಾದ ಶುಭಾ, ಗಂಡನನ್ನು ಪರಮಾಪ್ತ ಸಖನೆಂದೇ ಭಾವಿಸಿದ್ದಳು. ವಿಶ್ವ ಅದಕ್ಕೆ ಯೋಗ್ಯನಲ್ಲದಿದ್ದರೂ ಅವನ ಬಳಿ ಪ್ರಾಮಾಣಿಕವಾಗಿ ತನ್ನೆಲ್ಲ ವಿಚಾರಗಳನ್ನೂ ಹಂಚಿಕೊಳ್ಳುತ್ತಿದ್ದಳು.

``ಸುಮಾ, ನೀನು ಇನ್ನೂ ಯಾವುದೋ ಗಾಢ ಯೋಚನೆಯಲ್ಲಿ ಮುಳುಗಿದ್ದೀಯಾ?'' ಅವಳಿಂದ ಕಾಫಿ ಕಪ್‌ ಸ್ವೀಕರಿಸುತ್ತಾ ಮೋಹನ್‌ ಕೇಳಿದ.

``ಮೋಹನ್‌, ಶುಭಾಳ ಈ ದಿಟ್ಟ ಹೆಜ್ಜೆಯನ್ನು ನಾನು ಸಪೋರ್ಟ್‌ ಮಾಡ್ತೀನಿ. ಹೆಣ್ಣಿನ ಕ್ಷಮಾಗುಣ, ಸಹನಶೀಲತೆಗೂ ಒಂದು ಮಿತಿ ಇರುತ್ತದೆ. ತನ್ನ ತುಟಿಗಳ ಮೇಲೆ ನಗುವಿನ ಲೇಬಲ್ ಅಂಟಿಸಿಕೊಂಡು ಅವಳು ಲೋಕದೆದುರು ತಾನು ಸುಖಿ ಎಂದು ತೋರಿಸಿಕೊಳ್ಳಬಹುದಷ್ಟೆ, ಅವಳ ಅಂತರಂಗದ ನೋವು ಅವಳೊಬ್ಬಳಿಗೆ ಮಾತ್ರ ಗೊತ್ತು. ವಿಶ್ವನ ಜೊತೆ ಒಂದು ಕ್ಷಣ ಅವಳು ಸುಖಿಯಾಗಿರಲಿಲ್ಲ ಎಂದೇ ನನಗನಿಸುತ್ತದೆ, ಎಲ್ಲವನ್ನೂ ಮೌನವಾಗಿ ಮನದಲ್ಲೇ ನುಂಗಿಕೊಳ್ಳುತ್ತಾ ಶಿಲಾಮೂರ್ತಿಯೇ ಆಗಿಹೋಗಿದ್ದಳು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ